• Home
  • »
  • News
  • »
  • entertainment
  • »
  • Bigg Boss Joker Arun Sagar: ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅರುಣ್ ಸಾಗರ್, ಕಾರಣ ಇಲ್ಲಿದೆ

Bigg Boss Joker Arun Sagar: ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅರುಣ್ ಸಾಗರ್, ಕಾರಣ ಇಲ್ಲಿದೆ

ಜೋಕರ್ ಗೆ ಕಿಚ್ಚನ ಚಪ್ಪಾಳೆ ಯಾಕ್ ಗೊತ್ತೇ?

ಜೋಕರ್ ಗೆ ಕಿಚ್ಚನ ಚಪ್ಪಾಳೆ ಯಾಕ್ ಗೊತ್ತೇ?

"ಅರುಣ್ ಸಾಗರ್ ಈ ವಾರ ಚೆನ್ನಾಗಿಯೇ ಆಡಿದ್ದಾರೆ. ಎಲ್ಲ ಕಡೆಗೆ ಜೋಕರ್ ಆಗದೇ, ಎಲ್ಲಿ ಜೋಕರ್ ಆಗಬೇಕು ಅಲ್ಲಿ ಜೋಕರ್ ಆಗಿದ್ದಾರೆ" ಎಂದು ಕೂಡ ಕಿಚ್ಚ ಸುದೀಪ್ ಪ್ರಶಂಸೆಯ ಮಾತುಗಳನ್ನೂ ಆಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬಿಗ್ ಬಾಸ್ (Big Boss) ಮನೆಯ ರಂಗೇರಿದೆ. ವಾರದ ಆರಂಭದಲ್ಲಿ ಒಂದು ಆಟ ಇರುತ್ತದೆ. ವಾರದ ಕೊನೆಯಲ್ಲಿ ಇನ್ನೂ ಒಂದು (Game) ಆಟವೇ ನಡೆದು ಹೊಗುತ್ತದೆ. ಅದರೆ ಮನೆಯಲ್ಲಿರೋ ಪ್ರತಿಯೊಬ್ಬರಿಗೂ ಬಿಗ್ ಮನೆ ಗಂಭೀರತೆ ಅರ್ಥ ಆಗಿದೆ. ಎಲ್ಲರೂ ತಮ್ಮ ಆಟವನ್ನು ಈಗಾಗಲೇ ಶುರು ಮಾಡಿದ್ದಾರೆ. ಅಷ್ಟೇ ಸ್ಪರ್ಧಾತ್ಮಕವಾಗಿಯೇ ಆಡುತ್ತಿದ್ದಾರೆ. ಆದರೆ ಎಲ್ಲರಿಗೂ ವಾರದ (Weekend) ಕೊನೆಯಲ್ಲಿ ಕಿಚ್ಚನ ಚಪ್ಪಾಳೆ ಪಡೆದುಕೊಳ್ಳಬೇಕು ಅನ್ನೋ ಗುರಿ ಇದ್ದೆ ಇರುತ್ತದೆ. ವಾರ ವಾರವೂ ಬದಲಾಗೋ ಈ ಚಪ್ಪಾಳೆ ಪ್ರಶಂಸೆಯು ಈ ವಾರ ಬಿಗ್ ಬಾಸ್ ಮನೆಯ (Joker) ಜೋಕರ್ ಗೆ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಯಾರು ಜೋಕರ್? ಇನ್ನಾರು ಸೂಪರ್? ಕಿಚ್ಚನ ಚಪ್ಪಾಳೆ ಪಡೆದವರೆಲ್ಲ ಸೂಪರ್ ಆಗಿರ್ತಾರೆಯೇ? ಈ ಒಂದು ಪ್ರಶ್ನೆ ಸಹಜವಾಗಿಯೇ ಇರುತ್ತದೆ.


ಅದರೆ ಕಿಚ್ಚನ ಚಪ್ಪಾಳೆ ಪ್ರತಿ ವಾರ ಬದಲಾಗುತ್ತದೆ. ಅದು ಆಯಾ ಸ್ಪರ್ಧಿಯ ಆ ವಾರ ಆಟದ ಮೇಲೆ ಡಿಪೆಂಡ್ ಆಗಿರುತ್ತದೆ. ಅಲ್ಲಿ ಯಾವುದೇ ರೀತಿಯ ಒತ್ತಡ ಇರೋದಿಲ್ಲ. ಅದನ್ನ ಕಿಚ್ಚ ಸುದೀಪ್ ನಿರ್ಧರಿಸುತ್ತಾರೆ.


ಬಿಗ್ ಬಾಸ್ ಮನೆಯಲ್ಲಿ ಹಿರಿಯರು ಅನ್ನೋರು ಮೂರ್ನಾಲ್ಕು ಜನ ಇದ್ದಾರೆ. ಹಾಗೇನೆ ಇವರಲ್ಲಿ ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್, ಪ್ರಶಾಂತ್ ಸಂಬರ್ಗಿ ಅವರ ಹೆಸರನ್ನ ತೆಗೆದುಕೊಳ್ಳಬಹುದು.


ಅರುಣ್ ಸಾಗರ್​​ಗೆ ಜೋಕರ್ ಅಂತ ಕಿಚ್ಚ ಹೇಳಿದ್ಯಾಕೆ?


ಆದರೆ ಇವರಲ್ಲಿ ವಿಶೇಷವಾಗಿ ಅರುಣ್ ಸಾಗರ್ ಅತಿ ಗಮನ ಸೆಳೆಯುತ್ತಾರೆ. ಆರಂಭದಿಂದಲೂ ತಮ್ಮದೇ ರೀತಿಯಲ್ಲಿ ಜನರಿಗೆ ಹತ್ತಿರ ಆಗಿದ್ದಾರೆ. ಆದರೆ ಆರಂಭದ ವಾರದಲ್ಲಿ ಅರುಣ್ ಸಾಗರ್ ಆಟದಲ್ಲಿ ಗಂಭೀರತೆ ಕಾಣಲೇ ಇಲ್ಲ ಅನ್ನೋ ದೂರು ಇತ್ತು.
ಅರುಣ್ ನೀವು ಜೋಕರ್ ಥರ ಕಾಣ್ತೀದ್ದೀರಾ?


Big Boss Joker Arun Sagar this Week Got Claps from Kicha Sudeep
ಬಿಗ್ ಬಾಸ್ ಮನೆಯಲ್ಲಿ ಯಾರು ಜೋಕರ್?


ಬಿಗ್ ಮನೆಯ ಸದಸ್ಯರು ಇದನ್ನೇ ಹೇಳಿದ್ದರು. ಕಿಚ್ಚ ಸುದೀಪ್ ಕೂಡ ಇದನ್ನ ಅಷ್ಟೇ ಸೂಕ್ಷ್ಮವಾಗಿಯೇ ಗಮನಿಸಿದ್ದರು. ಅದಕ್ಕೇನೆ ಅರುಣ್ ಸಾಗರ್​ಗೆ ಒಂದು ಎಚ್ಚರಿಕೆ ಕೊಟ್ಟೇ ಬಿಟ್ಟರು. ಅರುಣ್ ನೀವು ಜೋಕರ್ ಆಗಿ ಬಿಟ್ಟಿದ್ದೀರಿ ಅಂತಲೇ ನೇರವಾಗಿಯೇ ಹೇಳಿದ್ದರು.


ಇದನ್ನೂ ಓದಿ: Kantara: ಕಾಂತಾರವನ್ನು ನೀವ್ಯಾಕೆ ನೋಡಬೇಕು? ಇಲ್ಲಿದೆ ಓದಿ ಮಹತ್ವದ ಕಾರಣ!


ಹೌದು, ಈ ಮಾತು ಕೇಳಿದ್ಮೇಲೆ ಅರುಣ್ ಸಾಗರ್ ಆಟದಲ್ಲಿ ಬದಲಾವಣೆ ಕಂಡು ಬಂತು. ಆ ಬದಲಾವಣೆಯ ಸಮಯದಲ್ಲಿಯೇ ಅರುಣ್ ಸಾಗರ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಆದರೂ ಅರುಣ್ ಸಾಗರ್ ತಮ್ಮದೇ ರೀತಿಯಲ್ಲಿ ಆಟವನ್ನ ಆಡಿದರು.


ಚಿನ್ನದ ಟಾಸ್ಕ್ ನಲ್ಲಿ ಅರುಣ್ ಸಾಗರ್ ಸಖತ್ ಜೋಕರ್
ಬಿಗ್ ಬಾಸ್ ಕೊಟ್ಟ ಚಿನ್ನದ ಟಾಸ್ಕ್ ಸಖತ್ ಆಗಿಯೇ ಇತ್ತು. ಈ ಆಟದಲ್ಲಿ ಅರುಣ್ ಸಾಗರ್ ತಮ್ಮದೇ ರೀತಿಯಲ್ಲಿ ಭಾಗವಹಿಸಿದ್ದರು. ಜೋಕರ್ ರೂಪ ತಾಳಿ ಎಲ್ಲರಿಗೂ ಆಶ್ಚರ್ಯ  ಮೂಡಿಸಿದರು.


Big Boss Joker Arun Sagar this Week Got Claps from Kicha Sudeep
ಕಿಚ್ಚ ಸುದೀಪ್ ಪ್ರಶಂಸೆಯ ಮಾತು


ಸ್ಪರ್ಧಿಗಳ ಚಿನ್ನ ಕದ್ದು ಕಳ್ಳ ಜೋಕರ್ ಆಗಿಯೇ ಕಂಗೊಳಿಸಿದರು. ಕದ್ದದ್ದನ್ನ ವಾಪಸ್ ಕೊಟ್ಟು ಸೂಪರ್ ಜೋಕರ್ ಕೂಡ ಅನಿಸಿಕೊಂಡರು. ನಿಜಕ್ಕೂ ಈ ಆಟ ಸಖತ್ ಆಗಿಯೇ ನೋಡುಗರಲ್ಲಿ ಮಜಾ ಕೊಡ್ತು.


ವಾರದ ಕಥೆ ಕಿಚ್ಚನ ಜೊತೆ ವಾರಾಂತ್ಯದಲ್ಲಿ ಬರೋದನ್ನ ಕಾದಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಬರ್ತಾರೆಂಬ ಖುಷಿನೂ ಇತ್ತು. ಮನೆಯಿಂದ ಈ ವಾರ ಯಾರ್ ಹೋಗ್ತಾರೆಂಬ ಆತಂಕವೂ ಇತ್ತು.


 ಜೋಕರ್  ಅರುಣ್ ಸಾಗರ್​ ಗೆ ಕಿಚ್ಚನ ಚಪ್ಪಾಳೆ 
ಈ ಒಂದು ಮಿಶ್ರ ಭಾವನೆಯಲ್ಲಿಯೇ ಕಿಚ್ಚನ ಚಪ್ಪಾಳೆ ಅರುಣ್ ಸಾಗರ್​ಗೆ ಸಿಕ್ತು. "ಅರುಣ್ ಸಾಗರ್ ಈ ವಾರ ಚೆನ್ನಾಗಿಯೇ ಆಡಿದ್ದಾರೆ. ಎಲ್ಲ ಕಡೆಗೆ ಜೋಕರ್ ಆಗದೇ, ಎಲ್ಲಿ ಜೋಕರ್ ಆಗಬೇಕು ಅಲ್ಲಿ ಜೋಕರ್ ಆಗಿದ್ದಾರೆ" ಎಂದು ಕೂಡ ಪ್ರಶಂಸೆಯ ಮಾತುಗಳನ್ನೂ ಆಡಿದ್ದಾರೆ.


ಇದನ್ನೂ ಓದಿ: Rishab Bell Bottom-2: ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ? ಕಾಂತಾರ-2 ಮಾಡ್ತಾರಾ? ಬೆಲ್ ಬಾಟಂ-2 ಗೆ ರೆಡಿ ಆಗ್ತಾರಾ?


ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಅನುಪಮಾ ಗೌಡ, ಕಿಚ್ಚನ ಚಪ್ಪಾಳೆ ಪಡೆದಿದ್ದರು. ಈ ವಾರ ಅರುಣ್ ಸಾಗರ್ ಚಪ್ಪಾಳೆ ಮೂಲಕ ಸೂಪರ್ ಅನಿಸಿಕೊಂಡಿದ್ದಾರೆ. ಮುಂದಿನ ವಾರ ಯಾರು ಕಿಚ್ಚನ ಚಪ್ಪಾಳೆ ಪಡೆಯುತ್ತಾರೆ ಅನ್ನೋದು ಸದ್ಯದ ಕುತೂಹಲ.

First published: