ಕನ್ನಡ ಕಿರುತೆರೆ ಗೊಂಬೆ, ಚಂದನ್ ಶೆಟ್ಟಿ (Chandan Shetty) ಮನಸ್ಸು ಕದ್ದ ಸುಂದರಿ ನಿವೇದಿತಾ ಗೌಡ ಬಿಗ್ ಬಾಸ್ (Big Boss) ನಂತರ ಸೆಲೆಬ್ರಿಟಿಯಾದ ಸಾಮಾನ್ಯ ಹುಡುಗಿ ಎನ್ನಬಹುದು. ಅದರಲ್ಲೂ ರ್ಯಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆಯಾದ ನಂತರ ಇನ್ನೂ ಹೆಚ್ಚು ಸುದ್ದಿ ಮಾಡಿದ್ದರು. ಇದೀಗ (Niveditha Gowda) ಇದೀಗ ಮಿಸಸ್ ಇಂಡಿಯಾ (Mrs India) ಆಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟ್ರೈನಿಂಗ್ ಆರಂಭಿಸಿರುವ ನಿವಿ ಸೋಷಿಯಲ್ ಮೀಡಿಯಾ (Social Media) ದಲ್ಲಿ ತಮ್ಮ ಕ್ಯಾಟ್ ವಾಕ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಪರ್ಧೆಗಾಗಿ ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದಾರೆ . ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ (Challenging) ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದಾಗಿ ಈಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಿಸೆಸ್ ಇಂಡಿಯಾ ಆಗುವ ಕನಸು
ನಿವೇದಿತಾ ಹೊಸ ಜವಾಬ್ದಾರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಾಣುತ್ತಿದ್ದಾರಂತೆ ನಿವೇದಿತಾ ಗೌಡ. ಅದಕ್ಕಾಗಿ ಅವರು ತರಬೇತಿಯನ್ನು ಪಡೆಯುತ್ತಿದ್ದಾರಂತೆ. ಸ್ಪರ್ಧೆಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಳ್ಳುತ್ತಿರುವ ನಿವೇದಿತಾ ಗೌಡಗೆ ರೋಲ್ ಮಾಡಲ್ ಬಾಲಿವುಡ್ ನಟಿ ಐಶ್ವರ್ಯ ರೈ ಎಂದು ಹೇಳಿಕೊಂಡಿದ್ದಾರೆ. ನಾನು ಈ ಫೀಲ್ಡ್ಗೆ ತುಂಬಾನೇ ಚಿಕ್ಕವಳು. ಬೇಗ ಬರಬೇಕಿತ್ತು ಆದರೆ ಸಮಯ ತೆಗೆದುಕೊಂಡು ಬಂದಿದ್ದೀನಿ ಎಂದು ಹೇಳಿದ ನಿವೇದಿತಾ ಫ್ಯಾಷನ್ ಜಗತ್ತಿನ ಬಗ್ಗೆ ಹೇಳಿದ್ದಾರೆ.
ಟ್ರೈನಿಂಗ್ನಲ್ಲಿ ಕಿರುತೆರೆ ಗೊಂಬೆ ನಿವೇದಿತಾ ಗೌಡ; ಕ್ಯಾಟ್ ವಾಕ್ ವಿಡಿಯೋ ವೈರಲ್!
ಕನ್ನಡ ಕಿರುತೆರೆ ಗೊಂಬೆ, ಚಂದನ್ ಶೆಟ್ಟಿ ಮನಸ್ಸು ಕದ್ದ ಸುಂದರಿ ನಿವೇದಿತಾ ಗೌಡ ಇದೀಗ ಮಿಸ್ ಇಂಡಿಯಾ ಆಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟ್ರೈನಿಂಗ್ ಆರಂಭಿಸಿರುವ ನಿವಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕ್ಯಾಟ್ ವಾಕ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕಿರೀಟ ಗೆದ್ದು ಬಾ ಗೊಂಬೆ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಸದ್ಯ ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿದ್ದು, ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಏನೆಲ್ಲ ತಯಾರಿ ಬೇಕು, ಹೇಗಿರಬೇಕು? ಯಾವೆಲ್ಲ ತರಬೇತಿ ಪಡೆಯಬೇಕು ಎನ್ನುವುದರ ಕುರಿತು ನುರಿತ ತರಬೇತಿದಾರರಿಂದ ಅವರು ಟ್ರೈನಿಂಗ್ ಪಡೆಯುತ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲೂ ನಿವೇದಿತಾ ಭಾಗಿಯಾಗಲಿದ್ದಾರಂತೆ.
ಇನ್ನು ತಮ್ಮ ಬಗ್ಗೆ ಲೇವಡಿ ಮಾಡಿ ಮಾತನಾಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನಗೆ ಕೆಲಸ ಇಲ್ಲ ಅಂತ ಹೇಳುತ್ತಾರಾ? ಯುಟ್ಯೂಬ್ ವಿಡಿಯೋ ಮಾಡಿ ನಾನು ಹಣ ಗಳಿಸುತ್ತೇನೆ, ನಾನು ಕೆಲ ಶೋಗಳಲ್ಲಿಯೂ ಭಾಗವಹಿಸುತ್ತೇನೆ. ಬಡವರಿಗೆ ಮಾಡಿದ ಸಹಾಯವನ್ನು ನಾನು ತೋರಿಸಿಕೊಳ್ಳುವುದಿಲ್ಲ. ನಾವು ಲಾಕ್ಡೌನ್ ಟೈಮ್ನಲ್ಲಿ ಕೆಲಸಗಾರರಿಗೆ ಸಂಬಳ ನೀಡಿದ್ದೇವೆ, ಅನೇಕರಿಗೆ ಸಹಾಯ ಮಾಡಿದ್ದೇವೆ. ಬೇರೆಯವರಿಗೆ ಗೌರವ ಕೊಡೋದು, ವಿಧೇಯತೆಯಿಂದ ಇರೋದು ಮೊದಲ ಸಹಾಯ. ಆರ್ಥಿಕ ಸಹಾಯಕ್ಕಿಂತ ಮೊದಲು ಭಾವನಾತ್ಮಕವಾಗಿ ಸಹಾಯ ಮಾಡಿ ಎಂದು ಕಳೆದ ಕೆಲವು ಸಮಯಗಳ ಹಿಂದೆ ತಮ್ಮ ಯೂಟ್ಯೂಬ್ ಪೇಜ್ ನಲ್ಲಿ ಟೀಕಾಕಾರರಿಗೆ ನಿವೇದಿತಾ ಉತ್ತರ ಕೊಟ್ಟಿದ್ದಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ