• Home
  • »
  • News
  • »
  • entertainment
  • »
  • BBK9 Saik Nawaz: ಬಿಗ್ ಬಾಸ್ ಮನೆಯಿಂದ ಹೊರ ಬಂದ ಸೈಕ್ ನವಾಜ್ ಮುಂದೇನ್ ಮಾಡ್ತಾರೆ?

BBK9 Saik Nawaz: ಬಿಗ್ ಬಾಸ್ ಮನೆಯಿಂದ ಹೊರ ಬಂದ ಸೈಕ್ ನವಾಜ್ ಮುಂದೇನ್ ಮಾಡ್ತಾರೆ?

ನನ್ನ ಪ್ರತಿಭೆಯ ಎಲ್ಲ ದೃಶ್ಯಗಳನ್ನ ಜನತೆಗೆ ತೋರಿಲ್ಲ

ನನ್ನ ಪ್ರತಿಭೆಯ ಎಲ್ಲ ದೃಶ್ಯಗಳನ್ನ ಜನತೆಗೆ ತೋರಿಲ್ಲ

ನನ್ನ ಪ್ರತಿಭೆಯ ಎಲ್ಲ ದೃಶ್ಯಗಳನ್ನ ಜನತೆಗೆ ತೋರಿಲ್ಲ. ನಾನು ಸಂಗೀತ ಸಂಯೋಜನೆ ಮಾಡಿದ್ದೇನೆ. ಹಾಡು ಕೂಡ ಹಾಡಿದ್ದೇನೆ. ಆದರೆ ಅದು ಜನರಿಗೆ ಗೊತ್ತೇ ಆಗಲಿಲ್ಲ ಎಂದು ಸೈಕ್ ನವಾಜ್ ಬೇಸರಗೊಂಡಿದ್ದಾರೆ.

  • Share this:

ಬಿಗ್ ಬಾಸ್ ಸೈಕ್ (Big Boss Saik Nawaz) ನವಾಜ್ ಬಿಗ್ ಮನೆಯ ಒಂದಷ್ಟು ಅಸಲಿ (Truth) ಸತ್ಯಗಳನ್ನ ಬಿಚ್ಚಿದ್ದಾರೆ. ಇರೋ ಎರಡೇ ವಾರದಲ್ಲಿ ಮನೆಯಲ್ಲಿ ಆದ ಎಲ್ಲ ಘಟನೆಗಳನ್ನ ಇಂಚಿಂಚಾಗಿಯೇ ಹೇಳಿಕೊಂಡಿದ್ದಾನೆ. ಮನೆಯಲ್ಲಿ ಆಗಿರೋದು ಒಂದು. ಹೊರಗಡೆ ತೋರಿಸಿರೋದೇ ಒಂದು. ಅಸಲಿಗೆ ಇಲ್ಲಿ ತುಂಬಾ ವೀಕ್ (Weak Contestant) ಸ್ಪರ್ಧಿಗಳೂ ಇದ್ದಾರೆ. ಆದರೆ ನಾನು ಹೊರಗೆ ಬಂದೆ. ನನಗೆ ಬೇಸರ ಇದೆ. ನನ್ನ ಬದಲು ನನ್ನ ಪಕ್ಕದಲ್ಲಿದ್ದವರೇ ಮನೆಯಿಂದ ಹೊರ ಬೀಳಬೇಕಿತ್ತು. ಆದರೆ ನಾನು ಹೊರಗಡೆ ಬಂದಿರೋದು ನನಗೆ ಶಾಕ್ (Shock) ನೀಡಿದೆ. ನಾನು ಹೊರಗೆ ಬಂದಿರೋದೆ ನನಗೆ ಶಾಕ್ ಆಗಿದೆ. ನ್ಯೂಸ್ 18 ಕನ್ನಡ ಡಿಜಿಟಲ್ ಗೆ ನವಾಜ್ ಇನ್ನೂ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ.


ಶಾಕ್ ಮೇಲೆ ಶಾಕ್-ನವಾಜ್​ಗೆ ಸಖತ್ ಶಾಕ್
ಸೈಕ್ ನವಾಜ್ ಹೊರ ಬಂದಿರೋದು ಎಲ್ಲರಿಗೂ ಶಾಕ್ ಆಗಿದೆ. ಅದು ಮನೆ ಮಂದಿಗಷ್ಟೇ ಅಲ್ಲ. ಸ್ವತಃ ನವಾಜ್​ಗೆ ಸಿಕ್ಕಾಪಟ್ಟೆ ಶಾಕ್ ಆಗಿದೆ. ಇದನ್ನ ನಮ್ಮೊಟ್ಟಿಗೆ ನವಾಜ್ ಹಂಚಿಕೊಂಡಿದ್ದಾರೆ.


Big Boss Contestant Saik Nawaz Special Interview for News18 Kannada Digital
ನವಾಜ್ ಬಿಗ್ ಮನೆಯ ಒಂದಷ್ಟು ಸತ್ಯಗಳನ್ನ ಬಿಚ್ಚಿದ್ದಾರೆ


ಹೌದು, ಮನೆಯಿಂದ ಇಷ್ಟುಬೇಗ ನಾನು ಹೊರಗೆ ಬೀಳುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ಚೆನ್ನಾಗಿಯೇ ಆಟ ಶುರು ಮಾಡಿದ್ದೇನೆ. ಎಲ್ಲರನ್ನೂ ಅರ್ಥ ಮಾಡಿಕೊಂಡಿದ್ದೇನೆ. ಆದರೆ ಎಲ್ಲವೂ ಉಲ್ಟಾ ಹೊಡೆಯಿತು. ನಾನು ಹೊರಗೆ ಬಂದೆ ಎನ್ನುತ್ತಾರೆ ಸೈಕ್ ನವಾಜ್.


ಸೈಕ್ ನವಾಜ್ ಬಾಹರ್-ವೀಕ್ ಕ್ಯಾಂಡಿಡೇಟ್ ಅಂದರ್
ಸೈಕ್ ನವಾಜ್ ಹೊರ ಬಂದಾಗಿದೆ. ಆದರೆ ಸೈಕ್ ನವಾಜ್​​​ಗಿಂತಲೂ ವೀಕ್ ಕ್ಯಾಂಡಿಡೇಟ್ಸ್ ಮನೆಯಲ್ಲಿದ್ದಾರೆ. ಮಯೂರಿ, ರೂಪೇಶ್ ರಾಜಣ್ಣ ಇನ್ನೂ ಹಲವರಿದ್ದಾರೆ. ಆದರೆ ನಾನು ಇವರೆಲ್ಲರಿಗಿಂತಲೂ ಸ್ಟ್ರಾಂಗ್​ ಆಗಿಯೇ ಇದ್ದೇನೆ. ಆದರೆ ಈಗ ನೋಡಿದ್ರೆ ನಾನೇ ಮನೆಯಿಂದ ಹೊರ ಬಂದಿದ್ದೇನೆ ಎಂದು ಸೈಕ್​ ನವಾಜ್ ಹೇಳುತ್ತಾರೆ.


ಸೈಕ್ ನವಾಜ್​ಗೆ ಮನೆಯಲ್ಲಿ ಬುದ್ದಿ ಹೇಳಿದವ್ರು ಯಾರು?
ಸೈಕ್ ನವಾಜ್ ಮನೆಯಲ್ಲಿ ಎಲ್ಲರ ಜೊತೆಗೂ ಮಾತನಾಡಿಕೊಂಡು, ಖುಷಿ ಖುಷಿಯಾಗಿಯೇ ಇದ್ದರು. ಆದರೆ ಮನೆಯಲ್ಲಿ ನಂಬಿರೋದು ಒಬ್ಬ ಸದಸ್ಯರನ್ನ ಮಾತ್ರ. ಅವರೇ ಅರುಣ್ ಸಾಗರ್. ಇವರೇ ನವಾಜ್​​ಗೆ ಇಲ್ಲಿ ಎಲ್ಲವನ್ನೂ ಕಲಿಸಿಕೊಟ್ಟಿದ್ದಾರೆ.


ನಾನು ನವಾಜ್-ನಾನು ಹಾಸ್ಯ ನಟನೇ ಆಗಬೇಕು
ಸೈಕ್ ನವಾಜ್ ಮನೆಯೊಳಗೆ ತನ್ನ ಟ್ಯಾಲೆಂಟ್ ತೋರಿದ್ದಾರೆ. ಅದನ್ನ ಕಂಡ ಮನೆಯ ಸದಸ್ಯರು ನೀನು ಒಳ್ಳೆ ನಟ ಆಗುತ್ತೀಯಾ ಅಂತಲೇ ಹೇಳಿದ್ದಾರೆ. ಇನ್ನು ಕೆಲವರು ನೀನು ಒಳ್ಳೆ ರೈಟರ್ ಕೂಡ ಆಗುತ್ತೀಯಾ ಅಂತಲೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Amitabh Bachchan: ಹ್ಯಾಪಿ ಬರ್ತ್ ಡೇ ಅಮಿತಾಬ್ ಬಚ್ಚನ್, ಬಿಗ್ ಬಿಗೆ ಶುಭಾಶಯಗಳ ಮಹಾಪೂರ


ಆದರೆ ಸೈಕ್ ನವಾಜ್ ಒಬ್ಬ ಹಾಸ್ಯ ನಟನೇ ಆಗಲು ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದ್ರೆ ಅದನ್ನ ಹಾಸ್ಯದ ಮೂಲಕವೇ ಮಾಡಬೇಕು ಅನ್ನೋದು ಸದ್ಯಕ್ಕೆ ನವಾಜ್ ಮುಂದಿರೋ ಗುರಿ.


ಸೈಕ್ ನವಾಜ್ ಪ್ರತಿಭೆಗೆ ಕಿಚ್ಚ ಸುದೀಪ್ ಬೋಲ್ಡ್
ಸೈಕ್ ನವಾಜ್ ಪ್ರತಿಭೆಯನ್ನ ಎಲ್ಲರೂ ನೋಡೋಕೆ ಆಗಿಲ್ಲ. ಎಲ್ಲವನ್ನೂ ತೆರೆ ಮೇಲೆ ತೋರಿಸಿಲ್ಲ ಅನ್ನೋದು ಸೈಕ್ ಆರೋಪ. ಆದರೆ ಸೈಕ್ ನವಾಜ್ ಪ್ರತಿಭಾವಂತ ಅನ್ನೋದು ಸುದೀಪ್​ಗೆ ಗೊತ್ತಿದೆ. ಅದನ್ನ ಸುದೀಪ್ ಗಮನಿಸಿದ್ದಾರೆ.


Big Boss Contestant Saik Nawaz Special Interview for News18 Kannada Digital
ಸೈಕ್ ನವಾಜ್ ಪ್ರತಿಭೆಗೆ ಕಿಚ್ಚ ಸುದೀಪ್ ಬೋಲ್ಡ್


ಸೈಕ್ ನವಾಜ್​ ಪ್ರತಿಭೆ ಗಮನಿಸಿರೋ ಸುದೀಪ್​, ತಮ್ಮ ಮುಂದಿನ ಚಿತ್ರದಲ್ಲಿ ಸೈಕ್​ ನವಾಜ್​ಗೆ ಹೊಂದುವ ಪಾತ್ರ ಇದ್ದರೇ ಚಾನ್ಸ್ ಕೊಡೋದಾಗಿ ಹೇಳಿದ್ದಾರೆ ಎಂದು ಸ್ವತಃ ನವಾಜ್ ಈ ಮಾತನ್ನ ಹೇಳಿಕೊಂಡಿದ್ದಾರೆ.


ಸೈಕ್ ನವಾಜ್​ಗೆ ಬಿಗ್ ಬಾಸ್ ಮೇಲೆ ತುಂಬಾ ಬೇಸರ
ಬಿಗ್ ಬಾಸ್ ಮನೆಯಿಂದ ಹೊರ ಬಂದ ನವಾಜ್, ಒಂದಷ್ಟು ಆರೋಪಗಳನ್ನೂ ಮಾಡಿದ್ದಾರೆ. ನನ್ನ ಪ್ರತಿಭೆಯ ಎಲ್ಲ ದೃಶ್ಯಗಳನ್ನ ಜನತೆಗೆ ತೋರಿಲ್ಲ. ನಾನು ಸಂಗೀತ ಸಂಯೋಜನೆ ಮಾಡಿದ್ದೇನೆ. ಹಾಡು ಕೂಡ ಹಾಡಿದ್ದೇನೆ. ಆದರೆ ಅದು ಜನರಿಗೆ ಗೊತ್ತೇ ಆಗಲಿಲ್ಲ ಎಂದು ಸೈಕ್ ನವಾಜ್ ಬೇಸರಗೊಂಡಿದ್ದಾರೆ.


ಇದನ್ನೂ ಓದಿ: Banaras: ಕನ್ನಡದ ಬನಾರಸ್​ ಚಿತ್ರಕ್ಕೆ ಸಿಂಗಂ ಬಲ- ಚಿತ್ರ ವಿತರಿಸೋಕೆ ರೆಡಿ ಎಂದ ಅಜಯ್ ದೇವಗನ್


ರಾಜಾಜಿನಗರದ ಸರ್ಕಾರಿ ಕಾಲೇಜಿನಲ್ಲಿಯೇ ಸೈಕ್ ನವಾಜ್ ಓದುತ್ತಿದ್ದಾರೆ. ಕಾಮರ್ಸ್ ಓದುತ್ತಿರೋ ನವಾಜ್, ಮುಂದೊಂದು ದಿನ ಒಳ್ಳೆ ಹಾಸ್ಯ ನಟ ಆಗಬೇಕು ಅನ್ನೋ ಕನಸನ್ನೂ ಕಂಡಿದ್ದಾರೆ. ಆ ಕನಸು ನನಸಾಗಲಿ ಅಂತಲೇ ಹರಿಸೋಣ ಅಲ್ವೇ?

First published: