• Home
  • »
  • News
  • »
  • entertainment
  • »
  • Bigg Boss Saik Nawaz: ಅಪ್ಪ ನಾನೇನೂ ಸಾಧನೆ ಮಾಡಲೇ ಇಲ್ಲ! ಹೊರಗೆ ಬಂದ ನವಾಜ್ ಹೀಗೆ ಹೇಳಿದ್ಯಾಕೆ?

Bigg Boss Saik Nawaz: ಅಪ್ಪ ನಾನೇನೂ ಸಾಧನೆ ಮಾಡಲೇ ಇಲ್ಲ! ಹೊರಗೆ ಬಂದ ನವಾಜ್ ಹೀಗೆ ಹೇಳಿದ್ಯಾಕೆ?

ಬಿಗ್ ಬಾಸ್ ಸೈಕ್ ನವಾಜ್ ಹೊರ ಬಂದು ಹೇಳಿದ್ದೇನು?

ಬಿಗ್ ಬಾಸ್ ಸೈಕ್ ನವಾಜ್ ಹೊರ ಬಂದು ಹೇಳಿದ್ದೇನು?

ಅಪ್ಪ ನಾನು ಏನೂ ಸಾಧನೆ ಮಾಡಲೇ ಇಲ್ಲ. ಮುಂದಿನ ದಿನದಲ್ಲಿ ನಾನು ಸಾಧನೆ ಮಾಡಿಯೇ ಮಾಡುತ್ತೇನೆ ಎಂದು ಕಿಚ್ಚನ ಮುಂದೆ ನಿಂತು ಅಲ್ಲಿಯೇ ಇದ್ದ ತಮ್ಮ ತಂದೆಗೆ ನವಾಜ್ ಹೇಳಿಯೇ ಬಿಟ್ಟರು.

  • Share this:

ಬಿಗ್ ಬಾಸ್ (Big Boss House) ಮನೆಯ ಎರಡನೇ ಸದಸ್ಯ ಹೊರ ಬಂದಾಗಿದೆ. ಐಶ್ವರ್ಯ (Aishwarya) ಹೊರ ಬಂದ್ಮೇಲೆ ಯಾರು ಹೊರ ಬರುತ್ತಾರೆ ಅನ್ನೋ ಕುತೂಹಲ ಕೂಡ ಇತ್ತು. ಅದರಂತೆ ಎಲ್ಲರು ರೂಪೇಶ್ ರಾಜಣ್ಣ (Roopesh Rajanna) ಈ ವಾರ ಹೊರಗಡೆ ಬರ್ತಾರೆ ಅನ್ನೋ ಅಂದಾಜಿತ್ತು. ಆದರೆ ಈಗ ಅದು ಸುಳ್ಳಾಗಿದೆ. ಗೆಸ್ ಮಾಡಿದ್ದೇ ಒಂದು, ಹೊರ ಬಂದಿರೊದೇ ಮತ್ತೊಬ್ಬ ಸ್ಪರ್ಧಿ. ಹೌದು, ಕಳೆದ ವಾರವೂ ಜನ ಈ ಸ್ಪರ್ಧಿಯನ್ನ ಉಳಿಸಿದ್ದರು. ಅದಕ್ಕೇನೆ ಎರಡನೇ ವಾರವೂ ಆ ಸ್ಪರ್ಧಿ ಮನೆಯಲ್ಲಿ ಉಳಿದಿಕೊಂಡಿದ್ದರು. ನಿಧಾನಕ್ಕೆ ಮನೆಯ ಸದಸ್ಯರ ಮನಸ್ಸು ಗೆದ್ದಿದ್ದರು. ಇನ್ನೇನು ಮನೆಯಲ್ಲಿ ತಮ್ಮ ಆಟವನ್ನೂ ಶುರು ಮಾಡ್ತಾರೆ ಅನ್ನೋ ನಂಬಿಕೆ ಕೂಡ ಮನೆಯ ಇತರ ಸದಸ್ಯರಿಗೆ ಇತ್ತು. ಆಟ ಶುರು ಆಗೋ ಮುನ್ನವೇ ಆ ಸೈಕ್ ಪ್ಲೇಯರ್ (Siak Nawaz) ಹೊರ ಬಂದಾಗಿದೆ.


ಸೈಕ್ ನವಾಜ್ ಎರಡನೇ ವಾರಕ್ಕೇನೆ ಬಿಗ್ ಮನೆಯಿಂದ ಔಟ್
ಸೈಕ್ ನಾವಾಜ್ ಬಗ್ಗೆ ಮೊದಲ ದಿನದಿಂದಲೂ ಅಂತಹ ಏನೂ ಒಳ್ಳೆ ಅಭಿಪ್ರಾಯ ಇರಲಿಲ್ಲ ಬಿಡಿ. ಸಿನಿಮಾ ಥಿಯೇಟರ್​ ಮುಂದೆ ರಿವ್ಯೂ ಮಾಡೋದಷ್ಟೇ ಈ ಸೈಕ್ ನವಾಜ್ ಕೆಲಸ, ಬೇರೆ ಏನೂ ಬರೋದಿಲ್ಲ ಅನ್ನೋದೇ ಎಲ್ಲರ ನಂಬಿಕೆ ಆಗಿತ್ತು.
ಪ್ರಶಾಂತ್ ಸಂಬರ್ಗಿ ಕೂಡ ಇದನ್ನೆ ಹೇಳಿದ್ದರು. ನವಾಜ್ ಬತ್ತಳಿಕೆಯಲ್ಲಿ ಬೇರೆ ಏನೂ ಇರಲಿಲ್ಲ. ಇರೋದು ರಿವ್ಯೂ ಮಾಡೋದು ಒಂದೇ ಒಂದು ಟ್ರ್ಯಾಲೆಂಟ್ ಎಂದು ಶರಾ ಬರೆದು ಬಿಟ್ಟಿದ್ದರು.


ನವಾಜ್ ಜನರ ದಿಲ್ ಕದ್ದ-ಮನೆಯವರ ಹೃದಯದಲ್ಲಿ ಉಳಿದ
ಸೈಕ್ ನವಾಜ್ ಒಂದೇ ವಾರವೂ ಉಳಿಯೋದಿಲ್ಲ ಅಂತಲೇ ಅಂದಾಜಿತ್ತು. ಆದರೆ ಆ ಜಾಗಕ್ಕೆ ಬೈಕರ್ ಐಶ್ವರ್ಯ ಪಿಸ್ಸೆ ಮೊದಲ ವಾರವೇ ಹೊರ ಬಂದ್ರು. ಅದಾದ ಮೇಲೆ ಸೈಕ್ ನವಾಜ್ ಹೊರ ಬಂದೇ ಬಿಟ್ಟರು ನೋಡಿ.


ಸೈಕ್ ನವಾಜ್ ದಿನಗಳದಂತೆ ಒಳ್ಳೆ ಆಟಗಾರನಾಗೋ ಭರವಸೆ ಮೂಡಿಸಿದ್ದನು. ಅರುಣ್ ಸಾಗರ್ ಕೂಡ ನವಾಜ್ ಉಳಿಯಬೇಕು, ಮನೆಯಲ್ಲಿ ಉಳಿಯಲು ಆತನಿಗೊಂದು ಚಾನ್ಸ್ ಕೊಡಬೇಕು ಅಂತಲೇ ಅಭಿಪ್ರಾಯ ಪಟ್ಟಿದ್ದರು.


Big Boss Contestant Saik Nawaz Now Came out from Big House
ಬಿಗ್ ಬಾಸ್ ಸೈಕ್ ನವಾಜ್ ಗೆ ಕಿಚ್ಚ ಸುದೀಪ್ ಹೇಳಿದ್ದೇನು?


ಬಿಗ್ ಮನೆಯಿಂದ ಕಣ್ಣೀರು ಹಾಕುತ್ತಲೇ ಹೊರ ಬಂದ ನವಾಜ್
ಬಿಗ್ ಬಾಸ್ ಮನೆಯಿಂದ ಹೊರ ಬರೋವಾಗ ಸಹಜವಾಗಿಯೇ ಎಲ್ಲರೂ ಎಮೋಷ್ನಲ್ ಆಗುತ್ತಾರೆ. ಅದೇ ರೀತಿ ಸೈಕ್ ನವಾಜ್ ಕೂಡ ಎಮೋಷ್ನಲ್ ಆಗಿಯೇ ಕಣ್ಣೀರು ಹಾಕುತ್ತಲೇ ಹೊರ ಬಂದ್ರು, ಹೋಗುವಾಗ ಯಾರನ್ನ ನಾಮಿನೇಟ್ ಮಾಡಿದ್ರೆ ಗೊತ್ತೇ?


ಅಮೂಲ್ಯ ಗೌಡರನ್ನ ನಾಮಿನೇಟ್ ಮಾಡಿದ ಸೈಕ್ ನವಾಜ್
ಸೈಕ್ ನವಾಜ್ ಮನೆಯಿಂದ ಹೊರ ಬರುವಾಗ ಅಮೂಲ್ಯ ಗೌಡರನ್ನ ನಾಮಿನೇಟ್ ಮಾಡಿದ್ದಾರೆ. ಅಮೂಲ್ಯ ಗೌಡ ಈ ಮೂಲಕ ನೇರವಾಗಿಯೇ ನಾಮಿನೇಟ್ ಆಗಿದ್ದಾರೆ.


ಅಪ್ಪ ನಾನು ಏನೂ ಸಾಧನೆ ಮಾಡಲೇ ಇಲ್ಲ-ನವಾಜ್
ಸೈಕ್ ನವಾಜ್ ಗೆ ಒಂದು ಬೇಸರ ಇದೆ. ಅಪ್ಪನಿಗಾಗಿಯೇ ಸಾಧನೆಯೊಂದನ್ನ ಮಾಡಬೇಕು ಅನ್ನೋ ಆಸೆ ಇತ್ತು. ಅದು ಬಿಗ್ ಮನೆಯಲ್ಲಿ ಆಗುತ್ತದೆ ಅನ್ನೋ ನಂಬಿಕೆ ಕೂಡ ಇತ್ತು. ಆದರೆ ಎರಡನೇ ವಾರಕ್ಕೆ ಮನೆಯಿಂದ ಹೊರ ಬಂದ ಸೈಕ್ ಸ್ಟೇಜ್ ಮೇಲೆ ಈ ಮಾತು ಹೇಳಿಯೇ ಬಿಟ್ಟರು.


ಇದನ್ನೂ ಓದಿ: Gandhada Gudi: ಗಂಧದ ಗುಡಿಯ ಅಮೋಘ ದರ್ಶನ! ಡೈರೆಕ್ಟರ್ ಅಮೋಘವರ್ಷ Exclusive ಸಂದರ್ಶನ


ಅಪ್ಪ ನಾನು ಏನೂ ಸಾಧನೆ ಮಾಡಲೇ ಇಲ್ಲ. ಮುಂದಿನ ದಿನದಲ್ಲಿ ನಾನು ಸಾಧನೆ ಮಾಡಿಯೇ ಮಾಡುತ್ತೇನೆ ಎಂದು ಕಿಚ್ಚನ ಮುಂದೆ ನಿಂತು ಅಲ್ಲಿಯೇ ಇದ್ದ ತಮ್ಮ ತಂದೆಗೆ ನವಾಜ್ ಹೇಳಿಯೇ ಬಿಟ್ಟರು.


ಸುದೀಪ್ ಸರ್ ನಮ್ಮ ತಂದೆ ಹೆಸರು ಇನ್ನೊಮ್ಮೆ ಹೇಳಿ
ಸೈಕ್ ನವಾಜ್ ಗೆ ಒಂದು ದೊಡ್ಡ ಖುಷಿ ಕೂಡ ಇದೆ. ತಮ್ಮ ತಂದೆ ಬಾಬಾ ಜಾನ್ ಹೆಸರು ಸುದೀಪ್ ತೆಗೆದುಕೊಂಡ್ರು ಅನ್ನೋದೇ ಆ ಖುಷಿಗೆ ಕಾರಣವೂ ಆಗಿದೆ. ಅದೇ ಸಂತೋಷಲ್ಲಿಯೇ ಕಿಚ್ಚನಿಗೆ ಸೈಕ್ ನವಾಜ್ ಮತ್ತೊಮ್ಮೆ ಮನವಿ ಮಾಡಿಕೊಂಡ್ರು.


ನಿಮ್ಮಂತಹ ದೊಡ್ಡವರು ನಮ್ಮ ತಂದೆಯ ಹೆಸರನ್ನ ಇನ್ನೂ ಒಮ್ಮೆ ತೆಗೆದುಕೊಳ್ಳಬಹುದೇ ಅಂತಲೂ ಹೇಳಿದರು. ಸೈಕ್ ನವಾಜ್ ರ ಈ ಒಂದು ಮನವಿಯನ್ನ ಸ್ವೀಕರಿಸಿದ ಕಿಚ್ಚ ಸುದೀಪ್, ಮತ್ತೊಮ್ಮ ಸೈಕ್ ನವಾಜ್ ತಂದೆಯ ಹೆಸರನ್ನ ವೇದಿಕೆ ಮೇಲೆ ತೆಗೆದುಕೊಂಡ್ರು.


ಇದನ್ನೂ ಓದಿ: Jodi No 01: ಜೋಡಿ ನಂಬರ್ 1 ಫಿನಾಲೆ, ಕಾರ್ಯಕ್ರಮಕ್ಕೆ ಮೆರುಗು ತುಂಬಿದ ದಿಗಂತ್-ಐಂದ್ರಿತಾ ರೈ


ನಿಮ್ಮ ಪುತ್ರ ಏನೋ ಸಾಧಿಸುತ್ತಾನೆ. ಆತನಲ್ಲಿ ಪ್ರತಿಭೆ ಇದೆ. ಸಹನೆಯಿಂದಲೇ ಇರಿ, ಎಲ್ಲವೂ ಒಳ್ಳೆಯದಾಗುತ್ತದೆ ಅಂತಲೇ ಸೈಕ್ ನವಾಜ್​ಗೆ ಹಾಗೂ ಅವರ ತಂದೆಗೆ ಕಿಚ್ಚ ಸುದೀಪ್ ಹೇಳಿ ಬೀಳ್ಕೊಟ್ಟರು.

First published: