• Home
  • »
  • News
  • »
  • entertainment
  • »
  • Bhoomi Shetty Film: ಕನ್ನಡದ ಬಿಗ್ ಬಾಸ್ ಕಿನ್ನರಿಗೆ ಕೆಂಡದ ಸೆರಗಿನ ಕಿಚ್ಚು, ಮಹಿಳಾ ಪ್ರಧಾನ ಚಿತ್ರದಲ್ಲಿ ಭೂಮಿ ಶೆಟ್ಟಿ

Bhoomi Shetty Film: ಕನ್ನಡದ ಬಿಗ್ ಬಾಸ್ ಕಿನ್ನರಿಗೆ ಕೆಂಡದ ಸೆರಗಿನ ಕಿಚ್ಚು, ಮಹಿಳಾ ಪ್ರಧಾನ ಚಿತ್ರದಲ್ಲಿ ಭೂಮಿ ಶೆಟ್ಟಿ

ಕೆಂಡದ ಸೆರಗು ಸಿನಿಮಾದಲ್ಲಿ ಭೂಮಿ ಶೆಟ್ಟಿ

ಕೆಂಡದ ಸೆರಗು ಸಿನಿಮಾದಲ್ಲಿ ಭೂಮಿ ಶೆಟ್ಟಿ

ಭೂಮಿ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಈ ಒಂದು ಚಿತ್ರದ ಪಾತ್ರದ ಮೂಲಕ ಹೆಚ್ಚು ಹೆಸರು ಮಾಡೋ ಹಾಗೆ ಇದೆ. ಈ ಒಂದು ವಿಶ್ವಾಸದಲ್ಲಿಯೇ ಭೂಮಿ ಶೆಟ್ಟಿ ಸಾಕಷ್ಟು ತಯಾರಿಯೊಂದಿಗೆ ಅಭಿನಯಿಸೋಕೆ ಮುಂದಾಗಿದ್ದಾರೆ.

  • Share this:

ಕಿನ್ನರಿ ಸೀರಿಯಲ್ ನ ಭೂಮಿ ಶೆಟ್ಟಿ (Bhoomi Shetty) ಈಗ ಏನ್ ಮಾಡುತ್ತಿದ್ದಾರೆ. ಕಿನ್ನರಿ ಖ್ಯಾತಿಯಿಂದಲೇ ಬಿಗ್ ಬಾಸ್ (Bigg Boss House) ಮನೆಗೂ ಕಾಲಿಟ್ಟಿದ್ದ ಅದೇ ಭೂಮಿ ಶೆಟ್ಟಿ ಈಗ ಏನ್ ಮಾಡುತ್ತಿದ್ದಾರೆ? ಈ ಒಂದು ಇಂಟ್ರಸ್ಟಿಂಗ್ ಪ್ರಶ್ನೆಗೆ ಸ್ವತಃ ಭೂಮಿ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಹೌದು, ಭೂಮಿ ಶೆಟ್ಟಿ ಬಹು ದಿನಗಳ ಬಳಿಕ ಒಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕೆಂಡದ ಸೆರಗು ಅನ್ನೋ ವಿಶೇಷ ಟೈಟಲ್​ (Title) ನ ಈ ಚಿತ್ರದ ಭೂಮಿ ಶೆಟ್ಟಿ ಪಾತ್ರದ ಮೋಷನ್ ಪೋಸ್ಟರ್(Motion Poster) ಕೂಡ ರಿಲೀಸ್ ಆಗಿದೆ. ಚಿತ್ರದ ಭೂಮಿ ಶೆಟ್ಟಿ ಫೋಟೋಗಳೂ ಹೊರ ಬಂದಿದೆ. ಇದರಲ್ಲಿ ಭೂಮಿ ಶೆಟ್ಟಿಯ ಪಾತ್ರದ ಖದರ್ ವಿಭಿನ್ನವಾಗಿಯೇ ಇದೆ. ನೋಡುವ ಹೆಣ್ಣುಮಕ್ಕಳಿಗೆ ಹೊಸದೊಂದು ಉತ್ಸಾಹ ತುಂಬುವಂತೇನೆ ಇದೆ.


ಕೆಂಡದ ಸೆರಗು ಎಂಬ ಮಹಿಳಾ ಪ್ರಧಾನ ಸಿನಿಮಾ


ಕೆಂಡದ ಸೆರಗು ಒಂದು ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಭೂಮಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಮುಖ್ಯ ಭೂಮಿಕೆ ಪಾತ್ರ ಹೇಗಿರುತ್ತದೆ ಅಂತ ಕೇಳೋದೇ ಬೇಡ. ಆ ವಿಷಯವನ್ನ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫೋಟೋಗಳು ಹೇಳ್ತಾ ಇವೆ.


ಹೌದು, ಭೂಮಿ ಶೆಟ್ಟಿ ತಮ್ಮ ಚಿತ್ರ ಜೀವನದಲ್ಲಿ ಈ ಒಂದು ಚಿತ್ರದ ಪಾತ್ರದ ಮೂಲಕ ಹೆಚ್ಚು ಹೆಸರು ಮಾಡೋ ಹಾಗೇನೆ ಇದೆ. ಈ ಒಂದು ವಿಶ್ವಾಸದಲ್ಲಿಯೇ ಭೂಮಿ ಶೆಟ್ಟಿ ಸಾಕಷ್ಟು ತಯಾರಿಯೊಂದಿಗೆ ಅಭಿನಯಿಸೋಕೆ ಮುಂದಾಗಿದ್ದಾರೆ.


ಕೆಂಡದ ಸೆರಗು ಸಿನಿಮಾ ರಾಕಿ ಸೋಮ್ಲಿ ಕಾದಂಬರಿ ಆಧರಿಸಿದೆ
ಭೂಮಿ ಶೆಟ್ಟಿ ಅಭಿನಯದ ಈ ಚಿತ್ರದ ಕಥೆಗೆ ಕಾದಂಬರಿಯ ಆಧಾರವೇ ಇದೆ. ರಾಕಿ ಸೋಮ್ಲಿ ಬರೆದ ಕೆಂಡದ ಸೆರಗು ಕಾದಂಬರಿಯನ್ನೇ ಈ ಚಿತ್ರ ಆಧರಿಸಿದೆ. ನಿರ್ದೇಶಕ ರಾಕಿ ಸೋಮ್ಲಿ ಅವರ ಈ ಕಾದಂಬರಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಶಸ್ತಿಯನ್ನೂ ಪಡೆದಿದೆ.


Big Boss Bhumi Shetty New Film Motion Poster Release
ಭೂಮಿ ಶೆಟ್ಟಿ ಅಭಿನಯದ ಚಿತ್ರಕ್ಕೆ ಆಧರಿಸಿದ ಕಾದಂಬರಿ


2020 ರಲ್ಲಿ ಯುವ ಬರಹಗಾರ ಚೊಚ್ಚಲ ಕೃತಿ ಅಡಿಯಲ್ಲಿ ಈ ಕಾದಂಬರಿಗೆ ಪ್ರಶಸ್ತಿ ಕೂಡ ಬಂದಿದೆ. ಅದೇ ಕಾದಂಬರಿಯನ್ನೆ ರಾಕಿ ಸೋಮ್ಲಿ ಈಗ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದ ಕೆಲಸವನ್ನೂ ಆರಂಭಿಸಿದ್ದಾರೆ.


ಇದನ್ನೂ ಓದಿ: Adipurush: ಆದಿಪುರುಷ್ ಫಸ್ಟ್​ಲುಕ್​ಗೆ ಭರ್ಜರಿ ರೆಸ್ಪಾನ್ಸ್! ನೆಟ್ಟಿಗರೇನಂದ್ರು?


ಕೆಂಡದ ಸೆರಗು ಚಿತ್ರದ ಡೈರೆಕ್ಟರ್ ಬಗೆಗಿನ ಮಾಹಿತಿ ಇಲ್ಲಿದೆ
ಭೂಮಿ ಶೆಟ್ಟಿ ಅಭಿನಯದ ಈ ಚಿತ್ರದ ನಿರ್ದೇಶಕ ರಾಕಿ ಸೋಮ್ಲಿ ಅವರಿಗೆ ನಿರ್ದೇಶನದ ಅನುಭವ ಕೂಡ ಇದೆ. ಕನ್ನಡ ಇಂಡಸ್ಟ್ರೀಯಲ್ಲಿ ಹಲವು ವರ್ಷಗಳಿಂದ ಹೆಸರಾಂತ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ ಅನುಭವ ಕೂಡ ಇದೆ.
ರಾಕಿ ಸೋಮ್ಲಿ ಹಾಡುಗಳನ್ನು ಬರೆದಿದ್ದಾರೆ. ಅವುಗಳಿಗೂ ಒಳ್ಳೆ ಪ್ರಶಂಸೆ ಕೂಡ ಬಂದಿದೆ. ಹೀಗೆ ನಿರ್ದೇಶನ ಮತ್ತು ಬರಹದ ಹಿನ್ನೆಲೆಯನ್ನ ಹೊಂದಿರೋ ಕೆಂಡದ ಸೆರಗು ಮಹಿಳಾ ಪ್ರಧಾನ ಚಿತ್ರವೇ ಆಗಿದೆ.


ಕೆಂಡದ ಸೆರಗು ಚಿತ್ರದ ತಾರಾ ಬಳದಲ್ಲಿ ಯಾರೆಲ್ಲ ಇದ್ದಾರೆ?
ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗೋ ಶೋಷಣೆಗಳ ಚಿತ್ರಣ ಇಲ್ಲಿ ಚಿತ್ರಿತವಾಗಲಿದೆ. ಇದರ ಜೊತೆಗೆ ಹೆಣ್ಣಿನ ಹಕ್ಕುಗಳ ಬಗ್ಗೆನೂ ಈ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ.


Big Boss Bhumi Shetty New Film Motion Poster Release
ಕೆಂಡದ ಸರಗು ಚಿತ್ರದಲ್ಲಿ ಯುವ ನಟ ವರ್ಧನ್


ಕೆಂಡದ ಸೆರಗು ಹೆಸರನ್ನ ಇಟ್ಟುಕೊಂಡಿರೋ ಈ ಚಿತ್ರದಲ್ಲಿ ನಾಯಕ ನಟರೂ ಇದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಭೂಮಿ ಶೆಟ್ಟಿ ಇದ್ದಾರೆ. ವರ್ಧನ್, ಯಶ್ ಶೆಟ್ಟಿ, ಶೋಭಿತ, ಅರ್ಚನಾ, ಪ್ರತಿಮಾ, ಮೋಹನ್ ಹೀಗೆ ಎಲ್ಲರೂ ಈ ಚಿತ್ರದಲ್ಲಿದ್ದಾರೆ.


ಕೆಂಡದ ಸೆರಗು ಚಿತ್ರದ ಹಿಂದಿನ ಆ ಟೀಮ್​ನಲ್ಲಿ ಯಾರಿದ್ದಾರೆ?
ಕೆಂಡದ ಸೆರಗು ಸಿನಿಮಾದ ಹಿಂದೆ ಒಳ್ಳೆ ಟೀಮ್ ಇದೆ. ಟೆಕ್ನಿಕಲಿ ಒಳ್ಳೆ ಟೀಮ್​ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ. ವಿಪಿನ್ ರಾಜ್ ಈ ಚಿತ್ರಕ್ಕಾಗಿ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ವೀರೇಶ್ ಕಬ್ಳಿ ಸಂಗೀತ ಕೊಡುತ್ತಿದ್ದಾರೆ. ಕ್ಯಾಪ್ಟನ್ ಕಿಶೋರ್ ಕೋರಿಯೋಗ್ರಾಫಿ ಮಾಡೋಕೆ ಒಪ್ಪಿದ್ದಾರೆ.


ಇದನ್ನೂ ಓದಿ: Avatar Movie: ಹಾಲಿವುಡ್​ ಅಂಗಳದಲ್ಲಿ ಅವತಾರ ಸಿನಿಮಾ ಹಲ್ ಚಲ್ ಶುರು!


ಕೆಂಡದ ಸೆರಗು ಚಿತ್ರದ ಸಂಕಲನಕಾರ ಕೂಡ ಫೈನಲ್ ಆಗಿದ್ದಾರೆ. ಆ ಕೆಲಸವನ್ನ ಶ್ರೀಕಾಂತ್ ಇಲ್ಲಿ ಮಾಡುತ್ತಿದ್ದಾರೆ. ಇವರೆಲ್ಲರ ಈ ಚಿತ್ರಕ್ಕೆ ಕೊಟ್ರೇಶ್ ಗೌಡ ಅವರು ಬಂಡವಾಳ ಹಾಕಿದ್ದಾರೆ. ಚಿತ್ರ ಚೆನ್ನಾಗಿಯೇ ಬರ್ತಿರೋದ್ರಿಂದ ತಂಡದಲ್ಲಿ ಈಗಲೇ ಒಂದು ಭರವಸೆ ಮೂಡಿ ಬಿಟ್ಟಿದೆ.

First published: