• Home
  • »
  • News
  • »
  • entertainment
  • »
  • Bhoomi Shetty: ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ ಕುಸ್ತಿ ಪಟು! ಇದರ ಹಿಂದಿದೆ ನೋವಿನ ಕಥೆ

Bhoomi Shetty: ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ ಕುಸ್ತಿ ಪಟು! ಇದರ ಹಿಂದಿದೆ ನೋವಿನ ಕಥೆ

ಕೆಂಡದ ಸೆರಗು ಸಿನಿಮಾದಲ್ಲಿ ಭೂಮಿ ಶೆಟ್ಟಿ ಕುಸ್ತಿ ಪಟು

ಕೆಂಡದ ಸೆರಗು ಸಿನಿಮಾದಲ್ಲಿ ಭೂಮಿ ಶೆಟ್ಟಿ ಕುಸ್ತಿ ಪಟು

ಹೆಣ್ಣು ಮಕ್ಕಳ ಮೇಲೆ ನಡೆಯೋ ಶೋಷಣೆಯ ಬಗ್ಗೆ ಆಕ್ರೋಶ ಇದ್ದೇ ಇದೆ. ಆದರೆ ಆ ಆಕ್ರೋಶದ ಕಿಚ್ಚನ್ನು ಪ್ರದರ್ಶಿಸೋಕೆ ಕುಸ್ತಿ ಆಯ್ದುಕೊಳ್ಳೋದೇ ಈ ಚಿತ್ರದ ವಿಶೇಷ.

  • Share this:

ಬಿಗ್ ಬಾಸ್ (Big Boss) ಅನೇಕ ನಟ-ನಟಿಯರಿಗೆ ಹೆಸರು ತಂದು ಕೊಟ್ಟಿದೆ. ಬೆಳ್ಳಿ ಪರದೆ (Sliver Screen) ಹಾಗೂ ಪುಟ್ಟ ಪರದೆಯಲ್ಲಿ (Small Screen) ತಮ್ಮದೇ ನೇಮ್ ಆ್ಯಂಡ್ ಫೇಮ್​ ನಲ್ಲಿದ್ದ ನಟ-ನಟಿಯರಿಗೂ ಈ ಬಿಗ್ ಬಾಸ್ ಬೇರೆ ಲೆವಲ್​ನ ಫೇಮ್ ಕೊಟ್ಟಿರೋದು ಅಷ್ಟೇ ವಿಶೇಷವಾದ ಸತ್ಯವೇ ಆಗಿದೆ. ಅದೇ ಬಿಗ್ ಬಾಸ್ ಖ್ಯಾತಿಯ ಕಿನ್ನರಿ ನಟಿ ಭೂಮಿ ಶೆಟ್ಟಿ (Bhoomi Shetty) ಚಿತ್ರ ಜೀವನದಲ್ಲಿ ಈಗೊಂದು ಸಿನಿಮಾ ಮಾಡಿದ್ದಾರೆ. ಇದು ಭೂಮಿ ಶೆಟ್ಟಿ ಚಿತ್ರ ಪಯಣದ ಎರಡನೇ ಸಿನಿಮಾ ಆಗಿದೆ. ಆದರೂ ಈ ಸಿನಿಮಾದ ಕಂಟೆಂಟ್ ಎಂತಹ ಹೃದಯವನ್ನೂ ಕರಗಿಸಿ ಬಿಡುತ್ತದೆ. ಹೆಣ್ಣು ಮಕ್ಕಳ ಮೇಲೆ ನಡೆಯೋ ಶೋಷಣೆಯ ಬಗ್ಗೆ ಆಕ್ರೋಶ ಇದ್ದೇ ಇದೆ. ಆದರೆ ಆ ಆಕ್ರೋಶದ ಕಿಚ್ಚನ್ನು ಪ್ರದರ್ಶಿಸೋಕೆ ಕುಸ್ತಿ ಆಯ್ದುಕೊಳ್ಳೋದೇ ಈ ಚಿತ್ರದ ವಿಶೇಷವೇ ಆಗಿದೆ.


Big Boss Bhoomi Shetty Acted As wrestler in Kannada Movie
ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ


ಹೆಣ್ಣಿನ ಶೋಷಣೆಯ ಆಕ್ರೋಶದ ಕಿಚ್ಚು ಕುಸ್ತಿಯಲ್ಲಿ ಪ್ರದರ್ಶನ


ಕಿನ್ನರಿ ಸೀರಿಯಲ್​ ನ ಭೂಮಿ ಶೆಟ್ಟಿ, ಬಿಗ್ ಬಾಸ್​ನ ಭೂಮಿ ಶೆಟ್ಟಿಗೆ ಈ ಚಿತ್ರದ ಕಥೆ ಹೇಳಿ ಮಾಡಿಸಿದಂತೇನೆ ಇದೆ. ಭೂಮಿ ಶೆಟ್ಟಿ ವೇರಿ ಸ್ಟ್ರಾಂಗ್ ಅನ್ನೋದು ಬಿಗ್​ ಬಾಸ್ ಮನೆಯಲ್ಲಿಯೇ ಗೊತ್ತಾಗಿದೆ.


ಕೆಂಡದ ಸೆರಗು ಸಿನಿಮಾದಲ್ಲಿ ಭೂಮಿ ಶೆಟ್ಟಿ ಹೋರಾಟದ ಹಾದಿ
ಅದೇ ಭೂಮಿ ಶೆಟ್ಟಿಗೆ ಕೆಂಡದ ಸೆರಗುದಂತಹ ಒಂದು ಒಳ್ಳೆ ಕಥೆನೆ ಸಿಕ್ಕಿದೆ. ಹೆಣ್ಣಿನ ಮೇಲೆ ಆಗೋ ಶೋಷಣೆಯ ಸುತ್ತವೇ ಕಥೆ ಇದೆ. ಹೆಣ್ಣುಮಕ್ಕಳ ಹಕ್ಕುಗಳ ಮೇಲೂ ಇಲ್ಲಿ ಬೆಳಕು ಚೆಲ್ಲಲಾಗಿದೆ.


ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ ಒಬ್ಬ ಕುಸ್ತಿ ಪಟು
ಭೂಮಿ ಶೆಟ್ಟಿ ನಮ್ಮ ಜೊತೆಗೆ ಈ ಸಿನಿಮಾದ ಬಗ್ಗೆ ತುಂಬಾ ಮಾತನಾಡಿದ್ದಾರೆ. ತಮ್ಮ ಈ ಚಿತ್ರದಲ್ಲಿ ರಿಯಲ್ ಆಗಿಯೇ ಭೂಮಿ ಶೆಟ್ಟಿ ಕುಸ್ತಿ ಆಡಿದ್ದಾರೆ. ಕುಸ್ತಿ ಪಟು ಆಗಿಯೇ ಅಭಿನಯಿಸಿ ಖುಷಿ ಪಟ್ಟಿದ್ದಾರೆ.


Big Boss Bhoomi Shetty Acted As wrestler in Kannada Movie
ಕುಸ್ತಿ ಪಟು ಬಿಗ್ ಬಾಸ್ ಭೂಮಿ ಶೆಟ್ಟಿ


ದಾವಣಗೆರೆ ಕುಸ್ತಿ ಪಟುಗಳಿಂದಲೇ ತರಬೇತಿ ಪಡೆದ ಭೂಮಿ


ಭೂಮಿ ಶೆಟ್ಟಿ ಚಿತ್ರಕ್ಕಾಗಿ ರಿಯಲ್ ಆಗಿಯೇ ಕುಸ್ತಿ ಕಲಿತುಕೊಂಡಿದ್ದಾರೆ. ದಾವಣಗೆರೆಯ ಕುಸ್ತಿ ಪಟುಗಳಿಂದಲೇ ಸೂಕ್ತ ತರಬೇತಿಯನ್ನೂ ಪಡೆದುಕೊಂಡು ಅಖಾಡಕ್ಕೆ ಇಳಿದಿದ್ದಾರೆ.
ಚಿತ್ರಕ್ಕಾಗಿಯೇ ಕುಸ್ತಿಯನ್ನ ಕಲಿತಿರೋ ಭೂಮಿ ಶೆಟ್ಟಿ ಅದರ ಬಗ್ಗೆ ಒಲವನ್ನೂ ಹೆಚ್ಚಿಸಿಕೊಂಡಿದ್ದಾರೆ. ರೀಲ್​ಗಾಗಿ ಕಲಿತಿರೋ ಕುಸ್ತಿ ಈಗ ಭೂಮಿ ಶೆಟ್ಟಿಯಲ್ಲಿ ಒಂದು ಹೊಸ ಸೆಳೆತವನ್ನೂ ಹುಟ್ಟಿಸಿ ಬಿಟ್ಟಿದೆ.


ಇದನ್ನೂ ಓದಿ: Hitler Kalyana: ಪರ್ಫೆಕ್ಟ್ ಆ್ಯಂಡ್ ಸ್ಟ್ರಿಕ್ಟ್ ಇದ್ದ ಎಜೆ ಇದ್ಯಾಕ್ ಹಿಂಗೆ ಬದಲಾಗಿದ್ದು? ಇದರ ಹಿಂದಿನ ರಹಸ್ಯವೇನು?


ರಿಯಲ್ ಅಖಾಡದಲ್ಲಿ ಕುಸ್ತಿ ಪಟ್ಟು-ಹಾಡಿನ ಚಿತ್ರೀಕರಣ
ದಾವಣಗೆರೆಯಲ್ಲಿ ಕೆಂಡದ ಸೆರಗು ಸಿನಿಮಾದ ಚಿತ್ರೀಕರಣ ಆಗಿದೆ. ಹೆಚ್ಚು ಕಡಿಮೆ 15 ದಿನದ ಚಿತ್ರೀಕರಣ ಇಲ್ಲಿಯೇ ಆಗಿದೆ. ರಿಯಲ್ ಅಖಾಡದಲ್ಲಿ ರೀಲ್​ ಗಾಗಿಯೇ ನಟಿ ಭೂಮಿ ಶೆಟ್ಟಿಯ ಕುಸ್ತಿಯ ಪಟ್ಟುಗಳನ್ನ ಚಿತ್ರೀಕರಣ ಮಾಡಲಾಗಿದೆ.


Big Boss Bhoomi Shetty Acted As wrestler in Kannada Movie
ಕೆಂಡದ ಸೆರಗು ಚಿತ್ರದ ಫೋಟೋ


ನಟಿ ಭೂಮಿ ಶೆಟ್ಟಿ ಪಾತ್ರದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಇನ್ನೂ ಐದು ದಿನದ ಚಿತ್ರೀಕರಣದ ಕೆಲಸ ಆದ್ರೆ ಆಯಿತು. ಕಿನ್ನರಿ ಭೂಮಿ ಶೆಟ್ಟಿ ಪಾತ್ರದ ಚಿತ್ರೀಕರಣ ಪೂರ್ಣಗೊಂಡಂತಾಗುತ್ತದೆ.


ದಾವಣಗೆರೆಯಲ್ಲಿಯೇ ಚಿತ್ರದ ಒಂದು ಹಾಡನ್ನೂ ಕೂಡ ಚಿತ್ರೀಕರಣಿಸಲಾಗಿದೆ. ಅಖಾಡದಲ್ಲಿಯೇ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ರಾಕಿ ಸೋಮ್ಲಿ ನಿರ್ದೇಶನದ ಈ ಚಿತ್ರ ರಾಕಿ ಸೋಮ್ಲಿ ಬರೆದ ಕೆಂಡದ ಸರಗು ಕಾದಂಬರಿಯನ್ನೆ ಆಧರಿಸಿದೆ.


ಸಿನಿಮಾ ಚೌಕಟ್ಟಿನಲ್ಲಿ ಕೆಂಡದ ಸೆರಗು ಕಾದಂಬರಿಯ ಕಥೆ
ಕೆಂಡದ ಸೆರಗು ಸಿನಿಮಾದ ಹಿಂದಿನ ಕಥೆ ಒಂದು ಕಾದಂಬರಿ ಅಂತಲೇ ಈಗಾಗಲೇ ಹೇಳಿದ್ದೇವೆ. ಈ ಕಥೆಯನ್ನ ಸಿನಿಮಾಗೆ ಹೇಗೆ ಬೇಕೋ ಹಾಗೆ ನಿರ್ದೇಶಕ ಹಾಗೂ ಕಾದಂಬರಿಕಾರ ರಾಕಿ ಸೋಮ್ಲಿ ಬದಲಿಸಿಕೊಂಡಿದ್ದಾರೆ. ಆ ಬದಲಾವಣೆಯೊಂದಿಗೆ ಬೆಳ್ಳಿ ತೆರೆಗೆ ಕೆಂಡದ ಸೆರಗು ಸಿನಿಮಾ ತಂದಿದ್ದಾರೆ


ಕೆಂಡದ ಸೆರಗು ಸಿನಿಮಾದಲ್ಲಿ ಅಮ್ಮ-ಮಗಳ ಹಾರ್ಟ್ ಟಚ್ಚಿಂಗ್ ಕಥೆ
ಕೆಂಡದ ಸೆರಗು ಒಂದು ಹೃದಯ ಸ್ಪರ್ಶಿ ಕಥೆಯುಳ್ಳ ಸಿನಿಮಾನೇ ಆಗುತ್ತದೆ. ತಾಯಿ ನೋವು-ಮಗಳ ಹೋರಾಟ ಎರಡೂ ಇಲ್ಲಿ ಎಲ್ಲ ಹೆಣ್ಣುಮಕ್ಕಳ ಪ್ರತಿನಿಧಿಯಂತೇನೆ ಕಾಣುತ್ತವೆ.


ಇದನ್ನೂ ಓದಿ: First Rank Raju ಡೈರೆಕ್ಟರ್ ಹೊಸ ಸಿನಿಮಾ; ಇದು ದಕ್ಷಿಣ ಭಾರತವನ್ನೇ ಪ್ರತಿನಿಧಿಸುತ್ತಂತೆ!


ಅಂತಹ ಈ ಚಿತ್ರದಲ್ಲಿ ಭೂಮಿ ಶೆಟ್ಟಿ ಪಾತ್ರದ ಹೆಸರು ಪವಿತ್ರಾ ಅನ್ನೋದು ವಿಶೇಷ. ತಾಯಿಯ ಪಾತ್ರದಲ್ಲಿ ಶೋಭಿತಾ ಅಭಿನಯಿಸಿದ್ದಾರೆ. ಚಿತ್ರದ ಇತರ ಪಾತ್ರದಲ್ಲಿ ವರ್ಧನ್ ಅಭಿನಯಿಸಿದ್ದಾರೆ.


ಯಶ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಒಂದು ಹಂತಕ್ಕೆ ಪೂರ್ಣಗೊಂಡಿದೆ. ಇತರ ಕೆಲಸಗಳನ್ನೂ ಮುಗಿಸಿಕೊಂಡು ಸಿನಿಮಾ ತಂಡ ಚಿತ್ರವನ್ನ ರಿಲೀಸ್ ಕೂಡ ಮಾಡಲಿದೆ. ವೇಟ್ ಮಾಡಿ.

First published: