• Home
  • »
  • News
  • »
  • entertainment
  • »
  • Bigg Boss Aravind: ಬೆಳ್ಳಿ ತೆರೆ ಮೇಲೆ ಬಿಗ್ ಬಾಸ್ ಜೋಡಿ ಹೊಸ ಮೋಡಿ! ಇದು ಅರ್ಧಂಬರ್ಧ ಪ್ರೇಮ ಕಥೆ

Bigg Boss Aravind: ಬೆಳ್ಳಿ ತೆರೆ ಮೇಲೆ ಬಿಗ್ ಬಾಸ್ ಜೋಡಿ ಹೊಸ ಮೋಡಿ! ಇದು ಅರ್ಧಂಬರ್ಧ ಪ್ರೇಮ ಕಥೆ

ಅರ್ಧಂಬರ್ಧ ಪ್ರೇಮ ಕಥೆ ಚಿತ್ರಕ್ಕೆ ಅರವಿಂದ್ ಕೆ.ಪಿ. ಹೀರೋ

ಅರ್ಧಂಬರ್ಧ ಪ್ರೇಮ ಕಥೆ ಚಿತ್ರಕ್ಕೆ ಅರವಿಂದ್ ಕೆ.ಪಿ. ಹೀರೋ

ಅರ್ಧಂಬರ್ಧ ಪ್ರೇಮ ಕಥೆಯ ಸಿನಿಮಾದಲ್ಲಿ ಅರವಿಂದ್ ಕೆ.ಪಿ. ಅದ್ಭುತವಾದ ಪಾತ್ರವನ್ನೆ ಮಾಡಿದ್ದಾರೆ. ನಾಯಕನನ್ನ ಪರಿಚಯಿಸೋ ಟೀಸರ್ ನೋಡಿದಾಗ, ಅರವಿಂದ್ ಕೆ.ಪಿ. ಇಲ್ಲೂ ಬೈಕ್ ರೇಸರ್ ಪಾತ್ರವನ್ನೆ ಮಾಡ್ತಿರಬಹುದು ಅಂತಲೇ ಅನಿಸುತ್ತದೆ.

  • Share this:

ಬಿಗ್ ಬಾಸ್ ಅರವಿಂದ್ ಕೆ.ಪಿ. ಕೊನೆಗೂ ಹೀರೋ ಆಗಿಯೇ ಬಿಟ್ಟರು. ರಿಯಲ್ (Real Life) ಲೈಫ್​ ಅಲ್ಲಿ ರಿಯಲ್ ರಿಸ್ಕ್ ತೆಗೆದುಕೊಂಡು ಜನರ ಮೆಚ್ಚುಗೆ ಗಳಿಸಿರೋ ರವಿಂದ್ ಹೀರೋ ಆಗ್ತಾರಾ? ಸಿನಿಮಾರಂಗಕ್ಕೆ (Cinema) ಕಾಲಿಡುತ್ತಾರಾ? ಅನ್ನೋ ಒಂದಿಷ್ಟು ಪ್ರಶ್ನೆಗಳು ಇದ್ದವು. ಆ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಬಿಗ್ ಬಾಸ್ (Big Boss) ಸಾಥಿ ದಿವ್ಯ ಉರುಡುಗ (Divya Uruduga) ಅಭಿನಯದ ಅರ್ಧಂಬರ್ಧ ಪ್ರೇಮ ಕಥೆಗೆ ಬಿಗ್ ಬಾಸ್ ಅರವಿಂದ್ ಕೆ.ಪಿ.ಹೀರೋ ಆಗಿದ್ದಾರೆ. ಅರವಿಂದ್ ಸಾಹಸೀಯ ಬೈಕ್ ರೇಸ್ ಕಂಡ ಜನಕ್ಕೆ ಈ ಚಿತ್ರದಲ್ಲಿ ಅರವಿಂದ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ನವ ನಾಯಕನನ್ನ ಪರಿಚಯಿಸೋ ಟೀಸರ್ ಕೂಡ ಹೊರ ಬಿದ್ದಿದೆ. ಇದೇ ಟೀಸರ್​ನಲ್ಲಿಯೇ ಅರವಿಂದ್ ಕೆ.ಪಿ. ಎಲ್ಲವನ್ನೂ ಹೇಳಿಕೊಡಿದ್ದಾರೆ.


ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಹೀರೋಯಿನ್ ದಿವ್ಯಾ ಉರುಡುಗ ಅಂತ ಗೊತ್ತೇ ಇದೆ. ಆದರೆ ಡೈರೆಕ್ಟರ್ ಅರವಿಂದ್ ಕೌಶಿಕ್ ತಮ್ಮ ಈ ಚಿತ್ರದ ಹೀರೋ ಪರಿಚಯ ಈಗ ಮಾಡಿಸಿದ್ದಾರೆ.




ಈ ಚಿತ್ರಕ್ಕೆ ಅರವಿಂದ್ ಕೆ.ಪಿ.ನೇ ಹೀರೋ ಅನ್ನೋ ಅನುಮಾನ ಮತ್ತು ಅಂದಾಜು ಎಲ್ಲರಿಗೂ ಇತ್ತು. ಅದು ಚಿತ್ರದ ನಾಯಕನ ಪರಿಚಯಿಸೋ ಟೀಸರ್ ಮೂಲಕ ರಿವೀಲ್ ಆಗಿದೆ.


ಅರವಿಂದ್ ಕೆ.ಪಿ. ಚಿತ್ರದಲ್ಲೂ ಬೈಕ್ ರೇಸ್ ಮಾಡ್ತಾರಾ?
ಅರ್ಧಂಬರ್ಧ ಪ್ರೇಮ ಕಥೆಯ ಸಿನಿಮಾದಲ್ಲಿ ಅರವಿಂದ್ ಕೆ.ಪಿ. ಅದ್ಭುತವಾದ ಪಾತ್ರವನ್ನೆ ಮಾಡಿದ್ದಾರೆ. ನಾಯಕನನ್ನ ಪರಿಚಯಿಸೋ ಟೀಸರ್ ನೋಡಿದಾಗ, ಅರವಿಂದ್ ಕೆ.ಪಿ. ಇಲ್ಲೂ ಬೈಕ್ ರೇಸರ್ ಪಾತ್ರವನ್ನೆ ಮಾಡ್ತಿರಬಹುದು ಅಂತಲೇ ಅನಿಸುತ್ತದೆ.


ಇದನ್ನೂ ಓದಿ: Prashanth Sambargi Birthday: 41 ವರ್ಷ ಅಂದ್ರೆ ನಂಬಲ್ಲ! ಪ್ರಶಾಂತ್ ಸಂಬರ್ಗಿ ಸಖತ್ ಹ್ಯಾಂಡ್ಸಂ


ಆದರೆ ಡೈರೆಕ್ಟರ್ ಅರವಿಂದ್ ಕೌಶಿಕ್ ಹೇಳುವಂತೆ, ಅರವಿಂದ್ ಇಲ್ಲಿ ಬೈಕ್ ರೇಸರ್ ಆಗಿ ಅಭಿಯಿಸುತ್ತಿಲ್ಲ. ಒಂದು ಅದ್ಭುತ ಪಾತ್ರದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.
ಅರ್ಧಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಅರವಿಂದ್ ಸಖತ್ ಅಭಿನಯ
ಅರವಿಂದ್ ಕೆ.ಪಿ. ಅಭಿನಯವನ್ನೂ ಚೆನ್ನಾಗಿ ಮಾಡಿದ್ದಾರೆ. ನವ ನಟ ಅನ್ನೋ ಹಾಗೇನೆ ಇಲ್ಲ. ಅರವಿಂದ್ ಒಬ್ಬ ಅನುಭವಿ ಕಲಾವಿದನ ರೀತಿಯಲ್ಲಿಯೇ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕೌಶಿಕ್ ಮಾಹಿತಿ ಕೊಡ್ತಾರೆ.


ಅರ್ಧಂಬರ್ಧ ಪ್ರೇಮ ಕಥೆಯ ಮಾಹಿತಿ ಈಗಾಗಲೇ ಹೊರ ಬಿದ್ದಿದೆ. ಚಿತ್ರದ ನಾಯಕನ ಪರಿಚಯದ ಬಗ್ಗೆ ನಿರ್ದೇಶಕರು ಸೀಕ್ರೆಟ್ ಮೆಂಟೇನ್ ಮಾಡಿದ್ದರು. ಅದು ಈಗಾಗಲೇ ರಿವೀಲ್ ಆಗಿದೆ.


ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ಫೋಟೋಸ್


ಬೆಳ್ಳಿ ತೆರೆ ಮೇಲೆ ಬಿಗ್ ಬಾಸ್ ಜೋಡಿ ಹಕ್ಕಿಗಳ ಮೋಡಿ
ಅರವಿಂದ್ ಕೆ.ಪಿ.ಹಾಗೂ ದಿವ್ಯಾ ಉರುಡುಗ ಜೋಡಿಯ ಮೋಡಿ ಈ ಮೂಲಕ ಬೆಳ್ಳಿ ತೆರೆ ಮೇಲೂ ಮೂಡಿ ಬರುತ್ತಿದೆ. ಇವರ ಅಭಿನಯದ ಒಂದು ಅದ್ಭುತ ಲವ್ ಸ್ಟೋರಿಯೊಂದಿಗೆ ಡೈರೆಕ್ಟರ್ ಅರವಿಂದ್ ಕೌಶಿಕ್ ಈ ಸಲ ಬರ್ತಿದ್ದಾರೆ.


ಅಂದ್ಹಾಗೆ ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ಬಹುತೇಕ ಎಲ್ಲ ಕೆಲಸ ಪೂರ್ಣಗೊಂಡಿವೆ. ದಿವ್ಯಾ ಉರುಡುಗ ಸದ್ಯಕ್ಕೆ ಬಿಗ್ ಬಾಸ್ ಮನೆ ಸೇರಿದ್ದಾರೆ. ಅಲ್ಲಿಂದ ಬಂದ್ಮೇಲೆ ಇತರ ಕೆಲಸಗಳೂ ಆರಂಭಗೊಳ್ಳಲಿವೆ.


Big Boss Aravind K.P Now Hero for Divya Uruduga New Film
ಅರ್ಧಂಬರ್ಧ ಪ್ರೇಮ ಕಥೆ ಡೈರೆಕ್ಟರ್ ಅರವಿಂದ್ ಕೌಶಿಕ್


ಕಮರ್ಷಿಯಲ್ ಚೌಕಟ್ಟಿನಲ್ಲಿ ಅರ್ಧಂಬರ್ಧ ಪ್ರೇಮ ಕಥೆ
ಉಳಿದಂತೆ ನಿರ್ದೇಶಕ ಅರವಿಂದ್ ಕೌಶಿಕ್ ಈ ಚಿತ್ರದಲ್ಲಿ ಪ್ರೀತಿ-ಪ್ರೇಮದ ಕಥೆಯನ್ನೂ ಇಟ್ಟಿದ್ದಾರೆ. ವಿಶೇಷವಾಗಿ ಈ ಕಥೆಯನ್ನ ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಹೇಳುತ್ತಿದ್ದಾರೆ.
ಅರವಿಂದ್ ಕೌಶಿಕ್ ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ರೀತಿಯಲ್ಲಿಯೇ ಕಥೆಗಳನ್ನ ಹೇಳಿದ್ದರು. ಆದರೆ ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಹೊಸದನ್ನೆ ಹೇಳೋಕೆ ಮುಂದಾಗಿದ್ದಾರೆ.


ಇದನ್ನೂ ಓದಿ: Darling Krishna: ಅವಳು ದಿಲ್ ಇವಳು ಪಸಂದ್- ಈ ಕೃಷ್ಣನೇ ಅಲ್ವೆ ಲಕ್ಕಿ ಮ್ಯಾನ್


ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದಲ್ಲಿ ಬಿಗ್ ಬಾಸ್ ಪೇರ್ ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿ ಆಗಿದ್ದಾರೆ. ಬಿಗ್ ಮನೆಯಲ್ಲಿ ಜೋತೆಯಾಗಿ ಆಡಿ ಗಮನ ಸೆಳೆದ ಈ ಜೋಡಿ, ಅರ್ಧಂಬರ್ಧ ಚಿತ್ರದ ಮುಖಾಂತರ ಬೆಳ್ಳಿ ತೆರೆ ಮೇಲೂ ರಂಜಿಸಲು ಬರ್ತಿದ್ದಾರೆ ವೇಟ್ ಮಾಡಿ.

First published: