Big Boss 7 Kannada: ‘ಬಿಗ್​ಬಾಸ್‘​ ಮನೆಗೆ ಎಂಟ್ರಿ ಕೊಡಲಿದ್ದೇನೆ, ಓಟ್ ಹಾಕಿಸಿ; ಜಾಲತಾಣದಲ್ಲಿ ಸ್ವಾಮೀಜಿಯೊಬ್ಬರ ಆಡಿಯೋ ವೈರಲ್​!

Big Boss 7 Kannada: ‘ಬಿಗ್​ಬಾಸ್​ 7’ಗೆ ಎಂಟ್ರಿ ಕೊಡಲಿದ್ದೇನೆ. ನನಗೆ ಹೆಚ್ಚು ವೋಟ್​ ಮಾಡಿ ಗೆಲ್ಲಿಸಿ ಎಂದು ಸ್ವಾಮೀಜಿ ತಮ್ಮ ವಾಟ್ಸಾಪ್​ ಬ್ರಾಡ್​ಕಾಸ್ಟ್​ ಗ್ರೂಪ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆ ಆಡಿಯೋ ಎಲ್ಲೆಡೆ ವೈರಲ್​ ಆಗಿದೆ.

Harshith AS | news18-kannada
Updated:October 12, 2019, 7:57 PM IST
Big Boss 7 Kannada: ‘ಬಿಗ್​ಬಾಸ್‘​ ಮನೆಗೆ ಎಂಟ್ರಿ ಕೊಡಲಿದ್ದೇನೆ, ಓಟ್ ಹಾಕಿಸಿ; ಜಾಲತಾಣದಲ್ಲಿ ಸ್ವಾಮೀಜಿಯೊಬ್ಬರ ಆಡಿಯೋ ವೈರಲ್​!
ಗುರುಲಿಂಗ ಸ್ವಾಮೀಜಿ
  • Share this:
ಕನ್ನಡದ ಬಿಗ್ ​ರಿಯಾಲಿಟಿ ಶೋ ‘ಬಿಗ್​ಬಾಸ್​ 7‘ಗೆ ಕ್ಷಣಗಣನೆ ಆರಂಭವಾಗಿದೆ. ವೀಕ್ಷಕರಂತೂ ಬಿಗ್​ಬಾಸ್​ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಒಂದೆಡೇ ಬಿಗ್​ಬಾಸ್​ ಮನೆಗೆ ಯಾರೆಲ್ಲಾ ಹೋಗಬಹುದು ಎಂಬ ಚರ್ಚೆಗಳು ಮಾಧ್ಯಮ ಸೇರಿದಂತೆ ಸಾಮಾಜಿಕ ತಾಣದಲ್ಲಿ ಜೋರಾಗಿಯೇ ನಡೆಯುತ್ತಿದೆ.  ಈ ಮಧ್ಯೆ ಸ್ವಾಮೀಜಿಯೊಬ್ಬರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತಿದ್ದೇನೆ, ಎಲ್ಲರೂ ಸಹಕರಿಸಿ ಎಂದು ಹೇಳಿರುವ ಆಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್​ ಆಗಿದ್ದು, ವೀಕ್ಷಕರ ಕಾತುರತೆಯನ್ನು ಮತ್ತಷ್ಟು ಹೆಚ್ಚುಮಾಡಿದೆ.

ಹಾವೇರಿ ಜಿಲ್ಲೆಯ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ‘ಬಿಗ್​​ಬಾಸ್​ 7‘ಗೆ ಎಂಟ್ರಿಕೊಡಲಿದ್ದಾರೆ ಎಂದ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ಕುರಿತಂತೆ ವಾಟ್ಸ್​ಆ್ಯಪ್​ನಲ್ಲಿ ಆಡಿಯೋವೊಂದು ವೈರಲ್​ ಆಗಿದ್ದು, ಆಡಿಯೋದಲ್ಲಿ ಗುರುಲಿಂಗ ಸ್ವಾಮೀಜಿ ಮಾತನಾಡಿ ಬಿಗ್​​ಬಾಸ್​ ಶೋಗೆ ಬಾಗಿಯಾಗುತ್ತಿದ್ದೇನೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

‘ಬಿಗ್​ಬಾಸ್​ 7’ಗೆ ಎಂಟ್ರಿ ಕೊಡಲಿದ್ದೇನೆ. ನನಗೆ ಹೆಚ್ಚು ವೋಟ್​ ಮಾಡಿ ಗೆಲ್ಲಿಸಿ ಎಂದು ಸ್ವಾಮೀಜಿ ತಮ್ಮ ವಾಟ್ಸಾಪ್​ ಬ್ರಾಡ್​ಕಾಸ್ಟ್​ ಗ್ರೂಪ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆ ಆಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಈ ಹಿಂದೆ ಕೂಡ ಅಗಡಿ ಮಠದ ಸ್ವಾಮೀಜಿ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಇದೀಗ ಸ್ವಾಮೀಜಿಯವರೇ ಸ್ವತಃ ವಾಟ್ಸ್​ ಆ್ಯಪ್ ಮೂಲಕ​ ಆಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಬಿಗ್​ಬಾಸ್​ ಮನೆಗೆ ಪ್ರವೇಶಿಸುತ್ತಿದ್ದೇನೆ ಎಂಬುದನ್ನು ಖಚಿತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಹಾವೇರಿ ಪರಿಸರದಲ್ಲಿ ಲಕ್ಷ ಸಸಿ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತ್ತಿ ಮೂಡಿಸಿದ್ದರು. ಈ ಮೂಲಕ ಸ್ವಾಮೀಜಿ ಲಿಮ್ಕಾ ದಾಖಲೆಗೂ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ನ್ಯೂಯಾರ್ಕ್​​​​ ಬ್ರೂಕ್ಲಿನ್​​ನಲ್ಲಿ ಗುಂಡಿನ ಸದ್ದು: ನಾಲ್ಕು ಮಂದಿ ಬಲಿ; ಮೂವರಿಗೆ ತೀವ್ರ ಗಾಯ

ನಟ ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ಬಾಸ್​ 7 ನಾಳೆ ಸಂಜೆ 6ಕ್ಕೆ ಗ್ರಾಂಡ್​ ಒಪನಿಂಗ್​ ನಡೆಯಲಿದೆ. ಕಲರ್ಸ್​ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್​ಬಾಸ್​7 ಗ್ರಾಂಡ್​ ಓಪನಿಂಗ್​ ಕಾರ್ಯಕ್ರಮವನ್ನು ಮಲ್ಟಿಪ್ಲೆಕ್ಸ್​ನಲ್ಲಿ ವೀಕ್ಷಿಸಬಹುದಾಗಿದೆ. ಅದಕ್ಕಾಗಿ ಬೆಂಗಳೂರು 3, ಮೈಸೂರು 1, ಉಡುಪಿ1 ಹಾಗೂ ಮಣಿಪಾಲ 1 ವ್ಯವಸ್ಥೆ ಕಲ್ಪಿಸಲಾಗಿದೆ.
Loading...



ಬಿಗ್​​​​ಬಾಸ್​ ನಿಯಮದ ಪ್ರಕಾರ ಮನೆಗೆ ಪ್ರವೇಶ ಕೊಡುವ ಸ್ಪರ್ಧೆಗಳು ತಾವು ಬಿಗ್​ಬಾಸ್​ಗೆ ಹೋಗುವ ಬಗ್ಗೆ ಯಾರೊಂದಿಗೂ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಅವರು ವೇದಿಕೆ ಪ್ರವೇಶಿಸಿದಾಗಲೇ ಅದು ಎಲ್ಲರಿಗೂ ಗೊತ್ತಾಗಬೇಕು. ಆದರೆ, ಇದೀಗ ಸ್ವಾಮೀಜಿ ಅವರು ಉದ್ಘಾಟನೆಗೂ ಮುನ್ನವೇ ತಾವು ಬಿಗ್​ಬಾಸ್​ ಮನೆಗೆ ಹೋಗುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಸೋರಿಕೆ ಮಾಡಿದ್ದಾರೆ. ಅವರು ಬಿಗ್​ಬಾಸ್ ಮನೆಗೆ ಹೋಗುವುದು ನಿಜವೇ ಆದರೆ, ಶೋನ ನಿಯಮವನ್ನು ಅವರು ಮುರಿದಂತೆ ಆಗುತ್ತದೆ. ಸ್ವಾಮೀಜಿಯನ್ನು ಶೋ ಆಯೋಜಕರು ಮನೆಗೆ ಸೇರಿಸಿಕೊಳ್ಳಲಿದ್ದಾರಾ, ಅಥವಾ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಅವರನ್ನು ಕೈ ಬಿಡಲಿದ್ದಾರಾ ಅಥವಾ ಈ ಆಡಿಯೋ ಕೇವಲ ಊಹಾಪೋಹವಾ ಎಂಬ ಎಲ್ಲ ಕಾತುರದ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.
First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...