ಗನ್ ತೋರಿಸಿ ಅತ್ಯಾಚಾರ: ಬಿಗ್ ಬಾಸ್ ಸ್ಪರ್ಧಿ ತಂದೆ ವಿರುದ್ಧ ಗಂಭೀರ ಆರೋಪ..!

ಸಂತೋಖ್ ಸಿಂಗ್ ಪುತ್ರಿ ಶೆಹನಾಜ್ ಗಿಲ್ ಬಿಗ್ ಬಾಸ್​ನಲ್ಲಿ ಭಾರೀ ಜನಮನ್ನಣೆ ಗಳಿಸಿದ್ದರು. ಅದರಲ್ಲೂ ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ಸ್ನೇಹ ದೊಡ್ಮನೆಯಲ್ಲಿ ಎಲ್ಲರ ಆರ್ಕಷಣೆಗೆ ಕಾರಣವಾಗಿತ್ತು.

news18-kannada
Updated:May 22, 2020, 1:56 PM IST
ಗನ್ ತೋರಿಸಿ ಅತ್ಯಾಚಾರ: ಬಿಗ್ ಬಾಸ್ ಸ್ಪರ್ಧಿ ತಂದೆ ವಿರುದ್ಧ ಗಂಭೀರ ಆರೋಪ..!
Shehnaaz Gill’s father
  • Share this:
ಹಿಂದಿ ಬಿಗ್‌ ಬಾಸ್‌ ಸೀಸನ್ -13 ಸ್ಪರ್ಧಿ ಶೆಹನಾಜ್‌ ಗಿಲ್‌ ಅವರ ತಂದೆ ಸಂತೋಖ್‌ ಸಿಂಗ್‌ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. 20ರ ಹರೆಯದ ಯುವತಿ ಇಂತಹದೊಂದು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಜಲಂಧರ್​ನಲ್ಲಿ ದೂರು ದಾಖಲಾಗಿದೆ.

ಮೇ 14 ರಂದು ಸಂತೋಖ್ ಸಿಂಗ್ ನನ್ನ ಮೇಲೆ ಗನ್ ತೋರಿಸಿ ಅತ್ಯಾಚಾರ ನಡೆಸಿದ್ದು, ಅದರೊಂದಿಗೆ ಜೀವ ಬೆದರಿಕೆಯನ್ನೂ ಹಾಕಿದರು ಎಂದು ಜಲಂಧರ್ ಮೂಲದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಸ್ನೇಹಿತನನ್ನು ಭೇಟಿ ಮಾಡಲು ತೆರಳುವಾಗ ಸಂತೋಖ್‌ ಸಿಂಗ್‌ ಕಾರಿನೊಳಗೆ ನನ್ನನ್ನು ಬಲವಂತವಾಗಿ ಕೂರಿನಲ್ಲಿ ಕೂರಿಸಿದರು. ಅಲ್ಲದೆ ಗನ್‌ ತೋರಿಸಿ ಕೊಲ್ಲುವುದಾಗಿ ತಿಳಿಸಿ ಅತ್ಯಾಚಾರ ಎಸಗಿದರು.ಈ ಹೀನಾಯ ಕೃತ್ಯದ ಬಗ್ಗೆ ಭಯದಿಂದ ನಾನು ಇಷ್ಟು ದಿವಸ ಸುಮ್ಮನಿದ್ದೆ. ಈಗ ಸ್ನೇಹಿತರ ಸಲಹೆ ಮೇರೆಗೆ ದೂರು ನೀಡಿದ್ದೇನೆ ಎಂದು ಯುವತಿ ತಿಳಿಸಿದ್ದಾರೆ.

ಸಂತೋಖ್ ಸಿಂಗ್- ಶೆಹನಾಜ್ ಗಿಲ್


ಸಂತೋಖ್ ಸಿಂಗ್ ಪುತ್ರಿ ಶೆಹನಾಜ್ ಗಿಲ್ ಬಿಗ್ ಬಾಸ್​ನಲ್ಲಿ ಭಾರೀ ಜನಮನ್ನಣೆ ಗಳಿಸಿದ್ದರು. ಅದರಲ್ಲೂ ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ಸ್ನೇಹ ದೊಡ್ಮನೆಯಲ್ಲಿ ಎಲ್ಲರ ಆರ್ಕಷಣೆಗೆ ಕಾರಣವಾಗಿತ್ತು. ಪಂಜಾಬಿ ಸಿನಿಮಾ ಹಾಗೂ ಆಲ್ಬಂಗಳಲ್ಲಿ ನಟಿಸುತ್ತಿರುವ ಶೆಹನಾಜ್ ಇದೀಗ ತಂದೆ ಮೇಲಿನ ಆರೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಶೆಹನಾಜ್, ಆಕೆ ಸುಳ್ಳು ಆರೋಪದ ಮೂಲಕ ನನ್ನ ತಂದೆಯ ಚಾರಿತ್ರವಧೆಗೆ ಮುಂದಾಗಿದ್ದಾರೆ. ಈ ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ನನ್ನ ತಂದೆ ನಿರಪರಾಧಿಯಾಗಿದ್ದು, ಶೀಘ್ರದಲ್ಲೇ ಎಲ್ಲಾ ಆರೋಪಗಳಿಗೆ ಉತ್ತರ ಸಿಗಲಿದೆ ಎಂದು ಬಿಗ್ ಬಾಸ್ ಸ್ಪರ್ಧಿ ತಿಳಿಸಿದ್ದಾರೆ.
First published: May 22, 2020, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading