ಇತ್ತೀಚೆಗೆ ಬಾಲಿವುಡ್ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾದ ಬೋನಿ ಕಪೂರ್ ಅವರು ತಮ್ಮ ದಿವಂಗತ ಹೆಂಡತಿ ಮತ್ತು ನಟಿ ಶ್ರೀದೇವಿ (Sridevi) ಅವರ ಜೊತೆ ಮೊದಲ ಬಾರಿಗೆ ಎಂದರೆ 1980 ರಲ್ಲಿ ತೆಗೆಸಿಕೊಂಡ ಒಂದು ಹಳೆಯ ಫೋಟೋವನ್ನು (Old Photos) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದೀಗ ಬಾಲಿವುಡ್ (Bollywood) ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಅವರ ಹಳೆಯ ಪೋಟೋ ವೈರಲ್ ಆಗಿದೆ.
ಹಳೆಯ ಫೋಟೋಗಳನ್ನು ನೋಡುವುದೇ ಒಂದು ಮಜವಾದ ಸಂಗತಿ ಅಂತ ಹೇಳಬಹುದು. ವರ್ಷದಿಂದ ವರ್ಷಕ್ಕೆ ಮುಖದ ಲಕ್ಷಣದಲ್ಲಿ ಮತ್ತು ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುವುದನ್ನು ನಾವು ನೋಡುತ್ತಿರುತ್ತೇವೆ.ಇದೆಲ್ಲದರ ಬಗ್ಗೆ ಈಗೇಕೆ ಇಷ್ಟೊಂದು ಮಾತು ಅಂತೀರಾ? ಇಲ್ಲೊಬ್ಬ ಬಾಲಿವುಡ್ ನ ಹೆಸರಾಂತ ನಟ ತಮ್ಮ ಹಳೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ.
ಯಾರು ಆ ನಟ ಅಂತ ತಿಳಿದುಕೊಳ್ಳೋದಕ್ಕೆ ನಿಮಗೆಲ್ಲಾ ತುಂಬಾನೇ ಕುತೂಹಲ ಇರಬೇಕಲ್ಲ? ಆ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಆಗಿದ್ದು, ಅವರೇ ನೋಡಿ ತಮ್ಮ ಹಳೆಯ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಿ ಅಮಿತಾಭ್ ಹಂಚಿಕೊಂಡದ್ದು ಅವರ ಹಳೆಯ ಫೋಟೋ..
ಹಿರಿಯ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ತಮ್ಮ ಮಗ ಅಭಿಷೇಕ್ ಬಚ್ಚನ್ ಅವರ ಕಾರ್ಬನ್ ಕಾಪಿಯಂತೆ ಕಾಣುತ್ತಾರೆ ಎಂದು ನೆಟ್ಟಿಗರಿಗೆ ಮನವರಿಕೆಯಾಗಿದೆ.
'ಜಂಜೀರ್' ತಾರೆ ಇತ್ತೀಚೆಗೆ ತಮ್ಮ ಪ್ರೈಮ್ ದಿನಗಳ ಏಕವರ್ಣದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಕಪ್ಪು-ಬಿಳುಪಿನ ಫೋಟೋದಲ್ಲಿ, ಬಿಗ್ ಬಿ ಸೂಟ್ ಧರಿಸಿ ಒಂದು ಕಪ್ ಚಹಾವನ್ನು ಕೈಯಲ್ಲಿ ಹಿಡಿದಿರುವುದನ್ನು ನಾವು ನೋಡಬಹುದು.
ಈ ಹಿರಿಯ ನಟ ತಾವು ಹಂಚಿಕೊಂಡಿರುವ ಫೋಟೋಗೆ ಶೀರ್ಷಿಕೆ ನೀಡುತ್ತಾ ನಗುತ್ತಿರುವ ಎಮೋಜಿಗಳನ್ನು ಸಹ ಅದರ ಜೊತೆಗೆ ಪೋಸ್ಟ್ ಮಾಡಿ.. "ಬಹಳ ಹಿಂದೆಯೇ ಚಹಾ??" ಎಂದು ಬರೆದಿದ್ದಾರೆ.
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ರೋಹಿತ್ ಬೋಸ್ "ಕಣ್ಣುಗಳು ಯಾವಾಗಲೂ ತೀವ್ರವಾಗಿವೆ!!!" ಎಂದು ಕಾಮೆಂಟ್ ಮಾಡಿದ್ದಾರೆ. ಗೌಹರ್ ಖಾನ್ ಅವರು ಬಿಗ್ ಬಿ ಹಳೆಯ ಫೋಟೋಗೆ ಕೆಂಪು ಹೃದಯವನ್ನು ಪೋಸ್ಟ್ ಮಾಡಿ ಕೈ ಎತ್ತಿದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ನೆಟ್ಟಿಗರು ಈ ಫೋಟೋದಲ್ಲಿರುವವರು ಅಭಿಷೇಕ್ ಬಚ್ಚನ್ ಅಂದ್ರಂತೆ..
ಆದರೆ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಯೊಬ್ಬರು "ಸೂಪರ್ ಸ್ಟಾರ್, ಅಭಿಷೇಕ್ ಬಚ್ಚನ್ ಅವರಂತೆ ಕಾಣುತ್ತಿದ್ದಾರೆ" ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ "ನೀವು ಅಭಿಷೇಕ್ ಅವರಂತೆಯೇ ಕಾಣುತ್ತೀರಿ" ಎಂದು ಹೇಳಿದ್ದಾರೆ.
"ಮೊದಲಿಗೆ ಅದು ಅಭಿಷೇಕ್ ಬಚ್ಚನ್ ಅವರು ಇರಬೇಕು ಎಂದು ನಾನು ಭಾವಿಸಿದೆ" ಎಂದು ಮತ್ತೊಂದು ಕಾಮೆಂಟ್ ನಲ್ಲಿ ಬರೆಯಲಾಗಿದೆ. "ಅದ್ಭುತವಾದ ಫೋಟೋ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರು ಹೇಳಿದರು. ಮತ್ತೊಬ್ಬರು "ಓಲ್ಡ್ ಈಸ್ ಗೋಲ್ಡ್ 90ರ ಕಿಂಗ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಪೋಸ್ಟ್" ಅಂತ ಬರೆದಿದ್ದಾರೆ.
ನಟನ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಯಾವಾಗಲೂ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆಗಳನ್ನು ಗಳಿಸಿವೆ ಮತ್ತು ನೆಟ್ಟಿಗರು ಅವರ ಪೋಸ್ಟ್ ಗಳಿಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿರುತ್ತಾರೆ.
ಬಿಗ್ ಬಿ ಈ ಹಿಂದೆ ಸೂರಜ್ ಬರ್ಜಾತ್ಯ ಅವರ ಚಿತ್ರವಾದ 'ಉಂಚಾಯಿ' ನಲ್ಲಿ ಬೊಮನ್ ಇರಾನಿ, ಅನುಪಮ್ ಖೇರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ