Amitabh Bachchan: ಅರೆಸ್ಟ್ ಆದ್ರಾ ಅಮಿತಾಭ್! ಫೋಟೋ ನೋಡಿ ಬಿಗ್​ಬಿ ಫ್ಯಾನ್ಸ್ ಶಾಕ್

ಅಮಿತಾಭ್​ ಬಚ್ಚನ್​

ಅಮಿತಾಭ್​ ಬಚ್ಚನ್​

ಮುಂಬೈ ಪೊಲೀಸ್ ಕಾರಿನ ಪಕ್ಕದಲ್ಲಿ ನಿಂತಿರುವ ಹೊಸ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಮಿತಾಭ್​ ತಮ್ಮ ಇತ್ತೀಚಿನ ಬೈಕ್ ಜೋಕ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

  • Share this:

ಬಾಲಿವುಡ್ (Bollywood) ಬಿಗ್ ಬಿ ಅಮಿತಾಭ್​ ಬಚ್ಚನ್ (Amitabh Bachchan) ಅತ್ಯುತ್ತಮ ಕಲಾವಿದ ಜೊತೆಗೆ ಉತ್ತಮ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ ಎಂಬುದಾಗಿಯೇ ಸಿನಿರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ತಮ್ಮ ಸಾಮಾಜಿಕ ತಾಣದಲ್ಲಿ (Social Media) ಆಗಾಗ ಹಾಸ್ಯ ಸನ್ನಿವೇಶಗಳನ್ನು ಘಟನೆಗಳನ್ನು ಹಂಚಿಕೊಳ್ಳುವ ಅಮಿತಾಬ್ ತಮ್ಮ ಫಾಲೋವರ್‌ಗಳನ್ನು ಎಂಟರ್‌ಟೈನ್ (Entertainment) ಮಾಡುವ ಮೂಲಕ ಹೃದಯವಂತರಾಗಿದ್ದಾರೆ.


ಅಭಿಮಾನಿಗಳಿಗೆ ಮನರಂಜನೆ ನೀಡುವ ಬಿಗ್‌ಬಿ


ಇತ್ತೀಚೆಗೆ ತಾನೇ ಬೈಕ್ ಜೋಕ್ ಅನ್ನು ಇನ್ನಷ್ಟು ಹಾಸ್ಯಸ್ಪದವಾಗಿಸಿರುವ ಅಮಿತಾಭ್ ಮುಂಬೈ ಪೊಲೀಸ್ ಕಾರ್‌ನ ಬಳಿ ಸ್ವತಃ ತಾವು ನಿಂತಿರುವ ಫೋಟೋವೊಂದನ್ನು ಹಚ್ಚಿಕೊಂಡು ಅಭಿಮಾನಿಗಳನ್ನು ಇನ್ನಷ್ಟು ಗೊಂದಲದಲ್ಲಿ ಮುಳುಗಿಸಿದ್ದಾರೆ ಅಂತೆಯೇ ಅವರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಬೈಕ್ ಪಿಲಿಯನ್‌ನಲ್ಲಿ ಸವಾರಿ ಮಾಡುತ್ತಿದ್ದಾಗ ಹೆಲ್ಮೆಟ್ ಧರಿಸದೇ ಇದ್ದುದಕ್ಕೆ ಮುಂಬೈ ಪೊಲೀಸರಿಂದ ಫೈನ್ ಹಾಕಿಸಿಕೊಂಡ ನಟ ಉತ್ಸಾಹ ಬತ್ತದೇ ಇನ್ನಷ್ಟು ಹಾಸ್ಯಮಯ ತುಣುಕುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.


ಶೂಟ್‌ಗಾಗಿ ಅಪರಿಚಿತರಿಂದ ಲಿಫ್ಟ್ ಪಡೆದುಕೊಂಡ ನಟ ಮುಂಬೈ ಪೊಲೀಸರಿಂದ ಹೆಲ್ಮೆಟ್ ಧರಿಸದೇ ಇದ್ದುದಕ್ಕೆ ಫೈನ್ ಹಾಕಿಸಿಕೊಂಡೆ ಎಂದು ತಿಳಿಸಿದ್ದರು. ನಂತರ ಈ ದೃಶ್ಯ ಶೂಟಿಂಗ್‌ನ ಭಾಗವಾಗಿದೆ ಎಂದು ನಿಜಾಂಶವನ್ನು ತಿಳಿಸಿದ್ದರು.


ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ಇದ್ದಿದ್ದರೇ ಡೇರ್‌ಡೆವಿಲ್ ಮುಸ್ತಾಫಾ ಚಿತ್ರ ನೋಡಿ ಖುಷ್ ಆಗ್ತಿದ್ರು!


ಸಾಮಾಜಿಕ ತಾಣದಲ್ಲಿ ಕ್ರಿಯಾತ್ಮಕರಾಗಿರುವ ಅಮಿತಾಭ್


ಇದೀಗ ಪೊಲೀಸ್ ವಾಹನದ ಬಳಿ ನಿರಾಶರಾಗಿ ನಿಂತುಕೊಂಡು ಅರೆಸ್ಟ್ ಆಗಿರುವೆ ಎಂಬ ಶೀರ್ಷಿಕೆ ನೀಡಿ ಫೋಟೋ ಹಂಚಿಕೊಂಡಿದ್ದಾರೆ. ಅಮಿತಾಭ್ ಪುನಃ ಹಾಸ್ಯಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡಿರುವ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ನಿಮ್ಮ ಹಾಸ್ಯಪ್ರಜ್ಞೆಯನ್ನು ನಾವು ಬಹುವಾಗಿಯೇ ಮೆಚ್ಚಿಕೊಂಡಿದ್ದೇವೆ ಸರ್ ಎಂದು ಕಾಮೆಂಟ್ ಮಾಡಿದ್ದಾರೆ.


ಅಮಿತಾಭ್ ಬಚ್ಚನ್​


ಇನ್ನೊಬ್ಬ ಬಳಕೆದಾರರು ಅವರ ಜನಪ್ರಿಯ ಡೈಲಾಗ್ ಆದ ಡಾನ್ ಡಾನ್ ಡಾನ್.. 11 ದೇಶಗಳ ಪೊಲೀಸರು ಡಾನ್‌ನ ನಿರೀಕ್ಷೆಯನ್ನು ಮಾಡುತ್ತಿದ್ದು, ಡಾನ್‌ ಅನ್ನು ಹಿಡಿಯುವುದು ಕಷ್ಟಮಾತ್ರವಲ್ಲ ಅದು ಅಸಾಧ್ಯ ಎಂದು ಹಂಚಿಕೊಂಡಿದ್ದಾರೆ.


ಸಿನಿ ಡೈಲಾಗ್‌ಗಳ ಮೂಲಕ ಫ್ಯಾನ್ಸ್ ಕಾಮೆಂಟ್


ಇನ್ನೊಬ್ಬ ಕಾಮೆಂಟಿಗರು ಅಂತೂ ಇಂತೂ ಡಾನ್ ಅನ್ನು ಮುಂಬೈ ಪೊಲೀಸರು ಹಿಡಿದೇ ಬಿಟ್ಟರು ಎಂದು ಹಾಸ್ಯ ಮಾಡಿದ್ದಾರೆ. ನಮ್ಮ ಹೃಯದಲ್ಲಿ ಜೀವಪರ್ಯಂತ ನೀವು ಬಂಧಿ ಸರ್ ಎಂದು ಇನ್ನೊಬ್ಬ ಅಭಿಮಾನಿ ಹೃದಯಸ್ಪರ್ಶಿಯಾಗಿ ಕಾಮೆಂಟ್ ಮಾಡಿದ್ದಾರೆ.




ಬೈಕ್ ರೈಡ್ ಮಾಡುತ್ತಿರುವಾಗ ಅಮಿತಾಭ್ ಇನ್‌ಸ್ಟಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು ನನ್ನನ್ನು ಸವಾರಿ ಮಾಡಿಸಿದ ಅಪರಿಚಿತ ಗೆಳೆಯನಿಗೆ ಧನ್ಯವಾದಗಳು ಟ್ರಾಫಿಕ್ ಜಾಮ್‌ ತಪ್ಪಿಸಿಕೊಂಡು ನನ್ನನ್ನು ಶೂಟಿಂಗ್ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಕರೆದೊಯ್ದಿದ್ದೀರಿ ಎಂದು ಶೀರ್ಷಿಕೆ ನೀಡಿದ್ದರು. ಕ್ಯಾಶುವಲ್ ಬಾಟಮ್, ಜಾಕೆಟ್ ಹಾಗೂ ಸನ್ ಗ್ಲಾಸ್ ಧರಿಸಿದ ಅಮಿತಾಭ್ ಸವಾರರ ಹಿಂಬದಿ ಆಸನದಲ್ಲಿ ಆಸೀನರಾಗಿದ್ದು ಚಿತ್ರದಲ್ಲಿ ಕಾಣಬಹುದಾಗಿದೆ.


ಸಮಯಪ್ರಜ್ಞೆಯುಳ್ಳ ನಟ


ತಾತನ ಚಿತ್ರಕ್ಕೆ ಮೊಮ್ಮಗಳು ನವ್ಯಾ ನವೇಲಿ ನಂದಾ ಹೃದಯದ ಎಮೋಜಿ ಸೇರಿಸಿ ಕಾಮೆಂಟ್ ಮಾಡಿದ್ದರೆ, ರೋಹಿತ್ ಬೋಸ್ ರಾಯ್, ನೀವು ಭೂಮಿಯ ಮೇಲಿರುವ ಕೂಲ್ ಡ್ಯಾಡಿ ಅಮಿತ್‌ಜಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.


ಬಚ್ಚನ್‌ ಸಮಯಪ್ರಜ್ಞೆಯಿಂದ ವರ್ತಿಸುವ ವ್ಯಕ್ತಿ ಎಂಬುದನ್ನು ಕೇಳಿದ್ದೆ ಸಮಯವನ್ನು ಗೌರವಿಸುವ ನಿಮ್ಮ ನಿಜವಾದ ಅರ್ಥವನ್ನು ಮನಗಂಡಿರುವೆ, ಇಂದಿನ ನಟರು ಇದರಿಂದ ಬಹಳಷ್ಟನ್ನು ಕಲಿಯಬೇಕಾಗಿದೆ ಎಂದು ಸಯಾನಿ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.




ಬೈಕ್ ರೈಡಿಂಗ್ ಶೂಟಿಂಗ್‌ನ ಒಂದು ಭಾಗ ಎಂದು ತಿಳಿಸಿದ ಅಮಿತಾಭ್


ಬೈಕ್‌ನಲ್ಲಿ ತಾವು ಹೆಲ್ಮೆಟ್​ ಹಾಗೂ ಯಾವುದೇ ಭದ್ರತೆ ಇಲ್ಲದೆ ಸಂಚರಿಸುತ್ತಿರುವುದು ಶೂಟಿಂಗ್‌ನ ಒಂದು ಭಾಗವಾಗಿದೆ ಎಂದು ಅಮಿತಾಬ್ ನಂತರ ಹಂಚಿಕೊಂಡಿದ್ದು, ಭಾನುವಾರದ ದಿನವಾದ್ದರಿಂದ ಟ್ರಾಫಿಕ್ ಅಷ್ಟೊಂದು ಇರದ ಕಾರಣ ಬಲ್ಲಾರ್ಡ್‌ನ ಲೇನ್‌ನಲ್ಲಿ ಚಿತ್ರೀಕರಣ ನಡೆಸಲು ಅಧಿಕೃತ ಪರವಾನಗಿ ಪಡೆದುಕೊಳ್ಳಲಾಗಿದೆ ಎಂದು ಅಮಿತಾಭ್ ತಿಳಿಸಿದ್ದಾರೆ.


ಹೊಸ ಸಿನಿಮಾಗಳಲ್ಲಿ ಅಮಿತಾಬ್ ಬ್ಯುಸಿ


ಅಮಿತಾಭ್ ಪ್ರಸ್ತುತ ರಿಭು ದಾಸ್‌ಗುಪ್ತಾ ನಿರ್ದೇಶನದ ಸೆಕ್ಷನ್ 84 ರ ಚಿತ್ರೀಕರಣದಲ್ಲಿದ್ದಾರೆ. ಅವರು ನಾಗ್ ಅಶ್ವಿನ್ ಅವರ ವೈಜ್ಞಾನಿಕ ಚಲನಚಿತ್ರ ಪ್ರಾಜೆಕ್ಟ್ ಕೆ ಯಲ್ಲಿ ಸಹ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಹ-ನಟಿಸಿದ್ದಾರೆ.

First published: