Vikrant Ronaನ ಬೆನ್ನಿಗೆ ನಿಂತ ಬಿಗ್​ ಬಿ, ಎಲ್ರೂ ಸಿನಿಮಾ ನೋಡ್ಲೇಬೇಕು ಎಂದು ಕಿಚ್ಚನಿಗೆ ಸಾಥ್

Amitabh Bachchan: ಇನ್ನು ಕಿಚ್ಚ ಸುದೀಪ್​ಗೆ ಬಿಗ್​ ಬಿ ಮಾತ್ರವಲ್ಲದೇ ಸಲ್ಮಾನ್​ ಖಾನ್​ ಕೂಡ ಸಾಥ್​ ನೀಡಿದ್ದು, ವಿಕ್ರಾಂತ್ ರೋಣ ಸಿನಿಮಾವನ್ನು ಬಾಲಿವುಡ್​ನಲ್ಲಿ ರಿಲೀಸ್ ಮಾಡಲು ಸಲ್ಮಾನ್ ಖಾನ್ ನೆರವು ಸಿಕ್ಕಿದ್ದು ಕಿಚ್ಚನಿಗೆ ದೊಡ್ಡ ಕೈ ಸಹಾಯಕ್ಕೆ ಸಿಕ್ಕಂತಾಗಿದೆ.

ಕಿಚ್ಚ ಸುದೀಪ್ ಮತ್ತು ಅಮಿತಾಭ್ ಬಚ್ಚನ್

ಕಿಚ್ಚ ಸುದೀಪ್ ಮತ್ತು ಅಮಿತಾಭ್ ಬಚ್ಚನ್

  • Share this:
ವಿಕ್ರಾಂತ್ ರೋಣ, (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಕಿಚ್ಚ ಸುದೀಪ್​ಗೆ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಕೆಲ ವರ್ಷಗಳಿಂದ ಪರಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಿಚ್ಚನಿಗೆ ಟಾಲಿವುಡ್​ (Tollywood)  ಹಾಗೂ ಬಾಲಿವುಡ್​ನಲ್ಲಿ (Bollywood)  ಸಹ ಅಭಿಮಾನಿಗಳಿದ್ದಾರೆ. ಇದೀಗ ವಿಕ್ರಾಂತ್ ರೋಣ ಸಿನಿಮಾಗೆ ಬಿಗ್​ ಬಿ (Big B) ಸಾಥ್ ನೀಡಿದ್ದಾರೆ.  

ವಿಕ್ರಾಂತ್ ರೋಣಗೆ ವಿಶ್​ ಮಾಡಿದ ಬಿಗ್​ ಬಿ

ಇದೇ ಜುಲೈ 28ರಂದು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ರಾ ರಾ ರಕ್ಕಮ್ಮ ಹಾಡು ಸೇರಿದಂತೆ ಟ್ರೈಲರ್ ಕೂಡ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚು ಮಾಡಿದೆ. ಇದೀಗ ಬಾಲಿವುಡ್​ ಬಿಗ್ ಬಿ ಅಮಿತಾಭ್​ ಬಚ್ಚನ್ ಸಿನಿಮಾಗೆ ವಿಶ್​ ಮಾಡಿದ್ದಾರೆ. ಟ್ವಿಟ್ಟರ್​ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ಲಿಂಕ್ ಪೋಸ್ಟ್ ಮಾಡಿ, ಕನ್ನಡ ಸ್ಟಾರ್ ಸುದೀಪ್ ಅವರ ಪ್ಯಾನ್ ಇಂಡಿಯಾ 3ಡಿ ಸಿನಿಮಾ 5 ಭಾಷೆಗಳಲ್ಲಿ ಜುಲೈ 28ಕ್ಕೆ ರಿಲೀಸ್​ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚನಿಗೆ ಬಿಗ್​ ಬಿ ಶುಭ ಹಾರೈಸಿದ್ದಾರೆ.



ಇನ್ನು ಕಿಚ್ಚ ಸುದೀಪ್​ಗೆ ಬಿಗ್​ ಬಿ ಮಾತ್ರವಲ್ಲದೇ ಸಲ್ಮಾನ್​ ಖಾನ್​ ಕೂಡ ಸಾಥ್​ ನೀಡಿದ್ದು, ವಿಕ್ರಾಂತ್ ರೋಣ ಸಿನಿಮಾವನ್ನು ಬಾಲಿವುಡ್​ನಲ್ಲಿ ರಿಲೀಸ್ ಮಾಡಲು ಸಲ್ಮಾನ್ ಖಾನ್ ನೆರವು ಸಿಕ್ಕಿದ್ದು ಕಿಚ್ಚನಿಗೆ ದೊಡ್ಡ ಕೈ ಸಹಾಯಕ್ಕೆ ಸಿಕ್ಕಂತಾಗಿದೆ. ಬಾಲಿವುಡ್ ಭಾರತದ ಅತಿ ದೊಡ್ಡ ಸಿನಿಮಾ ಮಾರುಕಟ್ಟೆ ಇಲ್ಲಿ ಬೇರೆ ಭಾಷೆಯ ಚಿತ್ರ ಡಬ್ ಆಗಿ ಬಿಡುಗಡೆಯಾಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಸಲ್ಮಾನ್​ ಕೈ ಜೋಡಿಸಿದ್ದಾರೆ.

ಇನ್ನು ವಿಕ್ರಾಂತ್ ರೋಣ' ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆಯಿಂದ ಭರ್ಜರಿ ರೆಸ್ಪಾನ್ಸ್ ದೊರಕಿತು. ಟ್ರೈಲರ್​ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸೂಪರ್ ಆಗಿ ಕಿಚ್ಚನ ದರ್ಶನವಾಗಿದೆ. ಟ್ರೈಲರ್ ಒಂದು ಗಂಟೆಗೆ ವೀವ್ಸ್ 5 ಲಕ್ಷ ದಾಟಿದೆ. ಒಂದು ಗಂಟೆಯಲ್ಲಿ ಕನ್ನಡದ ಟ್ರೈಲರ್ 522,328 ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಇದೀಗ ಟ್ರೈಲರ್ ಬಿಡುಗಡೆಯಾಗಿ ಕನ್ನಡದಲ್ಲಿ 10 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಉಳಿದ ಭಾಷೆಗಳಲ್ಲಿಯೂ ಸಖತ್ ಆಗಿ ರನ್ ಆಗುತ್ತಿರುವ ವಿಕ್ರಾಂತ್ ರೋಣ ಎಲ್ಲಡೆ ಧೂಳೆಬ್ಬಿಸುತ್ತಿದ್ದಾನೆ.

ಇದನ್ನೂ ಓದಿ: ಆಲಿಯಾ ಭಟ್ ಗರ್ಭಿಣಿ, ಶುಭ ಸುದ್ದಿ ಹಂಚಿಕೊಂಡ ದಂಪತಿ

ಕಿಚ್ಚು ಹತ್ತಿಸಿದ ಟ್ರೈಲರ್

ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ಕಥೆಯಲ್ಲಿನ ಟ್ವಿಸ್ಟ್ ಗಳು ಸಿನಿ ಪ್ರೇಮಿಗಳಲ್ಲಿ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಟ್ರೈಲರ್​ ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ನಿರ್ದೇಶಕ ಅನುಫ್ ಭಂಡಾರಿ ಸಖತ್ ಟ್ವಿಸ್ಟ್ ನೀಡಿದ್ದು, ಟ್ರೈಲರ್ ನೋಡಿದವರಲ್ಲಿ ಸುದೀಪ್ ಚಿತ್ರದಲ್ಲಿ ಡಬಲ್ ರೋಲ್ ನಲ್ಲಿ ನಟಿಸಿದ್ದಾರಾ ಎಂಬ ಸಂಶಯ ಮೂಡುವಂತಿದೆ.

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.

ಇದನ್ನೂ ಓದಿ: ನಾನು ಪುನೀತ್ ರಾಜ್​​ಕುಮಾರ್ ಫ್ಯಾನ್​ ಎಂದ ನಾಗ ಚೈತನ್ಯ, ಸಮಂತಾ ಮಾಜಿ ಪತಿಗೆ ಅಪ್ಪು ಮಾದರಿಯಂತೆ

'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ  10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಅಭಿಮಾನಿಗಳಿಗೆ ಸಿನಿಮಾದ ನಿರೀಕ್ಷೆ ಹೆಚ್ಚಿದ್ದು, ಸಿನಿಮಾ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
Published by:Sandhya M
First published: