HOME » NEWS » Entertainment » BIG ANNOUNCEMENT WILL BE OUT BY RISHAB SHETTY STARRER HERO MOVIE TEAM ON FEBRUARY 11TH AE

Hero: ಹೀರೋ ರಿಷಭ್​ ಶೆಟ್ಟಿ ಕಡೆಯಿಂದ ಸಿಗಲಿದೆ ಹೊಸ ಅಪ್ಡೇಟ್​..!

Rishab Shetty: ಟ್ರೇಲರ್ ನೋಡಿದವರು ಸಿನಿಮಾ ರಿಲೀಸ್ ದಿನಾಂಕ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ರಿಷಭ್ ಶೆಟ್ಟಿ ಅವರು ಹೀರೋ ಸಿನಿಮಾದ ಕುರಿತಾಗಿ ಇದೇ ತಿಂಗಳ 11ಕ್ಕೆ ಅಪ್ಡೇಟ್​ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Anitha E | news18-kannada
Updated:February 9, 2021, 1:57 PM IST
Hero: ಹೀರೋ ರಿಷಭ್​ ಶೆಟ್ಟಿ ಕಡೆಯಿಂದ ಸಿಗಲಿದೆ ಹೊಸ ಅಪ್ಡೇಟ್​..!
ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​
  • Share this:
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಿಷಭ್​ ಶೆಟ್ಟಿ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಸಿನಿಮಾ ಹೀರೋ. ಈ ಸಿನಿಮಾ ಬಗ್ಗೆ ಯಾವುದೇ ಸುಳಿವು ನೀಡದೆಯೇ ಚಿತ್ರೀಕರಣ ಮುಗಿಸಿದ ರಿಷಭ್​ ಶೆಟ್ಟಿ, ಲಾಕ್​ಡೌನ್​ನಲ್ಲಿ ಈ ಚಿತ್ರವನ್ನು ಮಾಡಿ ಮುಗಿಸಿದ್ದರು. ನಂತರ ಸಿನಿಮಾ ಕುರಿತಾದ ಮಾಹಿತಿಯನ್ನು ಬಹಿರಂಗಗೊಳಿಸಲಾರಂಭಿಸಿದ್ದರು. ಒಂದು ಕಡೆ ನಟನೆ ಮತ್ತೊಂದು ಕಡೆ ನಿರ್ದೇಶನ. ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ನಿರ್ದೇಶನ ಸಹ ಮಾಡುತ್ತಿರುವ ರಿಷಭ್​ ಅವರ ಹೀರೋ ಸಿನಿಮಾ ಲಾಕ್​ಡೌನ್​ನಲ್ಲಿ ಸಖತ್ ಸದ್ದು ಮಾಡಿತ್ತು. ಅದಕ್ಕೂ ಕಾರಣ ಇದೆ. ರಿಷಭ್​ ಶೆಟ್ಟಿ ಹಾಗೂ ತಂಡವರು ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರಲಾಗದೆ ಚಿತ್ರೀಕರಣ ಮುಗಿಸಿದ್ದ ಸಿನಿಮಾ ಹೀರೋ. ​ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ಊರಿಗೆ ಹೋಗಿದ್ದ ರಿಷಭ್​ ಶೆಟ್ಟಿ ಆಗಲೇ ಈ ಸಿನಿಮಾದ ಪ್ಲಾನ್​ ಮಾಡಿ, ಅನ್​ಲಾಕ್​ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣ ಮುಗಿಸಿದ್ದರು. ಕೇವಲ 24 ಮಂದಿ ಸೇರಿಕೊಂಡು ಈ ಹೀರೋ ಸಿನಿಮಾ ನಿರ್ಮಿಸಿದ್ದಾರೆ.

ಈ ಹಿಂದೆಯೇ ಈ ಸಿನಿಮಾದ ಪುಟ್ಟ ವಿಡಿಯೋ ಹಾಗೂ ಒಂದು ಫಸ್ಟ್​ಲುಕ್​ ಪೋಸ್ಟರ್​ ಹಂಚಿಕೊಂಡಿದ್ದರು. ಇತ್ತೀಚೆಗಷ್ಟೆ ಹೀರೋ ಚಿತ್ರದ ಟ್ರೇಲರ್​ ರಿಲೀಸ್​ ಆಗಿತ್ತು. ಸಿನಿಮಾದ ಟ್ರೇಲರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

Youtube Video


ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಷಭ್​ ಶೆಟ್ಟಿ ಹಾಗೂ ಹೀರೋ ಸಿನಿಮಾದ ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಿತ್ತು. ಹೇಳಿದಂತೆ ಸಮಯಕ್ಕೆ ಸರಿಯಾಗಿ ಬಿಡುಗಡೆಯಾದ ಹೀರೋ ಟ್ರೇಲರ್​ನಲ್ಲಿ ವಿಲನ್​ ಆಗಿ ಪ್ರಮೋದ್​ ಶೆಟ್ಟಿ ಕಾಣಿಸಿಕೊಂಡಿದ್ದು, ಪ್ರಮೋದ್​ ಅವರನ್ನು ಚಕ್ರಾಧಿಪತಿ ರಾವಣನಿಗೆ ಹೋಲಿಕೆ ಮಾಡಲಾಗಿದೆ. ಲಂಕಾಸುರನಂತಿರುವ ಪ್ರಮೋದ್​ ಶೆಟ್ಟಿಯ ಅಡಿಯಾಳುಗಳಿಗೆ ಕ್ರೌರ್ಯವೇ ಕರ್ಮ, ನಿಷ್ಠೆಯಿಂದ ಕ್ರೌರ್ಯವನ್ನೇ ಕರ್ಮವನ್ನಾಗಿ ಮಾಡುವ ಅವರಿಗೆ ಬಿಸಿ ನೆತ್ತರು ಮೈ ಸೋಕಿದರೆ ಅವರಿಗೆ ಹಸಿರು. ಇಂತಹ ರಕ್ತಸಿಕ್ತ ಸಸ್ಪೆನ್ಸ್ ಕಥೆಯಲ್ಲಿ ಸೇಡು, ಮೋಸ, ಪ್ರೀತಿ, ದ್ವೇಷ ಎಲ್ಲವೂ ಇದೆ. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿರುವ ಈ ಹೀರೋ ಟ್ರೇಲರ್​ ಸಿನಿಮಾ ಬಗೆಗಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.




ಟ್ರೇಲರ್ ನೋಡಿದವರು ಸಿನಿಮಾ ರಿಲೀಸ್ ದಿನಾಂಕ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ರಿಷಭ್ ಶೆಟ್ಟಿ ಅವರು ಹೀರೋ ಸಿನಿಮಾದ ಕುರಿತಾಗಿ ಇದೇ ತಿಂಗಳ 11ಕ್ಕೆ ಅಪ್ಡೇಟ್​ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.




ರಿಷಭ್​ ಶೆಟ್ಟಿ ಅವರ ಪೋಸ್ಟ್ ನೋಡಿದವರೆಲ್ಲ ಹೀರೋ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಬಹುದು ಎಂದು ಊಹಿಸುತ್ತಿದ್ದಾರೆ. ರಿಷಭ್​ ಶೆಟ್ಟಿ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್​ ಎಂ ನಿರ್ದೇಶಿಸಿದ್ದಾರೆ. ಭರತ್​ ರಾಜ್​ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಇದರಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​ ನಟಿಸಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ಈಗಾಗಲೇ ಹೀರೋ ಸಿನಿಮಾದ ಡಬ್ಬಿಂಗ್​ ಸಹ ಮುಗಿದಿದೆ.

ಇದನ್ನೂ ಓದಿ: Salaga: ದುಬಾರೆಯಲ್ಲಿ ಸ್ಯಾಂಡಲ್​ವುಡ್​ ಸಲಗ​: ಮಾವುತರ ಜತೆ ವಾಲಿಬಾಲ್​ ಆಡಿದ ದುನಿಯಾ ವಿಜಯ್​..!

ಇನ್ನು ರಿಷಭ್​ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಿಷಭ್​ ಶೆಟ್ಟಿ ಅವರ ಕೈಯಲ್ಲಿರುವ ಪ್ರಾಜೆಕ್ಟ್​ಗಳ ವಿಷಯಕ್ಕೆ ಬಂದರೆ, ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಬೆಲ್‌ ಬಾಟಂ 2 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Published by: Anitha E
First published: February 9, 2021, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories