Puneeth Rajkumar: ಮನೆಗೆ ಬಂದ ಅಭಿಮಾನಿಯ ಮಗುವನ್ನು ಮುದ್ದಾಡಿ ಅಪ್ಪು ಎಂದು ಹೆಸರಿಟ್ಟ ಶಿವಣ್ಣ

ಮನೆಗೆ ಬಂದ ಅಪ್ಪು ಅಪ್ಪಟ ಅಭಿಮಾನಿಯ ಮನದಾಸೆಯನ್ನು ಶಿವರಾಜ್​ಕುಮಾರ್​ ಈಡೇರಿಸಿದ್ದಾರೆ. ಮಗುವನ್ನು ಎತ್ತಿ ಮುದ್ದಾಡಿದ ಶಿವರಾಜ್​ ಕುಮಾರ್​, ಮುದ್ದಾದ ಮಗುವಿಗೆ ಅಪ್ಪು ಎಂದು ಹೆಸರಿಟ್ಟು ಶುಭ ಹಾರೈಸಿದ್ದಾರೆ.

ಮಗುವಿಗೆ ಅಪ್ಪು ಎಂದು ಹೆಸರಿಟ್ಟ ಶಿವಣ್ಣ

ಮಗುವಿಗೆ ಅಪ್ಪು ಎಂದು ಹೆಸರಿಟ್ಟ ಶಿವಣ್ಣ

  • Share this:
ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ (Puneeth RajKumar)​ ನಮ್ಮನ್ನು ಅಗಲಿ 10 ತಿಂಗಳೇ ಕಳೆದು ಹೋಗಿದೆ. ಆದ್ರೆ ಪ್ರತಿಯೊಬ್ಬ ಅಭಿಮಾನಿಗಳ (Fans) ಹೃದಯದಲ್ಲೂ ಜೀವಂತವಾಗಿದ್ದಾರೆ. ಪುನೀತ್​ ರಾಜ್​ ಕುಮಾರ್​ ಮೇಲಿನ ಪ್ರೀತಿಯನ್ನು ಅಭಿಮಾನಿಗಳು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದಾರೆ. ಅದೆಷ್ಟೋ ಅಭಿಮಾನಿಗಳು ಪುನೀತ್​ ಹೆಸರಲ್ಲಿ ಅನೇಕ ಸಾಮಾಜಿಕ ಸೇವೆ (Social Service) ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ವ್ಯಾಪಾರ, ವಹಿವಾಟು ಹಾಗೂ ಅಂಗಡಿಗಳಿಗೆ ಪುನೀತ್​ ಹೆಸರಿಟ್ಟು ಅವರ ಮೇಲಿರೋ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಅಪ್ಪು ಹೆಸರಿಟ್ಟು ಪುನೀತ್​ ರಾಜ್​ಕುಮಾರ್​ ಅವರನ್ನು ಸದಾ ನೆನೆಯುತ್ತಿದ್ದಾರೆ. ಇದಕ್ಕೆ ಬೀದರ್​ನ (Bidar) ಈ ದಂಪತಿ ಸಹ ಉದಾಹರಣೆಯಾಗಿದ್ದಾರೆ.  

ಶಿವಣ್ಣರಿಂದಲೇ ನಾಮಕರಣ

ಅಪ್ಪಟ ಅಪ್ಪು ಅಭಿಮಾನಿಗಳಾಗಿರುವ ಬೀದರ್​ನ ಈ ದಂಪತಿ ಇದೀಗ ಮಗುವಿಗೆ ತಮ್ಮ ನೆಚ್ಚಿನ ನಟನ ಹೆಸರನ್ನು ನಾಮಕರಣ ಮಾಡಿದ್ದಾರೆ. ಶಿವಣ್ಣ  ಮನೆಗೆ ಬಂದ ಬೀದರ್​ನ ಈ ದಂಪತಿ ನೀವೇ ನಮ್ಮ ಮಗುವಿಗೆ ಅಪ್ಪು ಎಂದು ಹೆಸರಿಡುವಂತೆ ಕೋರಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಶಿವಣ್ಣ, ಮಗುವಿಗೆ ಅಪ್ಪು ಎಂದು ನಾಮಕರಣ ಮಾಡಿ ಮುತ್ತಿಟ್ಟಿದ್ದಾರೆ.



ಮಗುವನ್ನು ಎತ್ತಿ ಮುದ್ದಾಡಿದ ಶಿವಣ್ಣ

ಮನೆಗೆ ಬಂದ ಅತಿಥಿ ಹಾಗೂ ಅಪ್ಪು ಅಪ್ಪಟ ಅಭಿಮಾನಿಯ ಮನದಾಸೆಯನ್ನು ಶಿವರಾಜ್​ಕುಮಾರ್​ ಈಡೇರಿಸಿದ್ದಾರೆ. ಮಗುವನ್ನು ಎತ್ತಿ ಮುದ್ದಾಡಿದ ಶಿವರಾಜ್​ ಕುಮಾರ್​, ಮುದ್ದಾದ ಮಗುವಿಗೆ ಅಪ್ಪು ಎಂದು ಹೆಸರಿಟ್ಟು ಶುಭ ಹಾರೈಸಿದ್ದಾರೆ. ಮನೆಗೆ ಬಂದ ಅಭಿಮಾನಿಗೆ ಆತಿಥ್ಯ ನೀಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: SIIMA Awards 2022: ಬೆಂಗಳೂರಲ್ಲಿ ಸೈಮಾ ಸಿನಿ ಹಬ್ಬ; ಅಪ್ಪು ಸ್ಮರಣೆಯೊಂದಿಗೆ ಸೆಪ್ಟೆಂಬರ್​ನಲ್ಲಿ ಸಮಾರಂಭ

 ಅಭಿಮಾನಿ ಫುಲ್​ ಖುಷ್​

ಪುನೀತ್​ ರಾಜ್​ಕುಮಾರ್​ ಅಪ್ಪಟ ಅಭಿಮಾನಿ ದಂಪತಿಯಾಗಿರೋ ಇವರು ಬೀದರ್​ನಿಂದ ಬೆಂಗಳೂರಿಗೆ ಬಂದು ಶಿವಣ್ಣ ಅವರನ್ನು ಭೇಟಿ ಮಾಡಿ ಮಗುವಿಗೆ ನಾಮಕರಣ ಮಾಡಿದ್ದಾರೆ. ಶಿವಣ್ಣ ಅವರೇ ಮಗುವಿಗೆ ಅಪ್ಪು ಎಂದು ಹೆಸರಿಟ್ಟಿದ್ದಕ್ಕೆ ಫುಲ್​ ಖುಷಿಯಾಗಿರೋ ಅಭಿಮಾನಿ ದಂಪತಿ ತಮ್ಮೂರಿಗೆ ವಾಪಸ್​ ಹೋಗಿದ್ದಾರೆ.

ಮುದ್ದು ಕಂದನ ಫೋಟೋ ಎಲ್ಲೆಡೆ ವೈರಲ್​​

ಇದೀಗ ಶಿವಣ್ಣ ಬಾಯಿಂದ ಅಪ್ಪು ಎಂದು ಕರೆಸಿಕೊಂಡಿರುವ ಪುಟ್ಟ ಪುಟಾಣಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲದೆ ರಾಜರತ್ನನ ಅಭಿಮಾನಿ ದಂಪತಿ ಕೂಡ ಫುಲ್ ಖುಷಿಯಾಗಿದ್ದಾರೆ.

ಅಪ್ಪು ಅಭಿಮಾನಿಗಳಿಂದ ವಿಭಿನ್ನ ಕೆಲಸ

ಜೊತೆಗಿರದ ಜೀವ ಇಂದಿಗೂ ಜೀವಂತ ಎನ್ನುವ ಹಾಗೇ ನೆಚ್ಚಿನ ನಟನನ್ನು ಮರೆಯಲಾಗದೆ. ತಮ್ಮ ಕಲೆಯಲ್ಲಿ ಅಪ್ಪು ಮೇಲಿನ ಅಭಿಮಾನವನ್ನ ಈ ಕುಟುಂಬ ಪ್ರದರ್ಶಿಸುತ್ತಿದೆ.  ಕೋಲಾರದ ಭೀಮಾರಾಜ್ ಕುಟುಂಬ ಸಹ ಅಣ್ಣಾವ್ರು ಹಾಗು ಅಪ್ಪುವಿನ ಅಭಿಮಾನಿಗಳಾಗಿದ್ದು, ಈ ಬಾರಿಯ ಗಣೇಶೋತ್ಸವಕ್ಕೆ ಅಪ್ಪು ಜೊತೆಗಿರೋ ಗಣೇಶ ಮೂರ್ತಿಗಳನ್ನು ವಿಭಿನ್ನ ರೀತಿಯಲ್ಲಿ ತಯಾರು ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar: ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿಗೆ ಚಿಂತನೆ; ಸಿಎಂ ಭೇಟಿಯಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣ ಚರ್ಚೆ

ಅಶ್ವಿನಿ ಪುನೀತ್​ ರಾಜ್​ಕುಮಾರ್​ ನೀಡಲು ನಿರ್ಧಾರ

ಮೊದಲು ತಯಾರು ಮಾಡಿರುವ ಪಾರಿವಾಳ ಸಹಿತ ಮೂರ್ತಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಲು ಈ ಕಲಾವಿದರ ಕುಟುಂಬ ಸಜ್ಜಾಗಿದೆ. ಜೇಡಿ ಮಣ್ಣಲ್ಲೆ, ಯಾವುದೇ ಅಚ್ಚುಗಳಿಲ್ಲದೆ, ಬರಿಗೈಯಲ್ಲೇ ಗಣಪತಿ ಮೂರ್ತಿಗಳನ್ನ ತಯಾರಿಸುವ ಇವರು, ಅಪ್ಪು ಸಹಿತ ಗಣಪತಿ ಮೂರ್ತಿಯನ್ನು ಸಹ ಹಾಗೆಯೇ ನಿರ್ಮಿಸಿದ್ದಾರೆ. ಎರಡೂವರೆ ಅಡಿಯ ಆರು ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಮಣ್ಣಿನ ಮೂರ್ತಿಯಲ್ಲೂ ಅಪ್ಪು ಮುದ್ದು ಮುದ್ದಾಗಿ ರೂಪುಗೊಂಡಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಕೆಲಸ ಮಾಡ್ತಿದ್ದ ಭೀಮರಾಜ್​





ಭೀಮಾರಾಜ್ ಅವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಡಾ.ರಾಜಕುಮಾರ್ ಅಭಿಮಾನಿಯಾಗಿದ್ದರು. ನಂತರ ಕೋಲಾರದ ಗಾಂಧಿನಗರಕ್ಕೆ ಬಂದು ನೆಲೆಸಿದ ಮೇಲೆ ಗಣೇಶ ಮೂರ್ತಿಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿ ವರ್ಷ ಬರುವ ಗಣೇಶೋತ್ಸವಕ್ಕೆ ತಮಗೆ ಬರುವ ಬೇಡಿಕೆಯ ಮೇಲೆ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದರು.

Published by:Pavana HS
First published: