ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿಯ ಅವತಾರ ತಾಳಲಿದ್ದಾರೆ. ದುರ್ಗದ ಹುಲಿಯಾಗಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆದಿದೆ.. ಕಳೆದ ಡಿಸೆಂಬರ್ನಲ್ಲಿಯೇ 'ರಾಜವೀರ ಮದಕರಿ ನಾಯಕ' ಎಂಬ ಶೀರ್ಷಿಕೆಯಲ್ಲಿ ಈ ಸಿನಿಮಾ ಮುಹೂರ್ತ ಕಂಡಿದೆ. ಅಂದಹಾಗೆ ಈ ಸಿನಿಮಾ ಇನ್ನಷ್ಟೇ ಶೂಟಿಂಗ್ ಸ್ಟಾರ್ಟ್ ಮಾಡಬೇಕಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ 100 ಕೋಟಿ ರೂ ಬಜೆಟ್ನಲ್ಲಿ ರಾಜವೀರ ಮದಕರಿ ನಾಯಕ ಸಿನಿಮಾ ಮೂಡಿ ಬರಲಿದೆ. ಖ್ಯಾತ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಡಿಸೆಂಬರ್ನಲ್ಲಿ ಮದಕರಿಯ ಗತ್ತು ಗೈರತ್ತು ಬೆಳ್ಳಿ ಪರದೆ ಮೇಲೆ ವಿಜೃಂಬಿಸಲಿದೆ. ಮದಕರಿಗೂ ಮುನ್ನವೇ ಸೇಮ್ ಟು ಸೇಮ್ ದುರ್ಗದ ಕಥೆಯನ್ನೇ ಆಧರಿಸಿ ಕನ್ನಡದಲ್ಲೊಂದು ಸಿನಿಮಾ ದೃಶ್ಯರೂಪ ಪಡೆದುಕೊಂಡಿದೆ.. ಇನ್ನು ಕೆಲವೇ ವಾರಗಳಲ್ಲಿ ಥಿಯೇಟರ್ಗೆ ಎಂಟ್ರಿಕೊಡಲು ಸಜ್ಜಾಗಿದೆ. ಅದುವೇ ಬಿಚ್ಚುಗತ್ತಿ.
ದುರ್ಗವನ್ನ ಆಳಿದ, ಅದ್ಭುತ ಪರಾಕ್ರಮದ ಮೂಲಕ ರಾಜ್ಯದ ವಿಸ್ತಾರವನ್ನ ಹೆಚ್ಚಿಸಿದ ಅಪ್ರತಿಮ ಹೋರಾಟಗಾರ, ಕೆಚ್ಚೆದೆಯ ವೀರ, ಗಂಡು ಮೆಟ್ಟಿದ ನಾಡಿನ ಕಲಿ ಭರಮಣ್ಣ ನಾಯಕ... ಈಗ ಇದೇ ಕಥೆಯನ್ನ ಆಧರಿಸಿ ಬಿಚ್ಚುಗತ್ತಿ ಎಂಬ ಸಿನಿಮಾವನ್ನ ಹರಿಸಂತೋಷ್ ತೆರೆಗೆ ತರ್ತಿದ್ದಾರೆ. ಶೂರ-ವೀರ-ದೀರನಾಗಿ ರಾಜವರ್ಧನ್ ಎಂಬ ಸ್ಪುರದ್ರೂಪಿ ನಟ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಐಫೋನ್ನಲ್ಲೇ ಚಿತ್ರೀಕರಿಸಿದ ಮೊದಲ ಕನ್ನಡ ಸಿನಿಮಾ: ಹೇಗಿದೆ ಗೊತ್ತಾ ಡಿಂಗನ ಕ್ವಾಲಿಟಿ
ಅಂದಹಾಗೆ ರಾಜವರ್ಧನ್, ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ. ಆರಡಿ ಹೈಟು. ಹೀರೋಗೆ ಬೇಕಾದ ಪರ್ಸನಾಲಿಟಿ ಇರೋ ರಾಜವರ್ಧನ್ಗೆ ಸ್ವತಃ ಡಿ-ಬಾಸ್ ಬೆಂಬಲ ಕೂಡ ಇದೆ. ಬಿಚ್ಚುಗತ್ತಿ ಚಿತ್ರದ ಮುಹೂರ್ತಕ್ಕೆ ಚಾಲೆಂಜಿಂಗ್ ಸ್ಟಾರ್ ಆಗಮಿಸಿ ಶುಭ ಕೋರಿದರು. ಸದ್ಯ ಈ ಸಿನಿಮಾ ಟೀಸರ್ ರಿಲೀಸಾಗಿದೆ. ಬಹಳ ಅದ್ಧೂರಿಯಾಗಿ ಮೂಡಿಬಂದಿದೆ. ಈ ಐತಿಹಾಸಿಕ ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಸಂಗೀತ ಒದಗಿಸಿದ್ದಾರೆ. ರಾಜವೀರ ಮದಕರಿನಾಯಕನಿಗೆ ಕಥೆ ಚಿತ್ರಕಥೆ ಬರೆದಿರೋ ಬಿ.ಎಲ್. ವೇಣು ಅವರೇ ಈ ಚಿತ್ರದ ಬರವಣಿಗೆಗೂ ಬೆನ್ನೆಲುಬಾಗಿ ನಿಂತಿದ್ದಾರೆ. ಒಟ್ಟಾರೆ ಟೀಸರ್ ಝಲಕ್ನ ಮೂಲಕವೇ ಒಂದು ಮಟ್ಟಕ್ಕೆ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ ಗೆಲುವಿನ ಕಹಳೆ ಊದಲಿದೆಯಾ? ರಾಜವರ್ಧನ್ಗೆ ದೊಡ್ಡ ಬ್ರೇಕ್ ಕೊಡುತ್ತಾ ಎಂದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ