HOME » NEWS » Entertainment » BHUVANN PONNANNAA ANNOUNCD HIS NEXT FILM PRANAYARAJA BY WISHING THE REAL PRANAYARAJA OF SANDALWOOD ACTOR SRINATH AE

Bhuvann Ponnannaa: ಬಿಗ್​ ಬಾಸ್​ ಖ್ಯಾತಿಯ ಭುವನ್​ ಪೊನ್ನಣ್ಣ ಈಗ ಪ್ರಣಯ ರಾಜ: ಡಿ.30ಕ್ಕೆ ಟೀಸರ್​ ರಿಲೀಸ್​..!

Pranayaraja: ಪ್ರಣಯ ರಾಜ ಸಿನಿಮಾದ ಟೀಸರ್ ಅನ್ನು ಭುವನ್​ ತಮ್ಮ ಹುಟ್ಟುಹಬ್ಬ ಅಂದರೆ ಡಿ.30ರಂದು ರಿಲೀಸ್​ ಮಾಡಲಿದ್ದಾರೆ. ಈ ಚಿತ್ರವನ್ನು ಟಿ. ಸುದರ್ಶನ್ ಚಕ್ರ​ ನಿರ್ದೇಶನ ಮಾಡಲಿದ್ದಾರೆ.

Anitha E | news18-kannada
Updated:December 29, 2020, 9:50 AM IST
Bhuvann Ponnannaa: ಬಿಗ್​ ಬಾಸ್​ ಖ್ಯಾತಿಯ ಭುವನ್​ ಪೊನ್ನಣ್ಣ ಈಗ ಪ್ರಣಯ ರಾಜ: ಡಿ.30ಕ್ಕೆ ಟೀಸರ್​ ರಿಲೀಸ್​..!
ಭುವನ್​ ಪೊನ್ನಣ್ಣ ಹಾಗೂ ಶ್ರೀನಾಥ್​
  • Share this:
ಬಿಗ್​ ಬಾಸ್​ ಹಾಗೂ ರಾಂಧವ ಸಿನಿಮಾ ಖ್ಯಾತಿಯ ನಟ ಭುವನ್​ ಪೊನ್ನಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಗಪಟ್ಟೆ ಸಕ್ರಿಯವಾಗಿರುವ ಕಲಾವಿದ. ಬಿಗ್​ ಬಾಸ್​ ರಿಯಾಲಿಟಿ ಕಾರ್ಯಕ್ರಮದಲ್ಲಿ ರಂಜಿಸುವ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಭುವನ್​, ನಂತರ ರಾಂಧವ ಸಿನಿಮಾದಲ್ಲೂ ನಟಿಸಿದರು. ಸನತ್​ ಕುಮಾರ್​ ಎಸ್​ ಆರ್ ನಿರ್ಮಾಣದ ರಾಂಧವ ಚಿತ್ರವನ್ನು ಸುನೀಲ್​ ಎಸ್​ ಆಚಾರ್ಯ ನಿರ್ದೇಶಿಸಿದ್ದಾರೆ. ರಾಂಧವನಾಗಿ ತೆರೆ ಮೇಲೆ ಅಬ್ಬರಿಸಿದ್ದ ಭುವನ್​ ಈಗ ಪ್ರಣಯರಾಜನಾಗಿ ಮಿಂಚಲು ಸಜ್ಜಾಗಿದ್ದಾರೆ. ತಮ್ಮ ಮುಂದಿನ ಸಿನಿಮಾಗೆ ಪ್ರಣಯ ರಾಜ ಎಂದು ಶೀರ್ಷಿಕೆ ನೀಡಿರುವ ನಟ, ಸ್ಯಾಂಡಲ್​ವುಡ್​ನ ನಿಜವಾದ ಪ್ರಣಯ ರಾಜ ಶ್ರೀನಾಥ್​ ಅವರ ಆಶೀರ್ವಾದ ಪಡೆದು ಸಿನಿಮಾದ ಶೀರ್ಷಿಕೆ ರಿವೀಲ್​ ಮಾಡಿದ್ದಾರೆ. ಹೌದು, ನಿನ್ನೆ ಸ್ಯಾಂಡಲ್​ವುಡ್​ ಪ್ರಣಯ ರಾಜ ಶ್ರೀನಾಥ್​ ಅವರ ಹುಟ್ಟುಹಬ್ಬ, ಅದರ ಅಂಗವಾಗಿ ಅವರನ್ನು ಭೇಟಿ ಮಾಡಿದ ಭುವನ್​ ಅವರಿಗೆ ಬರ್ತ್​ ಡೇ ವಿಶ್​ ಮಾಡಿದ್ದಾರೆ. 

ಶ್ರೀನಾಥ್​ ಅವರ ಮನೆಗೆ ಭೇಟಿ ನೀಡಿದ ಭುವನ್​ ಪೊನ್ನಣ್ಣ, ತಮ್ಮ ಸಿನಿಮಾದ ಬಗ್ಗೆ ಅವರಿಗೆ ತಿಳಿಸಿ, ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ಶ್ರೀನಾಥ್​ ಅವರೊಂದಿಗೆ ಕಳೆದ ಕೆಲವು ಕ್ಷಣಗಳ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Bhuvann Ponnanna, Pranaya Raja Movie, 21 heroines in Bhuvann Ponnanna’s Pranaya Raja, ಭುವನ್ ಪೊನ್ನಣ್ಣ, ಪ್ರಣಯ ರಾಜ, ಪ್ರಣಯ ರಾಜ ಸಿನಿಮಾದಲ್ಲಿ ಭುವನ್ ಪೊನ್ನಣ್ಣ, ಪ್ರಯಣಯ ರಾಜ ಸಿನಿಮಾದಲ್ಲಿ 21 ನಾಯಕಿಯ
ಪ್ರಣಯ ರಾಜ


ಪ್ರಣಯ ರಾಜ ಸಿನಿಮಾದ ಟೀಸರ್ ಅನ್ನು ಭುವನ್​ ತಮ್ಮ ಹುಟ್ಟುಹಬ್ಬ ಅಂದರೆ ಡಿ.30ರಂದು ರಿಲೀಸ್​ ಮಾಡಲಿದ್ದಾರೆ. ಈ ಚಿತ್ರವನ್ನು ಟಿ. ಸುದರ್ಶನ್ ಚಕ್ರ​ ನಿರ್ದೇಶನ ಮಾಡಲಿದ್ದಾರೆ.






ಲೈಕ್ರಾ ಹಾಗೂ ಕೊಲ್ಲೂರು ಮೂಕಾಂಬಿಕಾ ಪ್ರೊಡಕ್ಷನ್ಸ್​ ಬ್ಯಾನರ್​ ಅಡಿ ನಿರ್ಮಾಣವಾಗಲಿರುವ ಪ್ರಣಯ ರಾಜ ಸಿನಿಮಾದಲ್ಲಿ ಭುವನ್​ ಪೊನ್ನಣ್ಣ 21 ನಾಯಕಿಯರೊಂದಿಗೆ ರೊಮ್ಯಾನ್ಸ್​ ಮಾಡಲಿದ್ದಾರಂತೆ. ಬೇರೆ ಬೇರ ಭಾಷೆಯ 21 ನಾಯಕಿಯರಲ್ಲಿ 3 ಮಂದಿಯದ್ದು ಪ್ರಮುಖ ಪಾತ್ರ ಎನ್ನಲಾಗುತ್ತಿದೆ. ಅದರಲ್ಲೂ ಸದ್ಯ 18 ಮಂದಿಯನ್ನು ಫೈನಲ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.






ಇನ್ನು ಭುವನ್​ ಹುಟ್ಟುಹಬ್ಬದಂದು ಪ್ರಣಯ ರಾಜ ಸಿನಿಮಾದ ಟೀಸರ್ ಹಾಗೂ ಟೈಟಲ್​ ಪೋಸ್ಟರ್​ ರಿಲೀಸ್​ ಆಗಲಿದ್ದು, ಅದನ್ನು ರಿಯಲ್​ ಪ್ರಣಯ ರಾಜ ಶ್ರೀನಾಥ್​ ಅವರೇ ಮಾಡುವ ಸಾಧ್ಯತೆ  ಇದೆಯಂತೆ. ಜನವರಿಯಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
Published by: Anitha E
First published: December 29, 2020, 9:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories