ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಸಹಜವಾದ ನಟನೆಯ ಮೂಲಕ ಮೊದಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಸೂಪರ್-ಡೂಪರ್ ಹಿಟ್ ಆಗುವುದರೊಂದಿಗೆ ಅವರ ಖ್ಯಾತಿಯನ್ನೂ ಹೆಚ್ಚಿಸಿದೆ. ಇನ್ನು ಕೆಜಿಎಫ್ ನಂತರ ಶ್ರೀನಿಧಿ ಶೆಟ್ಟಿಗೆ ಸಾಕಷ್ಟು ಸಿನಿಮಾಗಳಿಂದ ಆಫರ್ ಸಿಕ್ಕಿದ್ದವು. ಆದರೆ ಅವರ ಕೈಯಲ್ಲಿ ಕೆಜಿಎಫ್ ಚಾಪ್ಟರ್ 2 ಸಹ ಇದ್ದ ಕಾರಣದಿಂದ ಅವರು ತಮ್ಮ ಡೇಟ್ಸ್ ನೋಡಿಕೊಂಡು ಸಿನಿಮಾಗಳ ಆಯ್ಕೆ ಮಾಡಿಕೊಳ್ಳುವ ಅಗತ್ಯವಿತ್ತು. ಇದರಿಂದ ಶ್ರೀನಿಧಿ ಈ ಹಿಂದೆ ಕಾಳಿವುಡ್ ಸಿನಿಮಾವೊಂದಕ್ಕೆ ಓಕೆ ಎಂದಿದ್ದರು. ಅದು ಸಹ ನಟ ವಿಕ್ರಮ್ ಅವರ ಸಿನಿಮಾ. ವಿಕ್ರಮ್ ಅಭಿಮಯದ ಕೋಬ್ರಾ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಲಾಕ್ಡೌನ್ನಲ್ಲಿ ಈ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಹಾಗೂ ಹಾಡೊಂದು ರಿಲೀಸ್ ಆಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ. ಲಾಕ್ಡೌನ್ನಿಂದಾಗಿ ಶ್ರೀನಿಧಿಗೆ ತಮಿಳು ಸಿನಿಮಾದ ಜತೆಗೆ ಕೆಜಿಎಫ್ 2 ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಸದ್ಯ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇಂದು ರಾಕಭಾಯ್ ಅವರ ರೀನಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಸಿನಿಮಾದ ನಾಯಕ ನಟಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಪೋಸ್ಟರ್ ಅನ್ನು ಉಡುಗೊರೆಯಾಗಿ ನೀಡಿದೆ.
View this post on Instagram
View this post on Instagram
To the multi Tasker on sets , a very happy Birthday 😜 @srinidhi_shetty #kgfchapter2
View this post on Instagram
To the ever foodie, happy Birthday @srinidhi_shetty 🎂🍿🍯🧃🍩🍮🍭🍪🌰🍬🍫🥜🥙🧆🌮🌯🥗🍜🍜🍝🥫🥘🍛🍣🍱🥟🦪🍥🍘🍚🍙🍤🥠🥮🍢🍘🍧🍔🌭🍟🍕🍖🍗🥩🥪
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ