• Home
  • »
  • News
  • »
  • entertainment
  • »
  • Bhumi Pednekar: ನಟಿ ಭೂಮಿ ಪೆಡ್ನೇಕರ್ ಬಟ್ಟೆ ನೋಡಿ ಆಕೆಯನ್ನು ಉರ್ಫಿ ಜಾವೇದ್‌ಗೆ ಹೋಲಿಸಿದ ನೆಟ್ಟಿಗರು!

Bhumi Pednekar: ನಟಿ ಭೂಮಿ ಪೆಡ್ನೇಕರ್ ಬಟ್ಟೆ ನೋಡಿ ಆಕೆಯನ್ನು ಉರ್ಫಿ ಜಾವೇದ್‌ಗೆ ಹೋಲಿಸಿದ ನೆಟ್ಟಿಗರು!

ಭೂಮಿ ಪಡ್ನೇಕರ್​

ಭೂಮಿ ಪಡ್ನೇಕರ್​

ಕೆಲವೊಂದು ಸಂದರ್ಭಗಳಲ್ಲಿ ನಟ-ನಟಿಯರ ಫೋಟೋವನ್ನು ಛಾಯಾಗ್ರಾಹಕರು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಹೆಚ್ಚಾಗಿ ಟ್ರೋಲ್ (Troll) ಮಾಡುವುದು ಅವರು ಹಾಕುವ ಬಟ್ಟೆ ನೋಡಿ ಎಂಬುದು ವಾಸ್ತವವಾದ ವಿಷಯವಾಗಿದೆ.

  • Share this:

ಸಾಮಾಜಿಕ ಮಾಧ್ಯಮ (Social Media) ದಲ್ಲಿ ಬಾಲಿವುಡ್​ನ ಕೆಲವು ನಟ ಮತ್ತು ನಟಿಯರು ತುಂಬಾನೇ ಸಕ್ರಿಯರಾಗಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅವರು ಯಾವುದೇ ಹೊಸ ಫ್ಯಾಶನ್ ಬಟ್ಟೆ ತೊಟ್ಟರೂ, ಅವರ ಫೋಟೋವನ್ನು ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವೊಂದು ಸಂದರ್ಭಗಳಲ್ಲಿ ನಟ-ನಟಿಯರ ಫೋಟೋವನ್ನು ಛಾಯಾಗ್ರಾಹಕರು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಹೆಚ್ಚಾಗಿ ಟ್ರೋಲ್ (Troll) ಮಾಡುವುದು ಅವರು ಹಾಕುವ ಬಟ್ಟೆ ನೋಡಿ ಎಂಬುದು ವಾಸ್ತವವಾದ ವಿಷಯವಾಗಿದೆ. ಹೌದು.ಅದರಲ್ಲೂ ನಟಿಯೂ ತುಂಬಾನೇ ತುಂಡುಡುಗೆಯಲ್ಲಿ ಕಾಣಿಸಿಕೊಂಡರೆ ಅಂತೂ ಮುಗಿದೇ ಹೋಯಿತು ನೋಡಿ.

ಹೀಗೆ ತಾವು ಹಾಕುವ ವಿಭಿನ್ನ ರೀತಿಯ ಬಟ್ಟೆಗಳಿಂದ ಆಗಾಗ್ಗೆ ಟ್ರೋಲ್ ಆಗುವ ಹಿಂದಿ ನಟಿ ಎಂದರೆ ಅವರು ಉರ್ಫಿ ಜಾವೇದ್ ಅಂತ ಹೇಳಬಹುದು. ಆದರೆ ಇಲ್ಲಿ ಬೇರೊಬ್ಬ ನಟಿ ಹಾಕಿದ ಬಟ್ಟೆ ನೋಡಿ ಆಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಉರ್ಫಿ ಜಾವೇದ್ ಅವರಿಗೆ ಹೋಲಿಸಿದ್ದಾರೆ ನೋಡಿ.


ನಟಿ ಭೂಮಿ ಪೆಡ್ನೇಕರ್ ಟ್ರೋಲ್​ ಆಗ್ತಿರೋದೇಕೆ?


ಯಾರು ಆ ನಟಿ ಇಂತಹ ಬಟ್ಟೆಗಳಲ್ಲಿ ಉರ್ಫಿಗೆ ಸ್ಪರ್ಧೆ ನೀಡುತ್ತಿದ್ದಾರೆ ಅಂತ ನಿಮಗೆ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ? ಕೆಲವೇ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರೂ ಸಹ ತಮ್ಮ ಅದ್ಭುತ ಅಭಿನಯದಿಂದ ಫೇಮಸ್‌ ಆಗಿರುವ ಭೂಮಿ ಪೆಡ್ನೇಕರ್ .


ಇದನ್ನೂ ಓದಿ: ತುಂಡು ಉಡುಗೆ ತಂದ ಆಪತ್ತು; ಉರ್ಫಿ ಜಾವೇದ್ ಮೇಲೆ ಬಿತ್ತು ಪೊಲೀಸ್​ ಕೇಸ್!​

ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತನ್ನ ವಿಲಕ್ಷಣ ಡ್ರೆಸ್ಸಿಂಗ್ ಸೆನ್ಸ್ ಗಾಗಿ ಸಖತ್ ಆಗಿ ಟ್ರೋಲ್ ಆಗಿದ್ದಾರೆ. ನೆಟ್ಟಿಗರು ‘ರಕ್ಷಾ ಬಂಧನ್’ ಚಿತ್ರದ ಈ ನಟಿಯನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ.


ಉರ್ಫಿಗೆ ಸೆಡ್ಡು ಹೊಡೆದ ಭೂಮಿ ಪಡ್ನೇಕರ್​!

ಇತ್ತೀಚೆಗೆ, ನಟಿ ಭೂಮಿ ಅವರು ಇನ್ನೊಬ್ಬ ಬಾಲಿವುಡ್ ನಟಿಯಾದ ಸೋನಮ್ ಕಪೂರ್ ಅವರ ದೀಪಾವಳಿ ಹಬ್ಬದ ಪಾರ್ಟಿಯಲ್ಲಿ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ‘ಬಧಾಯಿ ದೋ’ ಚಿತ್ರದ ನಟಿ ತುಂಬಾನೇ ಕ್ಯೂಟ್ ಮತ್ತು ಸೊಗಸಾಗಿ ಕಾಣುತ್ತಿದ್ದರು, ಆದಾಗ್ಯೂ, ಅವರು ಹಾಕಿರುವ ಡ್ರೆಸ್ ಅನೇಕರಿಗೆ ಹಿಡಿಸಿದಂತೆ ಕಾಣಲಿಲ್ಲ.


ನಟಿ ಹಾಕಿರುವ ಬಿಳಿ ಡ್ರೆಸ್ ನೋಡಿ ನೆಟ್ಟಿಗರು ಹೇಳಿದ್ದೇನು?


ಅವರು ಬಿಳಿ ಬಣ್ಣದ ಡ್ರೆಸ್ ಹಾಕಿಕೊಂಡು ಪಾರ್ಟಿಗೆ ಹೋಗುತ್ತಿರುವ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ನೋಡಿದಾಗ, ಅನೇಕರು ಅವರ ಆಯ್ಕೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಅವರು 'ಅಶ್ಲೀಲವಾಗಿ ಕಾಣುತ್ತಿದ್ದಾರೆ' ಎಂದು ಸಹ ಹೇಳಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನಟಿ ಭೂಮಿಯ ಈ ಉಡುಗೆ ಬಹುಶಃ ಉರ್ಫಿಯ ಬಟ್ಟೆಯಿಂದ ಪ್ರೇರಿತವಾಗಿದೆ ಎಂದು ನೇರವಾಗಿ ಕಾಮೆಂಟ್ ಮಾಡಿದ್ದಾರೆ.


ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಅವರು ಅನೇಕ ವಿನ್ಯಾಸಕರರ ಡಿಸೈನ್ ಬಟ್ಟೆಗಳ ಪೈಕಿ ಇದನ್ನು ಆಯ್ಕೆ ಮಾಡಿದ್ದಾರೆ" ಎಂದು ಹೇಳಿದ್ದಾರೆ. ಏತನ್ಮಧ್ಯೆ, ಇನ್ನೊಬ್ಬರು "ದೀಪಾವಳಿ ಹಬ್ಬದ ಪಾರ್ಟಿಗೆ ಹಾಕಿದ ಬಟ್ಟೆ ಅಶ್ಲೀಲವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಅವರ ಉಡುಗೆ ತಮಾಷೆಯಾಗಿದೆ ಎಂದು ಹೇಳುವಷ್ಟರ ಮಟ್ಟಿಗೆ ಕೆಲವರು ಮುಂದುವರೆದು ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಹರಿಬಿಟ್ಟಿದ್ದಾರೆ. ಇನ್ನೊಬ್ಬರು “ನಟಿ ಉರ್ಫಿಯ ಡ್ರೆಸ್ಸಿಂಗ್ ಶೈಲಿಯಿಂದ ಸ್ಫೂರ್ತಿ ಪಡೆದಿದ್ದಾರೆ” ಎಂದು ಹೇಳಿದಲ್ಲದೆ ಇದು "ಉರ್ಫಿ ಪ್ರಭಾವ" ಎಂದು ಸಹ ಬರೆದಿದ್ದಾರೆ.


ಇದನ್ನೂ ಓದಿ: ಕ್ಯಾಸೆಟ್ ರೀಲ್​ನಲ್ಲಿ ಉರ್ಫಿ ಅವತಾರ! ನಿಮ್ಮನೆಯಲ್ಲಿದ್ಯಾ ಹಳೆ ಕ್ಯಾಸೆಟ್?

ಒಟ್ಟಿನಲ್ಲಿ ಹೇಳುವುದಾದರೆ ನಟಿ ಭೂಮಿ ತನ್ನ ನಟನಾ ಕೌಶಲ್ಯದಿಂದ ಬಾಲಿವುಡ್‌ನಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. 33 ವರ್ಷದ ನಟಿ ‘ದಮ್ ಲಗಾ ಕೆ ಹೈಶಾ’, ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಶುಭ್ ಮಂಗಲ್ ಸಾವಧಾನ್’ ಮತ್ತು ‘ಬದಾಯಿ ದೋ’ ಮುಂತಾದ ಚಲನಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಅನೇಕ ಸಿನಿ ರಸಿಕರ ಹೃದಯಗಳನ್ನು ಗೆದ್ದಿದ್ದಾರೆ.

First published: