ಬಾಲಿವುಡ್ನಲ್ಲಿ (Bollywood) ಎಲ್ಲವೂ ಮೊದಲಿನಂತಿಲ್ಲ. ಸ್ಟಾರ್ ನಟರ ಚಿತ್ರಗಳು ಸೋತು ಸುಣ್ಣವಾಗುತ್ತಿದೆ. ಒಂದೆಡೆ ಕಂಗನಾ ರಾಣವತ್ ಅಭಿನಯದ ಧಾಕಡ್ ಮಕಾಡೆ ಮಲಗಿದೆ. ಇನ್ನೊಂದೆಡೆ ರಣವೀರ್ ಸಿಂಗ್ ಅಭಿನಯದ ಚಿತ್ರ ಕೂಡ ಬಾಕ್ಸ್ ಆಫೀಸ್ನಲ್ಲಿ ನೆಲ ಕಚ್ಚಿದೆ. ಎಲ್ಲೆಡೆ ದಕ್ಷಿಣ ಭಾರತದ ಚಿತ್ರಗಳ ಹವಾ ಹೆಚ್ಚಾಗಿದೆ. ಪುಷ್ಪಾ, ಆರ್ಆರ್ ಆರ್ (RRR) ಹಾಗೂ ಕೆಜಿಎಫ್ 2 (KGF 2) ನಂತರ ಚಿತ್ರ ದುನಿಯಾ ಸಂಪೂರ್ಣವಾಗಿ ಬದಲಾಗಿದೆ. ಜನರಿಗೆ ಬಾಲಿವುಡ್ ಚಿತ್ರಗಳ ಮೇಲೆ ನಿರೀಕ್ಷೆ ಹೊರಟು ಹೋಗಿದೆ ಎನ್ನುವ ರೀತಿ ಆಗಿದೆ. 2022ರಲ್ಲಿ ಯಾವುದೇ ಹಿಟ್ ಚಿತ್ರ ಕೊಡದೆ ಬಾಲಿವುಡ್ ಬೇಸರದಲ್ಲಿತ್ತು. ಆದರೆ ಬಹಳ ದಿನಗಳ ನಂತರ ಪ್ರೇಕ್ಷಕ ಪ್ರಭು ಬಾಲಿವುಡ್ ಕೈ ಹಿಡಿದಿದ್ದು, ಕಾರ್ತಿಕ್ ಆರ್ಯನ್ (Kartik Aaryan) ನಟನೆಯ ಭೂಲ್ ಬುಲಯ್ಯ 2 (Bhool Bhulaiyaa 2) ದಾಖಲೆಯ ಗಳಿಕೆ ಮಾಡಿದೆ.
ಕಳೆದ ಶುಕ್ರವಾದ (Friday) ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದ್ದು, ಬಾಲಿವುಡ್ (Bollywood) ಮಂದಿಯ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರೆ ತಪ್ಪಾಗಲಾರದು. ಹೌದು, ಮೊದಲನೇ ದಿನ ಈನ ಚಿತ್ರ ಬರೋಬ್ಬರಿ 14.11 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಮಾಹಿತಿ ನೀಡಿದ್ದು, ಎರಡನೇ ದಿನ 18.34 ಕೋಟಿ ಕಲೆಕ್ಷನ್ ಮಾಡಿದ್ದು, ಮೂರನೇ ದಿನ ಎರಡದು ದಿನಕ್ಕಿಂತ ಹೆಚ್ಚು 23 ಕೋಟಿ ಬಾಚಿಕೊಂಡಿದೆ.
100 ಕೋಟಿ ಕ್ಲಬ್ ಸನಿಹದಲ್ಲಿ ಚಿತ್ರ
ಇನ್ನು ನಾಲಕ್ಕನೇ ದಿನ 10.75 ಕೋಟಿ ಹಾಗೂ 5 ನೇ ದಿನ 9.56 ಕೋಟಿ ಕಲೆಕ್ಷನ್ ಮಾಡಿದ್ದರೆ, ಆರನೇ ದಿನ 8.71 ಹಾಗೂ ಏಳನೇ ದಿನ 7,27 ಕೋಟಿ ಗಳಿಕೆ ಮಾಡಿದ್ದು, ಕೇವಲ ಒಂದು ವಾರದಲ್ಲಿ 92.04 ಕೋಟಿ ರೂ ಗಳಿಕೆ ನೂರು ಕೋಟಿ ಗಳಿಕೆ ಮಾಡಿರುವ ಸಿನಿಮಾಗಳ ಕ್ಲಬ್ ಸೇರುವ ಸನಿಹದಲ್ಲಿದೆ.
ಇನ್ನೂ ಸಹ ಚಿತ್ರದ ಗಳಿಗೆ ಹೆಚ್ಚಾಗುತ್ತಿದ್ದು, ಜನರು ಚಿತ್ರ ವಿಕ್ಷಿಸಲು ಆಸಕ್ತಿ ತೋರುತತಿರುವುದಲ್ಲದೇ, ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ಈ ವರ್ಷ ಒಳ್ಳೆಯ ಪ್ರತಿಕ್ರಿಯೆ ಪಡೆದಿರಲಿಲ್ಲ. ರಿಲೀಸ್ ಆಗಿದ್ದ ಹಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಸೋತಿತ್ತು. ಆದರೆ ಇದೀಗ ಭೂಲ್ ಬುಲಯ್ಯ 2 ಕಲೆಕ್ಷನ್ ಬಾಲಿವುಡ್ ಚೇತರಿಸಿಕೊಳ್ಳಲು ಸಹಾಯ ಮಾಡಿದಂತೆ ಆಗುತ್ತದೆ. ಕಳೆದ 5 ತಿಂಗಳಿನಿಂದ ಮಂಕು ಬಡಿದಿದ್ದ ಬಾಲಿವುಡ್ಗೆ ಇದೊಂದು ಆಸರೆ ಎಂದರೆ ತಪ್ಪಾಗಲಾರದು.
ಬಾಲಿವುಡ್ಗೆ ಆಸರೆ
ಅಲ್ಲದೇ ಕಾರ್ತಿಕ್ ಆಯರ್ನ್ ನಟನೆಯ ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಗೆ ಮಾಡಿದ ಚಿತ್ರ ಎಂದು ಸಹ ಹೇಳಲಾಗುತ್ತಿದ್ದು, ಒಟ್ಟಾರೆಯಾಗಿ ಮುಳುಗುತ್ತಿದ್ದ ಬಾಲಿವುಡ್ ಎಂಬ ದೋಣಿಗೆ ಕೋಲು ಸಿಕ್ಕಂತಾಗಿದೆ ಎನ್ನಬಹುದು.
ಇದನ್ನೂ ಓದಿ: ತೆಲುಗಿನಲ್ಲಿ ಯಶ್ ಅಭಿನಯದ ಲಕ್ಕಿ ಚಿತ್ರ - ಬರೋಬ್ಬರಿ 10 ವರ್ಷದ ನಂತರ ಡಬ್ ಆಯ್ತು ಸಿನಿಮಾ
ಇನ್ನು ಭೂಲ್ ಬುಲಯ್ಯ 2 ಚಿತ್ರವೂ 2007ರಲ್ಲಿ ಪ್ರಿಯದರ್ಶನ್ ನಿರ್ದೇಶಿಸಿದ್ದ, ಅಕ್ಷಯ್ ಕುಮಾರ್ ನಟನೆಯ ಭೂಲ್ ಬುಲಯ್ಯದ ಸೀಕ್ವೆಲ್ ಆಗಿದ್ದು, ಈ ಚಿತ್ರವನ್ನು ಅನೀಸ್ ಬಜ್ಜಿ ನಿರ್ದೇಶಿಸಿದ್ದಾರೆ. ಅಲ್ಲದೇ ಟಿ ಸಿರೀಸ್ ಹಾಗೂ ಸಿನೆ 1 ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ್ದು, ಹಾರರ್ ಕಾಮಿಡಿ ಚಿತ್ರ ಜನರಿಗೆ ಬಹಳ ಇಷ್ಟವಾಗಿದೆ.
2021ರ ನವೆಂಬರ್ನಲ್ಲಿ ತೆರೆ ಕಂಡಿದ್ದ ಅಕ್ಷಯ್ ಕುಮಾರ್ ಅಭಿನಯದ ಕಮರ್ಷಿಯಲ್ ಚಿತ್ರ ಸೂರ್ಯವಂಶಿ ಉತ್ತಮ ಗಳಿಕೆ ಮಾಡಿತ್ತು. ಅದರ ನಂತರ ಬಾಲಿವುಡ್ನಲ್ಲಿ ಇದುವರೆಗೂ ಯಾವುದೇ ಕಮರ್ಷಿಯಲ್ ಚಿತ್ರಗಳೂ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಇದರ ಮಧ್ಯೆ ಬಹಳ ವಿವಾದ ಹುಟ್ಟು ಹಾಕಿದ್ದ ದಿ ಕಾಶ್ಮೀರ್ ಫೈಲ್ಸ್ ಮಾತ್ರ ಅದ್ಭುತ ಪ್ರತಿಕ್ರಿಯೆ ಪಡೆಯುವುದು ಮಾತ್ರವಲ್ಲದೇ, ಗಳಿಕೆಯಲ್ಲಿ ಸಹ ದಾಖಲೆ ಬರೆದಿತ್ತು.
ಇದನ್ನೂ ಓದಿ: ಕಿಚ್ಚನಿಗಾಗಿ ಹಿಂದೆ ಸರಿದ ಬಾಲಿವುಡ್ ಸಿಂಗಂ - ಜುಲೈ 28ಕ್ಕಿಲ್ಲ ಅಜಯ್ ದೇವಗನ್ ಸಿನಿಮಾ ರಿಲೀಸ್
ಅಲ್ಲದೇ ಈ ಬಾರಿ ಸ್ಟಾರ್ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್,ಅಕ್ಷಯ್ ಕುಮಾರ್, ಶಾಹಿದ್ ಕಪೂರ್ ರಂತಹ ನಟರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಮಕಡೆ ಮಲಗಿತ್ತು. ಈ ಮಧ್ಯೆ ದಕ್ಷಿಣ ಭಾರತದ ಚಿತ್ರಗಳಾದ ಆರ್ಆರ್ಆರ್ ಹಾಗೂ ಕೆಜಿಎಫ್ ಬಿರುಗಾಳಿಗೆ ಬಾಲಿವುಡ್ ತತ್ತರಿಸಿ ಹೋಗಿದ್ದು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ