Bhool Bhulaiyaa 2: 3 ದಿನಕ್ಕೆ ಕಾರ್ತಿಕ್ ಆರ್ಯನ್​ ಚಿತ್ರದ ಭರ್ಜರಿ ಗಳಿಕೆ - ಮುಳುಗುತ್ತಿದ್ದ ಬಾಲಿವುಡ್​ ಆಸರೆಯಾಯ್ತು ಚಿತ್ರ

Kartik Aaryan: ಇನ್ನು ಭೂಲ್ ಬುಲಯ್ಯ 2 ಚಿತ್ರವೂ 2007ರಲ್ಲಿ ಪ್ರಿಯದರ್ಶನ್ ನಿರ್ದೇಶಿಸಿದ್ದ, ಅಕ್ಷಯ್ ಕುಮಾರ್ ನಟನೆಯ ಭೂಲ್ ಬುಲಯ್ಯದ ಸೀಕ್ವೆಲ್ ಆಗಿದ್ದು, ಈ ಚಿತ್ರವನ್ನು ಅನೀಸ್ ಬಜ್ಜಿ ನಿರ್ದೇಶಿಸಿದ್ದಾರೆ.

ಭೂಲ್​ ಬುಲಯ್ಯ

ಭೂಲ್​ ಬುಲಯ್ಯ

  • Share this:
ಎಲ್ಲಾ ನಟರು ಚಿತ್ರ ಬಿಡುಗಡೆಯಾದ ವಾರದ ಅಂತ್ಯದಲ್ಲಿಯೇ ಹೆಚ್ಚು ಗಳಿಕೆ ಮಾಡಲು ಬಯಸುತ್ತಾರೆ. ಆದರೆ ಅದು ಸುಲಭದ ಮಾತಲ್ಲ. ಬಹಳ ದಿನಗಳ ನಂತರ ಪ್ರೇಕ್ಷಕ ಪ್ರಭು ಬಾಲಿವುಡ್ ಕೈ ಹಿಡಿದಿದ್ದು, ಕಾರ್ತಿಕ್ ಆರ್ಯನ್ (Kartik Aaryan) ನಟನೆಯ ಭೂಲ್ ಬುಲಯ್ಯ 2 (Bhool Bhulaiyaa 2) ದಾಖಲೆಯ ಗಳಿಕೆ ಮಾಡಿದೆ. ಇದೇ ಶುಕ್ರವಾದ (Friday) ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದ್ದು, ಬಾಲಿವುಡ್ (Bollywood) ಮಂದಿಯ ಮುಖದಲ್ಲಿ ಮಂದಹಾಸ ಮೂಡಿದೆ.

ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಗಳ ಪ್ರಕಾರ ಕಿಯಾರ ಅಡ್ವಾನಿ ನಟನೆಯ ಈ ಚಿತ್ರ ಮೊದಲ ದಿನ 14 ಕೋಟಿ ಗಳಿಕೆ ಮಾಡಿದೆ. ಇನ್ನು ಎರಡನೇ ದಿನ 18 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದ್ದು, ಮೂರನೇ ದಿನ ಕಲೆಕ್ಷನ್ ಹೆಚ್ಚಾಗಿದ್ದು, ಬರೋಬ್ಬರಿ 32.45 ಕೋಟಿ ಬಾಚಿಕೊಂಡಿದೆ. ಇನ್ನು ಇದರ ಓಟ ಇಲ್ಲಿಗೆ ನಿಂತಿಲ್ಲ ನಾಲ್ಕನೇ ದಿನ ಸಹ ಅದ್ಭುತ ಕಲೆಕ್ಷನ್ ಮಾಡುವ ನಿರೀಕ್ಷೆ ಇದ್ದು, ಬಹು ದಿನಗಳ ನಂತರ ಪ್ರೇಕ್ಷಕರು ಒಂದು ಬಾಲಿವುಡ್ ಚಿತ್ರವನ್ನು ಮೆಚ್ಚಿದ್ದಾರೆ.

ಬಾಲಿವುಡ್ ಈ ವರ್ಷ ಒಳ್ಳೆಯ ಪ್ರತಿಕ್ರಿಯೆ ಪಡೆದಿರಲಿಲ್ಲ. ರಿಲೀಸ್ ಆಗಿದ್ದ ಹಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಸೋತಿತ್ತು. ಆದರೆ ಇದೀಗ ಭೂಲ್ ಬುಲಯ್ಯ 2 ಕಲೆಕ್ಷನ್ ಬಾಲಿವುಡ್ ಚೇತರಿಸಿಕೊಳ್ಳಲು ಸಹಾಯ ಮಾಡಿದಂತೆ ಆಗುತ್ತದೆ. ಕಳೆದ 5 ತಿಂಗಳಿನಿಂದ ಮಂಕು ಬಡಿದಿದ್ದ ಬಾಲಿವುಡ್ಗೆ ಇದೊಂದು ಆಸರೆ ಎಂದರೆ ತಪ್ಪಾಗಲಾರದು.

ಇನ್ನು ಭೂಲ್ ಬುಲಯ್ಯ 2 ಚಿತ್ರವೂ 2007ರಲ್ಲಿ ಪ್ರಿಯದರ್ಶನ್ ನಿರ್ದೇಶಿಸಿದ್ದ, ಅಕ್ಷಯ್ ಕುಮಾರ್ ನಟನೆಯ ಭೂಲ್ ಬುಲಯ್ಯದ ಸೀಕ್ವೆಲ್ ಆಗಿದ್ದು, ಈ ಚಿತ್ರವನ್ನು ಅನೀಸ್ ಬಜ್ಜಿ ನಿರ್ದೇಶಿಸಿದ್ದಾರೆ.

2021ರ ನವೆಂಬರ್​ನಲ್ಲಿ ತೆರೆ ಕಂಡಿದ್ದ ಅಕ್ಷಯ್ ಕುಮಾರ್ ಅಭಿನಯದ ಕಮರ್ಷಿಯಲ್ ಚಿತ್ರ ಸೂರ್ಯವಂಶಿ ಉತ್ತಮ ಗಳಿಕೆ ಮಾಡಿತ್ತು. ಅದರ ನಂತರ ಬಾಲಿವುಡ್​ನಲ್ಲಿ ಇದುವರೆಗೂ ಯಾವುದೇ ಕಮರ್ಷಿಯಲ್ ಚಿತ್ರಗಳೂ ಬಾಕ್ಸ್ ಆಫೀಸ್​ನಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಇದರ ಮಧ್ಯೆ ಬಹಳ ವಿವಾದ ಹುಟ್ಟು ಹಾಕಿದ್ದ ದಿ ಕಾಶ್ಮೀರ್ ಫೈಲ್ಸ್​ ಮಾತ್ರ ಅದ್ಭುತ ಪ್ರತಿಕ್ರಿಯೆ ಪಡೆಯುವುದು ಮಾತ್ರವಲ್ಲದೇ, ಗಳಿಕೆಯಲ್ಲಿ ಸಹ ದಾಖಲೆ ಬರೆದಿತ್ತು.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

ಅಲ್ಲದೇ ಈ ಬಾರಿ ಸ್ಟಾರ್ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್,ಅಕ್ಷಯ್ ಕುಮಾರ್, ಶಾಹಿದ್ ಕಪೂರ್ ರಂತಹ ನಟರ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿತ್ತು. ಈ ಮಧ್ಯೆ ದಕ್ಷಿಣ ಭಾರತದ ಚಿತ್ರಗಳಾದ ಆರ್​ಆರ್​ಆರ್​ ಹಾಗೂ ಕೆಜಿಎಫ್ ಬಿರುಗಾಳಿಗೆ ಬಾಲಿವುಡ್ ತತ್ತರಿಸಿ ಹೋಗಿದ್ದು ಸುಳ್ಳಲ್ಲ. ಆದರೆ ಇದೀಗ ಕಾರ್ತಿಕ್ ಆರ್ಯನ್ ಚಿತ್ರದ ಕಲೆಕ್ಷನ್ ಮುಳುಗುತ್ತಿರುವ ಹಡಗಿಗೆ ಆಸರೆ ನೀಡಿದ್ದಂತೆ ಆಗಿದೆ.

ಇನ್ನು ಕಂಗನಾ ರಾಣಾವತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಧಾಕಟ್ ಸಹ ಸೋತು ಮಲಗಿದ್ದು, ಯಾರೂ ಊಹಿಸದ ರೀತಿ ಸೋಲನ್ನು ಅನುಭವಿಸಿದೆ. ಈ ಚಿತ್ರದ ಪ್ರಚಾರಕ್ಕೆ ಹೆಚ್ಚು ಸಮಯ ನೀಡಿದ್ದ ಚಿತ್ರತಂಡಕ್ಕೆ ಹಾಗೂ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ಬೇಸರವಾಗಿದ್ದು, ಚಿತ್ರದ ಹೀನಾಯ ಸೋಲು ಕಂಗನಾ ಚಿತ್ರಜೀವನದಲ್ಲಿಯೇ ಮೊದಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಚಿತ್ರದಿಂದ ಆಯುಷ್ ಶರ್ಮಾ​ ಹೊರ ಬರೋಕೆ ಇದೇ ಕಾರಣವಂತೆ

ಈ ಚಿತ್ರದ ಬಗ್ಗೆ ಬಹಳ ಕನಸನ್ನು ಹೊಂದಿದ್ದ ಕಂಗನಾ ಪ್ರಚಾರಕ್ಕಾಗಿಯೇ ಬಹಳಷ್ಟು ಸಮಯವನ್ನು ಮೀಸಲಿಟ್ಟು ಕೆಲಸ ಮಾಡಿದ್ದರು. ಎಷ್ಟು ಸಾಧ್ಯವೋ ಅಷ್ಟು ಈ ಪ್ರಚಾರದ ಬಗ್ಗೆ ಹೆಚ್ಚು ಗಮನ ನೀಡಿದ್ದ ನಟಿ, ಪ್ರಚಾರ ಕಾರ್ಯದ ವೇದಿಕೆಯ ಮೇಲೆ ಸಹ ವಿವಾದಿತ ಹೇಳಿಕೆಗಳನ್ನು ನೀಡಿ, ಸುದ್ದಿಯಲ್ಲಿದ್ದರು. ಚಿತ್ರಕ್ಕೆ ಸಂಬಂಧಪಟ್ಟ ಹೇಳಿಕೆ ಅಲ್ಲದಿದ್ದರೂ ಸಹ ಈ ಎಲ್ಲಾ ಹೇಳಿಕೆಗಳು ಚಿತ್ರವನ್ನು ಗೆಲ್ಲಿಸಲು ಸಹಾಯ ಮಾಡುತ್ತದೆ ಎಂದು ಚಿತ್ರತಂಡ ಅಂದಾಜಿಸಿತ್ತು. ಪ್ರಚಾರ ಕಾರ್ಯಕ್ಕೆ ಯಾವುದೇ ಕಡಿಮೆ ಆಗದಂತೆ ನೋಡಿಕೊಂಡಿದ್ದರೂ ಸಹ ಚಿತ್ರದ ಕಳಪೆ ಪ್ರದರ್ಶನ ಎಲ್ಲಾ ಕೆಲಸದ ಮೇಲೆ ತಣ್ಣೀರು ಎರೆಚಿದಂತೆ ಆಗಿದೆ.
Published by:Sandhya M
First published: