ಭೋಜಪುರಿ ನಟಿ ಪ್ರಿಯಾಂಕಾ ಪಂಡಿತ್ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪವನ್ ಪುತ್ರ, ಇಚ್ಛಾಧಾರಿ, ಅವರ ಬಲಂ, ಕರಮ್ ಯುಗ್ ಮತ್ತು ಥೋಡ್ ದೇ ದುಷ್ಮನ್ ಕಿ ನಲಿ ರಾಮ್ ಔರ್ ಅಲಿ ಮುಂತಾದ ಭೋಜ್ಪುರಿ ಚಿತ್ರಗಳಲ್ಲಿನ ಪಾತ್ರಗಳಿಗೆ ನಟಿ ಪ್ರಿಯಾಂಕಾ ಖ್ಯಾತಿ ಪಡೆದಿದ್ದಾರೆ. ವರದಿಗಳ ಪ್ರಕಾರ, ಇದು ಪ್ರಿಯಾಂಕಾ ಪಂಡಿತ್ರ ಹಳೆಯ ವಿಡಿಯೋ ಆಗಿದ್ದು ಈಗ ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದೆ. ಇನ್ನು, ಭೋಜ್ಪುರಿ ನಟಿ ತ್ರಿಶಾ ಕರ್ ಮಧು ವಿಡಿಯೋ ಆಕ್ಷೇಪಾರ್ಹ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಮತ್ತೊಬ್ಬರು ಭೋಜಪುರಿ ನಟಿಯ ವಿಡಿಯೋ ಲೀಕ್ ಆಗಿದೆ. ತ್ರಿಷಾ ಕರ್ ಮಧು ಅಪರಿಚಿತ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದು, ಆ ಪ್ರೈವೇಟ್ ಎಂಎಂಎಸ್ ವಿಡಿಯೋ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ, ನಟಿ ತ್ರಿಷಾ ಸಾಕಷ್ಟು ಟ್ರೋಲ್ಗೊಳಗಾಗಿದ್ದರು.
ಪ್ರಿಯಾಂಕಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ನಂತರ, ನಟಿ ಪ್ರಿಯಾಂಕಾ ಪಂಡಿತ್ ಆ ವಿಡಿಯೋದಲ್ಲಿರುವ ಹುಡುಗಿ ತಾನಲ್ಲ, ಬೇರೆಯವರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಕೆಲವರು ತನ್ನ ಮಾನಹಾನಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ, ನಟಿ ಪ್ರಿಯಾಂಕಾ ಪಂಡಿತ್ ಈ ವಿಷಯಕ್ಕೆ ಸಂಬಂಧಿಸಿದ ಅಧಿಕೃತ ದೂರನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಭೋಜಪುರಿಯ ಖ್ಯಾತ ನಟಿ ತ್ರಿಷಾ ಕರ್ ಮಧು ಖಾಸಗಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಿಯಾಂಕಾ ಪಂಡಿತ್ರ ಹಳೆಯ ವಿಡಿಯೋವನ್ನೂ ವೈರಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಪಂಡಿತ್ 2013ರಲ್ಲಿ 'ಜೀನಾ ತೇರಿ ಗಾಲಿ ಮೇ' ಚಿತ್ರದ ಮೂಲಕ ಭೋಜ್ಪುರಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಹಾಗೂ, ಇನ್ನೊಂದು ಪೋಸ್ಟ್ನಲ್ಲಿ ಭೋಜ್ಪುರಿ ಚಿತ್ರೋದ್ಯಮದಲ್ಲಿ ಯಾರೂ 'ಸ್ವಚ್ಛವಾಗಿಲ್ಲ' ಎಂದು ಹೇಳಿಕೊಂಡಿದ್ದರು. ಹಾಗೂ, ಮತ್ತೊಂದು ಪೋಸ್ಟ್ ಮೂಲಕ ಆ ಖಾಸಗಿ ವಿಡಿಯೋವನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡರೂ, ಆ ವಿಡಿಯೋ ಸಾಮಾಜಿಕ ಮಾಧ್ಯಮಕ್ಕೆ ಹೇಗೆ ಅಪ್ಲೋಡ್ ಆಯಿತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ'' ಎಂದೂ ಹೇಳಿಕೊಂಡಿದ್ದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ