ಭೀಮಸೇನ ನಳಮಹಾರಾಜದಲ್ಲಿ ನವರಸಗಳ ಸಮ್ಮಿಶ್ರಣ; ರುಚಿಯಾದ ಅಡುಗೆ ಬಗ್ಗೆ ನಟ ಅರವಿಂದ್​ ಅಯ್ಯರ್​ ಏನಂದ್ರು?

ಕಿರಿಕ್​ ಪಾರ್ಟಿಯಲ್ಲಿ ಜಾಲಿ ಹುಡುಗನಾಗಿ ಕಾಣಿಸಿಕೊಂಡಿದ್ದ ಅರವಿಂದ್ ಈ ಚಿತ್ರಕ್ಕಾಗಿ ತುಂಬಾನೇ ಬದಲಾಗಿದ್ದಾರೆ. ಸಿನಿಮಾಗಾಗಿ ಗಡ್ಡ ಬಿಟ್ಟು ಲುಕ್​ ಬದಲಾಯಿಸಿಕೊಂಡಿದ್ದಾರೆ. ದೇಹದ ತೂಕ ಕೂಡ ಹೆಚ್ಚಿಸಿಕೊಂಡಿದ್ದಾರೆ.

ಅರವಿಂದ್ ಅಯ್ಯರ್

ಅರವಿಂದ್ ಅಯ್ಯರ್

  • Share this:
ಕಿರಿಕ್​ ಪಾರ್ಟಿ ಚಿತ್ರದಲ್ಲಿ ಲೋಕಿ ಅಲಿಯಾಸ್​ ಲೋಕೆಶ್​ ಕುಮಾರ್​ ಆಗಿ ನಟಿಸಿದ್ದ ಅರವಿಂದ್​ ಅಯ್ಯರ್​ ಈಗ ಭೀಮಸೇನ ನಳಮಹರಾಜ ಸಿನಿಮಾ ಮೂಲಕ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪುಷ್ಕರ್​ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಸಿನಿಮಾಗೆ ಕಾರ್ತಿಕ್​ ಸರಗೂರು ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರ ಇದೇ 29ರಂದು ಅಮೆಜಾನ್​ ಪ್ರೈಮ್​​ನಲ್ಲಿ ತೆರೆಗೆ ಬರುತ್ತಿದೆ.

ಕಿರಿಕ್​ ಪಾರ್ಟಿಯಲ್ಲಿ ಜಾಲಿ ಹುಡುಗನಾಗಿ ಕಾಣಿಸಿಕೊಂಡಿದ್ದ ಅರವಿಂದ್ ಈ ಚಿತ್ರಕ್ಕಾಗಿ ತುಂಬಾನೇ ಬದಲಾಗಿದ್ದಾರೆ. ಸಿನಿಮಾಗಾಗಿ ಗಡ್ಡ ಬಿಟ್ಟು ಲುಕ್​ ಬದಲಾಯಿಸಿಕೊಂಡಿದ್ದಾರೆ. ದೇಹದ ತೂಕ ಕೂಡ ಹೆಚ್ಚಿಸಿಕೊಂಡಿದ್ದಾರೆ. “ಕಿರಿಕ್​ ಪಾರ್ಟಿ ಚಿತ್ರದಲ್ಲಿ ಲೋಕಿ ಪಾತ್ರ ನೋಡಿ ಎಲ್ಲರೂ ನನ್ನನ್ನು ಮೆಚ್ಚಿಕೊಂಡಿದ್ದರು. ಬಹುಶಃ ಇದೇ ಕಾರಣಕ್ಕೆ ನನಗೆ ಈ ಸಿನಿಮಾಗಾಗಿ ಅವಕಾಶ ಸಿಕ್ಕಿತ್ತು. ಈ ಚಿತ್ರಕ್ಕಾಗಿ ಅಂಡರ್​ವಾಟರ್​ ಶೂಟ್​ ಕೂಡ ಮಾಡಿದ್ದೇವೆ. ಈ ಚಿತ್ರದಲ್ಲಿ ನಟಿಸಿರೋದು ನನ್ನ ಪಾಲಿಗೆ ತುಂಬಾನೇ ಖುಷಿ ನೀಡಿದೆ ಎನ್ನುತ್ತಾರೆ,” ಅವರು.

ಭೀಮಸೇನ ನಳಮಹರಾಜ ಸಿನಿಮಾದಲ್ಲಿ ಏನನ್ನು ಹೇಳಲಾಗುತ್ತಿದೆ ಅನ್ನೋ ಪ್ರಶ್ನೆಗೆ ಅರವಿಂದ್​ ಉತ್ತರಿಸೋದು ಹೀಗೆ. “ನವ ರಸಗಳು ಸೇರಿದಾಗ ಅಡುಗೆ ಹೇಗೆ ರುಚಿಕಟ್ಟಾಗಿ ಸಿದ್ಧವಾಗುತ್ತದೆ. ಅದೇ ರೀತಿ ಎಲ್ಲ ರಸಗಳ ಸರಿಯಾದ ಸಮ್ಮಿಶ್ರಣದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಇದು ಪ್ರೇಕ್ಷಕರಿಗೆ ರುಚಿಕಟ್ಟಾದ ಅಡುಗೆ ಆಗಿರಲಿದೆ ಎನ್ನುತ್ತಾರೆ.

ಭೀಮಸೇನ ನಳಮಹರಾಜ ಚಿತ್ರವನ್ನು ಕರ್ನಾಟಕದ ನಾನಾ ಕಡೆಗಳಲ್ಲಿ ಶೂಟ್​ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಅವರು, ಸಿನಿಮಾದಲ್ಲಿ ನಮ್ಮ ಜನರ ಸಂಸ್ಕೃತಿಯನ್ನು ನಿರ್ದೇಶಕ ಕಾರ್ತಿಕ್​ ಸರಗೂರು ತೋರಿಸಿಕೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ನಾವು ನಾನಾ ಕಡೆಗಳಲ್ಲಿ ಸುತ್ತಾಟ ನಡೆಸಿದ್ದೇವೆ. ಈ ಚಿತ್ರದಿಂದ ನನಗೆ ಕರ್ನಾಟಕದ ದರ್ಶನವಾಯಿತು ಎನ್ನುತ್ತಾರೆ ಅವರು.

ಸಿನಿಮಾ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುವ ಅವರು, “ಭೀಮಸೇನ ನಳಮಹರಾಜ ಉತ್ತಮ ಕತೆ ಹೊಂದಿರುವ ಸಿನಿಮಾ. ಪೌರಾಣಿಕ ಹಾಗೂ ಆಧುನಿಕ ಕತೆಯ ಸಮ್ಮಿಶ್ರಣ ಇದರಲ್ಲಿದೆ. ಅದೇನು ಎಂದು ತಿಳಿದುಕೊಳ್ಳಲು ಈ ಸಿನಿಮಾ ನೋಡಬೇಕು. ಹಬ್ಬದ ಸಮಯದಲ್ಲಿ ಒಂದೊಳ್ಳೆ ಸಿನಿಮಾ ನೋಡಿದಂತಾಗುತ್ತದೆ,” ಎಂದರು..ಈ ಸಿನಿಮಾವನ್ನು ಕಾರ್ತಿಕ್​ ಸರಗೂರ್​ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆ ಕೂಡ ಅವರದ್ದೇ. ಪುಷ್ಕರ್​ ಮಲ್ಲಿಕಾರ್ಜುನಯ್ಯ, ಹೇಮಂತ್​ ರಾವ್​ ಹಾಗೂ ರಕ್ಷಿತ್​ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೇಲರ್ ಬಿಡುಗಡೆಯಾಗಿದ್ದು ಇದೇ ಅಕ್ಟೋಬರ್​ 29ಕ್ಕೆ ಚಿತ್ರ ತೆರೆಗೆ ಬರುತ್ತಿದೆ.
Published by:Rajesh Duggumane
First published: