Duniya Vijay: 'ಸಲಗ'ವನ್ನೇ ಗೆದ್ದು ‘ಭೀಮ'ನಾದ ವಿಜಯ್! ಹುಷಾರ್.. ಇವರನ್ನ ಕೆಣಕದಿದ್ರೆ ನಿಮಗೇ ಕ್ಷೇಮ

ಈ ಹಿಂದೆ 'ಸಲಗ'ದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ದುನಿಯಾ ವಿಜಯ್ ಅಲಿಯಾಸ್ ವಿಜಯ್ ಕುಮಾರ್ ಈಗ ಮತ್ತೊಮ್ಮೆ ಡೈರೆಕ್ಟರ್ ಆಗುತ್ತಿದ್ದಾರೆ. ಶಿವರಾತ್ರಿಯಂದೇ ಹೊಸ ಸಿನಿಮಾಕ್ಕೆ 'ಭೀಮ' ಅಂತ ಹೆಸರಿಟ್ಟಿದ್ದು, 'ಕೆಣಕದಿದ್ರೆ ಕ್ಷೇಮ' ಅಂತ ಎಚ್ಚರಿಸಿದ್ದಾರೆ. 'ಸಲಗ'ದಲ್ಲಿ 'ಟಿಣಿಂಗ ಮಿಣಿಂಗ' ಅಂತ ಸಿದ್ದಿ ಸಹೋದರಿಯರು ಹಾಡಿ ಮೋಡಿ ಮಾಡಿದ್ದರೆ, 'ಭೀಮ'ನಿಗೆ ಪದ್ಮಶ್ರೀ ಜೋಗತಿ ಮಂಜಮ್ಮ ಹಾಡಲಿದ್ದಾರೆ!

ವಿಜಯ್ ಹೊಸ ಸಿನಿಮಾ 'ಭೀಮ'

ವಿಜಯ್ ಹೊಸ ಸಿನಿಮಾ 'ಭೀಮ'

  • Share this:
ದುನಿಯಾ ವಿಜಯ್ (Duniya Vijay)​.. ನಂತರ ಬ್ಲ್ಯಾಕ್​ ಕೋಬ್ರಾ (Black Cobra).. ಇದಾದ ಬಳಿಕ ಈಗ ಸ್ಯಾಂಡಲ್​ವುಡ್​ ‘ಸಲಗ’ (Sandalwood Salaga).. ಹೌದು, ಸಾಮಾನ್ಯ ಜ್ಯೂನಿಯರ್​ ಫೈಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದ ವಿಜಯ್​  ಅಲಿಯಾಸ್ ದುನಿಯಾ ವಿಜಯ್ ಅಲಿಯಾಸ್ ವಿಜಯ್ ಕುಮಾರ್ ಅವರ ಸಿನಿಪಯಣವೇ ರಣರೋಚಕ. ಹೀರೋ (Hero) ಆಗಲು ಅವರು ಪಟ್ಟ ಕಷ್ಟ ಅಷ್ಟಿಟ್ಟಲ್ಲ.. ನಟನಾಗಲು ಹರಸಾಹಸ ಪಟ್ಟು ಸ್ಯಾಂಡಲ್​ವುಡ್​ನಲ್ಲಿ ನೆಲೆ ಕಂಡು ಕೊಂಡಿದ್ದಾರೆ ನಟ ದುನಿಯಾ ವಿಜಯ್​. ಇತ್ತೀಚೆಗೆ ನಿರ್ದೇಶನ (Direction)ಕ್ಕೂ ಕಾಲಿಟ್ಟಿದ ದುನಿಯಾ ವಿಜಯ್​, ಸಲಗ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ‘ಸಲಗ’ (Salaga) ಚಿತ್ರದ ಯಶಸ್ಸಿನ ನಂತರ ದುನಿಯಾ ವಿಜಯ್‌ (Duniya Vijay) ಸ್ಯಾಂಡಲ್‌ವುಡ್‌ನಲ್ಲಿ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು.  ಇದೀಗ ಅದಕ್ಕೆ ತೆರೆ ಬಿದ್ದಿದೆ. ಈ ಹಿಂದೆ ಸಲಗದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ದುನಿಯಾ ವಿಜಯ್ ಅಲಿಯಾಸ್ ವಿಜಯ್ ಕುಮಾರ್ ಈಗ ಮತ್ತೊಮ್ಮೆ ಡೈರೆಕ್ಟರ್ ಆಗುತ್ತಿದ್ದಾರೆ. ಶಿವರಾತ್ರಿಯಂದೇ ಹೊಸ ಸಿನಿಮಾಕ್ಕೆ ಭೀಮ ಅಂತ ಹೆಸರಿಟ್ಟಿದ್ದು, ಕೆಣಕಿದಿದ್ರೆ ಕ್ಷೇಮ ಅಂತ ಎಚ್ಚರಿಸಿದ್ದಾರೆ. ಸಲಗದಲ್ಲಿ ಟಿಣಿಂಗ ಮಿಣಿಂಗ ಅಂತ ಸಿದ್ದಿ ಸಹೋದರಿಯರು ಮೋಡಿ ಮಾಡಿದ್ದರೆ, ಭೀಮನಿಗೆ ಪದ್ಮಶ್ರೀ ಜೋಗತಿ ಮಂಜಮ್ಮ ಹಾಡಲಿದ್ದಾರೆ!

ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದ ವಿಜಯ್

ಮತ್ತೆ ಸಲಗ ತಂಡದೊಂದಿಗೆ ದುನಿಯಾ ವಿಜಯ್​ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗಿತ್ತು.. ಕೆಲ ದಿನಗಳ ಹಿಂದಷ್ಟೇ ಅದರ ಫಸ್ಟ್​ ಲುಕ್ ಕೂಡ ರಿಲೀಸ್​ ಆಗಿತ್ತು. ವಿಕೆ 28 ಎಂಬ ಟೈಟಲ್​ ಇರುವ ಫೋಟೋವನ್ನು ದುನಿಯಾ ವಿಜಯ್​ ಶೇರ್​ ಮಾಡಿಕೊಂಡಿದ್ದರು. ಆರ್​​​ಎಕ್ಸ್​ ಬೈಕ್​ನಲ್ಲಿ ವ್ಯಕ್ತಿಯೊಬ್ಬ ಕೂತಿರುವ ಚಿತ್ರ ಈ ಫೋಟೋದಲ್ಲಿತ್ತು.  ಇದನ್ನು ನೋಡಿ ಅವರ ಅಭಿಮಾನಿಗಳು ಥ್ರಿಲ್​ ಆಗಿದ್ದರು.

ಶಿವರಾತ್ರಿಯಂದೇ ‘ಭೀಮ’ನ ಹೆಸರು ಘೋಷಣೆ

ದುನಿಯಾ ವಿಜಯ್ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ವಿಚಾರ ಈಗಾಗಲೇ ತಿಳಿದಿತ್ತು. ಆದರೆ ಅದರ ಹೆಸರು ಇನ್ನೂ ಘೋಷಣೆ ಆಗಿರಲಿಲಲ್ಲ. ಶಿವರಾತ್ರಿ ದಿನವೇ ದುನಿಯಾ ವಿಜಯ್ ತಮ್ಮ ಹೊಸ ಸಿನಿಮಾದ ಹೆಸರು ಘೋಷಿಸಿದ್ದಾರೆ. ತಮ್ಮ ಹೊಸ ಕನಸಿನ ಪ್ರಾಜೆಕ್ಟ್‌ಗೆ ‘ಭೀಮ’ ಅಂತ ಹೆಸರಿಟ್ಟಿದ್ದಾರೆ. ಕೆಣಕದಿದ್ರೆ ಕ್ಷೇಮ ಅಂತ ಅಡಿಬರಹ ಇಟ್ಟು, ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: Shah Rukh Khan ಪುತ್ರನ ವಿರುದ್ಧ NCBಗೆ ಸಾಕ್ಷ್ಯವೇ ಸಿಕ್ಕಿಲ್ವಂತೆ! ತಪ್ಪೇ ಮಾಡಿಲ್ವ ಆರ್ಯನ್ ಖಾನ್?

ಸೋಶಿಯಲ್ ಮೀಡಿಯಾಗಳಲ್ಲಿ ಅನೌನ್ಸ್

ವಿಜಯ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಟೈಟಲ್​ ಅನೌನ್ಸ್​ ಮಾಡುವುದರ ಜತೆಗೆ ಮೋಷನ್ ವಿಡಿಯೋ ​​ಹಂಚಿಕೊಂಡಿದ್ದಾರೆ. ಇದರಲ್ಲಿ ವಿಜಯ್​ ಅವರ ಮುಖ ರಕ್ತಸಿಕ್ತವಾಗಿದೆ. ಸಿನಿಮಾ ಟೈಟಲ್​ ಅಡಿಗೆ ‘ಕೆಣಕದಿದ್ರೆ ಕ್ಷೇಮ’ ಎನ್ನುವ ಟ್ಯಾಗ್​ಲೈನ್​ ನೀಡಲಾಗಿದೆ. ವಿಜಯ್​ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ವಿಜಯ್ ‘ಭೀಮ’ ಆಗುತ್ತಿರುವುದು ಏಕೆ?

ಭೀಮ ಕುರುಕ್ಷೇತ್ರದ ತುಂಬ ಹೋರಾಟವನ್ನೇ ಮಾಡುತ್ತಿರುತ್ತಾನೆ. ಗುರುಗಳನ್ನು ನಂಬಿ ತನ್ನ ಕೆಲಸ ಮಾಡುತ್ತಾನೆ. ವಿದ್ಯಾವಂತ, ತಾಳ್ಮೆ ಇರುವಂಥವನು. ಆದರೆ ಅವನನ್ನು ಕೆಣಕಿದರೆ ಮಾತ್ರ ಸುಮ್ಮನಿರುವುದಿಲ್ಲ. ಈ ಸಿನಿಮಾದಲ್ಲಿಯೂ ನಾಯಕನಿಗೆ ಭೀಮನಂತಹ ಶಕ್ತಿ, ಯುಕ್ತಿ. ಹೋರಾಟದ ಗುಣದ ಜತೆಗೆ ತಾಳ್ಮೆಯೂ ಇರುತ್ತದೆ. ಹಾಗಾಗಿ ಈ ಸಿನಿಮಾಗೆ ಈ ಟೈಟಲ್‌ ಹೊಂದಿಕೆಯಾಗುತ್ತದೆ ಎಂದು ಅನ್ನಿಸಿದ್ದರಿಂದ ಇಟ್ಟಿದ್ದೇನೆ ಅಂತ ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ: Kajal Aggarwal ಪ್ರೆಗ್ನೆನ್ಸಿ ವರ್ಕೌಟ್‌ ವಿಡಿಯೋ ನೋಡಿ! ಅಮ್ಮನಾಗುವ ಬಗ್ಗೆ ಆಕೆ ಹೇಳಿದ್ದೇನು?

ಭೀಮನಿಗಾಗಿ ಹಾಡುತ್ತಾರಂತೆ ಜೋಗತಿ ಮಂಜಮ್ಮ

ಈ ಹಿಂದಿನ ಸಲಗ ಸಿನಿಮಾದಲ್ಲಿ ಟಿಣಿಂಗ ಮಿಣಿಂಗ ಅನ್ನೋ ಸಿದ್ದಿ ಹಾಡನ್ನು ವಿಜಯ್ ಬಳಸಿಕೊಂಡಿದ್ದರು. ಸಿದ್ದಿ ಸಹೋದರಿಯರು ಹಾಡಿದ್ದ ಈ ಹಾಡು ಸಖತ್ ಹಿಟ್ ಆಗಿತ್ತು. ಇದೀಗ ಭೀಮ ಸಿನಿಮಾದಲ್ಲಿ  ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಮಂಜಮ್ಮ ಜೋಗತಿಯವರ ಜಾನಪದ ಹಾಡೊಂದನ್ನು ಬಳಸಿಕೊಂಡಿದ್ದಾರೆ.

ವಿಶೇಷವೆಂದರೆ ಮಂಜಮ್ಮನವರ ಹಾಡಲ್ಲದೆ ಇನ್ನೊಂದು ಜಾನಪದ ಹಾಡೂ ಈ ಚಿತ್ರದಲ್ಲಿ ಇರಲಿದ್ದು, ಅದ್ಯಾವುದು ಎಂಬುದು ಮುಂದಿನ ದಿನಗಳಲ್ಲಿ ರಿವೀಲ್‌ ಆಗಲಿದೆ.
Published by:Annappa Achari
First published: