ನಟಿ ಭಾವನಾ ಮೆನನ್ (Actress Bhavana Menon) ಮೂಲತಃ ಮಲಯಾಳಂ(Malayalam) ನಟಿ. ಇದೀಗ ತಮ್ಮ ಅಭಿನಯದ (Performance) ಮೂಲಕ ಕನ್ನಡ, ತಮಿಳು, ತೆಲುಗು ಭಾಷಾ ಸಿನಿಮಾಗಳಲ್ಲಿ ಮಿಂಚುವ ಮೂಲಕ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಅಕ್ಟೋಬರ್ 29ರಂದು ಬಿಡುಗಡೆಯಾದ ಶಿವರಾಜ್ ಕುಮಾರ್ (Shivraj Kumar) ಅಭಿನಯದ ಭಜರಂಗಿ 2 (Bajrangi 2) ಸಿನಿಮಾದ ನಾಯಕಿ ಪಾತ್ರದಲ್ಲಿ ಮಿಂಚಿ ಜನಮನ್ನಣೆ ಗಳಿಸಿರುವ ಭಾವನಾ ಸಾಲು ಸಾಲು ಚಿತ್ರಗಳ ಮೂಲಕ ಪ್ರೇಕ್ಷಕರನ್ನು (Audiences) ರಂಜಿಸುತ್ತಿದ್ದಾರೆ.
ಹೊಸ ಬದುಕು ಪ್ರಾರಂಭ
ಜಾಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಭಾವನಾ ಬದುಕಿನಲ್ಲಿ 5 ವರ್ಷಗಳ ಹಿಂದೆ ಅವರ ಬದುಕಿನಲ್ಲಿ ದೊಡ್ಡ ಆಘಾತವೇ ಸಂಭವಿಸಿತ್ತು. ನಟ ದಿಲೀಪ್ ಕುಮಾರ್ ಮತ್ತು ಆತನ ಸ್ನೇಹಿತರಿಂದ ಅಪಹರಣಕ್ಕೊಳಗಾಗಿ ಅಲ್ಲಿಂದ ವೇದನೆ ಅನುಭವಿಸಿದರು. ಇದೀಗ ಅದರಿಂದ ಹೊರ ಬಂದ ನಟಿ ನಟನೆಯನ್ನು ಮುಂದುವರೆಸಿ ಹೊಸ ಬದುಕು ಪ್ರಾರಂಭಿಸಿದ್ದಾರೆ.
ಹೌದು ನಟಿ ಭಾವನಾ 2017ರಲ್ಲಿ ಸಿನಿಮಾ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಭಾವನಾ ಅವರನ್ನು ಅಪಹರಿಸಿ 2 ಗಂಟೆಗಳ ಕಾಲ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಮಾಸಿವೆ. ಇಷ್ಟು ದಿನ ಏನು ಮಾತನಾಡದ ನಟಿ ಭಾವನಾ ಇದೀಗ ಈ ಘಟನೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನನ್ನ ಈ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ. ಈ ನ್ಯಾಯದ ಹೋರಾಟದಲ್ಲಿ ನಾನು ಎಂದಿಗೂ ಒಬ್ಬಂಟಿಯಲ್ಲ ಎಂದು ನುಡಿದಿದ್ದಾರೆ.
ಇದನ್ನೂ ಓದಿ: Bhavana Menon: ನಟಿ ಭಾವನಾರ ಜೀವನವನ್ನೇ ಬದಲಿಸಿದ ರೋಮಿಯೋ ಇವರೇ ಅಂತೆ..!
ಪಯಣ ನಿಜಕ್ಕೂ ಭಯಂಕರ
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಐದು ವರ್ಷದ ಹೋರಾಟದ ಬಗ್ಗೆ ಮೌನ ಮುರಿದಿದ್ದಾರೆ. ಈ ವೇಳೆ, ಐದು ವರ್ಷದ ಹಾದಿ ಖಂಡಿತವಾಗಿಯೂ ಸುಲಭವಾದುದ್ದಂತೂ ಅಲ್ಲ. ಬಲಿಪಶು ಆದಾಗಿನಿಂದ ಹಿಡಿದು ಬದುಕಿ ಬಾಳುವವರೆಗಿನ ಪಯಣ ನಿಜಕ್ಕೂ ಭಯಂಕರ. ನಾನು ಯಾವುದೇ ಅಪರಾಧ ಮಾಡಿದವಳಲ್ಲ. ಆದರೂ ನನ್ನನ್ನು ಅವಮಾನಿಸುವ, ನನ್ನನ್ನು ಹತ್ತಿಕ್ಕುವ ಹತ್ತು ಹಲವಾರು ಪ್ರಯತ್ನಗಳು ಜನರಿಂದ ನಡೆದವು. ಆದರೆ ಆ ಸಂದರ್ಭದಲ್ಲಿ ನನ್ನನ್ನು ಬದುಕಿಸಲು ತಮ್ಮ ಸಾಂತ್ವನದ ಮಾತುಗಳ ಮೂಲಕ ನನ್ನ ಜೊತೆ ಹಲವಾರು ಮಂದಿ ನಿಂತಿದ್ದರು. ನನ್ನ ಪರವಾಗಿ ಎಷ್ಟೋ ಧ್ವನಿಗಳು ಮಾತನಾಡಿದವು. ಈಗಲೂ ಮಾತನಾಡುತ್ತಿವೆ.
View this post on Instagram
ಇದನ್ನೂ ಓದಿ: Bhavana: ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ಗಳಲ್ಲೇ ಮಿಂಚುತ್ತಿರುವ ನಟಿ ಭಾವನಾ..!
ನವೀನ್ ಜೊತೆ ಸಪ್ತಪದಿ ತುಳಿದ ನಟಿ
ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಕೇರಳ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗ ಪ್ರಕರಣ ದಾಖಲಿಸಿದೆ. 2018ರಲ್ಲಿ ಭಾವನಾ ತಮ್ಮ ಬಹುಕಾಲದ ಗೆಳೆಯ ನಿರ್ಮಾಪಕ ನವೀನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 2012ರಲ್ಲಿ ನವೀನ್ ಭಾವನಾ ಅಭಿನಯದ ರೋಮಿಯೋ ಸಿನಿಮಾದ ನಿರ್ಮಾಪಕರಾಗಿದ್ದರು. ಅಲ್ಲಿಂದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ