• Home
 • »
 • News
 • »
 • entertainment
 • »
 • Drugs Case: ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ ವಿರುದ್ಧ 200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಸಿಬಿ

Drugs Case: ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ ವಿರುದ್ಧ 200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಸಿಬಿ

ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ

ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾ

 ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ (Harsh Limbachiyaa) ವಿರುದ್ಧ ಮುಂಬೈ ಎನ್‌ಸಿಬಿ 200 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂಬುದಾಗಿ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಿಳಿಸಿದೆ ಎಂದು ಸುದ್ದಿಸಂಸ್ಥೆ ಎನ್‌ಐಐ ವರದಿ ಮಾಡಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು 2020ರಲ್ಲಿ ಬಂಧಿಸಲಾಗಿತ್ತು, ಪ್ರಸ್ತುತ ಇಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ.

ಮುಂದೆ ಓದಿ ...
 • Trending Desk
 • Last Updated :
 • Mumbai, India
 • Share this:

  ಎರಡು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣದಲ್ಲಿ (Drugs Case) ಜಾಮೀನಿನ ಮೇಲೆ ಹೊರಗಿರುವ ಹಾಸ್ಯನಟಿ ಭಾರತಿ ಸಿಂಗ್ (Comrdian Bharti Singh) ಮತ್ತು ಆಕೆಯ ಪತಿ ಹರ್ಷ್ ಲಿಂಬಾಚಿಯಾ ಮತ್ತೊಮ್ಮೆ ಕಾನೂನಿನ ಕುಣಿಕೆಯಲ್ಲಿ ಸಿಲುಕುವ ಸಾಧ್ಯತೆಗಳಿವೆ. ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ (Harsh Limbachiyaa) ವಿರುದ್ಧ ಮುಂಬೈ ಎನ್‌ಸಿಬಿ 200 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂಬುದಾಗಿ ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಿಳಿಸಿದೆ ಎಂದು ಸುದ್ದಿಸಂಸ್ಥೆ ಎನ್‌ಐಐ ವರದಿ ಮಾಡಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು 2020ರಲ್ಲಿ ಬಂಧಿಸಲಾಗಿತ್ತು, ಪ್ರಸ್ತುತ ಇಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ.


  ಜೈಲಿನಿಂದ ಹೊರಬಂದ ನಂತರ ಭಾರತಿ ಮತ್ತು ಹರ್ಷ್ ಲಿಂಬಾಚಿಯಾ ಮಗುವಿಗೆ ಜನ್ಮ ನೀಡಿದ್ದು, ಆರು ತಿಂಗಳ ಗಂಡು ಮಗು ಲಕ್ಷ್ಯನ ಜೊತೆಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ದಂಪತಿ ವಿರುದ್ಧ ಸಲ್ಲಿಕೆಯಾದ 200 ಪುಟಗಳ ಚಾರ್ಜ್‌ಶೀಟ್ ಇಬ್ಬರನ್ನೂ ಆತಂಕಕ್ಕೀಡು ಮಾಡಿದೆ.


  ಇದನ್ನೂ ಓದಿ: Bollywood Stars: ಮಾಲ್ತಿ, ವಾಯು, ಅಬ್ರಾಂ, ಯುಗ್! ಬಾಲಿವುಡ್ ಸ್ಟಾರ್ ನಟ-ನಟಿಯರ ಮಕ್ಕಳ ಹೆಸರಿಗಿದೆ ವಿಶೇಷ ಅರ್ಥ


  2020ರ ಕೇಸ್ ಏನಾಗಿತ್ತು?


  ಭಾರತಿ ಅವರಿಗೆ ಮಾದಕ ದ್ರವ್ಯ ಜಾಲದ ಸಂಪರ್ಕ ಇದೆ ಎನ್ನುವ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಉಪನಗರ ಅಂಧೇರಿಯಲ್ಲಿರುವ ದಂಪತಿಯ ಮನೆಯನ್ನು ಜಾಲಾಡಿತ್ತು. ನಂತರ ಮನೆಯಲ್ಲಿ ಗಾಂಜಾ ಪತ್ತೆಯಾಗಿತ್ತು, ಇದನ್ನು ವಶಪಡಿಸಿಕೊಂಡ ನಂತರ ಅವರನ್ನು 2020 ರ ನವೆಂಬರ್‌ನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತು. ಈ ವೇಳೆ ಭಾರತಿ ನಿವಾಸದಲ್ಲಿ 86.5 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಎನ್‌ಸಿಬಿ ತಿಳಿಸಿತ್ತು.


  ಡ್ರಗ್ ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ ದಂಪತಿ
  ಈ ವೇಳೆ ದೊರೆತ ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಹಲವು ಗಂಟೆಗಳ ಕಾಲ ಆ ದಿನ ವಿಚಾರಣೆ ನಡೆಸಿದ ಅಧಿಕಾರಿಗಳು, ನಂತರ ಭಾರತಿಯನ್ನು ಬಂಧಿಸಿದ್ದರು. ಇನ್ನು ಡ್ರಗ್ ಸೇವನೆ ಮಾಡಿದ್ದಾಗಿ ತನಿಖೆ ವೇಳೆ ಭಾರತಿ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದರು.


  ಬಾಲಿವುಡ್‌ನಲ್ಲಿ ಮಾದಕ ದ್ರವ್ಯದ ಹೆಚ್ಚಿನ ಸೇವನೆಯ ಗುಮಾನಿ ಬಂದಿದ್ದು, ಆರೋಪದ ಕುರಿತು ಎನ್‌ಸಿಬಿ ತನಿಖೆಯ ಭಾಗವಾಗಿ ಶೋಧ ನಡೆಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದರು,


  ದಂಪತಿಯನ್ನು ಬಂಧಿಸಿದ ಎರಡು ದಿನಗಳ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಲಾ ₹ 15,000 ಬಾಂಡ್‌ನಲ್ಲಿ ದಂಪತಿಗೆ ಜಾಮೀನು ನೀಡಿತು. ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 20(ಬಿ)(ii)(ಎ) (ಸಣ್ಣ ಪ್ರಮಾಣದ ಔಷಧಗಳನ್ನು ಒಳಗೊಂಡಿರುತ್ತದೆ) ಮತ್ತು 8(ಸಿ) (ಔಷಧಗಳ ಸ್ವಾಧೀನ) ಮತ್ತು 27 (ಔಷಧಗಳ ಸೇವನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


  ಇದನ್ನೂ ಓದಿ: Urfi Javed: ವೈಟ್ ಡ್ರೆಸ್​​ಗೆ ಬ್ಲೂ ಲಿಪ್​​ಸ್ಟಿಕ್! ಪೆನ್ ತಿಂದ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು


  ಬಾಲಿವುಡ್‌ನಲ್ಲಿ ಫೇಮಸ್‌ ಆಗಿರುವ ದಂಪತಿ
  ಭಾರತಿ ಮತ್ತು ಹರ್ಷ್ ದಂಪತಿಗಳು ಬಾಲಿವುಡ್‌ನಲ್ಲಿ ಇತ್ತೀಚೆಗೆ ಜನಪ್ರಿಯರಾಗಿದ್ದರು. 'ದಿ ಕಪಿಲ್‌ ಶರ್ಮಾ ಶೋ ಸೀಸನ್ 2' ಹಾಗೂ 'ಇಂಡಿಯಾಸ್ ಬೆಸ್ಟ್ ಡಾನ್ಸರ್' ಸೇರಿ ಅನೇಕ ರಿಯಾಲಿಟಿ ಶೋ, ಪ್ರಶಸ್ತಿ ಸಮಾರಂಭಗಳಲ್ಲಿ ಭಾರತಿ ಸಿಂಗ್ ನಿರೂಪಣೆ ಮಾಡಿದ್ದಾರೆ. ಹಾಸ್ಯ ಕಲಾವಿದೆಯಾದ ಭಾರತಿ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.


  ಭಾರತಿ ಪ್ರಸ್ತುತ ಸ ರೆ ಗ ಮಪ ಲಿಟ್ಲ್‌ ಚಾಂಪ್ಸ್ ‌2022ರ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿದ್ದಾರೆ. ಭಾರತಿ ಮತ್ತು ಹರ್ಷ್ ಇಬ್ಬರೂ ಈ ಹಿಂದೆ ಮತ್ತೊಂದು ಶೋ ಹುನರ್ ಬಾಜ್‌: ದೇಶ್‌ ಕಿ ಶಾನ್ (Hunarbaaz: Desh Ki Shaan) ನಲ್ಲಿ ನಿರೂಪಕರಾಗಿದ್ದರು. ಮತ್ತು ಈ ವರ್ಷ ತಮ್ಮದೇ ಆದ ಕಾಮಿಡಿ ಗೇಮ್ ಶೋ ಖತ್ರಾ ಖತ್ರಾ ಖಾತ್ರದ ಮೂರನೇ ಸೀಸನ್ ಅನ್ನು‌ ಸಹ ಪ್ರಾರಂಭಿಸಿದ್ದರು.


  ಸೋಶಿಯಲ್ ಮೀಡಿಯಾದಲ್ಲೂ ಹವಾ
  ತೆರೆಮೇಲೆ ಅಲ್ಲದೇ ದಂಪತಿಗಳು ಸೋಶಿಯ್‌ ಮೀಡಿಯಾದಲ್ಲೂ ಸಖತ್‌ ಹವಾ ಸೃಷ್ಟಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ ಚಾನಲ್‌ನಲ್ಲಿ ವಿಡಿಯೋಗಳನ್ನು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ.

  Published by:Precilla Olivia Dias
  First published: