ನಾನಾ ಅವತಾರದಲ್ಲಿ ಸಲ್ಮಾನ್ ಖಾನ್: 'ಭಾರತ್' ಟ್ರೈಲರ್​ಗೆ ಅಭಿಮಾನಿಗಳು ಫಿದಾ

ಮತ್ತೊಂದು ಪ್ರಮುಖ ಪಾತ್ರದಲ್ಲಿ 'ಧೋನಿ' ಚಿತ್ರ ಖ್ಯಾತಿಯ ದಿಶಾ ಪಠಾಣಿ ಬಣ್ಣ ಹಚ್ಚಿದ್ದು, ಇವರೊಂದಿಗೆ ನಟ ಜಾಕಿ ಶ್ರಾಫ್, ನಟಿ ತಬು ಸೇರಿದಂತೆ ಇನ್ನು ಹಲವರು ಕಾಣಿಸಿಕೊಂಡಿದ್ದಾರೆ.

zahir | news18
Updated:April 22, 2019, 9:35 PM IST
ನಾನಾ ಅವತಾರದಲ್ಲಿ ಸಲ್ಮಾನ್ ಖಾನ್: 'ಭಾರತ್' ಟ್ರೈಲರ್​ಗೆ ಅಭಿಮಾನಿಗಳು ಫಿದಾ
ಭಾರತ್
zahir | news18
Updated: April 22, 2019, 9:35 PM IST
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ಭಾರತ್' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. 3 ನಿಮಿಷಗಳ ವಿಡಿಯೋ ತುಣುಕಿನಲ್ಲಿ ನಾನಾ ಅವತಾರದಲ್ಲಿ ಕಾಣಿಸಿಕೊಂಡಿರುವ ಸಲ್ಲು ಅಭಿಮಾನಿಗಳಿಗೆ ರಸದೌತಣ ನೀಡುವ ಸೂಚನೆಯಂತು ನೀಡಿದ್ದಾರೆ.

'ಭಾರತ್' ದೇಶ ಭಕ್ತಿಯನ್ನು ಸಾರುವ ಚಿತ್ರವಾಗಿದ್ದು, 1964 ರಲ್ಲಿ ಶುರುವಾಗುವ ಕಥೆಯೊಂದಿಗೆ ಸಲ್ಮಾನ್​ ಖಾನ್​ ಪಾತ್ರಗಳು ಬದಲಾಗುತ್ತಾ ಹೋಗಲಿದೆ. 46 ವರ್ಷಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಈ ಚಿತ್ರ ಒಳಗೊಂಡಿದ್ದು, ಚಿತ್ರದ ಕಥೆಯು 2010 ರಲ್ಲಿ ಸಲ್ಲುವಿನ ಸಾಲ್ಟ್​​ ಪೆಪ್ಪರ್​ ಲುಕ್​ನೊಂದಿಗೆ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ 'ಭಾರತ್' ಎಂಬುದು ಸಲ್ಮಾನ್​ ಖಾನ್​ ಹೆಸರಾಗಿದ್ದು, ಅದರೊಂದಿಗೆ  ಐದು ವಿಭಿನ್ನ ಅವತಾರಗಳಲ್ಲಿ ಭಜರಂಗಿ ಭಾಯಿಜಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ದೇಶ ವಿಭಜನೆಯಸ್ಥಿತಿಗತಿ, ತವಕ ತಲ್ಲಣಗಳನ್ನೂ ತೋರಿಸೋ ಪ್ರಯತ್ನವನ್ನು ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಮಾಡಿದ್ದಾರೆ. 

ಸರ್ಕಸ್​ನ ಬೈಕ್​ ಸ್ಟಂಟರ್​ ಪಾತ್ರವು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹಾಗೆಯೇ ದೇಶದ ಸಾಧಾರಣ ವ್ಯಕ್ತಿಯ ಪಾತ್ರ ಪ್ರಾರಂಭವಾಗುತ್ತಿದ್ದಂತೆ ನಾಯಕಿ ಕತ್ರೀನಾ ಕೈಫ್ ಸಹ ಎಂಟ್ರಿ ಕೊಡಲಿದ್ದಾರೆ. ಇನ್ನು ಸಲ್ಲುವಿನ ಸ್ನೇಹಿತರಾಗಿ ಕಾಮಿಡಿ ಕಿಂಗ್ ಸುನೀಲ್ ಗ್ರೋವರ್​ ಸಹ ಅಭಿನಯಿಸಿರುವುದು ವಿಶೇಷ. ಟ್ರೈಲರ್​ನಲ್ಲಿಯೇ ಇಬ್ಬರ ಹಾಸ್ಯ ಮಿಶ್ರಿತ ಡೈಲಾಗ್​ಗಳು ಸಿನಿಪ್ರಿಯರಿಗೆ ಕಚಗುಳಿ ಇಟ್ಟಿದೆ.

ಮತ್ತೊಂದು ಪ್ರಮುಖ ಪಾತ್ರದಲ್ಲಿ 'ಧೋನಿ' ಚಿತ್ರ ಖ್ಯಾತಿಯ ದಿಶಾ ಪಠಾಣಿ ಬಣ್ಣ ಹಚ್ಚಿದ್ದು, ಇವರೊಂದಿಗೆ ನಟ ಜಾಕಿ ಶ್ರಾಫ್, ನಟಿ ತಬು ಸೇರಿದಂತೆ ಇನ್ನು ಹಲವರು ಕಾಣಿಸಿಕೊಂಡಿದ್ದಾರೆ. 'ಒಡ್​ ಟು ಮೈ ಫಾದರ್'​ ಎಂಬ ಕೊರಿಯನ್ ಚಿತ್ರದಿಂದ ಸ್ಪೂರ್ತಿ ಪಡೆದ ಕಥೆ ಭಾರತ್​ನಲ್ಲಿರಲಿದ್ದು, ಈ ಮೂಲಕ ದೇಶ ಪ್ರೇಮ, ಸಂಬಂಧ, ಹೋರಾಟ, ತ್ಯಾಗದ ಮೌಲ್ಯವನ್ನು ತೋರಿಸುವ ಪ್ರಯತ್ನಕ್ಕೆ ಸಲ್ಲು ಮತ್ತು ತಂಡ ಕೈ ಹಾಕಿದೆ.

ಇದನ್ನೂ ಓದಿ: ಭಾರತದ ರಸ್ತೆಗಿಳಿಯಲಿದೆ ಬರೋಬ್ಬರಿ 156 ಕಿ.ಮೀ ಮೈಲೇಜ್​ ನೀಡುವ ಹೊಸ ಬೈಕ್ಸಲ್ಮಾನ್​ ಕೆರಿಯರ್​​ನಲ್ಲಿ 'ಸುಲ್ತಾನ್' ಮತ್ತು 'ಟೈಗರ್​ ಜಿಂದಾ ಹೈ' ಎಂಬ ಭರ್ಜರಿ ಹಿಟ್​ ಚಿತ್ರಗಳನ್ನು ನೀಡಿದ್ದ ಅಲಿ ಅಬ್ಬಾಸ್​ ಜಫರ್ ಈ ಚಿತ್ರವನ್ನು ಕೈಗೆತ್ತಿಕೊಂಡಾಗಲೇ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ಟ್ರೈಲರ್​ ಮೂಲಕ ಈ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ. ಅಂದಹಾಗೆ ಸಲ್ಲುವಿನ ನಾನಾ ಅವತಾರಗಳನ್ನು ನೀವು ಕಣ್ತುಂಬಿಕೊಳ್ಳಬೇಕು ಅಂದುಕೊಂಡರೆ ಈದ್​ ಹಬ್ಬದವರೆಗೆ ಕಾಯಬೇಕಿದೆ.

First published:April 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ