Bharat Movie Review: ಭಾರತ್​ಗೆ ಸೆಡ್ಡು ಹೊಡೆದು ಮಿಂಚಿದ ವಿಲಾಯಿತಿ ಸುನಿಲ್​​

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಆಗಿದ್ದ ದೇಶ ವಿಭಜನೆಯ ಸಮಯದಿಂದ ಆರಂಭವಾಗುವ ಈ ಸಿನಿಮಾದ ಕತೆ 2010ಕ್ಕೆ ಬಂದು ಅಂತ್ಯ ಕಾಣುತ್ತದೆ. 70 ವರ್ಷದ ವೃದ್ಧನ ಪಾತ್ರದಲ್ಲಿ ಸಲ್ಮಾನ್​ ಖಾನ್​ ಪರದೆ ಮೇಲೆ ಎಂಟ್ರಿ ಕೊಡುತ್ತಿದ್ದಂತೆಯೇ ಪ್ರೇಕ್ಷಕರು ಶಿಳ್ಳೆ ಹೊಡೆಯುವ ಮೂಲಕ ಸ್ವಾಗತಿಸುತ್ತಾರೆ. ಆದರೆ ಈ ಹುಮ್ಮಸ್ಸು ಸಿನಿಮಾದ ಅಂತ್ಯದವರೆಗೆ ಉಳಿಯುವುದಿಲ್ಲ.

Anitha E | news18
Updated:June 6, 2019, 2:45 PM IST
Bharat Movie Review: ಭಾರತ್​ಗೆ ಸೆಡ್ಡು ಹೊಡೆದು ಮಿಂಚಿದ ವಿಲಾಯಿತಿ ಸುನಿಲ್​​
ಭಾರತ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​
  • News18
  • Last Updated: June 6, 2019, 2:45 PM IST
  • Share this:
ಸಿನಿಮಾ: ಭಾರತ್​ (ಹಿಂದಿ)

ನಿರ್ದೇಶನ: ಅಲಿ ಅಬ್ಬಾಸ್​ ಜಫರ್​

ಸಂಗೀತ: ವಿಶಾಲ್​ ಶೇಖರ್​ 

ತಾರಾಗಣ: ಸಲ್ಮಾನ್​ ಖಾನ್​, ಕತ್ರಿನಾ ಕೈಫ್​, ಸುನಿಲ್​ ಗ್ರೋವರ್​, ಜಾಕಿ ಶ್ರಾಫ್​, ದಿಶಾ ಪಟಾನಿ, ಹಾಗೂ ಸೋನಾಲಿ ಕುಲಕರ್ಣಿ

- ಅನಿತಾ ಈ, 

'ಜರ್ನಿ ಆಫ್​ ಆ ಮ್ಯಾನ್​ ಆ್ಯಂಡ್​ ಅ ನೇಷನ್​ ಟು ಗೆದರ್​' ಎಂಬ ಟ್ಯಾಗ್​ ಲೈನ್​ ಜತೆಗೆ  ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​ ಪ್ರಮುಖ ಪಾತ್ರದಲ್ಲಿ ಅಭಿನಯದ ಸಿನಿಮಾ ಭಾರತ್​ ತೆರೆಕಂಡಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಆಗಿದ್ದ ದೇಶ ವಿಭಜನೆಯ ಸಮಯದಿಂದ ಆರಂಭವಾಗುವ ಈ ಸಿನಿಮಾದ ಕತೆ 2010ಕ್ಕೆ ಬಂದು ಅಂತ್ಯ ಕಾಣುತ್ತದೆ. 70 ವರ್ಷದ ವೃದ್ಧನ ಪಾತ್ರದಲ್ಲಿ ಸಲ್ಮಾನ್​ ಖಾನ್​ ಪರದೆ ಮೇಲೆ ಎಂಟ್ರಿ ಕೊಡುತ್ತಿದ್ದಂತೆಯೇ ಪ್ರೇಕ್ಷಕರು ಶಿಳ್ಳೆ ಹೊಡೆಯುವ ಮೂಲಕ ಸ್ವಾಗತಿಸುತ್ತಾರೆ. ಆದರೆ ಈ ಹುಮ್ಮಸ್ಸು ಸಿನಿಮಾದ ಅಂತ್ಯದವರೆಗೆ ಉಳಿಯುವುದಿಲ್ಲ.
Loading...

ಕಟ್ಟುಮಸ್ತಾದ ದೇಹಕ್ಕೆ ಹೆಸರುವಾಸಿಯಾದ ಸಲ್ಮಾನ್​ ಖಾನ್​ ಈ ಸಿನಿಮಾ ನಿಜಕ್ಕೂ ಖಡಕ್​ ನಾಯಕನಿಗಿಂತ ಹೆಚ್ಚಾಗಿ ಕಾಮಿಡಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದರೂ ಕಟ್ಟುಮಸ್ತಾದ ದೇಹ, ಅದಕ್ಕೆ ಒಪ್ಪುವ ಬಾಡಿ ಫಿಟ್​ ಔಟ್​ಫಿಟ್​ ನಿಜಕ್ಕೂ ಒಂದು ರೀತಿ ಹಾಸ್ಯವೆನಿಸುತ್ತದೆ.

ಸಲ್ಮಾನ್​ ಖಾನ್​ರ ಸ್ನೇಹಿತನಾಗಿ ಅಭಿನಯಿಸಿರುವ ಹಾಸ್ಯ ನಟ ಸುನಿಲ್​ ಗ್ರೋವರ್​ ಅಭಿನಯಕ್ಕೆ ಪ್ರೇಕ್ಷಕ ಫಿದಾ ಆಗುತ್ತಾನೆ. ಹಾಸ್ಯಭರಿತ ವಿಲಾಯಿತಿ ಪಾತ್ರದಲ್ಲಿ ಸುನಿಲ್​ ತಮ್ಮ ಅಭಿನಯದ ಮೂಲಕ ನೋಡುಗರನ್ನು ಹಿಡಿದಿಟ್ಟುಕೊಂಡರೆ, 167 ನಿಮಿಷ ಸಿನಿಮಾವನ್ನು ಸಹಿಸಿಕೊಳ್ಳುವುದು ಕೊಂಚ ಕಷ್ಟವೆ. ಕಾರಣ ಸಿನಿಮಾ ಅಷ್ಟು ನಿಧಾನವಾಗಿ ಸಾಗುತ್ತದೆ.ಗ್ಲಾಮರ್​ ಗೊಂಬೆ ಕತ್ರಿನಾ ಕೈಫ್​ ಈ ಸಿನಿಮಾದಲ್ಲಿ ಹೇಳಿಕೊಳ್ಳುವಷ್ಟು ಗ್ಲಾಮರಾಗಿ ಕಾಣಿಸಿಕೊಳ್ಳದಿದ್ದರೂ, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗಂಭೀರವಾದ ಕುಮುದ್​ ಪಾತ್ರದಲ್ಲಿ ಸಿನಿಮಾದ ಉದ್ದಕ್ಕೂ ಮೇಡಂ ಸರ್ ಎಂದೇ ಕರೆಸಿಕೊಳ್ಳುವ ​ಕತ್ರಿನಾರ ಅಭಿನಯ ಎಲ್ಲರಿಗೂ ಇಷ್ಟವಾಗುತ್ತದೆ.

ಲಿವಿಂಗ್​ ಸಂಸ್ಕೃತಿಯನ್ನೂ ಇಂದಿಗೂ ಒಪ್ಪಿಕೊಳ್ಳದ ಮನಸ್ಥಿತಿಯ ಜನರಿರುವಾಗ ಈ ಸಿನಿಮಾದಲ್ಲಿ ಇನ್ನೂ ಹಿಂದೆಯೇ ಇವರ ಸಲ್ಲು-ಕತ್ರಿನಾರ ಲಿವಿಂಗ್​ ಸಂಬಂಧಕ್ಕೆ ಆಗಲೇ ಒಪ್ಪಿಗೆ ಸಿಗುತ್ತದೆ. ಪ್ರೀತಿಸಿ ಮದುವೆಯಾಗುವ ತನ್ನ ಕುಟುಂಬ ಸದಸ್ಯರ ನಡುವೆಯೇ ಪ್ರೀತಿಸಿದ ಹುಡುಗಿಯೊಂದಿಗೆ ಲಿವಿಂಗ್​ನಲ್ಲಿರುತ್ತಾರೆ ಸಲ್ಮಾನ್​.

ದೇಶ ವಿಭಜನೆಯ ಸಮಯದಲ್ಲಿ ದೂರಾದವರನ್ನು ಒಂದು ಮಾಡುವ ಟಿವಿ ವಾಹಿನಿಯ ಕಾರ್ಯಕ್ರಮ ಈ ಸಿನಿಮಾ ಜೀವ. ಆದರೆ ನಿರ್ದೇಶಕ ಇದನ್ನು ಪ್ರೇಕ್ಷಕನ ಮನಮುಟ್ಟುವಷ್ಟು ಭಾವನಾತ್ಮಕವಾಗಿ ತೋರಿಸುವಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲ ಹಾಲಿವುಡ್​ ಸಿನಿಮಾ 'ಗೋಷ್ಟ್​ ರೈಡರ್​'ನ ಬೈಕ್​ ದೃಶ್ಯವನ್ನು ಯಥಾವತ್ತಾಗಿ ಭಾರತ್​ನಲ್ಲಿ ಇಳಿಸಿದ್ದಾರೆ.

ಇದನ್ನೂ ಓದಿ: ವಿಶ್ವ ಪರಿಸರ ದಿನಕ್ಕೆ ಡಿಬಾಸ್ ಮನವಿ​: ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡುವಂತೆ ಕರೆ ನೀಡಿದ ದಾಸ ದರ್ಶನ್​

'ಓಡ್​ ಟು ಮೈ ಫಾದರ್​' ಎಂಬ ಕೊರಿಯನ್​ ಸಿನಿಮಾದ ರಿಮೇಕ್​ ಹಿಂದಿಯ 'ಭಾರತ್​'.  ದೇಶ ವಿಭಜನೆ ವೇಳೆ ಪಾಕಿಸ್ತಾನದಿಂದ ಭಾರತದತ್ತ ಪ್ರಯಾಣ ಬೆಳೆಸುವ ಮಿರ್​ಪುರದ ರೈಲ್ವೆ ಸ್ಟೇಷನ್​ ಮಾಸ್ಟರ್​ ಕುಟುಂಬ... ಜನರಿಂದ ತುಂಬಿದ್ದ ರೈಲಿಗೆ ಹತ್ತುವಾಗ ನಾಯಕನ ತಂಗಿ ರೈಲ್ವೆ ನಿಲ್ದಾಣದಲ್ಲಿ ತಪ್ಪಿ ಹೋಗುತ್ತಾಳೆ. ಆಕೆಯನ್ನು ಹುಡುಕಲು ನಾಯಕನ ತಂದೆ ಅಲ್ಲೇ ಉಳಿದುಕೊಳ್ಳುತ್ತಾನೆ. ಈ ನಡುವೆ ಕುಟುಂಬದ ಜವಾಬ್ದಾರಿ ನೋಡುಕೊಳ್ಳುವುದಾಗಿ ತಂದೆಗೆ ಭಾಷೆ ನೀಡಿದ ನಾಯಕ ಭಾರತ್​, ಭಾರತಕ್ಕೆ ಮರಳಿದ ನಂತರ ಕುಟುಂಬದ ನಿರ್ವಹಣೆಗೆ ಸಲ್ಮಾನ್​ ನಾನಾ ಕೆಲಸಗಳನ್ನು ಮಾಡುತ್ತಾರೆ. ಸೌದಿ ರಾಷ್ಟ್ರದಲ್ಲಿ ಎಣ್ಣೆ ತೆಗೆಯುವವನಾಗಿ, ಹಡಗಿನಲ್ಲಿ ಮೆಕ್ಯಾನಿಕ್​ ಆಗಿ, ನಂತರ ಹಿಂದ್​ ರೇಷನ್​ ಸ್ಟೋರ್​ನ ಮಾಲೀಕನಾಗಿ ಉಳಿಯುತ್ತಾನೆ.

ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾದ ವಿಶಾಲ್​ ಶೇಖರ್​ ಅವರ ಜಾದೂ ಅಷ್ಟಾಗಿ ಆಗಿಲ್ಲವಾದರೂ, 'ಸ್ಲೋ ಮೋಷನ್​' ಹಾಗೂ 'ಜಿಂದಾ ಹೂ ಮೆ' ಹಾಡುಗಳು ತಮ್ಮ ಪ್ರೇಕ್ಷಕರನ್ನು ಎದ್ದು ಕುಣಿಯುವಂತೆ ಮಾಡುತ್ತವೆ.

 Photos: ಬೋಲ್ಡ್​ ಉಡುಗೆ ತೊಟ್ಟು ಟೀಕೆಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ..!

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...