Bharat Movie Review: ಸಲ್ಮಾನ್​ ಖಾನ್ ನಟನೆಯ ‘ಭಾರತ್​’ ಚಿತ್ರ ಹೇಗಿದೆ ಗೊತ್ತಾ?; ಇಲ್ಲಿದೆ ವಿಮರ್ಶೆ!

‘ಸುಲ್ತಾನ್​’ ಮೊದಲ ದಿನದ ಬಾಕ್ಸ್​ ಆಫೀಸ್​ ಗಳಿಕೆಯ ಮೇಲೆ ಎಲ್ಲರ ಗಮನ ನೆಟ್ಟಿದೆ. ಹಬ್ಬದ ದಿನ ತೆರೆಕಂಡಿರುವುದರಿಂದ ಈ ಚಿತ್ರ ಒಳ್ಳೆಯ ಗಳಿಕೆ ಮಾಡುವ ಸಾಧ್ಯತೆ ಇದೆ.

ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​

  • News18
  • Last Updated :
  • Share this:
ಈದ್​ ಹಬ್ಬದ ಪ್ರಯುಕ್ತ ಇಂದು ವಿಶ್ವಾದ್ಯಂತ ಸಲ್ಮಾನ್​ ಖಾನ್​ ಅಭಿನಯದ ‘ಭಾರತ್​’ ಚಿತ್ರ ತೆರೆಕಂಡಿದೆ. ಟ್ರೈಲರ್​ ಮೂಲಕ ಸದ್ದು ಮಾಡಿದ್ದ ಈ ಚಿತ್ರ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬರೆದುಕೊಂಡಿದ್ದಾರೆ. ಈ ಮೂಲಕ ಸಲ್ಮಾನ್​ ಖಾನ್​ ಖಾತೆಗೆ ಮತ್ತೊಂದು ಹಿಟ್​ ಚಿತ್ರ ಸೇರ್ಪಡೆಯಾಗುವ ಸೂಚನೆ ಸಿಕ್ಕಿದೆ.

ನಿರ್ದೇಶಕ ಅಲಿ ಅಬ್ಬಾಸ್​ ಜಫರ್​ ಹಾಗೂ ಸಲ್ಮಾನ್​ ಖಾನ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ‘ಸುಲ್ತಾನ್​’, ‘ಟೈಗರ್​ ಜಿಂದಾ ಹೈ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿತ್ತು. ವಿಶೇಷ ಎಂದರೆ ಈ ಎರಡೂ ಚಿತ್ರಗಳು ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ 300 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ಸಲ್ಮಾನ್​ ಮತ್ತು ಅಲಿ ಅಬ್ಬಾಸ್​ ಮತ್ತೆ ಒಂದಾಗಿರುವುದಕ್ಕೆ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈಗ ಸಿನಿಮಾಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ.

ಸಲ್ಮಾನ್​ ಖಾನ್​ ಸಿನಿಮಾ ಎಂದರೆ ಮಾಸ್​​ ಹಾಗೂ ಭಾವನಾತ್ಮಕ ಅಂಶಗಳ ಮಿಶ್ರಣ ಇರುತ್ತದೆ. ಈ ಚಿತ್ರದಲ್ಲೂ ಅದು ಮುಂದುವರಿದಿದೆಯಂತೆ. ಇದರ ಜೊತೆಗೆ ಸಿನಿಮಾದಲ್ಲಿ ಹಾಸ್ಯದ ಬೆರಕೆ ಮಾಡಿದ್ದಾನೆ ನಿರ್ದೇಶಕ. ಹಾಗಾಗಿ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ನೆಟ್ಟಿಗರ ಅಭಿಪ್ರಾಯ.

ಇದನ್ನೂ ಓದಿ: ಸಲ್ಮಾನ್ ಖಾನ್ ಮಾತಿಗಿಲ್ಲ ಬೆಲೆ; ‘ಭಾರತ್’ ರಿಲೀಸ್​ಗೂ ಮೊದಲೇ ಸಿಟ್ಟಾದ್ರು ಸಲ್ಲು



‘ಭಾರತ್​’ ಮೊದಲ ದಿನದ ಬಾಕ್ಸ್​ ಆಫೀಸ್​ ಗಳಿಕೆಯ ಮೇಲೆ ಎಲ್ಲರ ಗಮನ ನೆಟ್ಟಿದೆ. ಹಬ್ಬದ ದಿನ ತೆರೆಕಂಡಿರುವುದರಿಂದ ಈ ಚಿತ್ರ ಒಳ್ಳೆಯ ಗಳಿಕೆ ಮಾಡುವ ಸಾಧ್ಯತೆ ಇದೆ. ಸಲ್ಮಾನ್​ ಸಿನಿಮಾಗಳು ಮೊದಲ ದಿನ ಉತ್ತಮ ಕಲೆಕ್ಷನ್​ ಮಾಡುತ್ತದೆ. ‘ಸುಲ್ತಾನ್​’ ಸಿನಿಮಾ ಸುಮಾರು 30 ಕೋಟಿ ಬಾಚಿಕೊಳ್ಳಲಿದೆ ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ.

ಈ ಮೊದಲು ತೆರೆಕಂಡಿದ್ದ ಸಲ್ಮಾನ್​ ಅಭಿನಯದ ‘ರೇಸ್​ 3’ ಫ್ಲಾಪ್​ ಆಗಿತ್ತು. ಹಾಗಾಗಿ ಸಲ್ಮಾನ್​ಗೆ ಈ ಚಿತ್ರದ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಂತೆಯೇ ಈ ಚಿತ್ರದ ಮೂಲಕ ಸಲ್ಲು ಗೆಲುವಿನ ನಗೆ ಬೀರಿದ್ದಾರೆ. ಸಲ್ಮಾನ್​-ಕತ್ರಿನಾ ಕಾಂಬಿನೇಷನ್​ಅನ್ನು ಜನರು ಮತ್ತೊಮ್ಮೆ ಮೆಚ್ಚಿಕೊಂಡಿದ್ದಾರೆ.



First published: