Bharat Ka Josh: ಭಾರತ್ ಪ್ರೊಮೊ ವಿಡಿಯೋದಲ್ಲಿ ಸಖತ್ ಜೋಶ್​ನಲ್ಲಿ ಸಲ್ಮಾನ್ ಖಾನ್

ಮೂಲಕ ದೇಶ ವಿಭಜನೆಯ ಸ್ಥಿತಿಗತಿ, ತವಕ ತಲ್ಲಣಗಳನ್ನೂ ತೋರಿಸೋ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ಅಲಿ ಅಬ್ಬಾಸ್ ಜಫರ್.

zahir | news18
Updated:May 26, 2019, 5:31 PM IST
Bharat Ka Josh: ಭಾರತ್ ಪ್ರೊಮೊ ವಿಡಿಯೋದಲ್ಲಿ ಸಖತ್ ಜೋಶ್​ನಲ್ಲಿ ಸಲ್ಮಾನ್ ಖಾನ್
ಸಲ್ಮಾನ್ ಖಾನ್
zahir | news18
Updated: May 26, 2019, 5:31 PM IST
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಚಿತ್ರದ ಹೊಸ ಪ್ರೊಮೊ ವಿಡಿಯೋ ಬಿಡುಗಡೆಯಾಗಿದೆ. ಭಾರತ್ ರೆಡಿ ಫೈಟ್​ ಎಂಬ ಈ ವಿಡಿಯೋ ತುಣುಕಿನಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯವನ್ನು ತೋರಿಸಲಾಗಿದೆ. ಈಗಾಗಲೇ ಟ್ರೈಲರ್​ ಮೂಲಕ ಒಂದಷ್ಟು ಕುತೂಹಲ ಹುಟ್ಟಿಸಿರುವ 'ಭಾರತ್', ಇದೀಗ ಪ್ರೊಮೊದೊಂದಿಗೆ ಈ ನಿರೀಕ್ಷೆಯನ್ನು ದುಪ್ಪಟುಗೊಳಿಸಿದೆ.

ದೇಶ ಭಕ್ತಿಯನ್ನು ಈ ಸಾರುವ ಈ ಚಿತ್ರವು 1964ರ ಕಥೆಯೊಂದಿಗೆ ಪ್ರಾರಂಭವಾಗಲಿದೆ. ಇಲ್ಲಿ ಕಥೆಯೊಂದಿಗೆ ಸಲ್ಮಾನ್​ ಖಾನ್​ ಪಾತ್ರಗಳು ಬದಲಾಗುತ್ತಾ ಹೋಗಲಿವೆ. 46 ವರ್ಷಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಈ ಚಿತ್ರ ಒಳಗೊಂಡಿದ್ದು, ಚಿತ್ರದ ಕಥೆಯು 2010 ರಲ್ಲಿ ಸಲ್ಲುವಿನ ಸಾಲ್ಟ್​​ ಪೆಪ್ಪರ್​ ಲುಕ್​ನೊಂದಿಗೆ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ 'ಭಾರತ್' ಎಂಬುದು ಸಲ್ಮಾನ್​ ಖಾನ್​ ಹೆಸರಾಗಿದ್ದು, ಅದರೊಂದಿಗೆ ಐದು ವಿಭಿನ್ನ ಅವತಾರಗಳಲ್ಲಿ ಬಾಕ್ಸಾಫೀಸ್ 'ಸುಲ್ತಾನ್' ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ದೇಶ ವಿಭಜನೆಯ ಸ್ಥಿತಿಗತಿ, ತವಕ ತಲ್ಲಣಗಳನ್ನೂ ತೋರಿಸೋ ಪ್ರಯತ್ನವನ್ನು ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಮಾಡಿದ್ದಾರೆ.



ಈಗಾಗಲೇ ಸಲ್ಲುವಿನ ಸರ್ಕಸ್​ ಬೈಕ್​ ಸ್ಟಂಟರ್​ ಪಾತ್ರವು  ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟಿಸಿದ್ದು, ಹಾಗೆಯೇ ಟ್ರೈಲರ್​ನಲ್ಲಿ ತೋರಿಸಲಾಗಿರುವ ಸುನೀಲ್ ಗ್ರೋವರ್​ ಜತೆಗಿನ ಹಾಸ್ಯ ಮಿಶ್ರಿತ ಡೈಲಾಗ್​ಗಳು ಸಿನಿಪ್ರಿಯರ ಗಮನ ಸೆಳೆದಿದೆ.


Loading...

ಇಲ್ಲಿ ಸಲ್ಮಾನ್​ ಖಾನ್​ಗೆ ನಾಯಕಿ 'ಟೈಗರ್'​ ಸುಂದರಿ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ 'ಧೋನಿ' ಚಿತ್ರ ಖ್ಯಾತಿಯ ದಿಶಾ ಪಠಾಣಿ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ನಟ ಜಾಕಿ ಶ್ರಾಫ್, ನಟಿ ತಬು ಸೇರಿದಂತೆ ಇನ್ನು ಹಲವರು ಕಾಣಿಸಿಕೊಂಡಿದ್ದಾರೆ. 'ಒಡ್​ ಟು ಮೈ ಫಾದರ್'​ ಎಂಬ ಕೊರಿಯನ್ ಚಿತ್ರದಿಂದ ಸ್ಪೂರ್ತಿ ಪಡೆದ ಕಥೆ 'ಭಾರತ್​'ನಲ್ಲಿರಲಿದ್ದು, ಈ ಮೂಲಕ ದೇಶ ಪ್ರೇಮ, ಸಂಬಂಧ, ಹೋರಾಟ, ತ್ಯಾಗದ ಮೌಲ್ಯವನ್ನು ತೋರಿಸುವ ಪ್ರಯತ್ನಕ್ಕೆ ಸಲ್ಲು ಮತ್ತು ತಂಡ ಕೈ ಹಾಕಿದೆ.



ಬಾಲಿವುಡ್​ನಲ್ಲಿ 'ಸುಲ್ತಾನ್' ಮತ್ತು 'ಟೈಗರ್​ ಜಿಂದಾ ಹೈ' ಎಂಬ ಭರ್ಜರಿ ಹಿಟ್​ ಚಿತ್ರಗಳನ್ನು ನೀಡಿದ್ದ ಅಲಿ ಅಬ್ಬಾಸ್​ ಜಫರ್ ಈ ಚಿತ್ರವನ್ನು ನಿರ್ದೇಶಿಸಿರುವುದು ನಿರೀಕ್ಷೆ ಹೆಚ್ಚಾಗಲು ಮತ್ತೊಂದು ಕಾರಣ. ಇದೀಗ ಟ್ರೈಲರ್ ಮತ್ತು ಪ್ರೊಮೋ ವಿಡಿಯೋಗಳ​ ಮೂಲಕ ಈ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ. ಅಂದಹಾಗೆ ಸಲ್ಲುವಿನ ನಾನಾ ಅವತಾರಗಳ ಈ ಚಿತ್ರವು ಜೂನ್​ 5 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...