Bharat box office collection day 2: ಎರಡೇ ದಿನಕ್ಕೆ 71 ಕೋಟಿ ಬಾಚಿಕೊಂಡ 'ಭಾರತ್​' ಸಿನಿಮಾ..!

ಸಲ್ಮಾನ್​ ಅಭಿನಯದ 'ಭಾರತ್'​ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದ್ದು, ಮೊದಲ ದಿನೇ 42.3 ಕೋಟಿ ಗಳಿಕೆ ಮಾಡಿದೆ. ಎರಡನೇ ದಿನದ ಅಂತ್ಯಕ್ಕೆ 73 ಕೋಟಿ ಗಳಿಸಿರುವ ಈ ಸಿನಿಮಾ ಸಲ್ಮಾನ್​ ಸಿನಿ ಜೀವನದಲ್ಲೇ ಮೊದಲ ದಿನ ಅತಿ ಹೆಚ್ಚು ಗಳಿಸಿರುವ ಚಿತ್ರವಾಗಿದೆ.

'ಭಾರತ್​' ಚಿತ್ರದ ಪೋಸ್ಟರ್​

'ಭಾರತ್​' ಚಿತ್ರದ ಪೋಸ್ಟರ್​

  • News18
  • Last Updated :
  • Share this:
ನೂರು ಕೋಟಿ ಗಳಿಕೆಯ ಸರದಾರ ಸಲ್ಮಾನ್​ ಖಾನ್​ಗೆ ಈ ಸಲದ ರಂಜಾನ್​ ಹಬ್ಬ ಒಂದು ರೀತಿಯಲ್ಲಿ ಅದೃಷ್ಟ ತಂದುಕೊಟ್ಟಿದೆ ಎನ್ನಬಹುದು. ಸಲ್ಮಾನ್​ ಅಭಿನಯದ 'ಭಾರತ್'​ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದ್ದು, ಮೊದಲ ದಿನೇ 42.3 ಕೋಟಿ ಗಳಿಕೆ ಮಾಡಿದೆ.

ಮೊದಲ ದಿನ 'ಭಾರತ್​' ಸಿನಿಮಾದ ಕಲೆಕ್ಷನ್​ ಕುರಿತು ಸಿನಿ ವಿಶ್ಲೇಷಕ ತರನ್​ ಆದರ್ಶ್​ ಮಾಡಿರುವ ಟ್ವೀಟ್​ ಇಲ್ಲಿದೆ.ಇದನ್ನೂ ಓದಿ: ಬ್ಯಾಡ್​ಬಾಯ್​ ಇಮೇಜ್​ನಿಂದ ಹೊರ ಬಂದಿಲ್ಲವಾ ಬಿ-ಟೌನ್​ ಸುಲ್ತಾನ್​: ಮತ್ತೆ ವಿವಾದಕ್ಕೀಡಾದ ಸಲ್ಮಾನ್​ ಖಾನ್

ಕತ್ರಿನಾ ಕೈಫ್​, ಜಾಕಿ ಶ್ರಾಫ್​, ಸುನಿಲ್​ ಗ್ರೋವರ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಎರಡನೇ ದಿನಕ್ಕೆ 31 ಕೋಟಿ ಲೂಟಿ ಮಾಡಿದೆ. ಅಂದರೆ ಎರಡೇ ದಿನಕ್ಕೆ 73.30 ಕೋಟಿ ಬಾಚಿಕೊಂಡಿದೆ 'ಭಾರತ್'​.

#Bharat puts up a big total on Day 2 [working day after #Eid holiday]... Plexes saw normal decline, while single screens held fort... Saw excellent occupancy in evening/night shows... Overall, 2-day total is superb... Wed 42.30 cr, Thu 31 cr. Total: ₹ 73.30 cr. India biz.ಅಷ್ಟೇಅಲ್ಲದೆ ಸಲ್ಮಾನ್​ ಖಾನ್​ರ ಸಿನಿ ಜೀವನದಲ್ಲೇ 'ಭಾರತ್​' ಮೊದಲ ದಿನ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೌದು 2010ರಲ್ಲಿ ತೆರೆಕಂಡ 'ದಬಂಗ್​' ಮೊದಲ ದಿನ 14.50 ಕೋಟಿ, 2011ರಲ್ಲಿ  'ಬಾಡಿಗಾರ್ಡ್​' 21.60 ಕೋಟಿ, 2012ರ್ಲಿ 'ಎಕ್​ ಥಾ ಟೈಗರ್​' 32.93 ಕೋಟಿ, 2014 ಕಿಕ್​ 26.40 ಕೋಟಿ, 2015ರಲ್ಲಿ 'ಭಜರಂಗಿ ಭಾಯ್​ಜಾನ್​' 27.25 ಕೋಟಿ, 2016 'ಸುಲ್ತಾನ್​' 36.54 ಕೋಟಿ, 2017ರಲ್ಲಿ 'ಟ್ಯೂಬ್​ಲೈಟ್'​ 21.15 ಕೋಟಿ, 2018ರಲ್ಲಿ 'ರೇಸ್​ 3' 29.17 ಕೋಟಿ ಹಾಗೂ 2019ರಲ್ಲಿ 'ಭಾರತ್'​ 42.30 ಕೋಟಿ ಕಲೆಕ್ಷನ್​ ಮಾಡಿದೆ.

Salman Khan and #Eid... *Day 1* bizಇನ್ನೂ ಈ ವರ್ಷ ಇಲ್ಲಿವರೆಗೆ ತೆರೆಕಂಡ ಹಿಂದಿ ಸಿನಿಮಾಗಳ ಪೈಕಿ 'ಭಾರತ್​' ಮೊಲದ ದಿನ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿದೆ. 'ಭಾರತ್​' 42.30 ಕೋಟಿ, 'ಕಲಂಕ್​' 21.60 ಕೋಟಿ, 'ಕೇಸರಿ' 21.06 ಕೋಟಿ, 'ಗಲ್ಲಿಬಾಯ್​'19.40 ಕೋಟಿ ಹಾಗೂ 'ಟೋಟಲ್​ ಧಮಾಲ್​' 16.50 ಕೋಟಿ ಗಳಿಸಿದೆ.ಸಿನಿಮಾಗೆ ಇಷ್ಟು ದೊಡ್ಡ ಮಟ್ಟದಲ್ಲಿ ಓಪನಿಂಗ್​ ಕೊಟ್ಟ ಹಾಗೂ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಬಂದಾಗ ಎದ್ದು ನಿಂತು ಗೌರವ ಸಲ್ಲಿಸುತ್ತಿರುವ ಅಭಿಮಾನಿಗಳಿಗೆ ಸಲ್ಮಾನ್​ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.

 Pailwaan Movie: 'ಪೈಲ್ವಾನ'ನ ಅಖಾಡ ಹೇಗಿದೆ ಗೊತ್ತಾ: ಸಿನಿಮಾ ಸೆಟ್​ನ ಕೆಲವು ಚಿತ್ರಗಳು ನಿಮಗಾಗಿ..!
First published: