Bhajarangi 2: ನಾಳೆ ಟಿವಿಯಲ್ಲಿ ಬರ್ತಿದೆ ಶಿವಣ್ಣನ ಭಜರಂಗಿ 2, ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ..

ನಾಳೆ Zee kannadaದಲ್ಲಿ ಶಿವಣ್ಣ ಅಭಿನಯದ ಭಜರಂಗಿ 2 ಸಿನಿಮಾ ಪ್ರಸಾರವಾಗ್ತಿದ್ದು, ಮನೆಯಲ್ಲೇ ಕುಳಿತು ಚಿತ್ರ ವೀಕ್ಷಿಸಿಲು ಅಭಿಮಾನಿಗಳು ಕಾದಿದ್ದಾರೆ

ಭಜರಂಗಿ 2

ಭಜರಂಗಿ 2

  • Share this:
ನಟ ಶಿವರಾಜ್‌ಕುಮಾರ್  (Shiva Rajkumar)  ಹಾಗೂ ಭಾವನಾ ಮೆನನ್‌ (Bhavana menon) ಅಭಿನಯದ ʻಭಜರಂಗಿ 2' (Bhajarangi 2) ಸಿನಿಮಾ ಕಳೆದ ವರ್ಷ 2021ರ ಅಕ್ಟೋಬರ್ 29ರಂದು ತೆರೆಗೆ ಬಂದಿತ್ತು. ಆ ದಿನವನ್ನು ಕರ್ನಾಟಕದ ಜನ ಮರೆಯಲು ಸಾಧ್ಯವಿಲ್ಲ. ಒಂದೆಡೆ ಥಿಯೇಟರ್​ನಲ್ಲಿ ಭಜರಂಗ 2 ಅಬ್ಬರಿಸ್ತಿತ್ತು, ಮತ್ತೊಂದೆಡೆ ಪುನೀತ್​ ರಾಜ್​ಕುಮಾರ್​ (Punith rajkumar) ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ರು. ಚಿತ್ರಮಂದಿರದಲ್ಲಿದ್ದ ಶಿವಣ್ಣ ಆಸ್ಪತ್ರೆಗೆ ಬರುವಷ್ಟರಲ್ಲಿ ಪುನೀತ್​ ನಿಧನರಾಗಿದ್ರು. ಇಡೀ ರಾಜ್ಯಕ್ಕಾದ ಆಘಾತದಿಂದ ಸಿನಿಪ್ರಿಯರು ಥಿಯೇಟರ್​ಗಳಿಗೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಭಜರಂಗಿ ಚಿತ್ರವನ್ನು ಜೀ5 ಒಟಿಟಿ (zee5 OTT) ಯಲ್ಲಿ ಬಿಡುಗಡೆ ಮಾಡಲಾಗಿತ್ತು. ಥಿಯೇಟರ್​ನಲ್ಲಿ ಚಿತ್ರ ನೋಡುವ ಅವಕಾಶ ಮಿಸ್​ ಮಾಡಿಕೊಂಡಿದ್ದ ಜನರೆಲ್ಲಾ ಜೀ5ನಲ್ಲಿ ನೋಡಿ ಸಖತ್​ ಖುಷಿ ಪಟ್ಟಿದ್ರು. ಜೀ5ನಲ್ಲೂ ನೋಡಲು ಸಾಧ್ಯವಾಗದ ಸಿನಿಪ್ರಿಯರಿಗಾಗಿ ಇದೀಗ  ಜೀ ಕನ್ನಡದಲ್ಲಿ WORLD TELEVISION PREMIER ಆಗ್ತಾ ಇದೆ.

ನಾಳೆ ಜೀ ಕನ್ನಡದಲ್ಲಿ ಭಜರಂಗಿ 2

ಕನ್ನಡ ಕಿರುತೆರೆಯ ನಂಬರ್ ಒನ್ ಮನರಂಜನಾವಾಹಿನಿ, ಜೀ ಕನ್ನಡದಲ್ಲಿ ಭಜರಂಗಿ ಸಿನಿಮಾ ಈಗಾಗ್ಲೆ ನೂರಾರು ಬಾರಿ ಪ್ರದರ್ಶನ ಕೊಂಡು ಪ್ರೇಕ್ಷಕರನ್ನ ರಂಜಿಸಿದೆ. ಈಗ ಭಜರಂಗಿ-2 ಸಿನಿಮಾ ಕೂಡ ಜೀ ವಾಹಿನಿಯಲ್ಲಿ ಪ್ರಸಾರವಾಗ್ತಾ ಇದೆ. ಜನವರಿ 23 ರಂದು ಸಂಜೆ 7 ಕ್ಕೆ WORLD TELEVISION PREMIER ಆಗ್ತಾ ಇದೆ. ರಾಜ್ಯದ ಜನರಿಗೆ ಈ ಫ್ಯಾಂಟಸಿ ಥ್ರಿಲ್ಲರ್‌ ಚಿತ್ರ ಭರ್ಜರಿ ಮನರಂಜನೆ ನೀಡಲಿದೆ.

ನಿರ್ದೇಶಕ ಹರ್ಷ ಜೊತೆ ಶಿವಣ್ಣ 3ನೇ ಚಿತ್ರ

ನಿರ್ದೇಶಕ ಎ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೊದಲ ಚಿತ್ರ ಭಜರಂಗಿ ಪಾರ್ಟ್​ 1, ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಭಾರೀ ಸದ್ದು ಮಾಡಿತ್ತು. ಚಿತ್ರಗೆಲ್ಲುತ್ತಿದ್ದಂತೆ ಇಬ್ಬರು ಸೇರಿ ವಜ್ರಕಾಯ ಸಿನಿಮಾ ಮಾಡಿ ಗೆದ್ದರು. ಬಳಿಕ ಹ್ಯಾಟ್ರಿಕ್​ ಶಿವರಾಜ್​ಕುಮಾರ್​​ ಹರ್ಷ ಜೊತೆ ಹ್ಯಾಟ್ರಿಕ್​ ಬಾರಿಸಲು ಭಜರಂಗಿ 2 ಚಿತ್ರಕ್ಕಾಗಿ ಕೈಜೋಡಿಸಿದ್ರು.

ಇದನ್ನೂ ಓದಿ: Bhajarangi 2: ಫ್ಯಾನ್ಸ್ ಜೊತೆ ಮತ್ತೆ ಭಜರಿಂಗಿ-2 ಸಿನಿಮಾ ನೋಡಲಿರುವ ಶಿವಣ್ಣ! 

ಜೀ5ನಲ್ಲಿ ದಾಖಲೆ ಬರೆದ ಭಜರಂಗಿ 2

ಶಿವರಾಜ್‌ಕುಮಾರ್ ಹಾಗೂ ಎ. ಹರ್ಷ ಕಾಂಬಿನೇಷನ್ 'ಭಜರಂಗಿ 2' ಸಿನಿಮಾವು ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಶಿವಣ್ಣನ ನಟನೆ, ಹರ್ಷ ಡೈರೆಕ್ಷನ್‌ಗೆ ಪ್ರೇಕ್ಷಕರು ಸಖತ್ ರೆಸ್ಪಾನ್ಸ್ ಕೊಟ್ಟಿದ್ದರು. ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ, ಜೀ5ನಲ್ಲಿ ಡಿಜಿಟಲ್‌ ಪ್ರೀಮಿಯರ್‌ ಆಗಿ ಹಲವು ದಾಖಲೆಗಳನ್ನ ಮಾಡಿತ್ತು. ಜೀ5 ನಲ್ಲಿ ಡಿಸೆಂಬರ್ 23ರಂದು ರಿಲೀಸ್ ಆಗಿತ್ತು. ಚಿತ್ರಮಂದಿರದಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡವರು  ಒಟಿಟಿಯಲ್ಲಿ  ನೋಡಿದರು. ಭಜರಂಗಿ 2 ಚಿತ್ರ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.

ಅಪ್ಪುಗೆ ಭಜರಂಗಿ 2 ಚಿತ್ರ ಅರ್ಪಣೆ

ಭಜರಂಗಿ 2 ಚಿತ್ರವನ್ನು ಪುನೀತ್​ ರಾಜ್​ ಕುಮಾರ್​ ಅವರಿಗೆ ಅರ್ಪಿಸೋದಾಗಿ ಶಿವಣ್ಣ ಹೇಳಿದ್ದಾರೆ. ಜೀ5 ಒಟಿಟಿಯಲ್ಲಿ ಚಿತ್ರ ರಿಲೀಸ್ ದಿನ ಮಾತಾಡಿದ ಶಿವಣ್ಣ, ಭಜರಂಗಿ 2 ಚಿತ್ರದ ಸೀನ್​ಗಳನ್ನು ನೋಡಿ ಅಪ್ಪು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ರು. ಸಿನಿಮಾ ತಂಡಕ್ಕೂ ವಿಶ್ ಮಾಡಿದ್ರು. ಹೀಗಾಗಿ ಚಿತ್ರವನ್ನ ಅವರಿಗೆ ಅರ್ಪಿಸೋದಾಗಿ ಹೇಳಿದ್ರು.

ಇದನ್ನೂ ಓದಿ: Bhajarangi 2: ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆ ಮೇಲೆ ಭಜರಂಗಿ -2 ದರ್ಶನ: ಫಸ್ಟ್​ ಶೋ Exclusive Review

ಈ ಸಿನಿಮಾದಲ್ಲಿ ಶಿವಣ್ಣ ಜೊತೆ ನಾಯಕಿಯಾಗಿ ಭಾವನಾ ಮೆನನ್  ಮಿಂಚಿದ್ದಾರೆ. ಜೊತೆಗೆ ಹಿರಿಯ ನಟಿ ಶೃತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ಕಲಾವಿದರಾದ ಶಿವರಾಜ್ ಕೆ.ಆರ್. ಪೇಟೆ, ಕುರಿ ಪ್ರತಾಪ್‌, ಭಜರಂಗಿ ಲೋಕಿ ಮುಂತಾದವರ ನಟಿಸಿದ್ದಾರೆ. ʻಭಜರಂಗಿ 2' ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಹೀಗಾಗಲೇ ಭಜರಂಗಿ 2 ಚಿತ್ರದ ಹಾಡುಗಳು ಸೂಪರ್​ ಹಿಟ್​ ಆಗಿವೆ.
Published by:Pavana HS
First published: