ಹೊತ್ತಿ ಉರಿದ ಭಜರಂಗಿ 2 ಸಿನಿಮಾ ಸೆಟ್; ಶಿವರಾಜ್​ಕುಮಾರ್ ಕ್ಲೈಮ್ಯಾಕ್ಸ್​ ದೃಶ್ಯದ ಶೂಟಿಂಗ್ ವೇಳೆ ಅವಘಡ

Bhajarangi 2 Kannada Movie: ಭಜರಂಗಿ 2 ಸಿನಿಮಾ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ಶಿವರಾಜ್​​ಕುಮಾರ್ ಕೂಡ ಭಾಗಿಯಾಗಿದ್ದರು. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಸೆಟ್​ ಬೆಂಕಿಗೆ ಆಹುತಿಯಾಗಿದೆ.

news18-kannada
Updated:January 16, 2020, 4:32 PM IST
ಹೊತ್ತಿ ಉರಿದ ಭಜರಂಗಿ 2 ಸಿನಿಮಾ ಸೆಟ್; ಶಿವರಾಜ್​ಕುಮಾರ್ ಕ್ಲೈಮ್ಯಾಕ್ಸ್​ ದೃಶ್ಯದ ಶೂಟಿಂಗ್ ವೇಳೆ ಅವಘಡ
ಭಜರಂಗಿ 2
  • Share this:
ಬೆಂಗಳೂರು (ಜ. 16): ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ಸೆಟ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ದುಬಾರಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೆಟ್​ನ ಅರ್ಧ ಭಾಗ ಸುಟ್ಟುಹೋಗಿದೆ.

ಎ. ಹರ್ಷ ನಿರ್ದೇಶಿಸುತ್ತಿರುವ ಈ ಸಿನಿಮಾದ 2ನೇ ಲುಕ್ ಅನ್ನು 2 ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಶಿವಣ್ಣನ ಹೊಸ ಲುಕ್​ಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಬೆಂಕಿಯುಗುವ ಕಂಗಳ ಶಿವಣ್ಣನ 'ಭಜರಂಗಿ' ಅವತಾರ ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚಿಸಿತ್ತು.

ಭಜರಂಗಿ 2 ಸಿನಿಮಾಗಾಗಿ ನೆಲಮಂಗಲದ ಬಳಿ ಇರುವ ಮೋಹನ್​ ಬಿ ಕೆರೆ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಲಾಗಿತ್ತು. ಸಿನಿಮಾದ ಕ್ಲೈಮ್ಯಾಕ್ಸ್  ದೃಶ್ಯಕ್ಕಾಗಿ ಹಾಕಿದ್ದ ಸೆಟ್​ನಲ್ಲಿ ನಡೆಯುತ್ತಿದ್ದ ಶೂಟಿಂಗ್​ನಲ್ಲಿ ಶಿವರಾಜ್​​ಕುಮಾರ್ ಕೂಡ ಭಾಗಿಯಾಗಿದ್ದರು. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೆಟ್​ ಬೆಂಕಿಗೆ ಆಹುತಿಯಾಗಿದೆ. ಈ ಸೆಟ್​ನಲ್ಲಿ ಕಲಾವಿದರು, ತಂತ್ರಜ್ಞರು, ಸಹಾಯಕರು ಸೇರಿ 100 ಮಂದಿ ಇದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೆರಳಿದ ಕಂಗಳ ಶಿವಣ್ಣ: ಪೋಸ್ಟರ್ ನೋಡಿ ಅಭಿಮಾನಿಗಳು ಅಂದ್ರು ಭಲೇ ಭಜರಂಗಿ..!

ಶೂಟಿಂಗ್ ನಡೆಯುತ್ತಿರುವಾಗ ಸೆಟ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಸೆಟ್‍ನ ಒಂದು ಭಾಗ ಅಗ್ನಿಗೆ ಆಹುತಿಯಾಗಿದೆ. ಸುಮಾರು ಒಂದು ಗಂಟೆ ಹೊತ್ತಿ ಉರಿದ ಸೆಟ್​ನಲ್ಲಿನ ಬೆಂಕಿ ಆರಿಸಲು ಚಿತ್ರತಂಡ ಸಾಕಷ್ಟು ಪ್ರಯತ್ನಿಸಿತ್ತು. ಅದೃಷ್ಟವಶಾತ್ ಈ ಬೆಂಕಿ ದುರಂತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಯಾರಿಗೂ ಏನೂ ತೊಂದರೆಯಾಗಿಲ್ಲ ಎಂದು ಎಂದು ನಟ ಶಿವರಾಜ್​ಕುಮಾರ್ ನ್ಯೂಸ್ 18 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.

Published by: Sushma Chakre
First published: January 16, 2020, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading