Bhajarangi 2: ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆ ಮೇಲೆ ಭಜರಂಗಿ -2 ದರ್ಶನ: ಫಸ್ಟ್​ ಶೋ Exclusive Review

Bhajarangi 2: ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆ ಮೇಲೆ ಭಜರಂಗಿಯ ಅಬ್ಬರ ಶುರುವಾಗಿದೆ. ರಾಜ್ಯಾದ್ಯಾಂತ ಇಂದಿನಿಂದ ಸೆಂಚುರಿ ಸ್ಟಾರ್​​ ಶಿವರಾಜ್​ ಕುಮಾರ್​ ಅಭಿನಯದ ಭಜರಂಗಿ-2 ಸಿನಿಮಾ ಬಿಡುಗಡೆಯಾಗಿದೆ.

ತೆರೆಗೆ ಅಪ್ಪಳಿಸಿದ ಭಜರಂಗಿ -2 ಸಿನಿಮಾ

ತೆರೆಗೆ ಅಪ್ಪಳಿಸಿದ ಭಜರಂಗಿ -2 ಸಿನಿಮಾ

  • Share this:
ಭಜರೆ ಭಜರೆ ಭಜ ಭಜ ಭಜ ಭಜರೆ... ಭಜರಂಗಿ. ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆ ಮೇಲೆ ಭಜರಂಗಿಯ ಅಬ್ಬರ ಶುರುವಾಗಿದೆ. ರಾಜ್ಯಾದ್ಯಾಂತ ಇಂದಿನಿಂದ ಸೆಂಚುರಿ ಸ್ಟಾರ್​​ ಶಿವರಾಜ್​ ಕುಮಾರ್(Shivrajkumar)​ ಅಭಿನಯದ ಭಜರಂಗಿ-2 (bhajarangi-2) ಸಿನಿಮಾ(Movie) ಬಿಡುಗಡೆಯಾಗಿದೆ. ಬೆಳಗ್ಗೆ 10ಕ್ಕೆ ಅನುಪಮಾ ಚಿತ್ರಮಂದಿರದಲ್ಲಿ ಶೋ ಆರಂಭವಾಗಿದೆ. ಆದರೆ ಸೂರ್ಯೋದಯಕ್ಕೂ ಮುನ್ನವೇ ಅಭಿಮಾನಿಗಳು(Fand) ಶಿವಣ್ಣನ ದರ್ಶನ ಪಡೆದಿದ್ದಾರೆ. ಬೆಳಗ್ಗೆ 5 ಗಂಟೆಗೆ ಗೌಡನಪಾಳದ್ಯ ಶ್ರೀನಿವಾಸ(Srinivasa) ಹಾಗೂ ಜೆಪಿ ನಗರ ಸಿದ್ದೇಶ್ವರ(Siddeshwaea) ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋ(Fans Show) ಆರಂಭವಾಗಿದೆ. ಅಭಿಮಾನಿಗಳ ಜೊತೆ ಚಿತ್ರತಂಡ ಸಿನಿಮಾ ನೋಡುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್​ ಹಾಗೂ ಭಜರಂಗಿ ಲೋಕಿ, ವಸಿಷ್ಠ ಸಿಂಹ ಸೇರಿ ಅನೇಕರು ಫ್ಯಾನ್ಸ್​​ ಶೋಗೆ ಆಗಮಿಸಿದ್ದಾರೆ. 1 ವರ್ಷದ ಬಳಿಕ ತೆರೆ ಮೇಲೆ ಶಿವರಾಜ್​ ಕುಮಾರ್​ ಮತ್ತೆ ಅಬ್ಬರಿಸಿದ್ದಾರೆ.  ಕೊರೋನಾ ಅಬ್ಬರದ ಬಳಿಕ ಶಿವಣ್ಣನ ಸಿನಿಮಾ ಬಿಡುಗಡೆಯಾಗಿರುವುದು ಅವರ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. 

ಬೆಳ್ಳಂಬೆಳಗ್ಗೆ ಅದ್ಧೂರಿ ಫ್ಯಾನ್ಸ್​ ಶೋ

ಇಂದಿನಿಂದ ರಾಜ್ಯದಲ್ಲಿ 300 ಚಿತ್ರಮಂದಿರಗಳಲ್ಲಿ ಭಜರಂಗಿ-2 ಅಬ್ಬರ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆ ಅಭಿಮಾನಿಗಳು ಅದ್ಧೂರಿಯಾಗಿ ಫ್ಯಾನ್ಸ್​ ಶೋ ಏರ್ಪಡಿಸಿದ್ದಾರೆ. ಗೌಡನಪಾಳದ್ಯ ಶ್ರೀನಿವಾಸ ಚಿತ್ರಮಂದಿರ ಭಜರಂಗಿ-2 ಸಿನಿಮಾದ ಬ್ಯಾನರ್​​ಗಳಿಂದ ಮುಚ್ಚಿಹೋಗಿದೆ. ಮುಂಜಾನೆ 5 ಗಂಟೆಗೆ ಶೋ ಆರಂಭವಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೇ ಚಿತ್ರಮಂದಿರಕ್ಕೆ ಶಿವರಾಜ್​ ಕುಮಾರ್​ ಕೂಡ ಆಗಮಿಸಿದ್ದು, ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಸ್ವತಃ ಶಿವರಾಜ್​ ಕುಮಾರ್​ ಅವರನ್ನು ನೋಡಿ ಖುಷಿ ಪಟ್ಟಿದ್ದಾರೆ.

ಇದನ್ನು ಓದಿ : ರೌಡಿಸಂನ ಕ’ರಾ’ಳತೆ ಬಿಚ್ಚಿಟ್ಟ ಸಲಗ, ಹೆಜ್ಜೆ ಹೆಜ್ಜೆಗೂ ಹರಿದ ನೆತ್ತರ ಕೋಡಿ

ಮೈಸೂರು, ದಾವಣಗೆರೆಯಲ್ಲೂ ಫಸ್ಟ್​ ಶೋ ಸ್ಟಾರ್ಟ್​

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಜರಂಗಿ -2 ಸಿನಿಮಾದ ಶೋ ಆರಂಭವಾಗಿದೆ.   ಮೈಸೂರು, ಮಂಡ್ಯ, ದಾವಣಗೆರೆ ಸೇರೆ ಹಲವೆಡೆ 7 ಗಂಟೆಗೆ ಶೋ ಸ್ಟಾರ್ಟ್ ಆಗಿದೆ. ದಾವಣಗೆರೆಯಲ್ಲಿ ಶಿವಣ್ಣನ ಎಂಟ್ರಿ ಸೀನ್​ಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ. ಬೆಳಗ್ಗೆ ಕೇಕ್ ಕಟ್​ ಮಾಡಿ, ಪಟಾಕಿ ಸಿಡಿಸಿ, ಶಿವಣ್ಣನ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಟಿಕೆಟ್​ ಸಿಗದಿದ್ದರೂ ಚಿತ್ರಮಂದಿರಗಳಲ್ಲಿ ನಿಂತುಕೊಂಡೇ ಶಿವಣ್ಣನ ಅಭಿಮಾನಿಗಳು ಚಿತ್ರ ನೋಡುತ್ತಿದ್ದಾರೆ. ಮೊದಲ ಶೋ ಎಲ್ಲಾ ಕಡೆ ಹೌಸ್​ಫುಲ್​ ಆಗಿದೆ.

ತೆವಳುತ್ತಲೇ ಚಿತ್ರ ನೋಡಲು ಬಂದ ಫ್ಯಾನ್​

ಮೈಸೂರಿನಲ್ಲಿ ಭಜರಂಗಿ-2 ಸಿನಿಮಾ ತೆರೆಕಂಡಿದೆ. ಅಗ್ರಹಾರದ ಪದ್ಮಾ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಶುರುವಾಗಿದೆ. ಭಜರಂಗಿ - 2 ಫಸ್ಟ್​ ಡೇ ಫಸ್ಟ್​ ಶೋ ನೋಡಲು ವಿಶೇಷ ಚೇತನ ವ್ಯಕ್ತಿ ತೆವಳುತ್ತಲೇ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ಶಿವಣ್ಣನ ಅಭಿಮಾನಿಯಾಗಿರುವ ಈ ವ್ಯಕ್ತಿ ಶಿವಣ್ಣ ಅವರ ಎಲ್ಲ ಸಿನಿಮಾಗಳನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿದ್ದಾರೆ. ಈ ಬಾರಿಯೂ ಅದರಂತೆ ತೆವಳುತ್ತಲೇ ಸಿನಿಮಾ ನೋಡಲು ಬಂದಿದ್ದಾರೆ. ಮಂಡ್ಯದಲ್ಲೂ ಮೊದಲ ಶೋ ಆರಂಭವಾಗಿದ್ದು, ಸಖತ್​ ರೆಸ್ಪಾನ್ಸ್​ ಸಿಕ್ಕಿದೆ.

ಇದನ್ನು ಓದಿ :Sandalwoodನ ಯಾವ ಸ್ಟಾರ್​ ನಟನಿಗೆ Instagramನಲ್ಲಿ ಹೆಚ್ಚು ಹಿಂಬಾಲಕರಿದ್ದಾರೆ ಗೊತ್ತಾ..?

ಭಜರಂಗಿ - 2 ಫಸ್ಟ್​ ಹಾಫ್​ ಹೇಗಿದೆ?

ಹರ್ಷ ನಿರ್ದೇಶನ ಮಾಡಿರುವ ಭಜರಂಗಿ-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಈ ಹಿಂದೆ ಭಜರಂಗಿ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಎನ್ನಿಸಿಕೊಂಡಿತ್ತು. ಇದೀಗ ಭಜರಂಗಿ-2 ಸಿನಿಮಾ  ತೆರೆಕಂಡಿದೆ. ಸಿನಿಮಾದಲ್ಲಿ ಶಿವಣ್ಣನ ಎಂಟ್ರಿ ಕಂಡು ಎಲ್ಲರೂ ದಂಗಾಗಿ ಹೋಗಿದ್ದಾರೆ. ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಶಿವಣ್ಣನ ಎಂಟ್ರಿಯನ್ನು ಭಜರಂಗಿ-2 ಸಿನಿಮಾದಲ್ಲಿ ನೋಡಬಹುದು. ಸಿನಿಮಾ ಆರಂಭದ ದೃಶ್ಯದಿಂದಲೂ ಜನರಿಗೆ ಕಿಕ್​​ ನೀಡುತ್ತಿದೆ. ಫಸ್ಟ್​ ಹಾಫ್​ ನೋಡಿದ ಅಭಿಮಾನಿಗಳು ಸಿನಿಮಾ ಸೂಪರ್​, ಡೂಪರ್​ ಹಿಟ್​ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ವಯಸ್ಸಿನಲ್ಲೂ ಶಿವಣ್ಣ ಡ್ಯಾನ್ಸ್​, ಫೈಟ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಜರಂಗಿ - 2 ಸಿನಿಮಾದ ಫಸ್ಟ್​ ಹಾಫ್​ ಬೊಂಬಾಟ್​ ಆಗಿದೆ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.
Published by:Vasudeva M
First published: