'ಭೈರವ ಗೀತಾ'ದಲ್ಲಿ ಡಾಲಿ ಮಾಸ್‍ಲುಕ್ : ಚಿತ್ರೀಕರಣದ ಸೆಟ್​ನಿಂದ ಹೊರಬಿತ್ತು ಈ ಫೋಟೋ!

news18
Updated:June 26, 2018, 5:32 PM IST
'ಭೈರವ ಗೀತಾ'ದಲ್ಲಿ ಡಾಲಿ ಮಾಸ್‍ಲುಕ್ : ಚಿತ್ರೀಕರಣದ ಸೆಟ್​ನಿಂದ ಹೊರಬಿತ್ತು ಈ ಫೋಟೋ!
news18
Updated: June 26, 2018, 5:32 PM IST
ನ್ಯೂಸ್​ 18 ಕನ್ನಡ 

'ಭೈರವ ಗೀತಾ'... ಖದರು, ಪೊಗರು ಎಲ್ಲ ತುಂಬಿಕೊಂಡಿರೋ ಶೀರ್ಷಿಕೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಕಮಾಲ್ ಮಾಡಲು ಸಜ್ಜಾಗಿರೋ ವಿಷಯ ಎಲ್ಲರಿಗೂ ತಿಳಿದಿದೆ. ಸಿನಿಮಾದ ಚಿತ್ರೀಕರಣಕ್ಕೆಂದೇ ಬ್ಯಾಗ್​ ತುಂಬಿಕೊಂಡು ಕೆಲ ದಿನಗಳ ಹಿಂದೆಯೇ ಆಂಧ್ರದ ಫ್ಲೈಟ್ ಹತ್ತಿದ್ದರು ಡಾಲಿ. ಸದ್ಯ ನೇರವಾಗಿ 'ಭೈರವ ಗೀತಾ' ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ  ಲ್ಯಾಂಡ್ ಆಗಿದ್ದಾರೆ.

ರಾಮಗೋಪಾಲ್​ ವರ್ಮಾ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸತತ ಒಂದು ವಾರದಿಂದ ಆಂಧ್ರ ಪ್ರದೇಶದ ಪುಲಿವೆಂದುಲ ಗ್ರಾಮದಲ್ಲಿ ನಡೆಯುತ್ತಿದೆ. ಇಲ್ಲಿನ ಕೆಲವೊಂದಷ್ಟು ಫೋಟೋಗಳು ಇದೀಗ ಹೊರಬಂದಿದ್ದು, ಡಾಲಿ ಲುಕ್ಕು ಹಾಗೂ ಪಾತ್ರದ ಬಗ್ಗೆ ಇನ್ನು ಕುತೂಹಲ ಹೆಚ್ಚಿಸಿದೆ.  ಸರಳವಾಗಿ ಚೆಕ್ಸ್ ಶರ್ಟು, ಬೆಲ್ ಬಾಟಮ್ ಪ್ಯಾಂಟ್ ಧರಿಸಿರೋ ಧನಂಜಯ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದು, ರಗಡ್ ಪಾತ್ರವನ್ನ ಈ ಚಿತ್ರದಲ್ಲಿ ನಿರ್ವಹಿಸಲಿದ್ದಾರೆ.

ಈ ಸಿನಿಮಾದ ಫಸ್ಟ್​ಲುಕ್​ ಫೋಟೋ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ....

https://kannada.news18.com/news/telugu-movie-bhairava-geetha-photo-shoot-53569.html

ರಾಮ್ ಗೋಪಾಲ್ ವರ್ಮಾ ಅವರ ಶಿಷ್ಯ ಸಿದ್ಧಾರ್ಥ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೇ ಮೊದಲ ಭಾರಿಗೆ ಇವರು ನಿರ್ದೇಶಕರ ಟೋಪಿ ತೊಟ್ಟಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಫಸ್ಟ್ ಲುಕ್ ನೋಡಿ ಫುಲ್ ಫಿದಾ ಆಗಿದ್ದ ಡಾಲಿ ಅಭಿಮಾನಿಗಳು, ಚಿತ್ರೀಕರಣದ ಸೆಟ್​ನಿಂದ ಹೊರ ಬಿದ್ದಿರುವ ಸ್ಟಿಲ್ಸ್ ನೋಡಿ ಮತ್ತಷ್ಟು ಕಾತುರರಾಗಿದ್ದಾರೆ.

 
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...