• Home
  • »
  • News
  • »
  • entertainment
  • »
  • ನೂತನ ತಂತ್ರಜ್ಞಾನದೊಂದಿಗೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಣ್ಣಾವ್ರ ಭಾಗ್ಯವಂತರು ಸಿನಿಮಾ ರಿಲೀಸ್

ನೂತನ ತಂತ್ರಜ್ಞಾನದೊಂದಿಗೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಣ್ಣಾವ್ರ ಭಾಗ್ಯವಂತರು ಸಿನಿಮಾ ರಿಲೀಸ್

Bhagyavantharu

Bhagyavantharu

ಭಾಗ್ಯವಂತರು ಸಿನಿಮಾವನ್ನ ಫೆಬ್ರವರಿ ಮೊದಲ ವಾರದಲ್ಲಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಸಾಹಸ ಮಾಡಲಾಗುತ್ತಿದೆ.

  • Share this:

ಓಲ್ ಈಸ್ ಗೋಲ್ಡ್ ಎಂದು ಹೇಳುತ್ತಾರೆ ಅಲ್ವಾ, ಹಾಗೆ ಅಣ್ಣಾವ್ರ ಹಳೆಯ ಸಿನಿಮಾಗಳು ಯಾವಾಗಲೂ ಗೋಲ್ಡ್. ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್ ಸಿನಿಮಾಗಳನ್ನ ಥಿಯೇಟರ್​ನಲ್ಲಿ ನೋಡುವ ಅವಕಾಶ ಈಗಿನ ಜನರೇಷನ್​ನ ಎಷ್ಟೋ ಚಿತ್ರಪ್ರೇಮಿಗಳಿಗೆ ಸಿಕ್ಕಿಲ್ಲ. ಕನ್ನಡದ ಸಾರ್ವಭೌಮನ ಚಿತ್ರಗಳಿಗೆ ಸಿಗುತ್ತಿದ್ದ ಕ್ರೇಜು, ಅವರ ಸಿನಿಮಾಗಳು ಬಂದಾಗ ರೇಸ್ ಕೋರ್ಸ್​​ನಲ್ಲಿ ಟಿಕೆಟ್ ಕೊಡುತ್ತಿದ್ದದ್ದನ್ನ ಎಷ್ಟೋ ಸಿನಿ ಪ್ರೇಮಿಗಳು ಕಿವಿಯಲ್ಲಿ ಕೇಳಿನೇ ಥ್ರಿಲ್ ಆಗಿದ್ದಾರೆ. ಅಬ್ಬಾ ಅಂತದ್ದೊಂದು ಕಾಲಘಟ್ಟದಲ್ಲಿ ಇದ್ದೋರೆ ಗ್ರೇಟು ಅಂದುಕೊಂಡಿರುತ್ತಾರೆ. ಅಂತಹ ಸಿನಿ ಪ್ರೇಮಿಗಳನ್ನ ಖುಷಿ ಪಡಿಸೋಕೆ, ಅಣ್ಣಾವ್ರ ಸಿನಿಮಾಗಳನ್ನ ಬೆಳ್ಳಿ ತೆರೆ ಮೇಲೆ ನೋಡಿ ಆನಂದಿಸೋಕೆ ಆಗಾಗ ಅವಕಾಶಗಳನ್ನು ಕಲ್ಪಿಸುವ ಕೆಲಸಗಳನ್ನ ಆಗಾಗ ನಿರ್ಮಾಪಕ ಕಂ ವಿತರಕ ಮುನಿರಾಜು ಎಂಬುವವರು ಮಾಡುತ್ತಾ ಇರುತ್ತಾರೆ.


ಅದರಂತೆ ನಟ ಸಾರ್ವಭೌಮ, ಕನ್ನಡದ ಕಣ್ಮಣಿ, ಡಾ.ರಾಜ್ ಕುಮಾರ್ ನಟನೆಯ ನಾನೊಬ್ಬ ಕಳ್ಳ, ಆಪರೇಷನ್ ಡೈಮಂಡ್ ರಾಕೆಟ್, ರಾಜ ನನ್ನ ರಾಜ, ದಾರಿ ತಪ್ಪಿದ ಮಗ, ಚಿತ್ರಗಳನ್ನ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಮುನಿರಾಜು ಈಗಾಗಲೇ ರಿಲೀಸ್ ಮಾಡಿದ್ದಾರೆ. ಯಶಸ್ಸನ್ನ ಸಹ ಸಾಧಿಸಿದ್ದಾರೆ.


ಹಿಮಾಲಯದಲ್ಲಿ ಚಾರಣ ಮಾಡುತ್ತಾ ಹೊಸ ವರ್ಷಕ್ಕೆ ಕಿಕ್​ ಸ್ಟಾರ್ಟ್​ ಕೊಟ್ಟ ನಟಿ ಶ್ರುತಿ..!


ಈಗ ಅದರ ಮುಂದುವರೆದ ಭಾಗವಾಗಿ ಡಾ.ರಾಜ್ ಕುಮಾರ್ ನಟನೆಯ ಕ್ಲಾಸಿಕಲ್ ಹಿಟ್ ಸಿನಿಮಾ ಎಂದೇ ಕರೆಸಿಕೊಳ್ಳುವ, ಬಂಧ ಅನುಬಂಧದ ಮಹತ್ವ ಸಾರುವ ಭಾಗ್ಯವಂತರು ಸಿನಿಮಾವನ್ನ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಲು ಪ್ರಯತ್ನ ನಡೆಯುತ್ತಿದೆ. 7.1 ಡಿಐ ಅನ್ನು ಅಳವಡಿಸಿ ಪ್ರೇಕ್ಷಕರ ಎದುರು ತರಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆದಿವೆ.


ಹೌದು, ಭಾಗ್ಯವಂತರು ಸಿನಿಮಾವನ್ನ ಫೆಬ್ರವರಿ ಮೊದಲ ವಾರದಲ್ಲಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಸಾಹಸ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ನರ್ತಕಿ ಚಿತ್ರಮಂದಿರ ಪ್ರಮುಖ ಆಕರ್ಷಣೆಯಾಗಿರಲಿದೆ. ಅಂದಹಾಗೆ ಭಾಗ್ಯವಂತರು ಸಿನಿಮಾ 1977 ರ ಮಾರ್ಚ್ 16 ರಂದು ತೆರೆಗೆ ಬಂದಿತ್ತು. ಕರ್ನಾಟಕದ ಕುಳ್ಳ ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು ಹಾಗೆ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ ಭಾರ್ಗವ ಹೊತ್ತಿದ್ದರು.


Happy Birthday Deepika Padukone: 35ನೇ ವಸಂತಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ...!


ಇನ್ನು ಇದು ತಮಿಳಿನ ಧೀರ್ಘ ಸುಮಂಗಲಿ ಎಂಬ ಚಿತ್ರದ ರಿಮೇಕ್ ಸಿನಿಮಾ. ಡಾ.ರಾಜ್ ಕುಮಾರ್ ಮಾಡಿದ್ದ ಕೆಲವೇ ಕೆಲವು ರಿಮೇಕ್ ಸಿನಿಮಾಗಳಲ್ಲಿ ಇದು ಒಂದಾಗಿತ್ತು. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಅದಕ್ಕಿಂತ ಒಂದು ಕೈ ಹೆಚ್ಚೇ ಅನ್ನುವಂತೆ ಮೂಡಿಬಂದಿತ್ತು. ಹಾಗೆ ಆ ಕಾಲಕ್ಕೆ ಸಿಲ್ವರ್ ಜ್ಯೂಬಿಲಿ ಹಿಟ್ ಎನಿಸಿಕೊಂಡಿತ್ತು.


ಈಗ ಇಂತಹ ಈ ಸಿನಿಮಾ ನವ ನಾವಿನ್ಯದ ಟಚ್ ನೊಂದಿಗೆ ಫೆಬ್ರವರಿ ಎರಡನೇ ವಾರದಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಕೊರೋನಾ ಕಾರಣದಿಂದ ಸದ್ಯ ಯಾವುದೇ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುತ್ತಿಲ್ಲ. ಇಂತಹ ಸಂಧರದಲ್ಲಿ ಡಾ.ರಾಜ್ ಸಿನಿಮಾ ನೋಡೋದೆ ಒಂದು ಸಂಭ್ರಮ.

Published by:Vinay Bhat
First published: