ಸಲ್ಲು ಜತೆ ರೊಮ್ಯಾನ್ಸ್​ ಮಾಡಿ ಬಿ-ಟೌನ್​ನಿಂದ ಮಾಯವಾಗಿದ್ದ ನಟಿ: ಸೇಡು ತೀರಿಸಿಕೊಳ್ಳಲಿದ್ದಾನಾ ಮಗ?

news18
Updated:August 21, 2018, 3:53 PM IST
ಸಲ್ಲು ಜತೆ ರೊಮ್ಯಾನ್ಸ್​ ಮಾಡಿ ಬಿ-ಟೌನ್​ನಿಂದ ಮಾಯವಾಗಿದ್ದ ನಟಿ: ಸೇಡು ತೀರಿಸಿಕೊಳ್ಳಲಿದ್ದಾನಾ ಮಗ?
news18
Updated: August 21, 2018, 3:53 PM IST
ನ್ಯೂಸ್​ 18 ಕನ್ನಡ 

ಆ ನಟಿ ಅಭಿನಯಿಸಿದ್ದು ಕೆಲವೇ ಕೆಲವು ಸಿನಿಮಾ ಆದರೂ ಅಭಿನಯಿಸಿದ್ದ ಮೊದಲನೇ ಸಿನಿಮಾನೇ ಆ ಕಾಲಕ್ಕೆ ಸೂಪರ್ ಹಿಟ್​.  ಆ ಕಾಲಕ್ಕೆ ಸಲ್ಮಾನ್​ ಜತೆ ರೊಮ್ಯಾನ್ಸ್​ ಮಾಡಿದ್ದ ನಟಿ. ಇದ್ದಕ್ಕಿದ್ದಂತೆಯೇ ಬಾಲಿವುಡ್​ನಿಂದ ಮಾಯವಾಗಿದ್ದರು. ಈಗ ಆ ನಟಿಯ ಮಗ ಸೇಡು ತೀರಿಸಿಕೊಳ್ಳಲೆಂದೇ ಬಿ-ಟೌನ್​ ಬಾಗಿಲು ತಟ್ಟುತ್ತಿದ್ದಾರೆ. ಯಾರು  ಆ ತಾಯಿ-ಮಗ ಅಂತ ತಿಳಿಯೋಕೆ ಈ ವರದಿ ಓದಿ...

1989ರಲ್ಲಿ ತೆರೆಕಂಡು ಸೂಪರ್ ಹಿಟ್​ ಆಗಿ ಸಲ್ಮಾನ್​ ಖಾನ್​ ಅಭಿನಯದ ಸಿನಿಮಾ 'ಮೈನೆ ಪ್ಯಾರ್​ ಕಿಯಾ'. ಹೌದು ಈ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದ ಭಾಗ್ಯಶ್ರೀ ಮೊದಲ ಸಿನಿಮಾದಲ್ಲಿನ ಅಭಿನಯಕ್ಕೆ ಫಿಲ್ಮ್​ಫೇರ್​ ಪ್ರಶಸ್ತಿ ಪಡೆದುಕೊಂಡಿದ್ದರು. ಆದರೆ ಸಲ್ಲು ಜತೆ ತೆರೆ ಮೇಲೆ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿತ್ತು.

ಹೀಗೆ ಸಾಲು ಸಾಲು ಅವಕಾಶಗಳು ಭಾಗ್ಯಶ್ರೀ ಅವರನ್ನು ಅರಸಿ ಬರಲಾರಂಭಿಸಿದ್ದವು. ಹೀಗಿರುವಾಗಲೇ ಭಾಗ್ಯ ಶ್ರೀ ವಿವಾಹವಾಗಿ ಬಿ-ಟೌನ್​ಗೆ ಗುಡ್​ಬೈ ಹೇಳಿದ್ದರು. ಆದರೆ ಈಗ ಈ ಚೆಲುವೆಯ ಮಗ ಬಿ-ಟೌನ್​ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹೌದು ಭಾಗ್ಯಶ್ರೀ ಅವರ ಮಗ ಅಭಿಮನ್ಯು ಅವರ ಅಭಿನಯದ 'ಮರ್ದ್​ ಕೋ ದರ್ದ್​ ನಹೀ ಹೋತಾ' ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದ್ದು, ಭಾಗ್ಯಶ್ರೀ ಅದನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಜತೆಗೆ ಇದನ್ನು ನೋಡಿ ಪ್ರೋತ್ಸಾಹಿಸುವಂತೆ ಟ್ವೀಟಿಗರನ್ನು ಕೋರಿದ್ದಾರೆ.

 ಸಿನಿಮಾದ ಟ್ರೇಲರ್​ನಲ್ಲಿ ಅಭಿಮನ್ಯು ತಲೆ ಹಾಗೂ ಬಾಯಿಯಿಂದ ರಕ್ತ ಸುರಿಸಿಕೊಂಡು ಫೈಟ್​ ಮಾಡುವಂತೆ ಕಾಣಿಸುತ್ತಾರೆ.ವಾಸನ್​ ಬಾಲಾ ನಿರ್ದೇಶನದ ಈ ಸಿನಿಮಾದಲ್ಲಿ ಅಭಿಮನ್ಯುಗೆ ಜೋಡಿಯಾಗಿ ರಾಧಿಕಾ ಮದಾನ್​ ಅಭಿನಯಿಸಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...