Priyanka Chopra: ಪತ್ನಿಗೋಸ್ಕರ ಆರ್ಡರ್ ಕೊಟ್ಟು ಕಾರ್ ಮಾಡಿಸಿದ್ದಾರೆ ನಿಕ್ ಜೋನಸ್, ಹೇಗಿದೆ ನೋಡಿ ಪಿಗ್ಗಿ ಹೊಸಾ ಸವಾರಿ

Priyanka Chopra Jonas: ಇನ್ನು ಇತ್ತೀಚೆಗಷ್ಟೇ ನಿಮ್ಮ ರಕ್ತ ಸಿಕ್ತ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಪ್ರಿಯಾಂಕಾ ಚೋಪ್ರಾ ಶಾಕ್ ನೀಡಿದ್ದರು. ತಮ್ಮ ಗಾಯದ ಮುಖದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಾಗ ಅಭಿಮಾನಿಗಳು ಒಂದು ಕ್ಷಣ ಹೆದರಿದ್ದು ಸತ್ಯ.

ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ

  • Share this:
ಪ್ರಿಯಾಂಕಾ ಚೋಪ್ರಾ (Priyanka Chopra) ಸಿಟಾಡೆಲ್ ಸೆಟ್‌ನಲ್ಲಿ ಮೋಜಿನ ಸಮಯವನ್ನು ಕಳೆಯುತ್ತಿದ್ದಾರೆ. ಅವರು ಸೆಟ್ನಿಂದ ಆಗಾಗ ಫೋಟೋಗಳನ್ನು (Photo) ಶೇರ್ ಮಾಡಿಕೊಂಡು, ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿರುತ್ತಾರೆ. ಮೊನ್ನೆಯಷ್ಟೇ ಕೆಲಸದಲ್ಲಿ ಕಷ್ಟದ ಬಗ್ಗೆ ಮಾತನಾಡಿದ್ದ ಅವರು, ಇದೀಗ ಫುಲ್ ಜಾಲಿ ಮೂಡ್ನಲ್ಲಿದ್ದಾರೆ. ಇದೀಗ ಅವರ ಮೊತ್ತೊಂದು ಫೋಟೋ ವೈರಲ್ (Viral)  ಆಗಿದ್ದು, ಒಂದು ಸುಂದರವಾದ ಕೂಲ್ ಗಾಡಿಯಲ್ಲಿ ಅವರು ಕುಳಿತಿದ್ದು, ಅದರಲ್ಲಿ ಮಿಸೆಸ್ ಜೋನಸ್ ಎಂದು ಬರೆದಿದೆ.

ಅಷ್ಟೇ ಅಲ್ಲ ಈ ಫೋಟೋ ಹಂಚಿಕೊಂಡಿರುವುದರ ಜೊತೆ ಪತಿ ನಿಕ್ ಜೋನಸ್ ಗೆ ಈ ರೈಡ್​ಗೆ ಥ್ಯಾಂಕ್ಯೂ ಎಂದಿದ್ದಾರೆ. ಹೌದು, ಈಗ ಇದೊಂದು ಅದ್ಬುತ ಸವಾರಿ ????... ಧನ್ಯವಾದಗಳು, ನಿಕ್ ಜೋನಾಸ್. ನನಗೆ ಯಾವಾಗಲೂ ಕೂಲ್ ಆಗಿರಲು ಸಹಾಯ ಮಾಡುತ್ತಿದೆ. ಎಂದಿದ್ದಾರೆ. ಅಲ್ಲದೇ, ಬೆಸ್ಟ್ ಹಸ್ಬೆಂಡ್ ಎವರ್ ಎಂದು ಸಹ ಕ್ಯಾಪ್ಷನ್ ನೀಡಿದ್ದಾರೆ.
View this post on Instagram


A post shared by Priyanka (@priyankachopra)


ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ

ಅಭಿಮಾನಿಗಳು ಪ್ರಿಯಾಂಕಾ ಚೋಪ್ರಾ ಮತ್ತು ಅವರ ಸವಾರಿಯ ಈ ಪೋಸ್ಟ್ ನೋಡಿ ಇಷ್ಟಪಟ್ಟಿದ್ದು, ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಮತ್ತು ಬೆಂಕಿಯ
ಎಮೋಜಿಗಳಿಂದ ತುಂಬಿಸಿದ್ದಾರೆ.

ಇನ್ನು ಇತ್ತೀಚೆಗಷ್ಟೇ ನಿಮ್ಮ ರಕ್ತ ಸಿಕ್ತ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಪ್ರಿಯಾಂಕಾ ಚೋಪ್ರಾ ಶಾಕ್ ನೀಡಿದ್ದರು. ತಮ್ಮ ಗಾಯದ ಮುಖದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಾಗ ಅಭಿಮಾನಿಗಳು ಒಂದು ಕ್ಷಣ ಹೆದರಿದ್ದು ಸತ್ಯ.

ಅವರು ಪ್ರಸ್ತುತ ತಮ್ಮ ಚೊಚ್ಚಲ ವೆಬ್ ಸಿರೀಸ್ ‘ಸಿಟಾಡೆಲ್’ ನ ಚಿತ್ರೀಕರಣದಲ್ಲಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಅಭಿಮಾನಿಗಳಿಗೆ ಶೀರ್ಷಿಕೆಯಲ್ಲಿ ‘ನೀವು ಸಹ ನನ್ನಂತೆಯೇ ತುಂಬಾನೇ ಕಠಿಣವಾದ ದಿನವನ್ನು ಹೊಂದಿರುವಿರಾ’ ಎಂದು ಬರೆದಿದ್ದನ್ನು ನೋಡಿ ನಿಜಕ್ಕೂ ಅಭಿಮಾನಿಗಳಿಗೆ ಶಾಕ್ ಆಗಿದೆ.

ಈ ನಟಿಯ ಪೋಸ್ಟ್ ಮತ್ತು ಶೀರ್ಷಿಕೆ ನೋಡಿ ಅವರ ಕೆಲವು ಅಭಿಮಾನಿಗಳು ನಟಿಯನ್ನು ಚಿತ್ರೀಕರಣದ ಸೆಟ್ ನಲ್ಲಿ ನಿಜವಾಗಿಯೂ ಗಾಯವಾಗಿದೆ ಎಂದು ನಂಬಿದ್ದಾರೆ. ಆದರೆ ಕೆಲವರು ಅವರು ಮೇಕಪ್ ನೊಂದಿಗೆ ಪೋಸ್ ನೀಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್​ನಲ್ಲಿ ಸುಂದರಿ ಕೃತಿ ಶೆಟ್ಟಿ ಪೋಸ್, ಐಫೆಲ್​ ಟವರ್​ ಮುಂದೆ ಮಿರಿಮಿರಿ ಮಿಂಚಿದ ಕನ್ನಡತಿ!

ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ನಟಿ ಪ್ರಿಯಾಂಕಾ ಅವರು "ನೀವು ಕೆಲಸದಲ್ಲಿ ಕಠಿಣ ದಿನವನ್ನು ಹೊಂದಿದ್ದೀರಾ” ಎಂದು ಕೇಳಿ ಅನೇಕ ಹ್ಯಾಶ್ ಟ್ಯಾಗ್ ಗಳನ್ನು ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಪ್ರಿಯಾಂಕಾ ಅವರು ಕಪ್ಪು ಟಾಪ್ ಮತ್ತು ನೀಲಿ ಐಷಾಡೋದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಅವರ ಮೂಗಿನ ಕೆಳಗೆ ಮತ್ತು ಅವರ ತುಟಿಗಳು ಮತ್ತು ಗಲ್ಲದ ಮೇಲೆ ಕೆಲವು ರಕ್ತದ ಗುರುತುಗಳನ್ನು ನಾವು ಫೋಟೋದಲ್ಲಿ ಕಾಣಬಹುದು.

ಮೊನ್ನೆಯಷ್ಟೇ ಅಭಿಮಾನಿಗಳಿಗೆ ಹೆದರಿಸಿದ್ದ ಪಿಂಕಿ

ಇದನ್ನು ನೋಡಿದ ಅಭಿಮಾನಿಯೊಬ್ಬರು ಪ್ರಿಯಾಂಕಾ ಅವರಿಗೆ "ಏನಾಯಿತು, ನೀವು ಚೆನ್ನಾಗಿದ್ದೀರಾ ತಾನೇ" ಎಂದು ವಿಚಾರಿಸಿದರು. ಇನ್ನೊಬ್ಬ ಅಭಿಮಾನಿ "ಏನಾಯಿತು" ಎಂದು ಕೇಳಿದರು. ಆತಂಕಗೊಂಡ ಅಭಿಮಾನಿಯೊಬ್ಬರು "ನಿಮ್ಮ ಬಗ್ಗೆ ಸ್ವಲ್ಪ ಕಾಳಜಿ ವಹಿಸಿರಿ.. ಪ್ರತಿ ದಿನವೂ ಒಂದು ಹೊಸ ಅನುಭವ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಸತ್ಯವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ಅಭಿಮಾನಿಯೊಬ್ಬರು "ಒಂದು ಸೆಕೆಂಡು ನಾನು ನಿಮಗೆ ನೋವಾಗಿದೆ ಎಂದು ಭಾವಿಸಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಅರಸನಕೋಟೆ ಒಡತಿಯಾಗುತ್ತಾಳಾ ಪಾರು? ಮುಂದೇನಿದೆ ಟ್ವಿಸ್ಟ್​?

ಜನವರಿಯಲ್ಲಿ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರನ್ನು ಸ್ವಾಗತಿಸಿದ ನಂತರ ಪ್ರಿಯಾಂಕಾ ಇತ್ತೀಚೆಗೆ ಈ ವೆಬ್ ಸಿರೀಸ್ ನ ಚಿತ್ರೀಕರಣವನ್ನು ಪುನರಾರಂಭಿಸಿದರು. ಅದಕ್ಕೂ ಮುಂಚೆ ಅವರು ಕಳೆದ ಡಿಸೆಂಬರ್ ನಲ್ಲಿ ತಮ್ಮ ಲಂಡನ್ ಪ್ರವಾಸ ಮುಗಿಸಿದ್ದರು ಹಾಗೂ ಆ ಸಂದರ್ಭದಲ್ಲೂ ಅವರು ತಮ್ಮ ಕೆಲ ಗಾಯವಾದಂತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
Published by:Sandhya M
First published: