'ಬೆಂಕಿಯ ಬಲೆ'ಯಲ್ಲಿ ಪ್ರೀತಿಯ ಕೊಲೆ..!

ಗ್ರಾಮೀಣ ಪರಿಸರದಲ್ಲಿ ನಡೆಯುವ ಹಳ್ಳಿ ರಾಜಕೀಯದ ಕಥಾಹಂದರವನ್ನು ಹೊಂದಿದ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶವಿದೆ. ಕ್ಯಾನ್ಸರ್ ತಗುಲಿಕೊಂಡ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ವಿದ್ಯಾವಂತ ಯುವತಿಯಾಗಿ ನಟಿ ಪ್ರೀತಿ ಯಶು ಅಭಿನಯಿಸಿದ್ದಾರೆ.

ಬೆಂಕಿಯ ಬಲೆ

ಬೆಂಕಿಯ ಬಲೆ

  • Share this:
ದೊರೆ-ಭಗವಾನ್  ನಿರ್ದೇಶನಲ್ಲಿ ಮೂಡಿಬಂದಿದ್ದ ಚಿತ್ರ 'ಬೆಂಕಿಯ ಬಲೆ' ಇಂದಿಗೂ  ಚಿತ್ರರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಇದೀಗ ಅದೇ ಹೆಸರಿನಲ್ಲಿ ಮೈಸೂರಿನ ಶಿವಾಜಿ ಹೊಸ ಕನ್ನಡ ಸಿನಿಮಾವೊಂದನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಬೆಂಕಿಯ ಬಲೆ, ಪ್ರೀತಿಯ ಕೊಲೆ ಎಂಬ ಟ್ಯಾಗ್ಲೈನ್ ಇರುವ ಈ ಚಿತ್ರ 5 ಹಾಡುಗಳು ಹಾಗೂ 3 ಸಾಹಸ ದೃಷ್ಯಗಳನ್ನು ಒಳಗೊಂಡ ಸಾಂಸಾರಿಕ ಕಥೆಯನ್ನೊಳಗೊಂಡಿದೆಯಂತೆ. ಆಘಾತ, ಪರ್ಚಂಡಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಶಿವಾಜಿ ಈ ಚಿತ್ರದ ಮೂಲಕ ನಿರ್ದೇಶಕ ಆಗಿದ್ದಾರೆ. ಜೊತೆಗೆ ಪ್ರಮುಖ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ  ಬಹುತೇಕ ಚಿತ್ರೀಕರಣ ಮೈಸೂರು, ಬನ್ನೂರು ಸುತ್ತಮುತ್ತ ನಡೆದಿದೆ. ಗ್ರಾಮೀಣ ಪರಿಸರದಲ್ಲಿ ನಡೆಯುವ ಹಳ್ಳಿ ರಾಜಕೀಯದ ಕಥಾಹಂದರವನ್ನು ಹೊಂದಿದ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶವಿದೆ. ಕ್ಯಾನ್ಸರ್ ತಗುಲಿಕೊಂಡ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ವಿದ್ಯಾವಂತ ಯುವತಿಯಾಗಿ ನಟಿ ಪ್ರೀತಿ ಯಶು ಅಭಿನಯಿಸಿದ್ದಾರೆ. ಉಳಿದಂತೆ ನಿರಂಜನ್, ದೇಶಪ್ರೇಮಿ, ಸುಮ, ಪವಿತ್ರ ಮುಂತಾದ ಕಲಾವಿದರು ಈ ಚಿತ್ರದ ಇತರೆ ಪಾತ್ರಗಳಲ್ಲಿದ್ದಾರೆ.

ಬೆಂಕಿಯ ಬಲೆ ಚಿತ್ರತಂಡ


'ಬೆಂಕಿಯ ಬಲೆ' ಏಳು ತಿಂಗಳ ಲಾಕ್ಡೌನ್ ನಂತರ ಕಲಾವಿದರ ಸಂಘದಲ್ಲಿ ಪ್ರೀಮಿಯರ್  ಪ್ರದರ್ಶನಗೊಂಡಿರುವ ಮೊದಲ ಚಿತ್ರವಾಗಿದೆ. ಇನ್ನು ಈ ಚಿತ್ರದಿಂದ ಬರುವ ಹಣವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡುವ ಯೋಜನೆ ಸಹ ಚಿತ್ರತಂಡದ್ದಾಗಿದೆ.

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್
Published by:zahir
First published: