BIFFES 2022: ಚಿತ್ರೋತ್ಸವಕ್ಕೆ ಹೋಗೋಕೆ ಆಗ್ತಿಲ್ವಾ, ಡೋಂಟ್ ವರಿ ಮನೆಯಿಂದಲೇ ಅವಾರ್ಡ್ ಸಿನಿಮಾ ನೋಡಿ!

ನೀವು ಹೊರಗಡೆ ಬಂದು ಈ ಸಿನಿಮಾ ಹಬ್ಬದಲ್ಲಿ ಭಾಗಿಯಾಗಲು ಆಗ್ತಿಲ್ಲ ಅಂತ ಬೇಸರ ಪಟ್ಟುಕೊಳ್ಳಬೇಡಿ. ನೀವು ಆರಾಮಾಗಿ ಮನೆ(Home)ಯಲ್ಲಿ ಕೂತು ಸಿನಿಮಾ ಫೆಸ್ಟಿವಲ್​ನ ಎಲ್ಲ ಸಿನಿಮಾಗಳನ್ನು ನೋಡಬಹುದು.

ಬೆಂಗಳೂರು ಫಿಲ್ಮ್​ ಫೆಸ್ಟಿವಲ್​

ಬೆಂಗಳೂರು ಫಿಲ್ಮ್​ ಫೆಸ್ಟಿವಲ್​

  • Share this:
ಬೆಂಗಳೂರಿನ (Bengaluru)ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (13th Bengaluru International Film Festival) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್​ 3ರ ಸಂಜೆ ಚಾಲನೆ ನೀಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆನ್‌ಲೈನ್‌(Online)ನಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಕೊರೋನಾ(Corona) ಸವಾಲುಗಳನ್ನು ನಿಭಾಯಿಸುವ ಪ್ರಯತ್ನದಲ್ಲಿ, ಸಂಘಟಕರು ಮಾರ್ಚ್ 3-10 ರಿಂದ ಹೈಬ್ರಿಡ್(Hybrid) ಮಾದರಿಯಲ್ಲಿ ಉತ್ಸವವನ್ನು ಆಯೋಜಿಸಿದ್ದಾರೆ. ನೀವು ಹೊರಗಡೆ ಬಂದು ಈ ಸಿನಿಮಾ ಹಬ್ಬದಲ್ಲಿ ಭಾಗಿಯಾಗಲು ಆಗ್ತಿಲ್ಲ ಅಂತ ಬೇಸರ ಪಟ್ಟುಕೊಳ್ಳಬೇಡಿ. ನೀವು ಆರಾಮಾಗಿ ಮನೆ(Home)ಯಲ್ಲಿ ಕೂತು ಸಿನಿಮಾ ಫೆಸ್ಟಿವಲ್​ನ ಎಲ್ಲ ಸಿನಿಮಾಗಳನ್ನು ನೋಡಬಹುದು. ಅದಕ್ಕೆ ಬೇಕಿರುವ ಎಲ್ಲ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಬೆಂಗಳೂರಿನ 3 ಜಾಗಗಳಲ್ಲಿ ಈ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್​ಫೆಸ್ಟಿವಲ್​ ಅನ್ನು ಆಯೋಜಿಸಲಾಗಿದೆ.

ಮನೆಯಲ್ಲೇ ಕೂತು ನೋಡಿ ಅವಾರ್ಡ್​ ಫಿಲ್ಮ್ಸ್​!​

ಇನ್ನೂ ನೀವು ಅಲ್ಲಿ ಹೋಗಿ ಸಿನಿಮಾ ನೋಡಲು ಆಗುತ್ತಿಲ್ಲ ಅಂದರೆ, ಮನೆಯಲ್ಲೇ ನೋಡಬಹುದು ಹೇಗೆ ಅಂತೀರಾ? ಮುಂದೆ ನೋಡಿ ಹಾಗಾದರೆ ಈ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ? ಆನ್‌ಲೈನ್ ಚಲನಚಿತ್ರ-ಪ್ರದರ್ಶನವು ಒಂದು ಹೊಸ ವಿದ್ಯಮಾನವಾಗಿದೆ. ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್, ಐಎಫ್‌ಎಫ್‌ಆರ್ (ರೊಟರ್‌ಡ್ಯಾಮ್), ಟೊರೊಂಟೊ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ಗಳು ಮತ್ತು ಇತರ ಕೆಲವು ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಮಾತ್ರ ಈ ಹಿಂದೆ ಆನ್‌ಲೈನ್​ನಲ್ಲೂ ಪ್ರದರ್ಶನಗೊಂಡಿದ್ದವು. ಇದೀಗ ಈ ಮಾದರಿ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್​​ಗೂ ಕಾಲಿಟ್ಟಿದೆ.

ಆನ್​ಲೈನ್​ನಲ್ಲಿ ಸಿನಿಮಾ ನೋಡಲು ಹೀಗ್​ ಮಾಡಿ!

ಕೊರೋನಾ ಎಲ್ಲರನ್ನೂ ಸಾಕಷ್ಟು ಕುಗ್ಗಿಸಿಬಿಟ್ಟಿದೆ. ಹೊರಗಡೆ ಬರಲು ಇನ್ನೂ ಕೆಲವರು ಹೆದರುತ್ತಿದ್ದಾರೆ. ಎಲ್ಲಿ ಹೊರಗಡೆ ಬಂದರೆ ಕೊರೋನಾ ಸೋಂಕು ನಮಗೆ ಅಂಟುತ್ತೆ ಅನ್ನೋ ಆತಂಕದಲ್ಲಿದ್ದಾರೆ. ಅಂಥವರಿಗಾಗಿಯೆ ಈ ಆನ್​​ಲೈನ್​ ವ್ಯವಸ್ಥೆಯನ್ನು ಮಾಡಲಾಗಿದೆ. ನೀವು ಭಾರತದ ಯಾವ ಮೂಲೆಯಲ್ಲಿದ್ದರು ಅಲ್ಲಿಂದಲೇ ಆನ್​ಲೈನ್​ಲ್ಲಿ ಸಿನಿಮಾಗಳನ್ನು ನೋಡಬಹುದು. ಮಾರ್ಚ್ 4 ರಿಂದ (ಶುಕ್ರವಾರ) ಕನಿಷ್ಠ 60-70 ಚಲನಚಿತ್ರಗಳನ್ನು ಪ್ರದರ್ಶಿಸಲು ಬೈಫ್ಸ್‌ನಲ್ಲಿ ಸಂಘಟಕರು ಯೋಜಿಸುತ್ತಿದ್ದಾರೆ. ಆನ್‌ಲೈನ್ ಸ್ಟ್ರೀಮಿಂಗ್‌ಗಾಗಿ ನೋಂದಾಯಿಸಿದವರು online.biffes.org ಗೆ ಲಾಗ್ ಇನ್ ಮಾಡುವ ಮೂಲಕ ದಿನಕ್ಕೆ 10 ಚಲನಚಿತ್ರಗಳನ್ನು ನೋಡಬಹುದು.

ಇದನ್ನೂ ಓದಿ: ಈ ಸಲ ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕಿಂಗ್, ಬುಕಿಂಗ್ ಮಾಡೋದು ಹೇಗೆ?

ನಿಮಗಿಷ್ಟವಾದ ಸಿನಿಮಾವನ್ನು ಹಲವು ಬಾರಿ ನೋಡಬಹುದು!

ಪ್ರದರ್ಶನಗಳು ಬೆಳಿಗ್ಗೆ 9 ರಿಂದ ಪ್ರಾರಂಭವಾಗುತ್ತವೆ. ಚಲನಚಿತ್ರಗಳು 24 ಗಂಟೆಗಳ ಕಾಲ ಲಭ್ಯವಿರುತ್ತವೆ. ಸಮಯದ ಸ್ಲಾಟ್‌ನಲ್ಲಿ, ಯಾವುದೇ ಚಲನಚಿತ್ರವನ್ನು ಹಲವಾರು ಬಾರಿ ನೀವು ವೀಕ್ಷಿಸಬಹುದು. ಮತ್ತೆ ಮರುದಿನ ಹೊಸ 10 ಚಲನಚಿತ್ರಗಳನ್ನು ಅಪ್​ಲೋಡ್ ಮಾಡಲಾಗುತ್ತೆ. Biffes ತಂಡವು ಪ್ರತಿ ಚಿತ್ರದ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಯಾವುದೇ ಚಲನಚಿತ್ರಕ್ಕೆ ಭಾರಿ ಬೇಡಿಕೆಯಿದ್ದರೆ, ಅದು 36 ಅಥವಾ 48 ಗಂಟೆಗಳ ಕಾಲ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ: ಹೊಸ `ಟ್ರೇಡ್ ಮಾರ್ಕ್’ ಕ್ರಿಯೇಟ್ ಮಾಡಿದ `ಜೇಮ್ಸ್’! ಕಿಂಗ್ ಇಸ್ ಆಲ್ವೇಸ್ ಎ ಕಿಂಗ್ ಮಾಮ!

ಹಲವಾರು OTT ಪ್ಲಾಟ್‌ಫಾರ್ಮ್‌ಗಳ ಕಾರ್ಯನಿರ್ವಹಣೆಯಂತೆಯೇ, ಒಂದು ನೋಂದಾಯಿತ ಖಾತೆಯು ನಾಲ್ಕು ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜನರು ತಮ್ಮ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸಬಹುದು.

ಟಿವಿಯಲ್ಲೂ ಸಿನಿಮಾ ನೋಡಿ ಆನಂದಿಸಿ!

ಭಾರತದಲ್ಲಿನ ಯಾವುದೇ ಚಲನಚಿತ್ರೋತ್ಸವಕ್ಕೆ ಮೊದಲ ಬಾರಿಗೆ, ಫೈರ್ ಟಿವಿ ಸ್ಟಿಕ್ ಮೂಲಕ ಟಿವಿಯಲ್ಲಿ ಬೈಫ್ಸ್ ಚಲನಚಿತ್ರಗಳನ್ನು ವೀಕ್ಷಿಸಬಹುದು. ಫೈರ್ ಟಿವಿಯ ಆಪ್ ಸ್ಟೋರ್‌ನಲ್ಲಿ ಬೈಫ್ಸ್ ಅಪ್ಲಿಕೇಶನ್ ಡೌನ್​ಲೌಡ್​ ಮಾಡಿ ಲಾಗಿನ್​ ಆಗಬೇಕು. ನಂತರ ನಿಮಿಗಿಷ್ಟವಾದ ಸಿನಿಮಾಗಳನ್ನು ನೀವು ನೋಡಿ ಆನಂದಿಸಿಬಹುದು.
Published by:Vasudeva M
First published: