BIFFES: ಈ ಬಾರಿಯ ಬೆಂಗಳೂರು ಚಿತ್ರೋತ್ಸವ ಆನ್​ಲೈನ್​ನಲ್ಲೂ ಲಭ್ಯ, ಸಿನಿಮಾ ನೋಡೋಕೆ ಹೀಗೆ ಮಾಡಿ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3ರಂದು ಆರಂಭವಾಗಲಿದೆ. ಜಿಕೆವಿಕೆ ಆವರಣದಲ್ಲಿ ಸಿನಿಮಾ ಹಬ್ಬವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.

13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

  • Share this:
ಬೆಂಗಳೂರು: 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (film festival) ದಿನಗಣನೆ ಆರಂಭವಾಗಿದೆ. ಮಾರ್ಚ್ 3ರಂದು ಜಿಕೆವಿಕೆ ಆವರಣದಲ್ಲಿ ಸಿನಿಮಾ ಹಬ್ಬವನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೆ ಮಾರ್ಚ್ 10ಕ್ಕೆ ಫಿಲ್ಮ್ ಫೆಸ್ಟಿವಲ್ ಸಮಾರೋಪ ಸಮಾರಂಭ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ನೆರವೇರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಸರಳವಾಗಿ ನಡೆಯಲಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರ್ಧರಿಸಿದೆ. ಎರಡು ವರ್ಷಗಳ ಸಿನಿಮಾಗಳು (Films) ಪ್ರದರ್ಶನವಾಗಲಿದ್ದು, ಎರಡು ವರ್ಷದ ಪ್ರಶಸ್ತಿಗಳನ್ನು(Awards)  ಪ್ರದಾನ ಮಾಡಲಿದ್ದಾರೆ. ವಿಶ್ವ ಮಾನ್ಯತೆ ಪಡೆದಿರುವ ಚಲನಚಿತ್ರೋತ್ಸವದಲ್ಲಿ 55 ರಾಷ್ಟಗಳ ಸುಮಾರು 200 ಸಿನಿಮಾಗಳು ಪ್ರದರ್ಶನವಾಗಲಿವೆ. ಸಿನಿಮೋತ್ಸವದಲ್ಲಿ ಚಿತ್ರಮಂದಿರ ಹಾಗೂ ಆನ್​​​ಲೈನ್​ನಲ್ಲೂ ಸಿನಿಮಾ ವೀಕ್ಷಿಸುವ ಅವಕಾಶ ಇರಲಿದೆ.

13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಿದ್ಧತೆ

13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿದೆ. ಮಾರ್ಚ್ 3ಕ್ಕೆ ಸಿನಿಮಾ ಹಬ್ಬಕ್ಕೆ ಚಾಲನೆ ಸಿಗಲಿದ್ದು, ಮಾರ್ಚ್ 10ಕ್ಕೆ ಫಿಲ್ಮ್ ಫೆಸ್ಟಿವಲ್ ಸಮಾರೋಪ ಸಮಾರಂಭ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ನೆರವೇರಲಿದೆ. ಈ ಹಿಂದೆ ಬೆಂಗಳೂರು  ಅಂತಾರಾಷ್ಟ್ರೀಯ ಚಲನಚಿತ್ರೋತ್ಸದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ವಿಧಾನಸೌಧದಲ್ಲೆ ನಡೆಯುತ್ತಿತ್ತು. ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದೆ. ಜೊತೆಗೆ ಈ ಬಾರಿಯ ಚಲನಚಿತ್ರೋತ್ಸವಕ್ಕೆ ಡಿಜಿಟಲ್​ ಟಚ್ ನೀಡಲಾಗಿದೆ.

ಆನ್​ಲೈನ್​ನಲ್ಲೂ ನೋಡಬಹುದು ಸಿನಿಮಾ

ಪ್ರತಿ ವರ್ಷ ಸಿನಿಮೋತ್ಸವದಲ್ಲಿ ಥಿಯೇಟರ್​ಗಳ ಮೂಲಕವೇ ಜನರು ಸಿನಿಮಾ ನೋಡ್ತಿದ್ರು ಆದ್ರೆ ಈ ಬಾರಿ ಸಿನಿಮೋತ್ಸವದಲ್ಲಿ ಆನ್​ಲೈನ್ಸ್ ನಲ್ಲೂ ಸಿನಿಮಾ ವೀಕ್ಷಣೆ ಮಾಡಬಹುದು. ಇದು ವಿಶೇಷ ಹಾಗೂ ವಿನೂತನ ಪ್ರಯತ್ನವಾಗಿದೆ. 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವ ಮಾನ್ಯತೆ  ಪಡೆದ 55 ರಾಷ್ಟ್ರಗಳ​​ ಸುಮಾರು 200 ಸಿನಿಮಾಗಳು ಪ್ರದರ್ಶನವಾಗಲಿವೆ.

ಇದನ್ನೂ ಓದಿ: Ramya: ಮತ್ತೆ ಶುರುವಾಗುತ್ತಾ 'ರಮ್ಯ' ಚೈತ್ರಕಾಲ? "ಸಿನಿಮಾ ಮಾಡೇ ಪದ್ಮಾವತಿ" ಅಂತಿದ್ದಾರೆ ಫ್ಯಾನ್ಸ್

ಜೊತೆಗೆ ಎರಡು ವರ್ಷದ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಿನಿಮಾಗಳು ರಾಜಾಜಿನಗರ ಓರಾಯನ್ ಮಾಲ್ ನಲ್ಲಿ 11 ಪರದೆಗಳು ಹಾಗೂ ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದಲ್ಲಿ ಪ್ರದರ್ಶನವಾಗಲಿವೆ.

13ನೇ ಚಲನಚಿತ್ರೋತ್ಸವದ ವಿಶೇಷತೆಗಳು

ಸ್ವಾತಂತ್ರ್ಯ ಸಿಕ್ಕಿ75 ವರ್ಷವಾದ ಹಿನ್ನೆಲೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಿತ್ರಗಳು ಪ್ರದರ್ಶನವಾಗಲಿವೆ. ಜೊತೆಗೆ 70ರ ದಶಕದಲ್ಲಿ ಬೆಳ್ಳಿತೆರೆಯನ್ನು ಬೆಳಗಿಸಿದ ನಟಿ ಭಾರತಿ ವಿಷ್ಣುವರ್ಧನ್ ಸಿನಿಮಾ ಜರ್ನಿಯ ಪುನರಾವಲೋಕನ ಆಗಲಿದೆ. ಇದಲ್ಲದೆ ತುಳು ಚಿತ್ರರಂಗ 50 ವರ್ಷ ತುಂಬಿದ್ದು, ತುಳು ಚಿತ್ರ ರಂಗದ  ಐವತ್ತು ವರ್ಷದ ಒಂದು ನೋಟ, ತುಳು ಚಿತ್ರಗಳ ಪ್ರದರ್ಶನ ಹಾಗೂ ವಿಚಾರ ಸಂಕೀರಣಗಳ ಮೂಲಕ ತುಳುಚಿತ್ರರಂಗದ ಅವಲೋಕನಕ್ಕೆ ವೇದಿಕೆ ಸಿದ್ದಪಡಿಸಲಾಗಿದೆ.

ಅಪ್ಪುಗೆ ನಮನ ಕಾರ್ಯಕ್ರಮ

ಕೊರೊನಾ ಕಾಲದಿಂದ ಇಲ್ಲಿಯವರೆಗೆ  ಅಗಲಿದ ಚಿತ್ರರಂಗದ ಕಲಾವಿದರಿಗೆ ಶ್ರದ್ಧಾಂಜಲಿ ಇರಲಿದೆ. ಇತ್ತೀಚಿಗೆ ನಮ್ಮನ್ನು ಅಗಲಿದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಸಾಧನೆಯ ಸ್ಮರಣೆ ಕಾರ್ಯಕ್ರಮ ಆಯೋಜನೆಗೊಂಡಿದೆ.

ಇದನ್ನೂ ಓದಿ: KGF 2 vs Aamir Khan: ಕೆಜಿಎಫ್ 2 ಎದುರು ಬರಲು ಆಮಿರ್ ಹಿಂಜರಿಕೆ? ಲಾಲ್ ಸಿಂಗ್ ಛಡ್ಡಾ ಬಿಡುಗಡೆ ಮುಂದೂಡಿಕೆ

ಫಿಲ್ಮ್​ ಫೆಸ್ಟಿವಲ್​ ಪಾಸ್​ಗಳ ವಿತರಣೆ 

ಕಾರ್ಯಕ್ರಮಕ್ಕೆ ಈ ಸಲ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟರನ್ನು ಅಹ್ವಾನ ಮಾಡಿದ್ದು, ಸ್ಟಾರ್​ಗಳ ಪಟ್ಟಿಯನ್ನು ಶೀಘ್ರದಲ್ಲೇ ಫಿಲಂ ಫೆಸ್ಟಿವಲ್ ವೆಬ್ ಸೈಟ್ ನಲ್ಲಿ ತಿಳಿಸಲಾಗುತ್ತದೆ. ಇನ್ನು ಫಿಲ್ಮ್ ಫೆಸ್ಟಿವಲ್ ನಲ್ಲಿ ಸಿನಿಮಾ ನೋಡಲು ಪಾಸ್ ಗಳ ವ್ಯವಸ್ಥೆ ಇದ್ದು, ಸಾರ್ವಜನಿಕರಿಗೆ 800 ರೂ. ನಿಗದಿ ಮಾಡಲಾಗಿದೆ. ಇನ್ನು ಚಿತ್ರೋದ್ಯಮದ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ 400 ರೂ ದರ ನಿಗದಿ ಮಾಡಲಾಗಿದೆ. ಚಿತ್ರೋತ್ಸವದ ಪಾಸ್ ಗಳು ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸುಚಿತ್ರಾ ಸಿನಿಮಾ ಅಕಾಡೆಮಿಯಲ್ಲಿ ಸಿಗಲಿವೆ.

ವರದಿ: ಸತೀಶ್ ಎಂ.ಬಿ
Published by:Pavana HS
First published: