• Home
 • »
 • News
 • »
 • entertainment
 • »
 • Ravichandran: ಕ್ರೇಜಿಸ್ಟಾರ್ ರವಿಚಂದ್ರನ್​ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

Ravichandran: ಕ್ರೇಜಿಸ್ಟಾರ್ ರವಿಚಂದ್ರನ್​ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

ವಿ.ರವಿಚಂದ್ರನ್​

ವಿ.ರವಿಚಂದ್ರನ್​

ಬೆಂಗಳೂರು ನಗರ ವಿಶ್ವವಿದ್ಯಾಲಯ(Bengaluru University)ದ ಪ್ರಥಮ ಘಟಿಕೋತ್ಸವದಲ್ಲಿ‌ ಕ್ರೇಜಿಸ್ಟಾರ್ ವಿ. ರವಿಚಂದ್ರನ್(Crazy Star Ravichandran) ಅವರು ಸೇರಿ ಮೂವರಿಗೆ ಗೌರವ ಡಾಕ್ಟರೇಟ್(Doctorate) ಘೋಷಿಸಲಾಗಿದೆ.

 • Share this:

  ಬೆಂಗಳೂರು ನಗರ ವಿಶ್ವವಿದ್ಯಾಲಯ(Bengaluru University)ದ ಪ್ರಥಮ ಘಟಿಕೋತ್ಸವದಲ್ಲಿ‌ ಕ್ರೇಜಿಸ್ಟಾರ್ ವಿ. ರವಿಚಂದ್ರನ್(Crazy Star Ravichandran) ಅವರು ಸೇರಿ ಮೂವರಿಗೆ ಗೌರವ ಡಾಕ್ಟರೇಟ್(Doctorate) ಘೋಷಿಸಲಾಗಿದೆ. ಸಮಾಜ ಕ್ಷೇತ್ರದ ಅನುಪಮ ಸೇವೆಗಾಗಿ ರಂ.ಆರ್. ಜೈಶಂಕರ್(R.Jayashankar), ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ಸತ್ಯನಾರಾಯಣ(Dr. SathyaNaryana) ಹಾಗೂ ಚಲನಚಿತ್ರ ರಂಗದಲ್ಲಿನ ಸೇವೆ ಪರಿಗಣಿಸಿ ನಟ ರವಿಚಂದ್ರನ್ ಅವರಿಗೆ ಬೆಂಗಳೂರು ನಗರ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ಸ್ಯಾಂಡಲ್​ವುಡ್​(Sandalwood)ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಕೊಡುಗೆ ಅಪಾರ. ಯಾವುದೇ ವಿಭಾಗದಲ್ಲೂ ಕ್ರೇಜಿಸ್ಟಾರ್​ ಕೆಲಸ ಮಾಡಿದ್ದಾರೆ. ನಟನೆ, ನಿರ್ದೇಶನ, ಸಂಗೀ, ನಿರ್ಮಾಣ ಎಲ್ಲ ವಿಭಾಗದಲ್ಲೂ ರವಿಚಂದ್ರನ್​ ನಿಪುಣರು.


  ರಾಜ್ಯಪಾಲರ ಸಮ್ಮುಖದಲ್ಲಿ ಕಾರ್ಯಕ್ರಮ


  ಈ ಬಾರಿ ಒಟ್ಟು 77 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ. 41768 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಇದರಲ್ಲಿ 29,240 ಪದವಿ ಮತ್ತು 12,528 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಬೆಂಗಳೂರು ನಗರ ವಿವಿಯ ಮೊದಲ ವರ್ಷದ ಘಟಿಕೋತ್ಸವ ಏಪ್ರಿಲ್ 11 ರಂದು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಲಿದ್ದಾರೆ.


  ಮಾಹಿತಿ ನೀಡಿದ ಕುಲಪತಿ ಪ್ರೊ.ಲಿಂಗರಾಜ!

  ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ವಿವಿಯ ಕುಲಪತಿ ಪ್ರೊ‌.ಲಿಂಗರಾಜ‌ ಗಾಂಧಿ, ಆಡಳಿತ ಸುಧಾರಣೆ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ 2017- 18ರಲ್ಲಿ ತ್ರಿವಿಭಜನೆ ಮಾಡಲಾಯ್ತು. ನಗರ ವಿವಿಯ ಶೈಕ್ಷಣಿಕ ವರ್ಷವೂ 2018-19ರಿಂದ ಆರಂಭಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಪದವಿ ನೀಡಲಾಗುತ್ತಿದೆ.


  ಇದನ್ನೂ ಓದಿ: ಎಲ್ಲಾ ಭಾಷೆಯಲ್ಲೂ ಸೌಂಡ್ ಮಾಡ್ತಿರೋ ಕೆಜಿಎಫ್​ 2 ಇಂಗ್ಲಿಷಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ ಯಶ್ ಹೀಗಂದ್ರು ನೋಡಿ


  ವಿಭಜನೆಗೊಂಡ ಬಳಿಕ ಮೊದಲ ಘಟಿಕೋತ್ಸವ!

  ವಿಭಜನೆಗೊಂಡ ನಂತರ ಮೊದಲ ಘಟಿಕೋತ್ಸವ ಆಯೋಜಿಸಲಾಗಿದೆ. ಏಪ್ರಿಲ್ 11ರಂದು ಸೆಂಟ್ರಲ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿರುವ ಬೆಂಗಳೂರು ನಗರ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪದ್ಮವಿಭೂಷಣ ಡಾ.ಕೆ.ಕಸ್ತೂರಿರಂಗನ್ ಹಾಗೂ ಸಚಿವ ಸಿ.ಎನ್. ಅಶ್ವತ್ಥ್‌ ನಾರಾಯಣ ಭಾಗಿಯಾಗಲಿದ್ದಾರೆ.


  ಇದನ್ನೂ ಓದಿ: ಕಥೆ-ಪುರಾಣ ಬಿಟ್ಟು ಸಿನಿಮಾ ಸ್ಪೆಷಾಲಿಟಿ ಬಗ್ಗೆ ಹೇಳ್ರಿ ಎಂದ ವ್ಯಕ್ತಿ! ರಾಕಿ ಭಾಯ್​ ಕೊಟ್ಟ ಖಡಕ್​ ಉತ್ತರ ಇದು..


  ಇನ್ನು ಬೆಂಗಳೂರು ನಗರ ವಿವಿ ಪ್ರಥಮ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಗೌರವ ಡಾಕ್ಟರೇಟ್‌ಗಳನ್ನು ನೀಡಲಾಗುತ್ತಿದೆ. ಸಮಾಜ ಸೇವಾ ಕ್ಷೇತ್ರದಲ್ಲಿ ಎಂ ಆರ್ ಜೈಶಂಕರ್, ಕನ್ನಡ ಚಿತ್ರೋದ್ಯಮಕ್ಕೆ ಕೊಡುಗೆ ನೀಡಿರುವ ನಟ ವಿ ರವಿಚಂದ್ರನ್, ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಡಾ.ಸತ್ಯನಾರಾಯಣ ಅವರಿಗೆ 'ಗೌಡಾ' ನೀಡಲಾಗ್ತಿದೆ. ಘಟಿಕೋತ್ಸವಕ್ಕೆ ಬರುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಇದ್ದು, ಖಾದಿ ವಸ್ತ್ರವನ್ನೇ ಧರಿಸಿಬರಬೇಕಿದೆ ಎಂದರು.

  Published by:ವಾಸುದೇವ್ ಎಂ
  First published: