• Home
  • »
  • News
  • »
  • entertainment
  • »
  • Saibal Bhattacharya: ಹೆಂಡತಿ ಮತ್ತು ಚಿಕ್ಕಮ್ಮನ ಕಿರುಕುಳ! ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಯತ್ನಿಸಿದ ಖ್ಯಾತ ನಟ

Saibal Bhattacharya: ಹೆಂಡತಿ ಮತ್ತು ಚಿಕ್ಕಮ್ಮನ ಕಿರುಕುಳ! ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಯತ್ನಿಸಿದ ಖ್ಯಾತ ನಟ

ನಟ ಸೈಬಲ್ ಭಟ್ಟಾಚಾರ್ಯ

ನಟ ಸೈಬಲ್ ಭಟ್ಟಾಚಾರ್ಯ

Saibal Bhattacharya: ನಟ ಸೈಬಲ್ ಭಟ್ಟಾಚಾರ್ಯ ಅವರು ಮನೆಯಲ್ಲಿ ನೇಣು ಬಿಗಿದುಕೊಳ್ಳುವ ಮೂಲಕ ಅತ್ಮಹತ್ಯೆಗೆ ಯತ್ನಿಸಿದ್ದಾರೆದ್ದಾರೆ. ತಕ್ಷಣ ಅವರನ್ನು ಚಿತ್ತರಂಜನ್ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

  • Share this:

    ಪಶ್ಚಿಮ ಬಂಗಾಳ (West Bengal) ಚಿತ್ರರಂಗದಲ್ಲಿ ಅತ್ಯಂತ ಅಘಾತದ ಘಟನೆಯೊಂದು ನಡೆದಿದೆ. ಸೈಬಲ್ ಭಟ್ಟಾಚಾರ್ಯ (Saibal Bhattacharya) ಅವರು ಬಂಗಾಳಿ ನಟರಾಗಿದ್ದು (Bengali Actor), ಅವರು ಕಸ್ಬಾದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.  ಕುಡಿದ ಮತ್ತಿನಲ್ಲಿದ್ದ ಸೈಬಲ್ ಭಟ್ಟಾಚಾರ್ಯ ಸೆಲ್ಫಿ ವಿಡಿಯೋ (Selfie Video) ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲ ದಿನಗಳಿಂದ ಪತ್ನಿ ಹಾಗೂ ಚಿಕ್ಕಮ್ಮನ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ (Suicide) ಮಾಡಿಕೊಳ್ಳಲು ಮುಂದಾಗುತ್ತಿದ್ದೇನೆ ಎಂದು ಹೇಳಿದ್ದಾರೆ.


    ನಟ ಸೈಬಲ್ ಭಟ್ಟಾಚಾರ್ಯ ಅವರು ಮನೆಯಲ್ಲಿ ನೇಣು ಬಿಗಿದುಕೊಳ್ಳುವ ಮೂಲಕ ಅತ್ಮಹತ್ಯೆಗೆ ಯತ್ನಿಸಿದ್ದಾರೆದ್ದಾರೆ. ತಕ್ಷಣ ಅವರನ್ನು ಚಿತ್ತರಂಜನ್ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದ ವೈದ್ಯರು ಚಿಕಿತ್ಸೆ ನೀಡುವ ಮೂಲಕ ಸೈಬಲ್ ಭಟ್ಟಾಚಾರ್ಯ ಅವರ ಆರೋಗ್ಯವನ್ನು ಗಮನಿಸುತ್ತಿದ್ದಾರೆ.


    ಇತ್ತೀಚೆಗೆ ಬಂಗಾಳಿ ನಟರಾದ ಪಲ್ಲವಿ ಡೇ, ಬಿದಿಶಾ ಡಿ ಮಜುಂದಾರ್ ಮತ್ತು ಮಾಡೆಲ್-ನಟಿ ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೆಲ ತಿಂಗಳ ನಂತರ ಶ್ರೀ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ಸಾಲು ಸಾಲು ಘಟನೆಗಳ ಬೆನ್ನಲ್ಲೇ ಸೈಬಲ್ ಭಟ್ಟಾಚಾರ್ಯ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.




    ಪಲ್ಲವಿ ಡೇ ಅವರು ಕೋಲ್ಕತ್ತಾದ ಗರ್ಫಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಪ್ರಕಾರ, 25 ವರ್ಷದ ಪಲ್ಲವಿ ಬಹುಮಹಡಿ ವಸತಿ ಕಟ್ಟಡದ 2 ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬೆಡ್ ಶೀಟ್ ಸಹಾಯದಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.


    ಸಿನಿಮಾ ರಂಗದವರ ವೈಯ್ಯಕ್ತಿಕ ಜೀವ ಹೂವಿನ ಹಾಸಿದೆ ಎಂದು ನೆನೆದುಕೊಂಡವರೇ ಜಾಸ್ತಿ. ಆದರೆ ಬಹುತೇಕರು ಕಷ್ಟದ ಜೀವನವನ್ನು ನಡೆಸುವವರು ಇದ್ದಾರೆ. ಕಳೆದು 2 ವರ್ಷಗಳಲ್ಲಿ ಭಾರತೀಯ ಸಿನಿಮಾ ರಂಗದ ತಾರೆಯರು ಆತ್ಮಹ್ಯತೆ ಮಾಡುವ ಮೂಲಕ ಸಾವನ್ನಪ್ಪುತ್ತಿದ್ದಾರೆ. ಇನ್ನು ಕೆಲವು ತಾರೆಯರು ಹೃದಯಘಾತದ ಮೂಲದ ಸಾವನ್ನಪ್ಪುತ್ತಿದ್ದಾರೆ.


    ಇದನ್ನೂ ಓದಿ: Vijay Deverakonda: ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾ ನೋಡುವುದಕ್ಕೂ ಮುನ್ನ ಈ ಚಿತ್ರಗಳನ್ನು ನೋಡಿ


    ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವನ್ನಪ್ಪಿದ್ದು, ಸಿನಿಮಾ ರಂಗವನ್ನೇ ತಲ್ಲಣಗೊಳಿಸಿತ್ತು. ಇದು ಅತ್ಮಹತ್ಯೆಯಲ್ಲ, ಕೊಲೆ ಎಂಬ ಆರೋಪವೂ ಕೇಳಿ ಬಂತು.  ಅಷ್ಟೇ ಏಕೆ ನಟ ಮಾಧಕ ವ್ಯಸನಿಯಾಗಿದ್ದು, ಈ ಕಾರಣದಿಂದಾಗಿ ಸಾವನ್ನಪ್ಪಿರಬಹುದು ಎಂಬ ಮಾತುಗಳು ಕೇಳಿ ಬಂದವು. ಆದರೆ ಸಿನಿ ತಾರೆಯರು ಕಷ್ಟ ಬಂದಾಗ ಅಥವಾ ತೊಂದರೆಗೆ ಸಿಲುಕಿದಾಗ ಆತ್ಮಹತ್ಯೆ ಮೂಲಕ ಬದುಕು ನಿಲ್ಲಿಸುವುದು ಎಲ್ಲರನ್ನೂ ಬೆಚ್ಚಿಬೀಳಿಸುತ್ತದೆ.


    ಸ್ಯಾಂಡಲ್​ವುಡ್​​ನ ಖ್ಯಾತನ ನಟ ಪುನೀತ್​ ರಾಜ್​ ಕುಮಾರ್​ ಹೃದಯಾಘಾತದಿಂದ  ನಿಧನರಾದರು. ಇವರ ಸಾವು ನೆನಪಿಸಿಕೊಳ್ಳಲು ಆಗದಷ್ಟು ಘೋರವಾಗಿತ್ತು. ಬಹುಸಂಖ್ಯಾ ಅಭಿಮಾನಿಗಳು ಪುನೀತ್​ ಅವರ ಸಾವಿನಿಂದ ದುಃಖಕ್ಕೀಡಾದರು. ಕೆಲವರಿಗಂತೂ ಈ ವಿಚಾರ ಅರಗಿಸಿಕೊಳ್ಳಲಾಗಷ್ಟು ನೋವುಂಟು ಮಾಡಿತ್ತು.


    ಇದನ್ನೂ ಓದಿ: Gattimela: ಧ್ರುವನ ಕಿಡ್ನಾಪ್​ ಮಾಡಿ ಮದುವೆಯಾಗ್ತಾಳಾ ಅದಿತಿ? ಅತ್ತಿಗೆ ಸಹಾಯ ಸಿಗುತ್ತಾ?


    ಸದಾ ಫಿಟ್​ನೆಟ್​, ಜಿಮ್​ ಹಾಗೂ ಆರೋಗ್ಯದ ಮೇಲೆ ಕಾಲಜಿ ವಹಿಸುತ್ತಿದ್ದ ಖ್ಯಾತ ನಟ ಅಪ್ಪು ಇದ್ದಕ್ಕಿದ್ದಂತೆಯೇ ಹೃದಯಾಘಾತವಾಗಿರುವುದು ಸ್ಯಾಂಡಲ್​ವುಡ್​ವುಡ್​ಗೆ ದೊಡ್ಡ ಸಿಡಿಲು ಬಡಿದಂತಾಯಿತು. ಇಂದಿಗೂ ಅಭಿಮಾನಿಗಳು ಅಪ್ಪು ಅವರನ್ನು ನೆನೆಸಿಕೊಳ್ಳುತ್ತಿದ್ದಾರೆ.


    ಪುನೀತ್​ ರಾಜ್​ ಕುಮಾರ್​ ಅವರು ಬಾಲ್ಯದಿಂದಲೇ ಸಿನಿಮಾಗಳಳ್ಲಿ ನಟಿಸಿಕೊಂಡು ಬಂದವರು. ತಂದೆಯ ಜೊತೆಗೆ ಬಾಲ್ಯದಿಂದ ಬಣ್ಣ ಬಳಿದು ತೆರೆ ಮೇಲೆ ಬಂದವರು. ಅಸಂಖ್ಯಾತ ಅಭಿಮಾನಿಗಳನ್ನು ಈ ನಟ ಹೊಂದಿದ್ದರು. ಅಷ್ಟೇ ಏಕೆ ವಿವಿಧ ಭಾಷಾ ನಟರು ಕೂಡ ಅಪ್ಪು ಸಾವಿಗೆ ಕಣ್ಣೀರು ಸುರಿಸಿದ್ದರು.

    Published by:Harshith AS
    First published: