Belli Kalungura: 30 ವರ್ಷಗಳ ನಂತರ ಮತ್ತೆ ಬರ್ತಿದೆ ಬೆಳ್ಳಿ ಕಾಲುಂಗುರ! ರಾಜ್ ಮೊಮ್ಮಗಳು ಹೀರೋಯಿನ್

30 ವರ್ಷಗಳ ನಂತರ ಮತ್ತೆ ಬೆಳ್ಳಿ ಕಾಲುಂಗುರ ಸಿನಿಮಾ ಬರುತ್ತಿದ್ದು 1992 ರಲ್ಲಿ ಕೆವಿ ರಾಜು ನಿರ್ದೇಶನದಲ್ಲಿ ಬಂದಿದ್ದ ಸೂಪರ್ ಹಿಟ್ ಚಿತ್ರ ಬೆಳ್ಳಿ ಕಾಲುಂಗುರ ಮತ್ತೊಮ್ಮೆ ಬರುತ್ತಿದೆ ಎನ್ನುವುದೇ ನಿನಿಪ್ರಿಯರಿಗೆ ಖುಷಿ ತಂದಿದೆ.

ಚಿತ್ರಕ್ಕೆ ಕ್ಲಾಪ್ ಮಾಡಿದ ಸಿದ್ದರಾಮಯ್ಯ

ಚಿತ್ರಕ್ಕೆ ಕ್ಲಾಪ್ ಮಾಡಿದ ಸಿದ್ದರಾಮಯ್ಯ

  • Share this:
1992ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಬೆಳ್ಳಿ ಕಾಲುಂಗರ (Belli Kalungura) ಇಂದಿಗೂ ಜನರ ಅಚ್ಚು ಮೆಚ್ಚಿನ ಸಿನಿಮಾಗಳಲ್ಲಿ (Cinema) ಒಂದು. ಮಾಲಾಶ್ರೀ ಅಭಿನಯದ ಈ ಸಿನಿಮಾ ಈಗ ಮತ್ತೊಮ್ಮೆ ಸುದ್ದಿಯಾಗಿದ್ದು ಇದೇ ಟೈಟಲ್​ನಲ್ಲಿ  (Title) ಹೊಸ ಸಿನಿಮಾ ಒಂದು ಸೆಟ್ಟೇರುತ್ತಿದೆ. ಕೆ.ವಿ ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಾಲಾಶ್ರೀ, ಸುನಿಲ್, ತಾರಾ, ಅವಿನಾಶ್, ದೊಡ್ಡಣ್ಣ, ಗಿರಿಜಾ ಲೋಕೇಶ್, ಸದಾಶಿವ ಬ್ರಹ್ಮಾವರ ಸೇರಿ ಹಲವು ಪ್ರಮುಖ ಕಲಾವಿದರು ನಟಿಸಿದ ಸಿನಿಮಾ ಕನ್ನಡಿಗರ ಮನದಲ್ಲಿ ಹಚ್ಚ ಹಸಿರಾಗಿದೆ. ಈಗ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

30 ವರ್ಷಗಳ ನಂತರ ಮತ್ತೆ ಬೆಳ್ಳಿ ಕಾಲುಂಗುರ ಸಿನಿಮಾ ಬರುತ್ತಿದ್ದು 1992 ರಲ್ಲಿ ಕೆವಿ ರಾಜು ನಿರ್ದೇಶನದಲ್ಲಿ ಬಂದಿದ್ದ ಸೂಪರ್ ಹಿಟ್ ಚಿತ್ರ ಬೆಳ್ಳಿ ಕಾಲುಂಗುರ ಮತ್ತೊಮ್ಮೆ ಬರುತ್ತಿದೆ ಎನ್ನುವುದೇ ನಿನಿಪ್ರಿಯರಿಗೆ ಖುಷಿ ತಂದಿದೆ.

30 ವರ್ಷಗಳ ನಂತರ ಸೆಟ್ಟೇರಿದ ಸಿನಿಮಾ

ಕನಸಿನ ರಾಣಿ ಮಾಲಾಶ್ರೀ, ಸುನಿಲ್ ಅಭಿನಯದ ಸಂಗೀತಮಯ ಸಿನಿಮಾ ಈಗ 30 ವರ್ಷಗಳ ನಂತರ ಮತ್ತೆ ಅದೇ ಟೈಟಲ್ ನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ. H. ವಾಸ್ ನಿರ್ದೇಶನದ ಧನ್ಯಾ ರಾಮ್ ಅಭಿನಯದ ಚಿತ್ರಕ್ಕೆ "ಬೆಳ್ಳಿ ಕಾಲುಂಗರ" ಟೈಟಲ್ ನೀಡಲಾಗಿದೆ.ಕಂಠೀರವ ಸ್ಟೂಡಿಯೋದಲ್ಲಿ ಅದ್ದೂರಿಯಾಗಿ ಬೆಳ್ಳಿ ಕಾಲುಂಗುರ ಸೆಟ್ಟೇರುತ್ತಿದ್ದು ಬೆಳ್ಳಿ ಕಾಲುಂಗುರ ಚಿತ್ರದ ಮುಹೂರ್ತಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ಳಿಕಾಲುಂಗರ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Bigg Boss OTT: ಎಷ್ಟು ಚೆನ್ನಾಗಿದ್ದಾಳಲ್ಲಾ ಹುಡುಗಿ? ಸಾನ್ಯಾ ಮೇಲೆ ರಾಕೇಶ್​ಗೆ ಕ್ರಶ್! ಮನೆಯೊಳಗೆ ಕುಚ್ ಕುಚ್

ಕ್ಯಾಮರಾ ಚಾಲನೆ ಮಾಡಿದ ರಾಘವೇಂದ್ರ ರಾಜ್ ಕುಮಾರ್ ಸಿನಿಮಾಗೆ ಶುಭ ಹಾರೈಸಿದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಬೆಳ್ಳಿಕಾಲುಂಗುರ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದಾರೆ.

ಸಾರಾ ಗೋವಿಂದು ಅವರು ಬೆಳ್ಳಿ ಕಾಲುಂಗುರ ಮುಹೂರ್ತಕ್ಕೆ ಬರಬೇಕು ಎಂದು ಒತ್ತಾಯ ಮಾಡಿದ್ದರು. 10:30 ರನಂತ್ರ ರಾಹುಕಾಲ ಇದೆ ಅದಷ್ಟು ಬೇಗ ಬನ್ನಿ ಅಂತ ನನಗೆ ಹೇಳಿದ್ದರು. ಈ ಸಿನಿಮಾ 30 ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾಗಿತ್ತು. ಈಗ ‌ಮತ್ತೆ ಈ ಸಿನಿಮಾ ಬರುತ್ತಿದೆ. ಚಿತ್ರದಲ್ಲಿ ಸಮರ್ಥ್ ಹಾಗೂ ಧನ್ಯಾ ಅಭಿನಯಿಸ್ತಿದ್ದಾರೆ. ಧನ್ಯಾ ರಾಜ್ ಕುಮಾರ್ ಮನೆತನದ ಕುಡಿ ರಾಜ್ ಕುಮಾರ್ ಮೊಮ್ಮಗಗಳು. ರಾಜ್ ಕುಮಾರ್ ಅವರ ರಕ್ತದಲ್ಲೇ ಕಲೆ ಇದೆ. ರಾಜ್ ಕುಮಾರ್ ಈ ದೇಶ ಕಂಡ ಅಪ್ರತಿಮ ನಟರು ಅವರ ಮೊಮ್ಮಗಳು ಈ ಸಿನಿಮಾದಲ್ಲಿ ನಟಿಸ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Kishore Kumar: ನಟನೆಯಲ್ಲಿ ಆಸಕ್ತಿ ಇರದಿದ್ದರೂ ಇವರ ಸಿನಿ ಜರ್ನಿ ಅದ್ಭುತ

ನಾನು ವಾಟಾಳ್ ನಾಗರಾಜ್ ಅವರ ಭಾಷಣ ಕೇಳಲು
ಟೌನ್ ಹಾಲ್ ಬಳಿಗೆ ಹೋಗುತ್ತಿದ್ದೆ. ವಾಟಳ್ ನಾಗರಾಜ್ ನನಗಿಂತ ದೊಡ್ಡವರು. ಆದರೆ ಅವರು ವಯಸ್ಸನು ಯಾರಿಗೂ ಹೇಳಲ್ಲ. ಪುನೀತ್ ರಾಜ್ ಕುಮಾರ್ ಅಪಾರ ಜನಪ್ರಿಯತೆ ಕಂಡಿದ್ದ ನಟ. ಇತ್ತೀಚಿನ ದಿನಗಳಲ್ಲಿ ಕಲಾವಿದನಾಗಿ ನಾಡಿನ ಜನರ ಹೆಚ್ಚಿನ ಪ್ರೀತಿ ಗಳಿಸಿದ ನಟ. ಸಾರಾ ಗೋವಿಂದು ನಾನು, ವಾಟಾಳ್ ನಾಗರಾಜ್ ಎಲ್ಲಾ ಒಂದೇ ಜಿಲ್ಲೆಯವರು ಎಂದಿದ್ದಾರೆ.
Published by:Divya D
First published: