ಅಕ್ಷಯ್ ಕುಮಾರ್ (Akshay Kumar) ಅಭಿನಯದ ಬಹುನಿರೀಕ್ಷಿತ ಸಿನಿಮಾ ಬೆಲ್ಬಾಟಮ್ (Bell Bottom)ಕಡೆಗೂ ರಿಲೀಸ್ ಆಗಿದೆ. ಕೊರೋನಾದಿಂದಾಗಿ (Covid-19) ದೀರ್ಘಕಾಲದವರೆಗೆ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಕೊರೋನಾ ಎರಡನೇ ಅಲೆ ನಂತರ ಚಿತ್ರಮಂದಿರಗಳು ಬಾಗಿಲು ತೆರೆದ ನಂತರ ರಿಲೀಸ್ ಆಗುತ್ತಿರುವ ಸಿನಿಮಾ ಇದಾಗಿದೆ. ಅಕ್ಷಯ್ ಅಭಿನಯದ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸಾಕಷ್ಟು ಮಂದಿ ಸಿನಿಮಾದ ವಿಮರ್ಶೆ ಮಾಡುತ್ತಿದ್ದಾರೆ. ಸಿನಿಮಾ ವಿಶ್ಲೇಷಕ ತರನ್ ಆದರ್ಶ್ (Taran Adarsh), ಟ್ವಿಂಕಲ್ ಖನ್ನಾ (Twinkle Khanna) ಹಾಗೂ ಪ್ರೇಕ್ಷಕರು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೊರೋನಾ ಕಾರಣದಿಂದಾಗಿ ಇನ್ನೂ ಸಹ ಕೆಲವೆಡೆ ಸಿನಿಮಾ ಪ್ರದರ್ಶ ಆರಂಭವಾಗಿಲ್ಲ. ಆದರೂ ರಿಸ್ಕ್ ತೆಗೆದುಕೊಂಡು ಅಕ್ಷಯ್ ಕುಮಾರ್ ತಮ್ಮ ಸಿನಿಮಾ ರಿಲೀಸ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಅವರಿಗೆ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಅನ್ಶುಲ್ ಮಲ್ಹೋತ್ರಾ ಪಾತ್ರದಲ್ಲಿ ನಟಿಸಿದರೆ, ಅವರ ಪತ್ನಿಯಾಗಿ ವಾಣಿ ಕಪೂರ್ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ತನ್ನ ತಾಯಿ (ಡಾಲಿ ಅಹ್ಲುವಾಲಿಯಾ) ಅವರನ್ನು ಇಂಪ್ರೆಸ್ ಮಾಡಲು ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಕ್ಲಿಯರ್ ಮಾಡುತ್ತಾರೆ. ಸಾಮಾನ್ಯ ಮನುಷ್ಯ ರಾ ಏಜೆಂಟ್ ಆಗುವ ಹಾಗೂ ಹೈಜಾಕ್ ಕೇಸ್ ಅನ್ನು ಭೇದಿಸುವ ಕಥೆ ಇದಾಗಿದೆ.
View this post on Instagram
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ಕೊಟ್ಟ ಬ್ಲ್ಯಾಕ್ ವಿಡೊ ಖ್ಯಾತಿಯ ನಟಿ ಸ್ಕಾರ್ಲೆಟ್ ಜೋಹಾನ್ಸನ್
ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತದೆ. ಅದಕ್ಕೆ ತಕ್ಕಂತೆ ಸಿನಿಮಾದ ಅಂತ್ಯ ಇಲ್ಲ. ಇನ್ನೂ ಏನಾದರೂ ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸುವಂತಿದೆ. ಈ ಸಿನಿಮಾದ ಕಥೆಯ ಆಯ್ಕೆ ನಿಜಕ್ಕೂ ಉತ್ತಮವಾಗಿದೆ. ಇಡೀ ಕಥೆಯನ್ನು ಅಕ್ಷಯ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಲಾರಾ ದತ್ತಾ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದಂತೆ ಇದೆ. ಹುಮಾ ಖುರೇಷಿ ಅವರು ಇರುವ ಪುಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದರೆ, ವಾಣಿ ಕಪೂರ್ ಸಹ ವೀಕ್ಷಕರಿಗೆ ಇಷ್ಟವಾಗುವಂತೆ ನಟಿಸಿದ್ದಾರೆ. ಒಟ್ಟಾರೆ ಈ ಸಿನಿಮಾ ಚಿತ್ರಮಂದಿರಕ್ಕೆ ಹೋಗಿ ನೋಡಬಹುದಾಗ ಚಿತ್ರವಾಗಿದೆ.
ಇದನ್ನೂ ಓದಿ: Shershaah: ಶೇರ್ಷಾ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ..!
ಈ ಸಿನಿಮಾ ನೋಡಿದ ನಂತರ ಟ್ವಿಂಕಲ್ ಖನ್ನಾ ಮಸ್ಟ್ ವಾಚ್ ಮೂವಿ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಜತೆಗೆ ಓಡಾಡುತ್ತಿರುವ ಚಿತ್ರ ಶೇರ್ ಮಾಡಿರುವ ನಟಿ, ಸಿನಿಮಾ ನೋಡಿದಾಗ ಪಾರ್ಕ್ನಲ್ಲಿ ಸುತ್ತಾಡಿದಂತೆ ಆಯಿತು ಎಂದು ಬರೆದಿದ್ದಾರೆ. ಸಿನಿಮಾ ವಿಶ್ಲೇಷಕ ತರನ್ ಆದರ್ಶ್ ಅವರು ಸಿನಿಮಾಗೆ 4 ಸ್ಟಾರ್ ಕೊಟ್ಟಿದ್ದು, ನೋಡಲೇಬೇಕಾದ ಚಿತ್ರ ಎಂದಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ