ಬಾಲಿವುಡ್​​ನತ್ತ ಛತ್ರಪತಿ ದಂಡಯಾತ್ರೆ!; ಪ್ರಭಾಸ್​ ಪಾತ್ರವನ್ನು ಯಾರು ಮಾಡುತ್ತಿದ್ದಾರೆ ಗೊತ್ತಾ?

Chatrapathi: ಟಾಲಿವುಡ್​ನಲ್ಲಿ ಒಂದು ಮಟ್ಟಕ್ಕೆ ಗುರುತಿಸಿಕೊಂಡಿರುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್​ ಛತ್ರಪತಿ ರಿಮೇಕ್ ಮೂಲಕ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ.

ಪ್ರಭಾಸ್

ಪ್ರಭಾಸ್

  • Share this:
ಛತ್ರಪತಿ ದಿ ಗ್ರೇಟ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಸಿನಿಮಾ. ಪ್ರಭಾಸ್ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಮ್ಯಾಚೋಮ್ಯಾನ್ ಪ್ರಭಾಸ್ ಗೆ ಈ ಸಿನಿಮಾದಿಂದ ಸ್ಟಾರ್ ಪಟ್ಟ ಸಿಕ್ಕಿತ್ತು. ಇಂತಹ ಈ ಸಿನಿಮಾ ಈಗ ಹಿಂದಿಯತ್ತ ಮುಖ ಮಾಡಿದೆ. ಬಾಲಿವುಡ್ ನಲ್ಲಿ ರಿಮೇಕ್ ಆಗಲಿದೆ.

ಟಾಲಿವುಡ್​ನಲ್ಲಿ ಒಂದು ಮಟ್ಟಕ್ಕೆ ಗುರುತಿಸಿಕೊಂಡಿರುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್​ ಛತ್ರಪತಿ ರಿಮೇಕ್ ಮೂಲಕ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ. ಪೆನ್ ಸ್ಟುಡಿಯೋಸ್ ಬ್ಯಾನರ್​ನಲ್ಲಿ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರವನ್ನ ಡಾ. ಜಯಂತಿಲಾಲ್ ಗಡ ನಿರ್ಮಾಣ ಮಾಡಲಿದ್ದಾರೆ. ವಿಶೇಷ ಏನೆಂದರೆ, ಬೆಲಂಕೊಂಡ ಶ್ರೀನಿವಾಸ ಅವರ ಮೊದಲ ಸಿನಿಮಾ ಅಲ್ಲುಡು ಸೀನು ಸಿನಿಮಾ ನಿರ್ದೇಶನ ಮಾಡಿದ್ದ ವಿವಿ ವಿನಾಯಕ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇವರಿಗೂ ಇದು ಮೊದಲ ಬಾಲಿವುಡ್ ಸಿನಿಮಾವಾಗಿದೆ.

ಮೂಲ ಛತ್ರಪತಿ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಪ್ರಭಾಸ್, ಶ್ರೀಸರಣ್ ಸೇರಿ ಸಾಕಷ್ಟು ಮಂದಿ ಸ್ಟಾರ್ ಕಲಾವಿದರು ನಟಿಸಿದ್ದರು. ಇದೀಗ ಅದೇ ಚಿತ್ರವನ್ನು ವಿವಿ ವಿನಾಯಕ್ ಬಾಲಿವುಡ್​ನಲ್ಲಿ ನಿರ್ದೇಶನ ಮಾಡಲಿದ್ದು, ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಶೀಘ್ರದಲ್ಲಿ ಸಿನಿಮಾ ಕುರಿತ ಹೆಚ್ಚಿನ ಮಾಹಿತಿಯನ್ನು ತಂಡ ಹೇಳಿಕೊಳ್ಳಲಿದೆ.

ರಿಮೇಕ್ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರಾಗಿರುವ ನಿರ್ದೇಶಕ ವಿನಾಯಕ, ತಮಿಳಿನ ಕತ್ತಿ ಚಿತ್ರವನ್ನು ತೆಲುಗಿನಲ್ಲಿ ಕೈದಿ ನಂ.150 ಸಿನಿಮಾ ಮಾಡುವ ಮೂಲಕ ಮೆಗಾಸ್ಟಾರ್ ಚಿರಂಜೀವಿಯವರನ್ನು ಮರಳಿ ಚಿತ್ರರಂಗಕ್ಕೆ ಕರೆತಂದಿದ್ದರು. ಇದೀಗ ಛತ್ರಪತಿ ಸಿನಿಮಾ ಮೂಲಕ ಬಾಲಿವುಡ್​ಗೆ  ಹೊರಟಿದ್ದಾರೆ.
Published by:Harshith AS
First published: