VIDEO: ‘ಬೆಲ್ ಬಾಟಂ’ ಚಿತ್ರದ ಆಡಿಯೋ ಟ್ರೈಲರ್ ರಿಲೀಸ್; ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ ರಿಷಬ್!

ಆಡಿಯೋ ಟ್ರೈಲರ್​ನಲ್ಲಿ ಬರುವ ಒಂದಷ್ಟು ಡೈಲಾಗ್​ಗಳು ತುಂಬಾನೇ ಆಕರ್ಷಿತವಾಗಿದ್ದು, ಪ್ರೇಕ್ಷಕರಿಂದ ಅಂಕ ಗಿಟ್ಟಿಸಿಕೊಳ್ಳುತ್ತದೆ.

Rajesh Duggumane | news18
Updated:February 8, 2019, 10:11 PM IST
VIDEO: ‘ಬೆಲ್ ಬಾಟಂ’ ಚಿತ್ರದ ಆಡಿಯೋ ಟ್ರೈಲರ್ ರಿಲೀಸ್; ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ ರಿಷಬ್!
ಬೆಲ್​ ಬಾಟಂ ಚಿತ್ರದ ಪೋಸ್ಟರ್​
Rajesh Duggumane | news18
Updated: February 8, 2019, 10:11 PM IST
ರಿಷಬ್​ ಶೆಟ್ಟಿ ನಿರ್ದೇಶನದ ‘ಬೆಲ್​ ಬಾಟಂ’ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ. ಈಗಾಗಲೇ ಸಾಕಷ್ಟು ವಿಚಾರಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಈಗ ಆಡಿಯೋ ಟ್ರೈಲರ್​ ಬಿಡುಗಡೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ.

ಈಗಾಗಲೇ ಟ್ರೈಲರ್​ ಮೂಲಕ ‘ಬೆಲ್​ ಬಾಟಂ’ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳಿದ್ದ ಸಿನಿಮಾ ತಂಡ, ಆಡಿಯೋ ಟ್ರೈಲರ್​ನಲ್ಲಿ ಇನ್ನೂ ಕೆಲ ವಿಚಾರಗಳನ್ನು ಹರಿಬಿಟ್ಟಿದೆ. ಆಡಿಯೋ ಟ್ರೈಲರ್​ನಲ್ಲಿ ಬರುವ ಒಂದಷ್ಟು ಡೈಲಾಗ್​ಗಳು ತುಂಬಾನೇ ಆಕರ್ಷಿತವಾಗಿದ್ದು, ಪ್ರೇಕ್ಷಕರಿಂದ ಅಂಕ ಗಿಟ್ಟಿಸಿಕೊಳ್ಳುತ್ತದೆ.

‘ಹಾಲಿನ ಪಾತ್ರೆಯನ್ನು ನಾವು ಸರಿಯಾಗಿ ಮುಚ್ಚದೇ ಬೆಕ್ಕನ್ನು ಕಳ್ಳ ಎಂದು ದೂರುವುದು ತಪ್ಪು’ ಎಂಬಿತ್ಯಾದಿ ಸಂಭಷಾಣೆಗಳು ಈ ಆಡಿಯೋ ಟ್ರೈಲರ್​ನ ಹೈಲೈಟ್​. ಒಟ್ಟಿನಲ್ಲಿ ಇದು ಕನ್ನಡದ ಪಾಲಿಗೆ ಭಿನ್ನ ಪ್ರಯತ್ನ ಎಂದೇ ಹೇಳಬಹುದು.

‘ಬೆಲ್​ ಬಾಟಂ’  ಚಿತ್ರ ಜ.15ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಿಷಬ್​ ನಾಯಕನಾಗಿ ಕಾಣಿಸಿಕೊಂಡರೆ ಅವರಿಗೆ ಜೊತೆಯಾಗಿ ಹರಿಪ್ರಿಯಾ ಬಣ್ಣ ಹಚ್ಚಿದ್ದಾರೆ. ಜಯತೀರ್ಥ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಫೆ.15ರಂದು ತೆರೆಗೆ ಬರುತ್ತಿದೆ.

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...