Kannada Kaiva: 1983ರ ರಿಯಲ್ ಲವ್ ಸ್ಟೋರಿ ಕೈವ: ಮತ್ತೊಂದು ಸತ್ಯ ಕಥೆ ಹೇಳೋಕೆ ಬರ್ತಿದ್ದಾರೆ ಬೆಲ್ ಬಾಟಮ್ ಡೈರೆಕ್ಟರ್!

ಸ್ಯಾಂಡಲ್​ವುಡ್​ನ ನಿರ್ದೇಶಕ ಜಯತೀರ್ಥ ಸಿನಿಮಾಗಳ ದಾಟಿ ಬೇರೆ ಇರುತ್ತದೆ.ಅವರ ಕಥೆ ಹೇಳೋ ರೀತಿ ಕೂಡ ವಿಶೇಷವಾಗಿಯೇ ಇರುತ್ತದೆ. ಇವರ ಸಿನಿಮಾಗಳನ್ನ ನೋಡ್ತಾ ಹೋದ್ರೆ, ಅಲ್ಲಿ ಸತ್ಯ ಘಟನೆಗಳ ಚಿತ್ರಿತವಾಗಿಯೇ ಇರುತ್ತವೆ

ಕನ್ನಡದ ಕೈವ ಸಿನಿಮಾದ ಫಸ್ಟ್ ಫೋಸ್ಟರ್ ಬಿಡುಗಡೆ

ಕನ್ನಡದ ಕೈವ ಸಿನಿಮಾದ ಫಸ್ಟ್ ಫೋಸ್ಟರ್ ಬಿಡುಗಡೆ

  • Share this:
ಸ್ಯಾಂಡಲ್​ವುಡ್ ನ (Sandalwood) ನಿರ್ದೇಶಕ ಜಯತೀರ್ಥ ಸಿನಿಮಾಗಳ ದಾಟಿ ಬೇರೆ ಇರುತ್ತದೆ.ಅವರ ಕಥೆ ಹೇಳೋ ರೀತಿ ಕೂಡ ವಿಶೇಷವಾಗಿಯೇ ಇರುತ್ತದೆ. ಇವರ ಸಿನಿಮಾಗಳನ್ನ (Cinema) ನೋಡ್ತಾ ಹೋದ್ರೆ, ಅಲ್ಲಿ ಸತ್ಯ ಘಟನೆಗಳ ಚಿತ್ರಿತವಾಗಿಯೇ ಇರುತ್ತವೆ.ಅಂತಹ ಈ ನಿರ್ದೇಶಕರು (Director)ಇನ್ನೂ ಒಂದು ಕಥೆ ಹೇಳೋಕೆ ಹೊರಟ್ಟಿದ್ದಾರೆ.ಈ ಕಥೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸತ್ಯ (Real Story) ಘಟನೆಯನ್ನೇ ಹೇಳಿದ್ದಾರೆ. ಚಿತ್ರಕ್ಕೆ ಇಟ್ಟಿರೋ ಹೆಸರು ಕೂಡ ವಿಶೇಷವಾಗಿಯೇ ಇದೆ.ಅದುವೇ ಕೈವ. ಈ ಕೈವ ಚಿತ್ರದ ನಾಯಕನ ಪೋಸ್ಟರ್ ಒಂದು ಈಗ ಹೊರ ಬಿದ್ದಿದೆ. ಈ ಬಗ್ಗೆ ಡೈರೆಕ್ಟರ್ ಜಯತೀರ್ಥ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು,ಬೆಲ್​ ಬಾಟಮ್ ಹೀಗೆ ವಿಶೇಷವಾದ ಸಿನಿಮಾಗಳನ್ನೆ ಕೊಡ್ತಾ ಬಂದಿರೋ ಜಯತೀರ್ಥ ಅವ್ರು, ಈಗಾಗಲೇ ಬನಾರಸ್ ಸಿನಿಮಾ ಮಾಡಿದ್ದಾರೆ.ಅದು ಕೂಡ ರಿಲೀಸ್ ಹಂತಕ್ಕೆ ಬಂದಿದೆ. ಆದರೆ, ಈಗ ಜಯತೀರ್ಥ ಅವ್ರು ಕೈವ ಚಿತ್ರದಲ್ಲಿ ಬ್ಯುಜಿ ಇದ್ದಾರೆ. ಈ ಚಿತ್ರದ ಪೋಸ್ಟರ್ ಈಗಾಗಲೇ ಹೊರ ಬಿದ್ದಿದೆ.

ಕೈವ ಮೂಲಕ ಮತ್ತೊಂದು ಸತ್ಯ ಕಥೆ ಹೇಳೋಕೆ ಬರ್ತಿರೋ ಜಯತೀರ್ಥ

ಕೈವ ಕೂಡ ಒಂದು ರಿಯಲ್ ಕಥೆ ಇರೋ ಸಿನಿಮಾ. ಈ ಸಿನಿಮಾದಲ್ಲೂ ಪ್ರೀತಿ ಪ್ರೇಮದ ಕಥೆ ಇದೆ. ಬೆಂಗಳೂರಿನಲ್ಲಿ ನಡೆದ ಕಥೆಯನ್ನೇ ಚಿತ್ರದಲ್ಲೂ ನೋಡಬಹುದಾಗಿದ್ದು, ಇದೂ ಕೂಡ ತುಂಬಾ ಸೆನ್ಸಿಬಲ್ ಕಥೆ ಅಂತಲೇ ಈಗಲೇ ಅನಿಸುತ್ತಿದೆ.

ಲವ್ ಸ್ಟೋರಿ-ಕ್ರೈಮ್ ಕಥೆ-1983 ರಲ್ಲಿ ನಡೆದ ಘಟನೆ

ಕೈವ ಚಿತ್ರದಲ್ಲಿ ಜಯತೀರ್ಥ ಒಳ್ಳೆ ಕಥೆಯನ್ನ ಮಾಡಿದ್ದಾರೆ. ಆದರೆ, ತಮ್ಮ ಈ ಸಿನಿಮಾಕೆ 1983 ರಲ್ಲಿ ನಡೆದ ರಿಯಲ್ ಕಥೆಯನ್ನೆ ಆಧಾರವಾಗಿಯೇ ಇಟ್ಟುಕೊಂಡಿದ್ದಾರೆ. ಕೈವಾರ ಭೀಮನ ಕಥೆಯನ್ನೆ ಇಲ್ಲಿ ಪ್ರೇಕ್ಷಕರು ಕಾಣಬಹುದಾಗಿದೆ. ಇಂತಹ ಈ ಚಿತ್ರದಲ್ಲಿ ನಟಿಸಿದ ಹೀರೋ ಬೇರೆ ಯಾರೋ ಅಲ್ಲ. ಕನ್ನಡದ ನಾಯಕ ಧ್ವನೀರ್.ಕೈವ ಚಿತ್ರದಲ್ಲಿ ಬೇರೆ ರೀತಿಯಲ್ಲಿಯೇ ಕಾಣಿಸಿಕೊಳ್ತಿದ್ದಾರೆ.

Kaiva Cinema Director Jayathirtha
ಕೈವ ಚಿತ್ರಕ್ಕೆ ಜಯತೀರ್ಥ ಡೈರೆಕ್ಷನ್


1983 ಸೆಪ್ಟೆಂಬರ್ 12 ಮಧ್ಯಾಹ್ನ ಒಂದು ಘಟನೆ ನಡದೆ ಹೋಯಿತು !
ಹೌದು. ಡೈರೆಕ್ಟರ್ ಜಯತೀರ್ಥ ಎತ್ತಿಕೊಂಡ ಕಥೆ ತುಂಬಾ ಸೆನ್ಸಿಬಲ್ ಆಗಿಯೇ ಇತ್ತು. ಸೆಪ್ಟೆಂಬರ್-12 1983 ರ ಮಧ್ಯಾಹ್ನ 3.20 ಕ್ಕೆ ಒಂದು ದುರಂತ ನಡೆದಿತ್ತು. ಆಗ ಇಡೀ ಬೆಂಗಳೂರಿಗೆ ಬೆಂಗಳೂರೇ ಅದನ್ನ ಕಂಡು ಬೆಚ್ಚಿಬಿದ್ದಿತ್ತು.ಆದರೂ ಅವಳು ಈತನಿಗಾಗಿಯೇ ಕಾಯುತ್ತಲೇ ಇದ್ದಳು. ಹೀಗೆ ತಮ್ಮ ಈ ಕಥೆಯ ತಿರುಳನ್ನ ಡೈರೆಕ್ಟರ್ ಜಯತೀರ್ಥ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ದಿನವೇ ಬಿಟ್ಟುಕೊಟ್ಟಿದ್ದಾರೆ.

ಕೈವ ಚಿತ್ರದಲ್ಲಿ ವಾಮನ ಅವತಾರ ಸಂಪೂರ್ಣ ಬದಲು
ಕೈವ ಚಿತ್ರದ ನಾಯಕ ನಟ ಧ್ವನೀರ್ ಸಂಪೂರ್ಣ ಬದಲಾಗಿದ್ದಾರೆ. ಕೈವಾರ ಭೀಮನಾಗಿಯೇ ಧನ್ವೀರ್ ರೂಪಾಂತರಗೊಂಡಿದ್ದು ಯಾರಪ್ಪ ಈ ಹೀರೋ ಅನ್ನೋ ಹಾಗೇನೆ ಕಾಣಿಸುತ್ತಿದ್ದಾರೆ. ವಾಮನ ಶೀರ್ಷಿಕೆಯ ಚಿತ್ರ ಮಾಡಿರೋ ಧನ್ವೀರ್ ಕೈವ ದಲ್ಲಿ ರಿಯಲ್ ಪಾತ್ರವನ್ನೇ ನಿರ್ವಹಿಸಿದ್ದಾರೆ.

ಜೊತೆ ಜೊತೆಯಲಿ ಸೀರಿಯಲ್ ಮೇಘಾ ಶೆಟ್ಟಿ ಕೈವನ ಪ್ರೇಯಸಿ
ಜೊತೆ ಜೊತೆಯಲಿ ಸೀರಿಯಲ್ ಮೂಲಕವೇ ಹೆಸರಾದ ಯುವ ನಟಿ ಮೇಘಾ ಶೆಟ್ಟಿ ಇಲ್ಲಿ ರಿಯಲ್ ಪಾತ್ರವನ್ನೇ ಅಭಿನಯಿಸುತ್ತಿದ್ದಾರೆ. ಕೈವನ ಪ್ರೇಯಿಸಿಯಾಗಿಯೇ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾವ ತೀವ್ರತೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕೈವ ಚಿತ್ರದ ಚಿತ್ರೀಕರಣ ಪೂರ್ಣ ಆಗಿದಿಯೇ ?
ಕೈವ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಇನ್ನು ನಾಲ್ಕು ದಿನದ ಕೆಲಸ ಬಾಕಿ ಉಳಿದಿದೆ. ಸದ್ಯಕ್ಕೆ ಚಿತ್ರದ ಡಬ್ಬಿಂಗ್ ಕೆಲಸವೂ ನಡೀತಾ ಇದೆ. ಈ ವರ್ಷದ ಕೊನೆ ಇಲ್ಲವೇ ಮುಂದಿನ ವರ್ಷ ಕೈವ ಸಿನಿಮಾ ರಿಲೀಸ್ ಆಗುತ್ತಿದೆ.
First published: