Video Viral: ತಾನೇ ನಿರ್ದೇಶಿಸಿದ ಕನ್ನಡ ಸಿನಿಮಾಗೆ ಬ್ಲಾಕ್ ಟಿಕೆಟ್ ಖರೀದಿಸಿದ ನಿರ್ದೇಶಕ!

Bell bottom; ನಿರ್ದೇಶಕ ಜಯತೀರ್ಥ ಅವರು ತಾವೇ ನಿರ್ದೇಶಿಸಿದ ‘ಬೆಲ್​ ಬಾಲಂ‘ ಸಿನಿಮಾವನ್ನು ವೀಕ್ಷಿಸಲು ಬ್ಲಾಕ್​ ಟಿಕೆಟ್​ ಖರೀದಿಸಿ ಸಂದರ್ಭವನ್ನು ವಿಡಿಯೋ ಚಿತ್ರೀಕರಿಸಿ ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

news18-kannada
Updated:May 10, 2020, 5:02 PM IST
Video Viral: ತಾನೇ ನಿರ್ದೇಶಿಸಿದ ಕನ್ನಡ ಸಿನಿಮಾಗೆ ಬ್ಲಾಕ್ ಟಿಕೆಟ್ ಖರೀದಿಸಿದ ನಿರ್ದೇಶಕ!
ವಿಡಿಯೋ
  • Share this:
ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ನಂತರ ನಿರ್ದೇಶಕರು, ನಟರು ಚಿತ್ರಮಂದಿರಗಳಿಗೆ ತೆರಳಿ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯುತ್ತಾರೆ. ಅಭಿಮಾನಿಗಳ ಹೇಗೆ ಸಿನಿಮಾವನ್ನು ಎಂಜಾಯ್​ ಮಾಡುತ್ತಿದ್ದಾರೆ? ಸಿನಿಮಾ ಅವರಿಗೆ ಇಷ್ಟವಾಗಿದೆಯಾ? ಎಂಬುದನ್ನು ತಿಳಿಯುವ ಸಲುವಾಗಿ ಸಿನಿಮಾ ಮಂದಿರಕ್ಕೆ ಭೇಟಿ ನೀಡುತ್ತಾರೆ. ಆದರೆ ಇಲ್ಲೊಬ್ಬರು ಸ್ಯಾಂಡಲ್​ವುಡ್​ ನಿರ್ದೇಶಕರು ತಾವೇ ನಿರ್ದೇಶಿಸಿದ ಸಿನಿಮಾ ವೀಕ್ಷಿಸಲು ಟಿಕೆಟ್​ ಸಿಗದೆ ಬ್ಲಾಕ್​ ಟಿಕೆಟ್​ ಖರೀದಿಸಿ ಸಿನಿಮಾ ನೋಡಿದ ಪ್ರಸಂಗವನ್ನುತಮ್ಮ  ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ನಿರ್ದೇಶಕ ಜಯತೀರ್ಥ ಅವರು ತಾವೇ ನಿರ್ದೇಶಿಸಿದ ‘ಬೆಲ್​ ಬಾಲಂ‘ ಸಿನಿಮಾವನ್ನು ವೀಕ್ಷಿಸಲು ಬ್ಲಾಕ್​ ಟಿಕೆಟ್​ ಖರೀದಿಸಿ ಸಂದರ್ಭವನ್ನು ವಿಡಿಯೋ ಚಿತ್ರೀಕರಿಸಿ ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2019ರಲ್ಲಿ ನಟ ರಿಷಭ್​ ಶೆಟ್ಟಿ ಮತ್ತು ನಟಿ ಹರಿಪ್ರಿಯಾ ನಟಿಸಿರುವ ‘ಬೆಲ್​ ಬಾಟಂ‘  ಸಿನಿಮಾ ಬಿಡುಗಡೆಯಾಗಿ ಶತದಿನನೋತ್ಸವವನ್ನು ಆಚರಿಸಿತ್ತು. ಈ ಚಿತ್ರದ ಪ್ರದರ್ಶನ ವೇಳೆ ನಿರ್ದೇಶಕರು ಫ್ಯಾಮಿಲಿ ಜೊತೆಗೆ ವಿರೇಶ​​ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಲು ಹೋಗುತ್ತಾರೆ. ಆ ವೇಳೆ ಥಿಯೇಟರ್​ ಹೌಸ್​ ಫುಲ್​ ಆಗಿದ್ದ​ರಿಂದ ಟಿಕೆಟ್​ ಸಿಗದೆ ಬ್ಲಾಕ್​​ ಟಿಕೆಟ್ ಖರೀದಿಸಿದ್ದಾರೆ.



ಇನ್ನು ವಿಡಿಯೋದಲ್ಲಿ ಬ್ಲಾಕ್​ ಟಿಕೆಟ್​ ಮಾರುವವನು ಮತ್ತು ಜಯತೀರ್ಥ ನಡೆಯುವ ಸಂಭಾಷನೆ ಇದಾಗಿದೆ. ಬ್ಲಾಕ್​ ಟಿಕೆಟ್​ ಮಾರುವವನಿಗೆ ಬೆಲ್​ ಬಾಟಂ ಸಿನಿಮಾ ನಿರ್ದೇಶಕ ಇವರು ಎಂದು ತಿಳಿಯದೆ  'ಇನ್ನೂರು ಬಾಲ್ಕನಿ. ಇರೋದೇ ಆರು ಟಿಕೆಟ್. ಫಿಲಂ ಹೆಂಗೆ ಕಿತ್ಕೊಂಡು ಹೋಗ್ತಿದೆ ಗೊತ್ತಾ ಈ ವಾರ. ನನಗೇ ಆಶ್ಚರ್ಯ ಆಗುತ್ತೆ ಗೊತ್ತಾ. ಹೋದವಾರ ಈ ರೀತಿ ಕಲೆಕ್ಷನ್ನೇ ಇರಲಿಲಲ್ಲ. ಇವೆಲ್ಲಾ ಎರಡನೆಯ ವಾರದ ಮೇಲೆ ರೈಸ್ ಆಗೋದು ಫ್ಯಾಮಿಲಿ ಪಿಕ್ಚರ್. ಸುಮ್ನೆ ಅದೆಲ್ಲ ಕೊಚ್ಚು ಕೊಚ್ಚು ಕೊಚ್ಚು ಅನ್ನೋ ಪಿಕ್ಚರೆಲ್ಲ ಒಂದು ವಾರ. ಕೊಚ್ಚು ಕೊಚ್ಚು ಅನ್ನೋದರಲ್ಲಿ ನಾವೇ ಕೊಚ್ಚಿಕೊಂಡು ಹೋಗಬೇಕಾಗುತ್ತದೆ' ಮಾತನಾಡುತ್ತಾನೆ. ಈ ಖುಷಿಯ ವಿಚಾರವನ್ನು  ಜಯತೀರ್ಥ ಅವರು ತಮ್ಮ ಫೋನಿನಲ್ಲಿ ಚಿತ್ರೀಕರಿಸಿ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

Mothers Day 2020: ತಾಯಂದಿರ ದಿನವನ್ನು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಹೇಗೆ ಆಚರಿಸಿದ್ದಾರೆ ಗೊತ್ತಾ?
First published: May 10, 2020, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading