ಮದುವೆಗೂ ಮೊದಲು ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದರಂತೆ ಖ್ಯಾತ ನಟಿ ಸಮಂತಾ!

ಸಮಂತಾ ಮದುವೆಗೂ ಮೊದಲೇ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದರಂತೆ. ಈ ವಿಚಾರವನ್ನು ಅವರು ಈಗ ಬಿಚ್ಚಿಟ್ಟಿದ್ದಾರೆ. ಸದ್ಯ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.

news18-kannada
Updated:October 4, 2019, 12:48 PM IST
ಮದುವೆಗೂ ಮೊದಲು ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದರಂತೆ ಖ್ಯಾತ ನಟಿ ಸಮಂತಾ!
ಸಮಂತಾ
news18-kannada
Updated: October 4, 2019, 12:48 PM IST
ನಟ-ನಟಿಯರು ಪ್ರೀತಿ ವಿಚಾರದಲ್ಲಿ ಸಾಕಷ್ಟು ರಹಸ್ಯ ಕಾಯ್ದುಕೊಳ್ಳುತ್ತಾರೆ. ನಟಿ ಅನುಷ್ಕಾ ಶರ್ಮಾ- ಕ್ರಿಕೆಟರ್​ ವಿರಾಟ್​ ಕೊಹ್ಲಿ, ದೀಪಿಕಾ ಪಡುಕೊಣೆ-ರಣವೀರ್​ ಸಿಂಗ್​ ಮದುವೆ ಆಗುವವರೆಗೂ ಎಲ್ಲವನ್ನೂ ಗುಟ್ಟಾಗಿಯೇ ಇಟ್ಟಿದ್ದರು. ಇದಕ್ಕೆ ಟಾಲಿವುಡ್​ ನಟಿ ಸಮಂತಾ ಕೂಡ ಹೊರತಾಗಿಲ್ಲ. ನಾಗ ಚೈತನ್ಯ ಜೊತೆಗಿನ ಪ್ರೀತಿ ವಿಚಾರದಲ್ಲಿ ಗುಟ್ಟು ಕಾಯ್ದುಕೊಂಡಿದ್ದ ಅವರು ಈಗ ಒಂದೊಂದೋ ಅಚ್ಚರಿಯ ವಿಚಾರವನ್ನು ಬಿಚ್ಚಿಡುತ್ತಿದ್ದಾರೆ. ಸಮಂತಾ ಮದುವೆಗೂ ಮೊದಲೇ ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿದ್ದರಂತೆ!

ಹೌದು, ಸಮಂತಾ ಮದುವೆಗೂ ಮೊದಲೇ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದರಂತೆ. ಅದು, ಬೇರಾರ ಜೊತೆಗೂ ಅಲ್ಲ, ನಾಗ ಚೈತನ್ಯ ಜೊತೆ. ಇಬ್ಬರೂ ಪ್ರೀತಿಯಲ್ಲಿದ್ದ ವಿಚಾರ ಹರಿದಾಡುತ್ತಲೇ ಇದ್ದಿತ್ತಾದರೂ ಯಾರೂ ಅದನ್ನು ಒಪ್ಪಿಕೊಂಡಿರಲಿಲ್ಲ. ನಿಶ್ಚಿತಾರ್ಥ ಆದ ನಂತರವೇ ಇಬ್ಬರೂ ತಮ್ಮ ಸಂಬಂಧದ ಕುರಿತು ಹೇಳಿಕೊಂಡಿದ್ದರು.

ಈಗ ಅವರು ಒಂದೊಂದೇ ವಿಚಾರವನ್ನು ಬಿಚ್ಚಿಡುತ್ತಿದ್ದಾರೆ. “ನಾನು ಹಾಗು ಚೈತನ್ಯ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು. ಈ ವಿಚಾರವನ್ನು ನಾವು ಅಧಿಕೃತ ಮಾಡಿರಲಿಲ್ಲ. ಅಷ್ಟೇ ಅಲ್ಲ, ನಾವಿಬ್ಬರೂ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದೆವು,” ಎಂದು ಸಮಂತಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾದ ಎರಡು ವರ್ಷಗಳ ಬಳಿಕ ಸಿಹಿ ಸುದ್ದಿ ನೀಡುತ್ತಿದ್ದಾರೆ ಸಮಂತಾ-ನಾಗಚೈತನ್ಯ ದಂಪತಿ!

ಅಚ್ಚರಿ ಎಂದರೆ, ಲಿವಿಂಗ್​ ರಿಲೇಶ್​ಶಿಪ್​ನಲ್ಲಿರುವಾಗ ಚಾಯ್​ ಅತಿ ಹೆಚ್ಚು ಪ್ರೀತಿಸುತ್ತಿದ್ದುದು ತಲೆದಿಂಬಂತೆ. “ನಾವು ನಿದ್ರಿಸುವಾಗ ನಮ್ಮಿಬ್ಬರ ನಡುವೆ ದಿಂಬು ಇರುತ್ತಿತ್ತು. ಹಗ್​ ಮಾಡುವಾಗ ದಿಂಬು ಅಡ್ಡ ಬರುತ್ತಿತ್ತು,” ಎಂದು ನಕ್ಕಿದ್ದಾರೆ ಅವರು.

ಸಮಂತಾ ಸಿನಿಮಾ ಕೆಲಸಗಳನ್ನು ಆದಷ್ಟು ಬೇಗ ಮುಗಿಸಲು ಮುಂದಾಗಿದ್ದಾರೆ. ಇದಾದ ಬೆನ್ನಲ್ಲೇ ಅವರು ತಾಯಿ ಆಗಲಿದ್ದಾರೆ ಎನ್ನುವ ವಿಚಾರ ಟಾಲಿವುಡ್​ ಅಂಗಳದಲ್ಲಿ ಹುಟ್ಟಿಕೊಂಡಿತ್ತು.   ಸಮಂತಾ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಅದರಲ್ಲಿ ಬ್ಯುಸಿ ಆಗುವುದರಿಂದ ಸಿನಿಮಾ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಆಲೋಚನೆ ಅವರದ್ದು. ಈ ಬಗ್ಗೆ ಸಮಂತಾ ಅವರ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

First published:October 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...