Naga Chaitanya : ಸಮಂತಾಗೂ ಮುಂಚೆ ನಾಗ ಚೈತನ್ಯಗೆ ಈ ನಟಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಇತ್ತಂತೆ! ಯಾರದು?

Naga Chaitanya : ಸಮಂತಾ ಅವರನ್ನು ಪ್ರೀತಿಸುವ ಮುನ್ನ ಭಾರತೀಯ ಸಿನಿಮಾ ರಂಗದ ಸ್ಟಾರ್​​ ನಟ ಕಮಲ್​ಹಾಸನ್​ ಅವರ ಪುತ್ರಿ ಶ್ರುತಿಹಾಸನ್​ ಅವರೊಂದಿಗೆ ನಾಗಚೈತನ್ಯ ರಿಲೇಷನ್​ಶಿಪ್​ನಲ್ಲಿ ಇದ್ದರು. ಒಬ್ಬರನೊಬ್ಬರು ಇಷ್ಟ ಪಟ್ಟಿದ್ದರು. ಮದುವೆ ಮಾಡಿಕೊಳ್ಳವ ಪ್ಲ್ಯಾನ್​ ಕೂಡ ಮಾಡಲಾಗಿತ್ತು.

ಸಮಂತಾ, ನಾಗಚೈತನ್ಯ

ಸಮಂತಾ, ನಾಗಚೈತನ್ಯ

  • Share this:
ಟಾಲಿವುಡ್​(Tollywood)ನ ಕ್ಯೂಟ್​ ಕಪಲ್​ ಎನಿಸಿಕೊಂಡಿದ್ದ ನಾಗಚೈತನ್ಯ(Naga Chaitanya )ಹಾಗೂ ಸಮಂತಾ(Samantha) ಈಗ ದೂರವಾಗಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಪ್ರೀತಿ ಮಾಡಿದ್ದ , ಈ ಜೋಡಿ ಇದ್ದಕ್ಕಿದ್ದ ಹಾಗೇ ದೂರವಾಗಿ ಬಿಟ್ಟಿದ್ದಾರೆ. ಇದು ಟಾಲಿವುಡ್​ನಲ್ಲಿಈ ಸುದ್ದಿ ಅಲ್ಲೋಲ, ಕಲ್ಲೋಲವನ್ನು ಸೃಷ್ಟಿ ಮಾಡಿತ್ತು. ಬೇರೆ ಆಗಿದ್ದಕ್ಕೆ ಕಾರಣ ಕೂಡ ಫ್ಯಾನ್ಸ್(Fans)​ ಹುಡುಕಿದ್ದರು. ಆದರೆ ಯಾವ ಕಾರಣವೂ ಅಷ್ಟು ಗಟಿಯಾಗಿ ಕಾಣಲಿಲ್ಲ. ಇದೀಗ ಹೊಸ ವಿಷಯ ಏನಪ್ಪಾ ಅಂದರೆ, ನಾಗಚೈತನ್ಯ ಅವರ ಹಳೇ ವಿಷಯವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಸಮಂತಾ ಅವರನ್ನು ಪ್ರೀತಿಸುವ ಮುನ್ನ ನಾಗಚೈತನ್ಯ ಮತ್ತೊಬ್ಬ ಟಾಪ್​ ನಟಿ(Top Heroin) ಜೊತೆ ಡೇಟಿಂಗ್​ (Dating)ಮಾಡುತ್ತಿದ್ದರು. ಅವರನ್ನೇ ಮದುವೆಯಾಗಬೇಕು ಅಂದುಕೊಂಡಿದ್ದರು. ಇಬ್ಬರು ಕೆಲ ದಿನಗಳ ಕಾಲ ಒಟ್ಟಿಗೆ ಸುತ್ತಾಡಿದ್ದರಂತೆ. ಸಮಂತಾಗೂ ಮುಂಚೆ ಆ ನಟಿಯನ್ನು ನಾಗಚೈತನ್ಯ ತುಂಬಾ ಪ್ರೀತಿ ಮಾಡಿದ್ದರಂತೆ. ಆ ಸ್ಟಾರ್​​ ನಟಿಗೂ ನಾಗಚೈತನ್ಯ ಕಂಡರೇ ಅಷ್ಟೇ ಇತ್ತು. ಆದರೆ ಕೆಲ ಕಾರಣಾಂತರಗಳಿಂದ ಈ ಜೋಡಿ ಮದುವೆಯಾಗಲು ಸಾಧ್ಯವಾಗಿರಲಿಲ್ಲ, ಈ ವಿಚಾರ ಸಮಂತಾ ಡಿವೋರ್ಸ್(Divorce)​ ಕೊಟ್ಟ ಬಳಿಕ ಭಾರೀ ವೈರಲ್​ ಆಗುತ್ತಿದೆ. ಅಷ್ಟಕ್ಕೂ ನಾಗಚೈತನ್ಯ ಇಷ್ಟ ಪಟ್ಟಿದ್ದ ಆ ನಟಿ ಯಾರು? ಇವರ ಪ್ರೀತಿಯಲ್ಲಿ ಬಿರುಕು ಮೂಡಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..

ಶ್ರುತಿ ಹಾಸನ್​ ಜೊತೆ ಡೇಟಿಂಗ್​ ಮಾಡುತ್ತಿದ್ದರಂತೆ ನಾಗಚೈತನ್ಯ!

ಹೌದು, ಸಮಂತಾ ಅವರನ್ನು ಪ್ರೀತಿಸುವ ಮುನ್ನ ಭಾರತೀಯ ಸಿನಿಮಾ ರಂಗದ ಸ್ಟಾರ್​​ ನಟ ಕಮಲ್​ಹಾಸನ್​ ಅವರ ಪುತ್ರಿ ಶ್ರುತಿಹಾಸನ್​ ಅವರೊಂದಿಗೆ ನಾಗಚೈತನ್ಯ ರಿಲೇಷನ್​ಶಿಪ್​ನಲ್ಲಿ ಇದ್ದರು. ಒಬ್ಬರನೊಬ್ಬರು ಇಷ್ಟ ಪಟ್ಟಿದ್ದರು. ಮದುವೆ ಮಾಡಿಕೊಳ್ಳವ ಪ್ಲ್ಯಾನ್​ ಕೂಡ ಮಾಡಲಾಗಿತ್ತು. 2013ರಲ್ಲೇ ಇವರಿಬ್ಬರು ಪ್ರೀತಿಸುತ್ತಿದ್ದರು. ಒಂದು ದಿನ ಕೂಡ ಇಬ್ಬರು ಮೀಟ್​ ಮಾಡದೇ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ವಿಚಾರ ಎರಡು ಕುಟುಂಬಸ್ಥರು ಗೊತ್ತಿತ್ತಂತೆ. ಅವರು ಕೂಡ ಒಪ್ಪಿಕೊಂಡಿದ್ದರಂತೆ. ಒಂದು ದಿನ ಕೂಡ ಒಬ್ಬರನೊಬ್ಬರು ನೋಡದಿದ್ದರೇ ಆಗುತ್ತಿರಲಿಲ್ಲ. ಆದರೆ ಇವರ ಬ್ರೇಕ್​ಅಪ್​​ಗೆ ಕಾರಣ ಏನು ಅಂತ ತಿಳಿದರೆ ನಿಮಗೂ ಒಂದು ಕ್ಷಣ ಶಾಕ್​ ಆಗಬಹುದು.

ನಾಗಚೈತನ್ಯ, ಶ್ರುತಿ ಹಾಸನ್​


ಇದನ್ನು ಓದಿ : ನಾಗಚೈತನ್ಯ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್‌; ಹುಟ್ಟುಹಬ್ಬದಂದೇ ಬಂಗಾರ್‌ರಾಜು ಸಿನಿಮಾ ಟೀಸರ್ ಬಿಡುಗಡೆ

ಬ್ರೇಕ್​ಅಪ್​ಗೆ ಕಾರಣವಾಗಿದ್ದು ಅಕ್ಷರ ಹಾಸನ್​!

ಹೌದು, ಕೇಳಲು ವಿಚಿತ್ರವೆನಿಸಿದರು ನಿಜ..ದಕ್ಷಿಣ ಭಾರತದ ಹೆಸರಾಂತ ಅವಾರ್ಡ್​ ಕಾರ್ಯಕ್ರಮದಲ್ಲಿ ಉಂಟಾದ ಜಗಳ ಇವರಿಬ್ಬರನ್ನು ದೂರ ಮಡುವಂತೆ ಮಾಡಿತ್ತು. ಶ್ರುತಿ ಹಾಸನ್​ ತಮ್ಮ ತಂಗಿ ಅಕ್ಷರ ಹಾಸನ್​ ಅವರನ್ನು ನೋಡಿಕೊಳ್ಳುವಂತೆ ನಾಗಚೈತನ್ಯ ಅವರಿಗೆ ಹೇಳಿದ್ದರಂತೆ. ನಾನು ಡ್ಯಾನ್ಸ್ ಮುಗಿಸಿ ಬರುವವರೆಗೂ ತನ್ನ ತಂಗಿಯ ಜೊತೆ ಇರಲು ಹೇಳಿದ್ದರಂತೆ. ಸರಿ ಎಂದು ಹೇಳಿದ್ದರಂತೆ ನಾಗಚೈತನ್ಯ. ಆದರೆ ಇದ್ದಕಿದ್ದ ಹಾಗೇ ಶ್ರುತಿ ಹಾಸನ್​​ಗೆ ಹೇಳದೇ ಕೇಳದೇ ನಾಗಚೈತನ್ಯ ಅಲ್ಲಿಂದ ಹೊರ ಬಂದಿದ್ದರಂತೆ. ಇತ್ತ ಡ್ಯಾನ್ಸ್ ಮುಗಿಸಿಕೊಂಡು ಬಂದಾಗ ಅಕ್ಷರ ಕಕ್ಕಾಬಿಕ್ಕಿಯಾಗಿದ್ದನ್ನು ಕಂಡು ಶ್ರುತಿ ಹಾಸನ್​ಗೆ ಕೋಪ ಬಂದಿತ್ತಂತೆ. ಇಲ್ಲಿಂದ ಶುರುವಾದ ಜಗಳ ಇವರಿಬ್ಬರ ಬ್ರೇಕ್​ಅಪ್​ಗೆ ಕಾರಣವಾಯಿತು.

ಇದನ್ನು ಓದಿ : ವಿಚ್ಛೇದನದ ನಂತರ ಫೋಟೋಶೂಟ್​ಗೆ ಪೋಸ್​ ಕೊಟ್ಟ Samantha: ಇದರಲ್ಲಿ ಮಿಸ್​ ಆಗಿದ್ದೇನು ಗಮನಿಸಿ..?

ಇದಾದ ಬಳಿಕ ನಾಗಚೈತನ್ಯ ಸಮಂತಾ ಅವರನ್ನು ಇಷ್ಟ ಪಟ್ಟು ಮದುವೆಯಾಗಿದ್ದರು. ಆದರೆ, ಈಗ ಇವರಿಬ್ಬರು ವಿಚ್ಛೇದನ ಪಡೆದು ಬೇರೆ ಬೇರೆಯಾಗಿದ್ದಾರೆ. ಇತ್ತ ಶ್ರುತಿ ಹಾಸನ್​ಬಾಯ್ ಫ್ರೆಂಡ್ ಸಂತನು ಹಜಾರಿಕ ಅವರೊಟ್ಟಿಗೆ ಎಂಜಾಯ್​ ಮಾಡುತ್ತಿದ್ದಾರೆ. ದೆಹಲಿ ಮೂಲದ ಡೂಡಲ್ ಕಲಾವಿದ ಮತ್ತು ಸಚಿತ್ರಕಾರ ಸಂತನು ಹಜಾರಿಕ ಜೊತೆ ಶ್ರುತಿ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗಿದೆ.  ಶೀಘ್ರದಲ್ಲೇ ಇವರಿಬ್ಬರು ಮದುವೆಯಾಗಲಿದ್ದಾರೆ ಅನ್ನುವ ಮಾಹಿತಿ ಕೂಡ ದೊರಕಿದೆ.
Published by:Vasudeva M
First published: